Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪದವಿ ಮಗಿಸಿದ ಬಳಿಕ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಅವಕಾಶವಿದ್ದರೂ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವ ಉದ್ದೇಶಕ್ಕಾಗಿ ನಾನು ಪೊಲೀಸ್ ಇಲಾಖೆಯನ್ನು ಸ್ವ-ಇಚ್ಛೆಯಿಂದ ಆಯ್ದುಕೊಂಡಿದ್ದೆ. ಮಹಿಳೆಯರು ಅನ್ಯಾಯಕ್ಕೆ ಒಳಗಾದರೆ ಯಾವುದೇ ಆತಂಕಪಡದೆ ನೇರವಾಗಿ ಠಾಣೆಗೆ ಬಂದು ದೂರು ದಾಖಲಿಸಿ, ಅದು ಕಾನೂನಾತ್ಮಕವಾಗಿದ್ದರೆ ಖಂಡಿತ ಶೀಘ್ರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಇದು ಬೈಂದೂರು ಆರಕ್ಷಕ ಠಾಣೆಯ ಮೊದಲ ಮಹಿಳಾ ಪಿಎಸೈ ಸಂಗೀತಾ ಅವರ ಖಡಕ್ ನುಡಿ. ಬುಧವಾರ ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ನಾವುಂದ ಶಾಖೆ ಎರಡು ವರ್ಷ ಪೂರೈಸಿದ ಅಂಗವಾಗಿ ಸ್ವಸಹಾಯ ಸಂಘದ ಸದಸ್ಯರಿಗಾಗಿ ಹಮ್ಮಿಕೊಳ್ಳಲಾದ ಸುರಕ್ಷತಾ ಮಾಹಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ ಅಕ್ರಮ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ನನಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿ, ನನ್ನ ಮೊಬೈಲ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಯಾವುದೇ ಕಾರಣಕ್ಕೂ ಯಾರು ಕಾನೂನು ಮೀರುವುದಕ್ಕೆ ಬಿಡುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿದರು. ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆರ್ಥಿಕವಾಗಿ ಹಿಂದುಳಿದ ಜನರಿಗೆ ಸ್ವಾವಲಂಭಿನೆಯ ಬದುಕು ರೂಪಿಸುವ ಜೊತೆಗೆ ಜನರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಿಸುವ ಉದ್ದೇಶ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ನಾವುಂದ ಶಾಖೆ ಎರಡು ವರ್ಷ ಪೂರೈಸಿದ ಅಂಗವಾಗಿ ಹಮ್ಮಿಕೊಳ್ಳಲಾದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಹಕರ ವಿಶ್ವಾಸದೊಂದಿಗೆ ನಮ್ಮ ಸಂಸ್ಥೆ ಉತ್ತಮ ಆರ್ಥಿಕ ವ್ಯವಹಾರ ಹೊಂದಿರುವುದಲ್ಲದೇ ಪರಿಸರ ವಿವಿಧ ಅಗತ್ಯತೆಗಳಿಗೆ ನೆರವಾಗುವ ಮೂಲಕ ಸಾಮಾಜಿಕ ಬದ್ಧತೆಯನ್ನು ಪಾಲಿಸಿಕೊಂಡು ಬಂದಿದೆ ಎಂದರು. ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಎಸ್. ಜನಾರ್ದನ ಮರವಂತೆ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಎಂ. ಚಂದ್ರಶೀಲ ಶೆಟ್ಟಿ, ನಿರ್ದೇಶಕ ಮಂಜು ಪೂಜಾರಿ,  ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯುವಜನರು ದೇಶದ ಆಸ್ತಿ. ಯುವಕರು ಬದುಕಿನಲ್ಲಿ ಶಿಸ್ತು, ಸಂಯಮ ರೂಢಿಸಿಕೊಳ್ಳುವುದರ ಜೊತೆಗೆ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡರೆ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದು ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಸ್. ಹೆಗ್ಡೆ ಹೇಳಿದರು. ಅವರು ನೆಹರು ಯುವ ಕೇಂದ್ರ ಉಡುಪಿ, ಸ್ನೇಹ ಮಹಿಳಾ ಮಂಡಲ ರಿ. ಮರವಂತೆ ಹಾಗೂ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ನಾವುಂದ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ನೆರೆ-ಹೊರೆ ಯುವ ಸಂಸತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಚ್ಛಭಾರತ ಹಾಗೂ ಜಲಸಂರಕ್ಷಣೆ ಇಂದಿನ ತುರ್ತಾಗಿದ್ದು, ಅದರೊಂದಿಗೆ ದೇಶದ ಆಡಳಿತದ ಒಳನೋಟಗಳನ್ನು ಅರ್ಥಮಾಡಿಕೊಂಡು ವೈಚಾರಿಕವಾಗಿ ಸದೃಢವಾಗುವುದು ಅಗತ್ಯವಾಗಿದೆ ಎಂದರು. ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಛ ಭಾರತ ಹಾಗೂ ಜಲ ಸಾಕ್ಷರತೆಯ ಬಗ್ಗೆ ಜೋಸೆಫ್ ಜಿ. ಎಂ. ರೆಬೆಲ್ಲೊ ಉಪನ್ಯಾಸ ನೀಡಿದರು. ಯುವ ಜನತೆ ಹಾಗೂ ಸಹಭಾಗಿತ್ವ ಪ್ರಭಾಪ್ರಭುತ್ವ ವಿಷಯದ ಕುರಿತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸರ್ಕಾರಿ ಸಂಸ್ಥೆ ಎಂದು ಅದನ್ನು ಕಡೆಗಣಿಸದೆ ಪರಿಸರದ ಎಲ್ಲ ವರ್ಗಗಳ ಮಕ್ಕಳು ಇಲ್ಲಿ ಸೇರಿ ಶಿಕ್ಷಣ ಪಡೆಯಬೇಕು ಎಂದು ಶಾಸಕ ಬಿ. ಎಂ.ಸುಕುಮಾರ ಶೆಟ್ಟಿ ಹೇಳಿದರು. ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ವರ್ಷದ 148 ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಒದಗಿಸಿದ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು. ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕು ದಶಕಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಪದವಿ ಶಿಕ್ಷಣ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯವೇತನ ನೀಡುವುದರ ಜೊತೆಗೆ ಕಲಿಕೆಗೆ ಪೂರಕವಾಗುವ ಲ್ಯಾಪ್‌ಟಾಪ್ ಕೊಡುತ್ತಿದೆ. ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು. ಈ ಕಾಲೇಜಿನಲ್ಲಿ ಕಲಾ ವಿಭಾಗ, ವಾಣಿಜ್ಯ ವಿಭಾಗ ಮತ್ತು ವಿಜ್ಞಾನ ವಿಭಾಗಗಳು ಇವೆ. ಎಲ್ಲ ವಿಷಯಗಳ ಬೋಧನೆಗೂ ಶಿಕ್ಷಕರಿದ್ದಾರೆ. ಅಗತ್ಯ ಮೂಲಸೌಲಭ್ಯಗಳು ಇವೆ. ಕೊಠಡಿ ಕೊರತೆ ಆಗಬಾರದೆಂದು ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನ್ಯಾಕ್ ಬಿ ವರ್ಗೀಕರಣ ಪಡೆದಿರುವ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬದುಕಿನಲ್ಲಿ ಯಶಸ್ಸು ಸಾಧಿಸಲು ಕ್ರೀಡೆ ಪ್ರಮುಖಪಾತ್ರ ವಹಿಸುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮುನ್ನೆಡೆಯುತ್ತಿರುವ ಯುವ ಸಮುದಾಯ ಅರ್ಥಪೂರ್ಣವಾದ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕಾದ ಅಗತ್ಯ ಇದೆ ಎಂದು ಕುಂದಾಪುರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಹರೀಶ್ ಆರ್‌ ನಾಯ್ಕ್‌ ಹೇಳಿದರು. ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುವ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ವಿಷಯಗಳ ಜೊತೆ ಜೊತೆಯಲ್ಲೇ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಆಸಕ್ತಿ ಬೆಳೆಸಿ, ಬೋಧನೆ ನೀಡುವುದರಿಂದ ನಮ್ಮ ಸಮಾಜದ ಭವಿಷ್ಯದ ಪ್ರಜೆಗಳ ಬಾಳು ಸಾರ್ಥಕವಾಗುತ್ತದೆ’ ಎಂದು ಹೇಳಿದರು. ಅಂತರರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಗಿರೀಶ್ ಗೌಡ, ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಪ್ರಾಂಶುಪಾಲ ಡಾ.ರಾಜೇಂದ್ರ ಎಸ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿಗೆ ಸಮೀಪದ ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 12‌ನೇ ಪದವಿ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ.ಟಿ.ಯು. ವಿಶ್ವವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷ ಅಧಿಕಾರಿ ಡಾ.ಶಿವಕುಮಾರ ಅವರು, ಪದವೀಧರರಿಗೆ ಇರಬೇಕಾದ ಜವಾಬ್ದಾರಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ಧಾರ್ಥ ಜೆ.ಶೆಟ್ಟಿ, ಪದವೀಧರರಿಗೆ ಅಭಿನಂದನೆ ಸಲ್ಲಿಸಿದರಲ್ಲದೆ, ವಿದ್ಯಾರ್ಥಿಗಳು ತಾವು ಕಲಿತ ಸಂಸ್ಥೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು. ಪ್ರಾಂಶುಪಾಲ ಡಾ.ಜಿ.ಎಸ್.ಕಾಟಯ್ಯ, ಅಕಾಡೆಮಿಕ್ ನಿರ್ದೇಶಕ ಡಾ.ಚಂದ್ರ ರಾವ್ ಮದನೆ, ಕಾರ್ಯಕ್ರಮ ಸಂಯೋಜಕ ಪ್ರೊ.ಸತೀಶ್ ಅಂಸಾಡಿ ಇದ್ದರು. ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುವ ವಿದ್ಯಾರ್ಥಿ ವೇತನ ಪಡೆದ ಪಡೆದ ಸಿವಿಲ್ ವಿಭಾಗದ ವಿದ್ಯಾರ್ಥಿನಿ ಛಾಯಾ ಅಭಿಪ್ರಾಯ ಹಂಚಿಕೊಂಡರು. ವಿದ್ಯಾರ್ಥಿಗಳಾದ ಹೇಮಂತ ಸ್ವಾಗತಿಸಿದರು, ವರ್ಷ ಹಾಗೂ ಡಿಯೋನಾ ನಿರೂಪಿಸಿದರು, ಲಕ್ಷ್ಮಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ 75ನೇ ಮಹೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಆಹ್ವಾನಿತ ಶಾಲಾ ಬಾಲಕ-ಬಾಲಕಿಯರ ತಂಡಗಳ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ಸಮಾರೋಪ ಸಮಾರಂಭ ಗಂಗೊಳ್ಳಿ ಎಸ್.ವಿ.ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿದ್ದ ಬಸ್ರೂರು ಕರ್ಣಾಟಕ ಬ್ಯಾಂಕ್‌ನ ಮ್ಯಾನೇಜರ್ ಮಹಾಬಲ ಕೆ. ಶುಭ ಹಾರೈಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ನಿವೃತ್ತ ಶಿಕ್ಷಕ ಮುಡೂರ ಅಂಬಾಗಿಲು, ಗುಜ್ಜಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಯುತ್ ಕ್ಲಬ್ ಅಧ್ಯಕ್ಷ ಶ್ರೀಧರ ಮೇಸ್ತ, ರಾಧಿಕಾ ಮೇಸ್ತ, ದೀಪಾ ಮೇಸ್ತ, ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ., ಜಗದೀಶ ನಾಯಕವಾಡಿ, ದೇವಸ್ಥಾನದ ಉಪಾಧ್ಯಕ್ಷ ಸುರೇಶ ಜಿ., ಅರುಣ್ ಕುಮಾರ್, ಗುರುರಾಜ್ ಜಿ., ಮಂಜುನಾಥ ಜಿ.ಟಿ., ನಾಗಿಣಿ, ಸುಶೀಲ, ಗಂಗಾ, ಸುಮಿತ್ರಾ, ಜಯಂತಿ, ವಿಘ್ನೇಶ ಜಿ.ಕೆ., ಗೌರಿ, ನರಸಿಂಹ, ಶಿವ ಜಿ.ಟಿ., ಮಮತಾ, ತೀರ್ಪುಗಾರರಾದ ಜಗದೀಶ ಎಂ.ಜಿ., ಸಂದೀಪ ಎಂ.ಜಿ. ಮತ್ತಿತರರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಬ್ರಹ್ಮಾವರ ರುಡ್‌ಸೆಟ್ ಇವರ ಆಶ್ರಯದಲ್ಲಿ ಗಂಗೊಳ್ಳಿ ಇಗರ್ಜಿಯ ವ್ಯಾಪ್ತಿಯ ಮಹಿಳೆಯರಿಗೆ ಗಂಗೊಳ್ಳಿ ಇಗರ್ಜಿಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ 10 ದಿನದ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರವನ್ನು ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಇಗರ್ಜಿಯ ಧರ್ಮಗುರು ರೆ.ಫಾ. ಅಲ್ಬರ್ಟ್ ಕ್ರಾಸ್ತಾ ಬುಧವಾರ ಉದ್ಘಾಟಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಪಾಪಾ ನಾಯಕ್, ಉಪನ್ಯಾಸಕ ಕರುಣಾಕರ ಜೈನ್, ತರಬೇತಿ ಶಿಕ್ಷಕಿ ಅಶ್ವಿನಿ ದೇಸಾಯಿ, ಸಂಪದ ಸಂಸ್ಥೆಯ ಸಂಯೋಜಕಿ ಜುಡಿತ್ ಡಿಸೋಜ, ಸುಗಮ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ ಡೆಸಾ, ಅಮೃತಾ ಮಹಾ ಸಂಘದ ಅಧ್ಯಕ್ಷೆ ಆಶಾ ರೆಬೆರೊ, ಕಾರ್ಯದರ್ಶಿ ಪ್ಲೊಸಿ ಬ್ರಗಾಂಜ, ಸ್ತ್ರೀ ಸಚೇತಕಿ ಜ್ಯೋತಿ ಎ.ಸಿ., 18 ಆಯೋಗದ ಸಂಯೋಜಕಿ ಪ್ರೀತಿ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ಆಶಾ ರೆಬೆರೊ ಸ್ವಾಗತಿಸಿದರು. ಪ್ರೀತಿ ಫೆರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪ್ಲೊಸಿ ಬ್ರಗಾಂಜ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು:  ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವಾಲಯದ ಅಧಿಸೂಚನೆಯಂತೆ ಉಡುಪಿ ಜಿಲ್ಲಾ ಪಂಚಾಯತ್ ಕರ್ನಾಟಕ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸುತ್ತೋಲೆಯಂತೆ ಪ್ಲಾಸ್ಟಿಕ್ ಮುಕ್ತ ಉಡುಪಿ ಜಿಲ್ಲೆ ಮಾಡುವ ಉದ್ಧೇಶದಿಂದ ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ ಆರು ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡುಕೊಂಡು ನಿಷೇಧಿತ ಪ್ಲಾಸ್ಟಿಕ್‌ನ್ನು ಕಡ್ಡಾಯವಾಗಿ ನಿರ್ಬಂಧಿಸಿ, ಪರಿಣಾಮಕಾರಿ ಅನುಷ್ಟಾನಕ್ಕೆ ಯೋಜನೆ ರೂಪಿಸಿದ್ದು, ಆಯ್ದ ಆರು ಪಂಚಾಯತ್‌ಗಳಲ್ಲಿ ಒಂದಾದ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜ.26ರಂದು ಪ್ಲಾಸ್ಟಿಕ್ ಮುಕ್ತಗ್ರಾಮ ಘೋಷಣೆ ಮಾಡಲಾಗಿದ್ದು, ನೋಡೆಲ್ ಅಧಿಕಾರಿಗಳಿಂದ ಅಂಗಡಿ-ಮುಂಗಟ್ಟುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಫೆ.6ರಂದು ವಂಡ್ಸೆಯಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿರುವ ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ|ನಾಗಭೂಷಣ ಉಡುಪ ಅವರ ನೇತೃತ್ವದಲ್ಲಿ ಜನತೆಯಲ್ಲಿ ಅರಿವು ಮೂಡಿಸಲಾಯಿತು. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ, ಬಳಕೆ ಮತ್ತು ವಿತರಣೆ ಮಾಡಿದರೆ ಗ್ರಾಮ ಪಂಚಾಯತ್ ಬೈಲಾದಂತೆ…

Read More

ಕುಂದಾಪ್ರ ಡಾಟ್ ಕಾಂ ಲೇಖನ ಸ್ವಸ್ಥ ಜಗತ್ತನ್ನು ನಿರ್ಮಿಸುವಲ್ಲಿ ಭಾರತ ನೀಡಿದ ಅತ್ಯುತ್ತಮ ಕೊಡುಗೆ ಯೋಗ. ಇತ್ತೀಚಿನ ವರ್ಷಗಳಲ್ಲಿ ಇದು ಎಷ್ಟೊಂದು ಪ್ರಚಾರ ಪಡೆದಿದೆಯೆಂದರೆ ವಿದೇಶಿ ಪ್ರವಾಸಿಗರ ತಂಡ ಈ ವಿಜ್ಞಾನವನ್ನು ಅಭ್ಯಸಿಸಲಿಕ್ಕಾಗಿ ಭಾರತಕ್ಕೆ ಬರುತ್ತಿದ್ದಾರೆ. ಅಂತಹ ಒಂದು ಗುಂಪು- ಶಿವರಾಮ ಅನ್ನುವ ಫ್ರಾನ್ಸ್‌ನಲ್ಲಿ ಜನಿಸಿ ಕೆನಡಾದಲ್ಲಿ ಬೆಳೆದ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯ ನೇತೃತ್ವದಲ್ಲಿ ಈಗ ಕುಂದಾಪುರದಲ್ಲಿ ಇದೆ. ಸುಮಾರು 24 ಮಂದಿ ಇರುವ (ಫ್ರಾನ್ಸ್, ಕೆನಡಾ, ಅಮೇರಿಕಾ, ಜಪಾನ್, ಟ್ಯುನೇಷಿಯಾ, ಬೆಲ್ಜಿಯಂ……) ಈ ಯೋಗ ರಿಟ್ರೀಟ್ ತಂಡಕ್ಕೆ ಭಾರತೀಯ ಶಾಸ್ತ್ರೀಯ ಕಲೆಗಳಲ್ಲಿ ಅತೀವ ಆಸಕ್ತಿ. ಭಾರತೀಯ ಪರಂಪರೆಯನ್ನು ಉದ್ದೀಪನಗೊಳಿಸಲು ಸ್ಥಾಪಿಸಲ್ಪಟ್ಟ ಕುಂದಾಪುರದ ಸಾಧನಾ ಕಲಾ ಸಂಗಮ ನಾರಾಯಣ ಐತಾಳರ ನೇತೃತ್ವದಲ್ಲಿ, ಶಾಸ್ತ್ರೀಯ ಕಲೆಗಳನ್ನು ಮುಂದುವರೆಸುವ ಪ್ರಯತ್ನದಲ್ಲಿ ಒಳ್ಳೆಯ ಹೆಸರು ಮಾಡಿದೆ. ಶಾಸ್ತ್ರೀಯ ಗಾಯನ, ವಾದನ, ನರ್ತನಗಳಲ್ಲಿ ಪ್ರತಿಭೆಯನ್ನು ಹೊಂದಿರುವ ಶಿಕ್ಷಕರು/ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿದ್ದಾರೆ. ಇವರ ಆಶ್ರಯದಲ್ಲಿ ಇತ್ತೀಚೆಗೆ ಮೇಲೆ ತಿಳಿಸಿದ ಯೋಗ ರಿಟ್ರೀಟ್ ತಂಡಕ್ಕೆ ಒಂದು ಭರತನಾಟ್ಯ ಕಾರ‍್ಯಕ್ರಮ ಸಂಸ್ಥೆಯ…

Read More