ದಶಕಗಳಿಂದ ತಮ್ಮ ಉನ್ನತ ಸಂಸ್ಕಾರ, ಸಜ್ಜನಿಕೆ, ಸ್ನೇಹಶೀಲತ್ವದ ಮೂಲಕ ಸಮಾಜದ ಸರ್ವ ವರ್ಗದವರ ಪಾಲಿನ ಪ್ರೀತಿಗೆ ಪಾತ್ರರಾದವರು ಬರೆಗುಂಡಿ ಶ್ರೀನಿವಾಸ ಚಾತ್ರರು ನಮ್ಮನ್ನು ಅಗಲಿದರೂ ಅವರ ನೆನಪು ಅಮರವಾಗಿದೆ. ವ್ಯಕ್ತಿತ್ವಗಳು ರಾಜಕೀಯ ಮತ್ತು ಧರ್ಮದ ಸಂಕುಚಿತತೆಗೆ ಒಳಗಾಗಿ, ಸೀಮಿತ ಸೀಮೆಗಳ ಒಳಗೆ ಬಂಧಿಯಾಗಿ, ಆಕರ್ಷಣೆ- ಪ್ರಭಾವ- ವ್ಯಾಪ್ತಿಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಸಮಾಜದಲ್ಲಿ ಪ್ರತ್ಯೇಕ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ಸುದೀರ್ಘ ಕಾಲದಿಂದ ಸ್ಥಾಪಿಸಿಕೊಂಡು ಬಂದಿದ್ದರು. ಸಾಮಾಜಿಕ- ಧಾರ್ಮಿಕ ನಾಯಕತ್ವಗಳ ಕಾಲಕಾಲದ ನಿರ್ಣಾಯಕ ಭೂಮಿಕೆಗಳನ್ನು ಸೊಗಸಾಗಿ ಮತ್ತು ಸುಸೂತ್ರವಾಗಿ ನಿಭಾಯಿಸಿದ ಹಿರಿಮೆ ಇವರದ್ದು. ಸದಾ ತಮಗಿಂತ ಕಿರಿಯರಿಗೆ ಆದರ, ಆಶ್ರಯ, ಅವಕಾಶಗಳನ್ನು ನೀಡುತ್ತಾ, ಶ್ರೇಯಸ್ಸನ್ನು ಹಾರೈಸುತ್ತಾ, ಹಿರಿತನದ ಸಿರಿ-ಸಿಹಿಗಳನ್ನು ಸಮನಾಗಿ ಸರ್ವರಿಗೂ ಹಂಚಿದವರು. ದೀರ್ಘಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಗತ್ಯದ ಕಾಯಕ-ಕರ್ಮಗಳು ಯಥಾವತ್ತಾಗಿ ನೇರವೇರುವಂತೆ ನೋಡಿಕೊಂಡು, ಬದುಕಿನ ಕೊನೆಯವರೆಗೂ ಅಪಾರ ಬದ್ಧತೆಯನ್ನು ಮೆರೆದು ಮಾದರಿಯಾಗಿದ್ದಾರೆ. ಬದುಕಿನ ಸಂಧ್ಯಾಕಾಲದಲ್ಲೂ ಸದಾ ಚಟುವಟಿಕೆಯಿಂದಿದ್ದು ಯಾವ ಹಂತದಲ್ಲೂ ಜೀವನೋತ್ಸಾಹವನ್ನು ಕಳೆದುಕೊಂಡವರಲ್ಲ. ಸರಳತೆ, ಸಜ್ಜನಿಕೆ, ಸುಪಥಗಳಿಂದ ಕೂಡಿದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಾಗವನ್ನು ಮೀಸಲಿರಿಸಿ ಮಂಜೂರು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ – ಭಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಈವರೆಗೆ ಗೋಶಾಲೆ ಮಂಜೂರಾಗಿಲ್ಲ. ಗೋ ಮಾಳ ಉಳ್ಳವರ ಪಾಲಾಗುತ್ತಿದ್ದು ಸರಿಯಾಗಿ ಬಳಕೆಯಾಗುತ್ತಿಲ್ಲ. ತಾಲೂಕಿನಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಜಾನುವಾರುಗಳಿಗೆ ಶಾಶ್ವತ ನೆಲೆ ಇಲ್ಲದಂತಾಗಿದೆ. ಜಾನುವಾರುಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ಅಪಘಾತಗಳು ಹೆಚ್ಚುತ್ತಿದೆ, ಬೆಳೆ ಹಾನಿಯಾಗಿ ಕೃಷಿಕರಿಗೆ ನಷ್ಟವಾಗುತ್ತಿದೆ. ರಾತ್ರಿ ಸಮಯದಲ್ಲಿ ಬೀಡಾಡಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದು ಗೋವುಗಳ ವಿನಾಶವಾಗುತ್ತಿದೆ. ರಕ್ಷಿಸಲ್ಪಟ್ಟ ಜಾನುವಾರುಗಳು, ಬೀಡಾಡಿ ಜಾನುವಾರುಗಳನ್ನು ದೂರದ ನೀಲಾವರ ಗೋಶಾಲೆಗೆ ಸಾಗಿಸಲು ಸಾಗಾಟ ವೆಚ್ಚ ಹೆಚ್ಚುತ್ತಿದೆ. ಹಾಗಾಗಿ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮೂಲಕ ನಿರ್ವಹಣೆ ಮಾಡಲು ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಮೀನು ಮಂಜೂರಾತಿಗೆ ಕೋರಿದ್ದು, ಅದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಿಕ್ಷಕರ ದಿನಾಚರಣೆಯ ಅಂಗವಾಗಿ ಉಪ್ಪುಂದ ಜೆಸಿಐನ ಸರ್ವ ಸದಸ್ಯರು ತಮಗೆ ವಿದ್ಯೆ ನೀಡಿದ ಗುರುಗಳಾದ .ಐ. ನಾರಾಯಣ್ ಮಾಸ್ಟರ್ ಹಾಗೂ ಶಾರದಾ ದಂಪತಿಗಳ ಮನೆಗೆ ಭೇಟಿ ನೀಡಿ ಗೌರವಿಸಿದರು. ಈ ಸಂದರ್ಭ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು, ಪೂರ್ವಾಧ್ಯಕ್ಷ ಜೇಸಿ ಸೆನೆಟರ್ ಪ್ರಕಾಶ್ ಭಟ್, ಪುರಂದರ್ ಖಾರ್ವಿ, ಉದಯ್ ಡಿ.ಆರ್, ಕಾರ್ಯಕ್ರಮದ ನಿರ್ದೇಶಕರಾದ ನರಸಿಂಹ ದೇವಾಡಿಗ, ಜಗದೀಶ್ ದೇವಾಡಿಗ, ಸದಸ್ಯರಾದ ಸೌಮ್ಯಾ, ಸಂಗೀತಾ ಪುರಂದರ್, ಸುಪರ್ಣಾ, ಗಣೇಶ್ ಗಾಣಿಗ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ, ಶಿವಾನಂದ್, ಗೌರೀಶ್, ಗುರುರಾಜ ಹೆಬ್ಬಾರ್, ಪಾಂಡುರಂಗ ದೇವಾಡಿಗ, ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಲಯಾಧಿಕಾರಿ ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರೂಪಿಸಿ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ವಂದನಾರ್ಪಣೆಗೈದರು. ರಾಮಕೃಷ್ಣ ಖಾರ್ವಿ, ವಾಣಿ ವಾಚಿಸಿದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮೀಣ ಭಾಗದ ಜನರು ವಿದ್ಯುತ್ ಪಡೆದುಕೊಳ್ಳಲು ಪಂಚಾಯತಿ ನಿರಪೇಕ್ಷಣಾ ಪತ್ರ (ಎನ್ಓಸಿ) ಪಡೆದುಕೊಳ್ಳಬೇಕಾಗಿದ್ದು ಇದರಿಂದ ಜನಸಾಮಾನ್ಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿದ್ಯುತ್ ಇಲಾಖೆಯ ಈ ಸುತ್ತೋಲೆಯನ್ನು ಒಂದು ವಾರದೊಳಗೆ ವಾಪಾಸು ಪಡೆಯುವ ನಿರ್ಧಾರಕ್ಕೆ ಬರಲಾಗಿದ್ದು, ರಾಜ್ಯದಲ್ಲಿ ಎರಡೂವರೆ ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಬೈಂದೂರು ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಬೈಂದೂರು ಬಿಜೆಪಿ ಕಛೇರಿಗೆ ತೆರಳಿ ಭಾರತಾಂಭೆಯ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿದ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ದ.ಕ-ಉಡುಪಿ ಜಿಲ್ಲೆಯಲ್ಲಿನ ಸಿಂಗಲ್ ಫೇಸ್, ಲೋ ಓಲ್ಟೆಜ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ತ್ವರಿತವಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಗೋಳಿಹೊಳೆ ಸಬ್ ಸ್ಟೇಷನ್ಗೆ ಅರಣ್ಯ ಇಲಾಖೆಯ ತೊಡಕು ಇದ್ದು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು. ರಾಜ್ಯದ ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಲು ಬೊಮ್ಮಾಯಿ ಸರಕಾರ ಬದ್ಧವಾಗಿದೆ ಎಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರು ಸೋಮವಾರ ಬೈಂದೂರಿನ ಶ್ರೀ ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಜಿಲ್ಲಾಧ್ಯಕ್ಷ ಸುರೇಶ್ ಕುಯಿಲಾಡಿ, ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್, ದೇವಸ್ಥಾನದ ಆಡಳಿತಾಧಿಕಾರಿ ಮಂಜು ಬಿಲ್ಲವ, ಜಿಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ ಹಾಗೂ ಇನ್ನಿತರರು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಇತ್ತೀಚೆಗೆ ಬಹಳಷ್ಟು ಜನಪ್ರಿಯತೆ ಪಡೆದಿರುವ ‘ಮನಿಕೆ ಮಾಗೆ ಹಿತೆ’ ಎಂಬ ಶ್ರೀಲಂಕನ್ ಹಾಡೊಂದರ ಕವರ್ ವರ್ಷನ್ ಅನ್ನು ಆಳ್ವಾಸ್ ಪದವಿ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಅಸೀಮ ದೋಳ ಅವರು ಹಾಡುವ ಮೂಲಕ ಯೂಟ್ಯೂಬ್ ನಲ್ಲಿ ಹೆಚ್ಚಿನ ವೀಕ್ಷಣೆ ಪಡೆದಿದ್ದಾರೆ. ಇತ್ತೀಚೆಗೆ ಯೋಹಾನಿ ಹಾಗೂ ಸತೀಶನ್ ಎಂಬುವವರು ಇದೇ ಹಾಡಿನ ಕವರ್ ವರ್ಷನ್ ಹಾಡಿ 80 ಮಿಲಿಯನ್ಗೂ ಅಧಿಕ ವೀಕ್ಷಕರನ್ನು ಸೆಳೆದಿದ್ದರು. ಇದೀಗ ಅಸೀಮ ಅವರಿಂದ ಪ್ರೇರೇಪಿತರಾಗಿ ಈ ಹಾಡನ್ನು ಹಾಡಿದ್ದಾರೆ. ಅಸೀಮ ಅವರ ಶ್ರೀಲಂಕಾದ ಸ್ನೇಹಿತೆಯರಾದ ತತ್ ಸರಣಿ ಮೆಂಡಿಸ್ ಹಾಗೂ ನಿಪುಣಿ ತಾರುಕ ಅವರ ಸಹಕಾರದೊಂದಿಗೆ ಹಾಡಿನ ಸಾಹಿತ್ಯವನ್ನು ಕಲಿತಿದ್ದಾರೆ. ಕವರ್ ಹಾಡಿನ ನಿರ್ದೇಶನವನ್ನು ಪ್ರಿಯಾಂಕ ಪೂಜಾರ್ ಅವರು ಮಾಡಿದ್ದು, ಗುಣೇಶ್ ಭಾರತೀಯ ಹಾಗೂ ಗ್ರೇಶಲ್ ಕಳಿಯಾಂಡ ಅವರು ಹಾಡಿನ ರೆಕಾರ್ಡಿಂಗ್ ಮತ್ತು ಚಿತ್ರೀಕರಣ ಮಾಡಿದ್ದಾರೆ. ಯೂಟ್ಯೂಬ್ ಅಪ್ಲೋಡ್ ಆದ ಎರಡೇ ದಿನದಲ್ಲಿ 12 ಸಾವಿರ ವೀಕ್ಷಣೆ ಪಡೆದ ಹಾಡಿನ ಈ ಸಾಧನೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಇಲ್ಲಿನ ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ದೇಶಭಕ್ತಿ ಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 6ನೇ ತರಗತಿಯ ಕುಮಾರಿ ರಿಷಿಕಾ ಪ್ರಥಮ ಸ್ಥಾನ ಪಡೆದಿದ್ದಾಳೆ. ಅವರು ಶಿಕ್ಷಕ ದಂಪತಿಗಳಾದ ಬೈಂದೂರಿನ ರೂಪ ಮತ್ತು ರಾಮ ದೇವಾಡಿಗರ ಪುತ್ರಿ. ಆಗಸ್ಟ್ 3ರಿಂದ 10ರವರೆಗೆ ನಡೆದ ಈ ದೇಶಭಕ್ತಿ ಗೀತೆಗಳ ವಾಚನಾ ಸ್ಪರ್ಧೆಯಲ್ಲಿ ಹೊರರಾಜ್ಯ ಮತ್ತು ಹೊರದೇಶಗಳ ಮಕ್ಕಳುಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹೆಸ್ಕತ್ತೂರು ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಹೆಸ್ಕತ್ತೂರು ಒಕ್ಕೂಟ ಇವುಗಳ ವತಿಯಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್, ಸಹ ಶಿಕ್ಷಕರಾದ ಸಂಜೀವ ಎಂ, ಜಯಲಕ್ಷ್ಮಿ ಬಿ. , ಜಯರಾಮ ಶೆಟ್ಟಿ, ವಿಜಯಾ ಅರ್, ಅಶೋಕ ತೆಕ್ಕಟ್ಟೆ, ವಿಜಯ ಶೆಟ್ಟಿ, ರವೀಂದ್ರ ನಾಯಕ್ , ಅಂಗನವಾಡಿ ಶಿಕ್ಷಕಿ ಶರ್ಮಿಳಾ ಅವರನ್ನು ಸನ್ಮಾನಿಸಲಾಯಿತು. ಹಾಗೂ ಹುಣಸೆಮಕ್ಕಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೀವ ಕುಲಾಲ, ಕೊರ್ಗಿ ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷರಾದ ಗಂಗೆ ಕುಲಾಲ ಅವರನ್ನು ಗೌರವಿಸಲಾಯಿತು. ಶಾಲಾ ಎಸ್ಡಿಎಂಸಿಯ ಅಧ್ಯಕ್ಷರಾದ ಕೃಷ್ಣ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವಿನುತಾ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಹೆಸ್ಕತ್ತೂರು ಒಕ್ಕೂಟದ ಅಧ್ಯಕ್ಷರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ವತಿಯಿಂದ ಭಾನುವಾರ ನಾವುಂದದ ಸ್ಕಂದ ಸಭಾಭವನದಲ್ಲಿ ಬೈಂದೂರು ವಲಯ ಶಿಕ್ಷಕರ ದಿನಾಚರಣೆಯ ನಡೆಯಿತು. ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಬೋಧನಾ ಕೌಶಲ, ಅನುಕರಣೀಯ ವ್ಯಕ್ತಿತ್ವ, ಮಾನವೀಯ ಅನುಕಂಪದೊಂದಿಗೆ ಕರ್ತವ್ಯನಿಷ್ಠೆ ಹೊಂದಿರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಮೆಚ್ಚಿಕೊಳ್ಳುತ್ತಾರೆ ಮತ್ತು ಎಂದಿಗೂ ಮರೆಯುವುದಿಲ್ಲ. ಎಲ್ಲ ಶಿಕ್ಷಕರೂ ಹಾಗಾಗಲು ಪ್ರಯತ್ನಿಸಬೇಕು ಎಂದು ಹೇಳಿದರು. ಕೋವಿಡ್ ಕಾರಣದಿಂದ ಭೌತಿಕ ತರಗತಿಗಳು ನಡೆಯದೆ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುಂಠಿತವಾಗಿದೆ. ಶಾಲೆ ಆರಂಭವಾದ ಒಂದು ವರ್ಷದೊಳಗೆ ಅದನ್ನು ಸಹಜ ಸ್ಥಿತಿಗೆ ತರಲು ಎಲ್ಲ ಶಿಕ್ಷಕರೂ ಶ್ರಮಿಸಬೇಕು ಎಂದು ಅವರು ಹೇಳಿದರು. ಶಿಕ್ಷಕರ ಮನವಿಗೆ ಸ್ಪಂದಿಸಿದ ಶಾಸಕರು, ಬೈಂದೂರಿನಲ್ಲಿ ಗುರು ಭವನ ನಿರ್ಮಿಸಲು ಕ್ಷೇತ್ರಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದರ ಜತೆಗೆ ರೂ 50 ಸಾವಿರ ವೈಯಕ್ತಿಕ ದೇಣಿಗೆ ನೀಡುವುದಾಗಿ ಪ್ರಕಟಿಸಿದರು. ಕಳೆದ ಸಾಲಿನಲ್ಲಿ ನಿವೃತ್ತರಾದ ಪ್ರಾಥಮಿಕ ಶಾಲಾ ಶಿಕ್ಷಕರಾದ ಆನಂದ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಶಕಗಳಿಂದ ತಮ್ಮ ಉನ್ನತ ಸಂಸ್ಕಾರ, ಸಜ್ಜನಿಕೆ, ಸ್ನೇಹಶೀಲತ್ವಕ್ಕೆ ಪಾತ್ರರಾದ ಬರೆಗುಂಡಿ ಶ್ರೀನಿವಾಸ ಚಾತ್ರ (76 ) ಆನಾರೋಗ್ಯದ ಕಾರಣದಿಂದ ಸ್ವಗೃಹದಲ್ಲಿ ನಿಧನರಾದರು. ಅವರು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ಮೊಕ್ತೇಸರರರಾಗಿದ್ದರು. ದೀರ್ಘಕಾಲದಿಂದ ಕೆಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅಗತ್ಯದ ಕಾಯಕ-ಕರ್ಮಗಳು ಯಥಾವತ್ತಾಗಿ ನೇರವೇರುವಂತೆ ನೋಡಿಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
