ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಮಲ್ಯಾಡಿ ಶಿವರಾಮ ಶೆಟ್ಟಿ ತೆಕ್ಕಟ್ಟೆ ಹಾಗೂ ಉಪಾಧ್ಯಕ್ಷರಾಗಿ ದೀನಪಾಲ ಶೆಟ್ಟಿ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಭಿನಂದಿಸಿ ಮಾತನಾಡಿದರು. ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ನ ನಿರ್ದೇಶಕ ದಿವಾಕರ ಪೂಜಾರಿ ಕಡ್ಗಿಮನೆ, ಎಸ್. ದಿನಕರ ಶೆಟ್ಟಿ ಸುಣ್ಣಾರಿ, ನಾಸಿರ್ ಮಾವಿನಕಟ್ಟೆ, ಅಣ್ಣಯ್ಯ ಗಾಣಿಗ ಮುಲ್ಲಿಮನೆ, ಗೋಪಾಲ ಬಳೆಗಾರ, ಗೀತಾ ಎಸ್.ಶೆಟ್ಟಿ ಕನ್ಯಾನ, ಶಶಿಕಲಾ ಎಸ್.ಪೂಜಾರಿ ಗುಲ್ವಾಡಿ, ಶೇಖರ ಚಾತ್ರಬೆಟ್ಟು ಬೀಜಾಡಿ, ಸುಖಾನಂದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಅಗ್ನಿ ಆಕಸ್ಮಿಕ ತಡೆ ಹಾಗೂ ಪರಿಹಾರೋಪಾಯ ಕುರಿತು ಎಲ್ಲರಿಗೆ ಅರಿವು ಇರಬೇಕು. ವಿದ್ಯಾರ್ಥಿಗಳು ಈ ಕುರಿತಾದ ಪರಿಜ್ಞಾನ ಪಡೆದರೆ ಅಂತಹ ಸಂದರ್ಭ ಎದುರಾದಾಗ ಸಹಕರಿಸಬಹುದು. ಅದರ ಅರಿವು ಇಲ್ಲದವರಿಗೂ ಮಾಹಿತಿ, ಮಾರ್ಗದರ್ಶನ ನೀಡಬಹುದು ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎನ್. ಶೇರುಗಾರ್ ಹೇಳಿದರು. ಕಾಲೇಜಿನ ಯುವ ರೆಡ್ಕ್ರಾಸ್ ಘಟಕ, ರೋವರ್ ರೇಂಜರ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಕಾಲೇಜಿನ ವಿವಿಧ ಸಮಿತಿಗಳ ಆಶ್ರಯದಲ್ಲಿ ಕುಂದಾಪುರ ಅಗ್ನಿಶಾಮಕ ಠಾಣೆ ಸಿಬ್ಬಂದಿ ಗುರುವಾರ ಆಯೋಜಿಸಿದ್ದ ಅಗ್ನಿ ಆಕಸ್ಮಿಕ ತಡೆ ಮತ್ತು ಪರಿಹಾರ ಕುರಿತು ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ರಘು ನಾಯ್ಕ್ ಬೆಂಕಿ ಆಕಸ್ಮಿಕ, ಅನ್ಯ ಅವಘಡ ನಡೆಯದಂತೆ ವಹಿಸಬೇಕಾದ ಮುನ್ನೆಚ್ಚರಿಕೆ ಹಾಗೂ ಸಂಭವಿಸಿದಾಗ ತಡೆಗಟ್ಟುವ ಅರಿವು ನೀಡುವುದು ಕಾರ್ಯಕ್ರಮದ ಉದ್ದೇಶ. ವಿದ್ಯಾರ್ಥಿಗಳು ಇದರ ಗರಿಷ್ಠ ಲಾಭ ಪಡೆಯಬೇಕು ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಸ್ಕತ್ನ ಚಾಪ್ಟರ್ ಆಫ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಪಾಧ್ಯಕ್ಷ, ನಾಯ್ಕನಕಟ್ಟೆಯ ಸಿಎ ರಾಮಚಂದ್ರ ಪ್ರಭು ಅವರು ಬೆಸ್ಟ್ ಚಾಪ್ಟರ್ ಓವರ್ಸೀಸ್ ಕೆಟಗರಿ -2 ಅವಾರ್ಡ್ ದೊರೆತಿದೆ. ದೇಹಲಿಯ ಅಶೋಕ ಹೋಟೆಲ್ನಲ್ಲಿ ಶುಕ್ರವಾರ ಜರುಗಿದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ 70ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ಹಣಕಾಸು ಮತ್ತು ಕಾರ್ಪರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ನಾಯ್ಕನಕಟ್ಟೆಯ ಪ್ರಭುಕೇರಿಯವರಾದ ರಾಮಚಂದ್ರ ಪ್ರಭು ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾಯ್ಕನಕಟ್ಟೆಯಲ್ಲಿಯೂ, ಪಿಯು ಶಿಕ್ಷಣವನ್ನು ಉಪ್ಪುಂದ ಹಾಗೂ ಪದವಿ ಶಿಕ್ಷಣವನ್ನು ಬೈಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಪೂರೈಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿಗೆ ಸಮೀಪದ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಎಂಬಲ್ಲಿ 2019, ಜನವರಿ 26 ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಶುಕ್ರವಾರ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದರು. ಈ ಪ್ರಕರಣದಲ್ಲಿ ಅವರಿಗೆ ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ಎತ್ತಿಹಿಡಿದ ಸುಪ್ರೀಂ ಕೋರ್ಟ್ ಜಾಮೀನು ವಜಾಗೊಳಿಸಿತ್ತು. ಟಾಯ್ಲೆಟ್ ಪಿಟ್ ವಿಚಾರಕ್ಕೆ ಸಂಬಂಧಿಸಿ ವಿಚಾರಕ್ಕೆ ನಡೆದ ಪ್ರಕರಣದಲ್ಲಿ ಭರತ್ ಹಾಗೂ ಯತೀಶ್ ಎಂಬ ಯುವಕರಿಬ್ಬರ ಕೊಲೆ ನಡೆದಿತ್ತು. ಜಾಮೀನು ರದ್ದತಿ ಆಗಿದ್ದರಿಂದ ಆರೋಪಿ ಬಂಧಿಸುವಂತೆ ನ್ಯಾಯಾಲಯವು ಆದೇಶ ನೀಡಿತ್ತು. ಆರೋಪಿಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ಶರಣಾದ ರಾಘವೇಂದ್ರ ಕಾಂಚನ್ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಉಡುಪಿ ಉಪವಿಭಾಗದ ಡಿವೈಎಸ್ಪಿ ಟಿ.ಜೈಶಂಕರ್, ಬ್ರಹ್ಮಾವರ ಸರ್ಕಲ್ ಇನ್ಸ್ಪೆಕ್ಟರ್ ಅನಂತಪದ್ಮನಾಭ, ಕೋಟ ಎಸ್.ಐ ನಿತ್ಯಾನಂದ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ಅಷ್ಟಠಬಂಧ ಬ್ರಹ್ಮಕಲಶೋತ್ಸವ ಸಂದರ್ಭ ಜರುಗಲಿರುವ ಶ್ರೀನಿವಾಸ ಕಲ್ಯಾಣೋತ್ಸವದ ಚಪ್ಪರ ಮುಹೂರ್ತ ಶುಕ್ರವಾರ ಜರುಗಿತು. ಈ ಸಂದರ್ಭ ಮಾತನಾಡಿದ ದೇವಸ್ಥಾನದ ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಊರಿನ ಧಾರ್ಮಿಕ ಕಾರ್ಯಕ್ರಮಗಳು ಸರ್ವರ ಸಹಕಾರವಿದ್ದಾಗಲಷ್ಟೇ ಯಶಸ್ಸು ಕಾಣಲು ಸಾಧ್ಯವಿದೆ. ಊರಿನ ಶ್ರೇಯಸ್ಸಿಗಾಗಿ ನಡೆಯುವ ಧಾರ್ಮಿಕ ಕೆಲಸಗಳಲ್ಲಿ ಎಲ್ಲವೂ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು. ದೇವಳದ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಪೂಜಾ ವಿಧಿಗಳು ನೆರವೇರಿದವು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಆಡಳಿತ ಮಂಡಳಿ ಸದಸ್ಯರುಗಳಾದ ಶಂಕರ ಮೊಗವೀರ, ಮಂಜುನಾಥ ಆಚಾರ್ಯ, ಅಣ್ಣಪ್ಪ ಪೂಜಾರಿ, ನಾಗರಾಜ ಗಾಣಿಗ ಬಂಕೇಶ್ವರ, ದೊಟ್ಟಯ್ಯ ಪೂಜಾರಿ, ಗ್ರಾಮಸ್ಥರಾದ ಶ್ರೀನಿವಾಸ ಉಬ್ಜೇರಿ, ಬಿ. ಚಂದ್ರಶೇಖರ ನಾವಡ, ಗಿರೀಶ್ ಬೈಂದೂರು, ಗಣೇಶ್ ಪೂಜಾರಿ, ಶಶಿಕಲಾ, ಸಾವಿತ್ರಿ ಅಳ್ವೆಗದ್ದೆ, ರಘುರಾಮ ಪೂಜಾರಿ ಸೇರಿದಂತೆ ಹಲವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸುರಭಿ ರಿ. ಬೈಂದೂರು ಮತ್ತು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಏಳು ದಿನಗಳ ಕಾರ್ಯಕ್ರಮ ರಂಗ ಸುರಭಿ – 2020 ’ಶಿಶಿರ ನಾಟಕೋತ್ಸವ’ ಆಯೋಜಿಸಿದೆ. ಸುರಭಿ ಸಂಸ್ಥೆಯು ವಿಂಶತಿ ಸಂಭ್ರಮದೊಂದಿಗೆ ಪ್ರತಿವರ್ಷದಂತೆ ಫೆಬ್ರವರಿ 8 ರಿಂದ ಫೆಬ್ರವರಿ 14ರ ತನಕ ಪ್ರತಿದಿನ ಸಂಜೆ 6:30ಕ್ಕೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಫೆಬ್ರವರಿ 08 ಶನಿವಾರ ರಂಗಾಯಣ ಮೈಸೂರು ಅಭಿನಯದ, ರಮಾನಾಥ ಎಸ್. ರಚಿಸಿ, ಚಂದ್ರಹಾಸ್ ಕೇರಳ ನಿರ್ದೇಶಿಸಿದ ನಾಟಕ ’ಆರ್ಕೇಡಿಯಾದಲ್ಲಿ ಪಕ್’ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 09 ರವಿವಾರ ರಂಗಾಯಣ ಮೈಸೂರು ಅಭಿನಯದ, ಗಿರೀಶ್ ಕಾರ್ನಾಡ್ ರಚನೆ, ಚಿದಂಬರ್ ರಾವ್ ಜಂಬೆ ನಿರ್ದೇಶನದ ನಾಟಕ ’ಬೆಂದಕಾಳು ಆನ್ ಟೋಸ್ಟ್’ ಪ್ರದರ್ಶನಗೊಳ್ಳಲಿದ್ದು, ಫೆಬ್ರವರಿ 10 ಸೋಮವಾರ ರಂಗಾಯಣ ಮೈಸೂರು ಅಭಿನಯದ, ಶರವಣ್ ಕುಮಾರ್ ರಚಿಸಿ, ನಿರ್ದೇಶಿಸಿದ ನಾಟಕ ’ರೆಕ್ಸ್ ಆವರ್ಸ್’ ಡೈನೋ ಏಕಾಂಗಿ ಪಯಣ ಪ್ರದರ್ಶನ ಕಾಣಲಿದೆ. ಫೆಬ್ರವರಿ 11 ಮಂಗಳವಾರ ಸ್ವಂದನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ಸೇವಾದಳ ಕೇಂದ್ರ ಸಮಿತಿ ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಇತ್ತಿಚಿಗೆ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ಏಳಜಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಜ್ಯೋತಿ ಹೆಚ್. ಎಸ್ ಅವರನ್ನು ‘ಅತ್ಯುತ್ತಮ ಶಾಖಾನಾಯಕಿ’ ಎಂದು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜ್ಯೋತಿ ಅವರು ಹಲವು ವರ್ಷಗಳಿಂದ ಭಾರತ ಸೇವಾದಲವನ್ನು ಶಾಲೆಯಲ್ಲಿ ಪ್ರಾರಂಭಿಸಿ ಮಕ್ಕಳಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯ ಭಾವೈಕ್ಯತೆ ಮುಂತಾದ ಸದ್ಗುಣಗಳನ್ನು ಮೂಡಿಸಿರುವುದಲ್ಲದೇ, ಸೇವಾದಲ ಬೈಂದೂರು ವಲಯದ ಅಧಿನಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸೇವಾದಳ ಕೇಂದ್ರ ಸಮಿತಿ ಆಯೋಜಿಸಿದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಈರ್ವರನ್ನು ಈ ಪ್ರಶಸ್ತಿ ಆಯ್ಕೆ ಮಾಡಲಾಗಿತ್ತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಪ್ರತಿಷ್ಠಿತ ಪಂಚಗಂಗಾ ರೈತರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ, ಉಪಾಧ್ಯಕ್ಷರಾಗಿ ಚಂದ್ರ ನಾಯ್ಕ್ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಆನಂದ್ ಪಿ.ಎಚ್, ಅಂತೋನಿ ಲೂಯಿಸ್, ಚಂದ್ರ ಪೂಜಾರಿ, ಸಂತೋಷ ಕುಮಾರ್ ಶೆಟ್ಟಿ ತೋಟಬೈಲು, ಚಂದ್ರಶೇಖರ ಪೂಜಾರಿ, ಹಿಂದುಳಿದ ವರ್ಗ ಎಚ್. ರಾಜೀವ ದೇವಾಡಿಗ, ಮಹಿಳಾ ಮೀಸಲು ಚಂದ್ರಮತಿ ಹೆಗ್ಡೆ, ಸಾಧು ಎಸ್ ಬಿಲ್ಲವ, ಪರಿಶಿಷ್ಟ ಜಾತಿ ಮೀಸಲು ಅನಂತ ಮೋವಾಡಿ, ಪರಿಶಿಷ್ಟ ಪಂಗಡ ಶಾರದಾ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ದಕ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘ ನಿರ್ದೇಶಕ ರಾಜು ಪೂಜಾರಿ, ಮೊಳಹಳ್ಳಿ ಸಹಕಾರಿ ಸಂಘ ಅಧ್ಯಕ್ಷ ಮೊಳಹಳ್ಳಿ ಮಹೇಶ್ ಹೆಗ್ಡೆ, ಎಸ್.ಡಿ.ಸಿ.ಸಿ. ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ, ಮಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಘ ಸಂಸ್ಥೆಗಳು ಸೇವೆ, ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಕಲಿಸುವ ಕೇಂದ್ರಗಳಾಗುವ ಜತೆಗೆ ಮಾನವೀಯತೆಯನ್ನು ಮೂಲ ಸೆಲೆಯನ್ನಾಗಿಸಿ ಕಾರ್ಯವೆಸಗುವುದು ಅತ್ಯವಶ್ಯ ಎಂದು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಹೆಚ್. ವಸಂತ ಹೆಗ್ಡೆ ಹೇಳಿದರು. ಅವರು ಮಂಗಳವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಬೈಂದೂರು ಸಂಸ್ಥೆಯು ವಿಂಶತಿ ಸಂಭ್ರಮದೊಂದಿಗೆ ಆಯೋಜಿಸಲಾಗಿದ ಮೂರು ದಿನಗಳ ಸುರಭಿ ಜೈಸಿರಿ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿ ಸಮಾಜವನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿಯಾಗಿದ್ದು, ಈ ನೆಲೆಯಲ್ಲಿ ಎಲ್ಲಾ ಸಂಸ್ಥೆಗಳು ಎಚ್ಚರಿಕೆಯಿಂದ ತೊಡಗಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದರು. ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚನ್ನಕೇಶವ ಉಪಾಧ್ಯಾಯ, ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ, ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಸಲಹೆಗಾರ ಜಿ. ತಿಮ್ಮಪ್ಪಯ್ಯ ಮಯ್ಯಾಡಿ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಫನ್ ಡೇ ಕ್ಲಬ್ ವತಿಯಿಂದ ’ಜನಾನಮನ ಮಹಾತ್ಮ ಪುರಸ್ಕಾರ ಸಮರ್ಪಣಾ ಹಾಗೂ ಕಲಾ ಸಂಧ್ಯ’ ಕಾರ್ಯಕ್ರಮ ಭಾರತೀಯ ಸಾಂಸ್ಕೃತಿಕ ಕೇಂದ್ರದ ’ಅಶೋಕ’ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಪದ್ಮಶ್ರೀ, ಪದ್ಮವಿಭೂಷಣ ಪುರಸ್ಕೃತ ಚಲನಚಿತ್ರ ನಿರ್ದೇಶಕ, ಅಡೂರು ಗೋಪಾಲಕೃಷ್ಣ ಅವರನ್ನು ’ಜನಾನಮನ ಮಹಾತ್ಮ’ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತು. ಈ ಸಂದರ್ಭ ಭಾರತೀಯ ಸಮುದಾಯ ಹಿತನಿಧಿ ಸಂಘದ ಜಂಟಿ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ’ಜನಾನಮನ ಕಾರುಣ್ಯ ಸ್ಪರ್ಷ’ ಪುರಸ್ಕಾರ ನೀಡಿ ಗೌರವಿಸಿದರು. ಕೇರಳ ಮೂಲದ ಪ್ರತಿಷ್ಠಾನವು ಕರ್ನಾಟಕದ ಜನಸೇವಕನಿಗೆ, ಅವರ ಸಹೃದಯ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಕತಾರಿನಲ್ಲಿ ಇದೇ ಮೊದಲ ಭಾರಿಯಾಗಿದೆ. ಗಾಯನ, ಕುಚುಪುಡಿ ನೃತ್ಯ ಪ್ರದರ್ಶನಗೊಂಡವು.
