Author: ನ್ಯೂಸ್ ಬ್ಯೂರೋ

ಸರ್ಜಿಕಲ್ ಸ್ಟೈಕ್ ಆಗಬೇಕಿರುವುದು ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದ ಸೈನಿಕರ ಬಗ್ಗೆ ಎಲ್ಲಾ ಪಕ್ಷಗಳಿಗೂ ಗೌರವವಿದೆ. ಆದರೆ ಪ್ರಧಾನಿ ಮೋದಿಯವರು ಸೈನಿಕರನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿನ ನಿರುದ್ಯೋಗ, ಭೃಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟೈಕ್ ಮಾಡಬೇಕಿದ್ದ ಅವರು ಭ್ರಮೆಯಿಂದ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ಆರೋಪಿಸಿದರು. ಶನಿವಾರ ಮಧ್ಯಾಹ್ನ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಈ ಹಿಂದೆ ೧೪ ಬಾರಿ ಸರ್ಜಿಕಲ್ ಸ್ಟೈಕ್ ನಡೆದಿತ್ತು, ಅಂದಿನ ಪ್ರಧಾನಿಗಳು ಯಾರೂ ಇದನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಜಿಎಸ್‌ಟಿ ರೂಪದಲ್ಲಿ ಹಿಂದಿನ ಕಾಲದ ತಲೆ ಕಂದಾಯವನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದು, ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ, ಮುಂದೆ ಈ ದೇಶದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ, ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಶುಕ್ರವಾರ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಯಶಸ್ವಿಯಾಗಿ ನೆರವೇರಿದವು. ಅಂದು ಬೇರೀತಾಡನ ಸಹಿತ ವಾದ್ಯ ಘೋಷದೊಂದಿಗೆ ಪ್ರಾತಃ ಪೂಜೆ, ಶ್ರೀ ದೈವಗಳಿಗೆ ಕಲಾ ತತ್ವಹೋಮ, ಮಿಥುನ ಲಗ್ನದಲ್ಲಿ ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮಕಲಷಾಭಿಷೇಕ, ಪುಪ್ಪಾಲಂಕಾರ ಅಷ್ಟೋತ್ತರ ಅರ್ಚನೆ, ಮಹಾ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ಪ್ರಸನ್ನ ಪೂಜೆ, ಪ್ರಾರ್ಥನೆ, ದಿಗ್ಬಿಲಿ, ಧ್ವಜ ಅವರೋಹಣ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೇ. ಮೂ. ಜ್ಯೋತಿಷಿ ರಮೇಶ್ ಭಟ್ ಭಟ್ಕಳ ಅವರ ಆದ್ವರ್ಯದಲ್ಲಿ ಜರುಗಿದವು. ಈ ಸಂದರ್ಭ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನ ಜೀಣೋದ್ಧಾರ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮೊಕ್ತೇಸರರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದ ಬಳಿಕ ಮಹಾಅನ್ನಸಂತರ್ಪಣೆ ಜರುಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಲವತ್ತಾರು ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ ಎಷ್ಟು ಜನ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಮನ್ನಾ ಮಾಡಿದ್ದೇವೆಂದು ಹೇಳುವವರು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯ ಮುನ್ನಾವಾದರೂ ಶ್ವೇತಪತ್ರ ಹೊರಡಿಸಲಿ ಆಗ ಜನರಿಗೆ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ರಾಜ್ಯ ಬಿಜೆಪಿ ನಾಯಕಿ, ಚಿತ್ರ ನಟಿ ತಾರಾ ಹೇಳಿದರು. ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರ ಕೃಷಿಕರ ಕಲ್ಯಾಣಕ್ಕಾಗಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿತ್ತು. ಆದರೆ ರಾಜ್ಯದಲ್ಲಿನ ಸಂಮಿಶ್ರ ಸರಕಾರ ಅರ್ಹ ರೈತರ ಪಟ್ಟಿಯನ್ನೇ ಕೇಂದ್ರಕ್ಕೆ ಸಮರ್ಪಕವಾಗಿ ನೀಡದೇ ಕೃಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಈಗ ಮೋದಿ ಅವರು ಕೇವಲ ವ್ಯಕ್ತಿಯಾಗಿರದೇ ದೇಶದ ಬಹುದೊಡ್ಡ ಶಕ್ತಿಯಾಗಿದ್ದಾರೆ. ೨೦೧೪ರಲ್ಲಿ ಕೇವಲ ಮೋದಿ ಅವರ ಹೆಸರಿನಲ್ಲಿ ಚುನಾವಣೆ ಎದುರಿತ್ತಿದ್ದೇವೆ. ಆದರೆ ಈಗ ಮೋದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಜರುಗುತ್ತಿರುವ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವದ ಅಂಗವಾಗಿ ದೈವಗಳ ಬಿಂಬಗಳನ್ನು ಗುರುವಾರ ಪುರಮೆರವಣಿಗೆಯ ಮೂಲಕ ದೈವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಗಳ ಬಿಂಬಗಳನ್ನು ವಾಸ್ತುಶಿಲ್ಪಿಗಳು ಶಿಲ್ಪಿ ಶಸ್ತ್ರ ಪೂಜೆಯ ಬಳಿಕ ದೇವಳದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ ಅವರಿಗೆ ಹಸ್ತಾಂತರಿಸಿದರು. ಬಳಿಕ ಶಿಲ್ಪಿಗಳನ್ನು ಗೌರವಿಸಲಾಯಿತು. ಬಳಿಕ ಬಿಂಬ ಪರಿಗ್ರಹ ಬಿಂಬ ಶುದ್ಧಿ ಹೋಮ, ಪೂಜೆ, ಶಯ್ಯಾಕಲ್ಪ ಬಿಂಬಾಧಿವಾಸ ಹೋಮ, ಕಲಶ ಮಂಡಲ ರಚನೆ, ಮಂಡಲ ಪೂಜೆ, ಅಷ್ಟೋತ್ತರ ಪರಿಕಲಶ ಸಹಿತ ಬ್ರಹ್ಮಕಲಶ ಸ್ಥಾನನೆ, ಕಲಶಾಧಿವಾಸ ಹೋಮ, ಶ್ರೀ ದೈವಗಳ ಬಿಂಬ ಪ್ರತಿಷ್ಠಾ ಸಹಿತ ಜೀವ ಕುಂಭಾಭಿಷೇಕ ಪ್ರತಿಷ್ಠಾ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಕಲಾತತ್ವನ್ಯಾಸ ಲಿಪಿನ್ಯಾಸಧಿ ಸಹಿತ ಪೂಜೆ, ಮಂಗಳಾರತಿ ಮೊದಲಾದ ಕಾರ್ಯಕ್ರಮಗಳು ಜರುಗಿದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಹಂತದ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ತಾಲೂಕು ವಾಪ್ತಿಯ ಮತಗಟ್ಟೆಗಳಲ್ಲಿ ಬಹುಪಾಲು ನಿರ್ಭೀತ ಮತದಾನ ಜರುಗಿತು. ಕೋಟ ಸಾಸ್ತಾನ ಪರಿಸರದಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ವಿಳಂಬವಾದ ಮತದಾನ, ಸರತಿಯಲ್ಲಿ ಕಾದು ಮತಯಂತ್ರ ದುರಸ್ತಿ ವಿಳಂಬಬಾಗಿದ್ದರಿಂದ ಮತದಾನ ಮಾಡದೆ ನಿರ್ಗಮಿಸಿದ ಮತದಾರರು, ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸ್ವಕ್ಷೇತ್ರದಲ್ಲಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟತಟ್ಟು ಮತಗಟ್ಟೆಯಲ್ಲಿ ಶ್ರೀನಿವಾಸ ಪೂಜಾರಿ ಸರಿತಿ ಸಾಲಿನಲ್ಲಿ ನಿಂತು ಮತದಾನ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿಯಲ್ಲಿ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಬಸ್ರೂರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗೆಯಿಂದಲೇ ಮತಗಟ್ಟೆಯಲ್ಲಿ ಹಿಂದೆದೂ ಕಂಡಿರದಷ್ಟು ಸರತಿ ಸಾಲಿದ್ದು, ಪೇಟೆ ಗ್ರಾಮಣ ಭಾಗದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂತು. ಗುರುವಾರ ಮದುವೆ ಇನ್ನತರ ಕಾರ‍್ಯಕ್ರಮಗಳು ಹೆಚ್ಚಿದ್ದರಿಂದ ಮತಗಟ್ಟೆಯಲ್ಲಿ ಮತದಾನ ಮಾಡಿ ತೆರಳವ ಧಾವಂತ ಕಂಡುಬಂತು. ನಕ್ಸಲ್ ಬಾಧಿತ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಅಳುಕಿಲ್ಲದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್‌ಕಾರ್ ಕಾಲೇಜು ಕೋಯಕುಟ್ಟಿ ಸಭಾಂಗಣದಲ್ಲಿ ಮಹಿಳೆಯರಿಗಾಗಿ ತೆರಯಲಾಗಿದ್ದ ಎರಡು ಸಖಿ ಮತಗಟ್ಟೆಗಳಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಮತದಾನ ಮಾಡಿದರು. ಭಂಡಾರ್‌ಕಾರ‍್ಸ್ ಕಾಲೇಜು ಮತಕೇಂದ್ರ ವ್ಯಾಪ್ತಿಯಲಿ ಅತೀ ಹೆಚ್ಚು ಮಹಿಳಾ ಮತದಾರರಿದ್ದು, ಸಖಿ ಮತಕೇಂದ್ರ ವಿಶೇಷವಾಗಿ ಅಲಂಕರಿಸಲಾಗಿತ್ತು. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಅವರೇ ಸ್ಥಳದಲ್ಲಿ ನಿಂತು ಸಖಿ ಮತಗಟ್ಟೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮತದಾನಕ್ಕೆ ಬಂದ ಮಹಿಳೆಯರ ಆತ್ಮೀಯವಾಗಿ ಸ್ವಾಗತಿಸಿ, ಮತದಾನ ಮಾಡುವಲ್ಲಿ ಶ್ರಮಿಸುತ್ತಿದ್ದು, ಮುಖ್ಯಾಧಿಕಾರಿ ಜೊತೆ ಕಚೇರಿ ಸಿಬ್ಬಂದಿ ಕೂಡಾ ಸಹಕಾರ ನೀಡುತ್ತಿದ್ದರು. ಮತಗಟ್ಟೆವಿಶಿಷ್ಟವಾಗಿ ಶೃಂಗರಿಸಿದ್ದು, ಪ್ರಥಮ ಚಿಕಿತ್ಸೆ ಇನ್ನಿತರ ಸೌಲಭ್ಯ. ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಕೊಠಡಿ ಕೂಡಾ ಆರೆಂಜ್ ಮಾಡಲಾಗಿತ್ತು. ಮಹಿಳೆಯರು ಖುಷಿ ಖುಷಿಯಿಂದ ಬಂದ ಮತದಾನ ಮಾಡಿದರೆ, ಮತ್ತೆ ಕೆಲವರು ಸೆಲ್ಫಿ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆದುಕೊಂಡು ಖಷಿಪಟ್ಟರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಉಳ್ತೂರು ಜಯಶೀಲ ಪೂಜಾರಿ ಎನ್ನುವ ಯುವಕ ಕಳೆದ ಮೂರು ವಾರದ ಹಿಂದೆ ಅಪಘಾತಕ್ಕೆ ಸಿಲುಕಿ ಗಂಭೀರ ಗಾಯಗೊಂಡು ವಿಶ್ರಾಂತಿಯಲ್ಲಿದ್ದರೂ ಮನೆಯಿಂದ ಅಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ. ಕಾಲಿಗೆ ಬಿದ್ದ ಏಟಿನಿಂದ ಮಗ್ಗಲು ಕೂಡಾ ಬದಲಾಯಿಸಲಾಗದ ಸ್ಥಿತಿಯಲ್ಲಿದ್ದರೂ, ಇತ್ತೀಚೆಗೆ ಆಸ್ಪತ್ರೆಯಿಂದ ಮನೆಗೆ ಮರಳುವಾಗ ಮೂರು ತಿಂಗಳು ಹಾಸಿಗೆ ಬಿಟ್ಟೇಳಬಾರದು ಎನ್ನೋದು ವೈದ್ಯರು ಖಡಕ್ ಎಚ್ಚರಿಕೆ ಇದ್ದರೂ ಆದರೆ ಮೋದಿಗೆ ಓಟ್ ಹಾಕಬೇಕು ಎನ್ನುವ ಒಂದೇ ಒಂದು ಉದ್ದೇಶದಿಂದ ಮನೆಯಿಂದ ಅಂಬುಲೆನ್ಸ್‌ನಲ್ಲಿ ಮತಗಟ್ಟೆಗೆ ಬಂದು ಅಲ್ಲಿಂದ ಸ್ಟೆಚ್ಚರ್ ಮೂಲಕ ಮತಕೇಂದ್ರಕ್ಕೆ ತೆರಳಿ, ಮನೆಯವರ ಸಹಕಾರದಲ್ಲಿ ಮತದಾನ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಮತದಾನ ಕೇಂದ್ರ ಸಂಖ್ಯೆ ೯೮ರಲ್ಲಿ ಮದುಮಗಳು ಶಾಂತಾ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿ ಮತದಾನದ ಮಹತ್ವವನ್ನು ಎತ್ತಿಹಿಡಿದಿದ್ದಾರೆ. ಹುಣ್ಸೆಮಕ್ಕಿ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಶಾಂತಾ ಅವರ ಮದುವೆ ಸಾಯಿಬ್ರಕಟ್ಟೆಯಲ್ಲಿ ವರ ಸಂದೇಶ್ ಜೊತೆ ಅಭಿಜಿನ್ ಲಗ್ನದಲ್ಲಿ ನಡೆಯುವುದಿತ್ತು. ಮದುವೆಗೆ ಸಂಪೂರ್ಣ ಸಿದ್ದಗೊಂಡು ಮತಕೇಂದ್ರಕ್ಕೆ ಬಂದು ಸರತಿಯಲ್ಲಿ ನಿಂತು ತನ್ನ ಸರಿದಿಗಾಗಿ ಕಾದು ಮತದಾನ ಮಾಡಿ ಸೀದಾ ಸಾಯಿಬ್ರಕಟ್ಟೆ ಮದುವೆ ಮಂಟಪಕ್ಕೆ ತೆರಳಿದರು.ತೆರಳುವ ಮುನ್ನಾ ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯಆಗಿದ್ದು, ಎಲ್ಲರೂ ಮತದಾನ ಮಾಡುವಂತೆ ಸಲಹೆ ಕೂಡಾ ಮಾಡಿದರು. ಕುಂದಾಪ್ರ ಡಾಟ್ ಕಾಂ. ಮದುವೆ ನನ್ನ ಜೀವನದ ವೈಯುಕ್ತಿಕ ವಿಷಯ.ಮತದಾನದೇಶದ ವಿಷಯ. ವೈವಾಹಿಕ ಬದುಕು ಎಷ್ಟು ಮುಖ್ಯವೋ ಮತದಾನಅದಕ್ಕಿಂತ ಮಿಗಿಲು.. ನಮ್ಮ ಒಂದು ಓಟು ಏನಾಗುತ್ತದೆ ಎನ್ನೋ ತಾತ್ಸಾರಕ್ಕಿಂತ ನನ್ನ ಓಟು ಬಲಷ್ಠ ಭಾರತ ಕಟ್ಟುವ ಕನಸಿಗೆ ಸಕಾರವಾಗಿದೆ ಎಂದಿದ್ದಾರೆ ಮದುಮಗಳಾದ ಶಾಂತಾ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಬುಧವಾರ ಶ್ರೀ ನಾಗ ದೇವರ ಪ್ರತಿಷ್ಠಾ ಕಾರ್ಯಕ್ರಮ ಜರುಗಿತು. ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವೇ. ಮೂ. ಜ್ಯೋತಿಷಿ ಭಟ್ಕಳ ರಮೇಶ ಭಟ್ಟರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ಜೀವ ಕುಂಬಾಭಿಷೇಕ, ಪ್ರಾಣ ಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಪೂಜೆ ಹಾಗೂ ಹೋಮಗಳು ನಡೆಯಲಿದೆ. ಕೊನೆಯಲ್ಲಿ ನಾಗದರ್ಶನ ಸೇವೆ ನಡೆಯಿತು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮೋಹನ ಪೂಜಾರಿ ಉಪ್ಪುಂದ, ಸೇವಾರ್ಥಿ ಮುತ್ತಯ್ಯ ಪೂಜಾರಿ, ಸಮಿತಿಯ ಕಾರ್ಯದರ್ಶಿ, ಆಡಳಿತ ಮೊಕ್ತೇಸರರು ಹಾಗೂ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು. ಬಳಿಕ ದೈವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಅಪಘಾತದಲ್ಲಿ ತೀವೃವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತ ಪಟ್ಟ ಕುಂದಾಪುರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಬಿ.ಚಂದ್ರಶೇಖರ (42) ಅವರ ಪಾರ್ಥಿವ ಶರೀರಕ್ಕೆ ಮಂಗಳವಾರ ಬೆಳಿಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಅಂತಿಮ ನಮನಗಳನ್ನು ಸಲ್ಲಿಸಲಾಯಿತು. ಭಾನುವಾರ ರಾತ್ರಿ ಬ್ರಹ್ಮಾವರದಿಂದ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಾಬುಕೊಳ ಸೇತುವೆ ಬಳಿ ಸಂಭವಿಸಿದ ಅಪಘಾತದಿಂದ ಚಂದ್ರಶೇಖರ್ ಮೃತರಾಗಿದ್ದರು. ಉಡುಪಿಯ ಜಿಲ್ಲಾ ಸಶಸ್ತ್ರ ಪಡೆಯ ಕೇಂದ್ರ ಸ್ಥಾನದಲ್ಲಿ ಇಲಾಖಾ ಅಂತಿಮ ಗೌರವ ವಂದನೆಯ ಬಳಿಕ ಪಾರ್ಥಿವ ಶರೀರವನ್ನು ಕುಂದಾಪುರಕ್ಕೆ ತರಲಾಗಿತ್ತು. ಈ ವೇಳೆ ಪೊಲೀಸ್‌, ಗ್ರಹ ರಕ್ಷಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಕರ್ತವ್ಯ ನಿಮಿತ್ತ ಬ್ರಹ್ಮಾವರ ಕಡೆಗೆ ತಮ್ಮ ಬೈಕ್‌ನಲ್ಲಿ ತೆರಳಿ ಹಿಂತಿರುಗುತ್ತಿದ್ದ ವೇಳೆ ಮಾಬುಕೊಳದ ಸೇತುವೆ ಬಳಿ ಅವರ ಬೈಕ್‌ಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಿಂದಾಗಿ ಕುತ್ತಿಗೆಗೆ ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ತಕ್ಷಣ…

Read More