Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂತನ ಬೈಂದೂರು ತಾಲೂಕು ರಚನೆಗೊಂಡು ಮೂರು ವರ್ಷ ಕಳೆದು, ತಾಲೂಕು ಪಂಚಾಯತ್ ರಚನೆಗೊಂಡು ಮೂರು ತಿಂಗಳು ಕಳೆದಿದೆ. ಇಷ್ಟರ ನಂತರವೂ ಬೈಂದೂರಿನಲ್ಲಿ ತಾಲೂಕು ಪಂಚಾಯತಿಗಾಗಿ ಒಂದು ಸುಸಜ್ಜಿತ ಕಟ್ಟಡವಿಲ್ಲ. ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಕುಂದಾಪುರದಲ್ಲಿ ನಡೆಸುವುದು ಸರಿಯಲ್ಲ ನಡೆಸುತ್ತಿರುವುದು ಸರಿಯಲ್ಲ. ಇದು ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಬೈಂದೂರು ತಾಲೂಕಿನ 3ನೇ ಸಾಮಾನ್ಯ ಸಭೆಯಲ್ಲಿ ಕೇಳಿಬಂದ ಮಾತುಗಳು. ಸದಸ್ಯ ಜಗದೀಶ್ ದೇವಾಡಿಗ ಕುಂದಾಪುರದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಆಪ್ಷೇಕಿಸಿ, ಬೈಂದೂರಿನಲ್ಲಿಯೇ ಮುಂದಿನ ಸಭೆ ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಹೇಂದ್ರ ಪೂಜಾರಿ ಬೈಂದೂರು ತಾಲೂಕು ಪಂಚಾಯತಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಸಭಾಂಗಣದ ವ್ಯವಸ್ಥೆ ಇಲ್ಲ. ಖಾಸಗಿ ಸಭಾಂಗಣದಲ್ಲಿ ಸಭೆ ನಡೆಸಿದರೆ ಗೌಪ್ಯತೆಗೆ ಧಕ್ಕೆಯಾಗಲಿದೆ. ಎ2 ತಂತ್ರಾಂಶವೂ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಗ್ರಾಮಸ್ಥರಿಗಿಲ್ಲ ಪಡಿತರ: ಸದಸ್ಯೆ ಗಿರಿಜಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಂಗ್ರೆಸ್ ಮುಕ್ತ ಭಾರತವಾಗಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಪಂಚಾಯತಿಗಳು ಆಗಬೇಕು. ಮುಂದಿನ ದಿನಗಳಲ್ಲಿ ಪಂಚಾಯತ್ಗಳಿಗೆ ಅದ್ಬುತ ಶಕ್ತಿ ಬರಲಿದೆ. ಸ್ವರಾಜ್ಯ ಸಂಕಲ್ಪ ಈಡೇರಲಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಪಂಚಸೂತ್ರಗಳ ಅಡಿಯಲ್ಲಿ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಮುಂದೆ ತಾ.ಪಂ., ಜಿ.ಪಂ.ಚುನಾವಣೆಯಲ್ಲಿಯೂ ಜಯಭೇರಿ ಭಾರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಿಜೆಪಿ ಕರ್ನಾಟಕದ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ಸಾಮಾನ್ಯ ಕಾರ್ಯಕರ್ತ ನಾಯಕನಾಗುವುದೆ ಪಂಚಾಯತ್ ಚುನಾವಣೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಸಾಧನೆ, ವಿಚಾರಧಾರೆಯ ಪರಿಶ್ರಮದ ಮೂಲಕ ಗೆಲುವು ಸಾಧಿಸುವುದು ಈ ಗ್ರಾಮ ಸ್ವರಾಜ್ಯ ಯಾತ್ರೆ. ರಾಮರಾಜ್ಯ ಮಹತ್ಮಾ ಗಾಂಧಿಯವರ ಕನಸು. ದೆಹಲಿ, ಮುಂಬಯಿ ಬೆಳೆದರೆ ರಾಮರಾಜ್ಯವಾಗದು. ಹಳ್ಳಿಗಳಲ್ಲಿಯೂ ಸ್ವರಾಜ್ಯದ ಕಲ್ಪನೆಯ ಬೆಳೆಯಬೇಕು ಎನ್ನುವುದು ಗಾಂಧಿಯವರ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರ, ಕುಟುಂಬ ರಾಜಕೀಯ ಲಾಲಸೆಯಿಂದಲೇ ಮುಂದುವರಿಯಿತು. ಇದೀಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಟ್ಕಳ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್‌ನ ಮುಂಭಾಗದ ಟಯರ್ ಸ್ಪೋಟಗೊಂಡು ಪಕ್ಕದ ರಸ್ತೆಗೆ ಪಲ್ಟಿಯಾದ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದೆ. ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಮುಂಭಾಗದ ಟಯರ್ ಸ್ಪೋಟಗೊಂಡು ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿರುವ ಬೀದಿದೀಪಕ್ಕೆ ಡಿಕ್ಕಿಯಾಗಿ ಪಕ್ಕದ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದೆ. ಗಾಯಗೊಂಡ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ನೊಂದಾಯಿತ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಏರ್ಪಡಿಸುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಅಸಂಘಟಿತ ತಂಡಗಳು / ಏಕವ್ಯಕ್ತಿ ಕಲಾವಿದರಿಗೆ ವಾದ್ಯ ಪರಿಕರ / ವೇಷಭೂಷಣ ಖರೀದಿಗೆ ಹಾಗೂ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ / ತಂಡದ ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು ಧನಸಹಾಯ ನೀಡಲು Sevasindhu.karnataka.gov.in  ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 27 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22230282 / 080-22279954 ಸಂಪರ್ಕಿಸುವಂತೆ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಸ್ವಚ್ಚ ಭಾರತ ಫ್ರೆಂಡ್ಸ್ ಸದಸ್ಯ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಹಳೆ ವಿದ್ಯಾರ್ಥಿ ಮಣಿಪಾಲ ಆರೋಗ್ಯ ಕಾರ್ಡ ಅಧಿಕೃತ ಪ್ರತಿನಿಧಿ ರಕ್ಷಿತ ಕುಮಾರ ವಂಡ್ಸೆಯವರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಿತ ನಾರಾಯಣ ವಿಶೇಷ ಮಕ್ಕಳ ಶಾಲೆಯ ಸುಮಾರು 37 ಮಕ್ಕಳಿಗೆ ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ರಕ್ಷಿತ ಕುಮಾರ ಮಾತನಾಡಿ, ಮಣಿಪಾಲ ಆರೋಗ್ಯ ಕಾರ್ಡುಗಳನ್ನು ಈ ಹಿಂದೆ ಉಡುಪಿ ಸಂತೆಕಟ್ಟೆಯಲ್ಲಿರುವ ಕೃಷ್ಣಾನುಗ್ರಹ ಅರ್ಹಸಂಸ್ಥೆ ಮತ್ತು ದತ್ತು ಸ್ವೀಕಾರ ಕೇಂದ್ರದ ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ. ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ಪ್ರತಿ ವರ್ಷ ಇಂತಹ ವಿಶೇಷ ಮಕ್ಕಳ ಶಾಲೆ ಸಂಸ್ಥೆಗೆ ಕೊಡುವ ಉದ್ದೇಶವಾಗಿರುತ್ತದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ ತಲ್ಲೂರು ,ಟ್ರಸ್ಟಿ ಮನೋರಮ ತಲ್ಲೂರು, ಶಿಕ್ಷಕರು, ಪ್ರಾಂಶುಪಾಲರು,  ಶಿಕ್ಷಕೇತರ ಸಿಬ್ಬಂದಿಗಳು, ಮತ್ತು ಪೋಷಕರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯಂತೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‌ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ನಡೆಯಿತು. ಐಕ್ಯ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ನಿರಾಕರಿಸಿ ಪ್ರತಿರೋಧಿಸಲು ಮತ್ತು ಪರಿಹಾರ ಹಾಗೂ ಪರ್ಯಾಯ ರೂಪಿಸಲು ಮುಂದಾಗಬೇಕೆಂದು ಸಿಐಟಿಯು ಮುಖಂಡ ರಾಜೀವ ಪಡುಕೋಣೆ ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದರು. ಸಿಐಟಿಯು ಮುಖಂಡ ವೆಂಕಟೇಶ್ ಕೋಣಿ, ಸುಶೀಲ ನಾಡಾ ಸಭೆಯನ್ನುಧ್ಧೇಶಿಸಿ ಮಾತನಾಡಿದರು. ಉದಯ ಗಾಣಿಗ, ಮಂಜು ಪಡುವರಿ, ಜಯಶ್ರೀ ಪಡುವರಿ, ಅಮ್ಮಯ್ಯ ಬಿಜೂರು, ಮಾಧವ, ಶ್ರೀಧರ ಉಪ್ಪುಂದ, ನಾಗರತ್ನ ನಾಡಾ, ಸಿಂಗಾರಿ ನಾವುಂದ, ರಾಮ ಖಂಬದಕೋಣೆ ಮುಷ್ಕರದಲ್ಲಿ ಉಪಸ್ಥಿತರಿದ್ದರು. ಸಿಐಟಿಯು ಮುಖಂಡ ಗಣೇಶ್ ತೊಂಡೆಮಕ್ಕಿ ಸ್ವಾಗತಿಸಿದರು. ರೊನಾಲ್ಡ್ ರಾಜೇಶ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಅಂಗವಿಕಲರ ಪುನವ೯ಸತಿ ಕೇಂದ್ರ ಆರಂಭಿಸಲು ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೇನಾಪುರದಲ್ಲಿ ಕಾದಿರಿಸಿದ ಐದು ಎಕ್ರೆ ಸರಕಾರಿ ಸ್ಥಳದಲ್ಲಿಎಂಡೋಸಲ್ಫಾನ್ ಅಂಗವಿಕಲರ ಪುನವ೯ಸತಿ ಕೇಂದ್ರ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಕೂಡಲೆ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿಯವರನ್ನು, ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಿಯೋಗ ಬೇಟಿಮಾಡಿ ಒತ್ತಾಯಿಸಿತು. ಕನಾ೯ಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ(ಎನ.ಪಿ.ಆರ್.ಡಿ) ಜಿಲ್ಲಾಧ್ಯಕ್ಷ ವೆಂಕಟೇಶ್ ಕೋಣಿ, ಜಿಲ್ಲಾ ಮುಖಂಡರಾದ ಬಾಬು.ಕೆ.ದೇವಾಡಿಗ ಉಪ್ಪುಂದ, ವಿಜಯ ನಾಗೂರು ಕಿರಮಂಜೆಶ್ವರ, ಕಿಶನ್ ಪ್ರಭು ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಕಂಬದಕೋಣೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ ಗಂಗೊಳ್ಳಿ, ಜನಸಾಮಾನ್ಯರ ಬದುಕಿನ ಸಾರವೇ ಆಗಿರುವ ಜಾನಪದ ಸಾಹಿತ್ಯವನ್ನು ಉಳಿಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ಗುರುತರ ಜವಬ್ದಾರಿ ನಮ್ಮ ಮೇಲಿದೆ. ಆಯಾಯ ಕಾಲದ ಜನರ ಜೀವನ, ಆಚಾರ ವಿಚಾರ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಿ ಕೊಡುವ ಜನಪದ ಸಾಹಿತ್ಯ ಅಂದಿನ ಇತಿಹಾಸವನ್ನು ತೆರೆದಿಡುತ್ತದೆ. ತಮ್ಮೊಳಗಿನ ಬೇಗುದಿ, ಅಸಮಾಧಾನ, ಸಂತೋಷ, ಸಂಭ್ರಮವನ್ನು ಹೊರ ಹಾಕಲು ಜನಪದ ಸಾಹಿತ್ಯ ಸಾಮಾನ್ಯರಿಗೆ ಸಹಕಾರಿಯಾಗಿತ್ತು.ಎಂದರು. ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿಯವರ ನಿರ್ದೇಶನದಂತೆ ಯಳಜಿತದ ಜಾನಪದ ಕಲಾವಿದ ರಾಮ ಮರಾಠಿ ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂವೇದನಾ ಕಾಲೇಜಿನ ವಿದ್ಯಾರ್ಥಿನಿ…

Read More

ಕುಂದಾಪ್ರಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕನ್ನಡದ ನಾಡು ನುಡಿ ಕುರಿತಾದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಉಪನ್ಯಾಸಕ ಮತ್ತು ಬರಹಗಾರ ನರೇಂದ್ರ ಎಸ್ ಗಂಗೊಳ್ಳಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕರಾವಳಿ ಕಡಲ ಬಣ್ಣ ಬದಲಾಯಿಸುತ್ತಿದೆ. ಗಂಗೊಳ್ಳಿಯಿಂದ ಶಿರೂರೂ ಗಡಿಯ ತನಕ ಸಮುದ್ರದದಲ್ಲಿ ರಾಶಿ ರಾಶಿ ಪಾಚಿಗಳ ಮೊಗೆ, ಮೊಗೆದು ತರುತ್ತಿದೆ. ರಾತ್ರಿ ಪಾಚಿ ಮಂದಬೆಳಕಿನ ಪ್ರತಿಫಲನಕ್ಕೆ ಬೆಳಕು ಚೆಲ್ಲಿದಂತೆ ಕಂಡರೆ ಸೂರ್ಯನ ರಶ್ಮಿ ಪಾಚಿ ಹೀರಿಕೊಳ್ಳುವುದರಿಂದ ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ಮೂರ‍್ನಾಲ್ಕು ದಿನದಿಂದ ಗಂಗೊಳ್ಳಿ ಕಡಲ ಕಿನಾರೆ ಪಾಚಿಯಿಂದ ಬಣ್ಣ ಬದಲಾಯಿಸಿದೆ. ಈಗಾಗಲೇ ಮಂಗಳೂರು ಉಳ್ಳಾಲದಿಂದ ಕಾರವಾದ ತನಕ ಕಡಲ ತೀರದಲ್ಲಿ ನೀಲಿ ಬೆಳಕು ಅಚ್ಚರಿ ಮೂಡಿಸಿದರೆ, ಗಂಗೊಳ್ಳಿ, ಕೋಡಿ, ಪಡುವರೆ, ಶಿರೂರು ದೊಂಬೆ ಪರಿಸರದಲ್ಲಿ ರಾತ್ರಿ ನೀಲಿ ಬೆಳಕಾದರೆ, ಹಗಲು ಪಾಚಿಯದ್ದೇ ಕಾರುಬಾರು.! ಕಡಲ ವೈಪರೀತ್ಯ ಮಾನವ ನಿರ್ಮಿತವಾದರೂ ರಾತ್ರಿ, ಹಗಲು ಬದಲಾಗುವ ನೀರಿನ ಬಣ್ಣ ವೀಕ್ಷಿಸಿ ಮೂಗಿನಮೇಲೆ ಬೆರಳಿಡುತ್ತಿದ್ದಾನೆ ಮಾನವ! ಗಂಗೊಳ್ಳಿ ಲೈಟ್ ಹೌಸ್ ಮಡಿ ಸಮುದ್ರ ತೀರದಲ್ಲಿ ಸಮುದ್ರ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು, ಇಂತಾದ್ದೊಂದು ಅಚ್ಚರಿ ಗಂಗೊಳ್ಳಿಯಲ್ಲಿ ಮೊದಲ ಬಾರಿ ಗೋಚರಿಸಿದೆ. ದಿನೇ ದಿನೇ ಸಮುದ್ರ ಮಾಲೀನ್ಯದ…

Read More