Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫೂ ಜಾರಿಗೊಳಿಸಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಭೆ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ. ರಾಜ್ಯದ ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು, ಬಳ್ಳಾರಿ, ಕಲಬುರಗಿ, ತುಮಕೂರು, ಬೀದರ್ ನಗರಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂ ಬರಲಿದೆ. ಅಗತ್ಯ ಸೇವೆಗಳನ್ನ ಹೊರತುಪಡಿಸಿ ಎಲ್ಲ ಕಮರ್ಷಿಯಲ್ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಲಾಗ್ತಿದೆ. ಲಾಕ್ಡೌನ್ ಬೇಡ ಅಂದ್ರೆ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು. ನಾಳೆಯಿಂದ ಮಾಸ್ಕ್ ಧರಿಸದಿದ್ದರೆ ದಂಡಾಸ್ತ್ರ ಪ್ರಯೋಗಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಎಚ್ಚರಿಸಿದ್ದಾರೆ. ನಗರಗಳಲ್ಲಿ10 ದಿನ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂವನ್ನ ಸರ್ಕಾರ ಘೋಷಣೆ ಮಾಡಿದೆ. ಕರ್ಫ್ಯೂ ಅವಧಿ ವೇಳೆ ಹೊಟೇಲ್, ಬಾರ್, ಪಬ್, ನೈಟ್ ಪಾರ್ಟಿ, ರೆಸ್ಟೋರೆಂಟ್, ಸಿನಿಮಾಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎನ್ನುವ ಸುದ್ಧಿ ಸತ್ಯಕ್ಕೆ ದೂರವಾಗಿದ್ದು, ಸೇರ್ಪಡೆಗೊಂಡಿದ್ದಾರೆ ಎನ್ನುವವರು ಈ ಹಿಂದಿನ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರಾಗಿರುತ್ತಾರೆ. ಶಾಸಕರ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಹತಾಶರಾಗಿ ಅಪಪ್ರಚಾರ ಮಾಡಲು ಮಾಜಿ ಶಾಸಕರು ಸೇರ್ಪಡೆಯ ನಾಟಕ ಮಾಡುತ್ತಿದ್ದು, ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಆರೋಪಿಸಿದ್ದಾರೆ. ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ಶಾಸಕತ್ವದ ಅವಧಿಯಲ್ಲಿ ಗಂಗೊಳ್ಳಿ ಮೀನುಗಾರಿಕಾ ಬಂದರು ಪುನರ್ ನಿರ್ಮಾಣಕ್ಕೆ ಸುಮಾರು 12 ಕೋಟಿ, ವಿವಿಧ ರಸ್ತೆಗಳ ಕಾಂಕ್ರೀಟಿಕರಣ ಹಾಗೂ ಅಭಿವೃದ್ಧಿಗೆ ಸುಮಾರು 3 ಕೋಟಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸುಮಾರು 20ಕೋಟಿ ಅನುದಾನ ತಂದು ಗಂಗೊಳ್ಳಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಗಂಗೊಳ್ಳಿ ಭಾಗದಲ್ಲಿ ಅಪಪ್ರಚಾರ ನಡೆಸಿ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗಂಗೊಳ್ಳಿ ದಾಕುಹಿತ್ಲುವಿನ 30 ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಕಟ್ಬೆಲ್ತೂರು ನಿವಾಸದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ತ್ರಾಸಿ ಜಿಲ್ಲಾ ಪಂಚಾಯತ್ ಉಸ್ತುವಾರಿ ಶರತ್ ಕುಮಾರ್ ಶೆಟ್ಟಿ ಸಾರಥ್ಯದಲ್ಲಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳ ದೇವಾಡಿಗ, ಗ್ರಾಮೀಣ ಕಾಂಗ್ರೆಸ್ ಗಂಗೊಳ್ಳಿಯ ಸುರೇಂದ್ರ ಖಾರ್ವಿ, ಯುತ್ ಕಾಂಗ್ರೆಸ್ ಅದ್ಯಕ್ಷ ಪ್ರದೀಪ್ ಗಂಗೊಳ್ಳಿ, ವಂಡ್ಸೆ ಬ್ಲಾಕ್ನ ಉಪಾಧ್ಯಕ್ಷ ಜಾಹೀರ್ ಗಂಗೊಳ್ಳಿ ಉಪಸ್ಥಿತಿರಿದ್ದರು. ಇತ್ತಿಚಿಗಷ್ಟೇ ಗಂಗೊಳ್ಳಿಯ 70 ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ► ಕಟ್‌ಬೆಲ್ತೂರು: 70ಕ್ಕೂ ಅಧಿಕ ಯುವಕರು ಕಾಂಗ್ರೆಸ್ ಸೇರ್ಪಡೆ – https://kundapraa.com/?p=46874 . ►ಕಾಂಗ್ರೆಸ್ ಸೇರ್ಪಡೆ ಎಂಬುದು ಮಾಜಿ ಶಾಸಕರ ನಾಟಕ: ಬಿಜೆಪಿ ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ಆರೋಪ – https://kundapraa.com/?p=47076 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 2020ರಲ್ಲಿ ನಡೆಸಿದ ಅಂತಿಮ ಬಿಕಾಂ ಪರೀಕ್ಷೆಯಲ್ಲಿ ಐದು ಮತ್ತು ಆರನೇ ಸೆಮಿಸ್ಟರ್ಗಳ ‘ಪೈನಾನ್ಶಿಯಲ್ ಎಕೌಂಟಿಗ್’ ವಿಷಯದಲ್ಲಿ ಕಾಲೇಜಿನ ದೀಪಾ ದೇವಾಡಿಗ ಮತ್ತು ಜ್ಯೋತಿ ಇವರು 300 ರಲ್ಲಿ 300 ಅಂಕ ಗಳಿಸಿ ICAI ಕೊಡ ಮಾಡುವ ಚಿನ್ನದ ಪದಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ . ಇವರನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಬಿ ಎಂ ಸುಕುಮಾರ ಶೆಟ್ಟಿ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋಳಿಹೋಳೆ ಗ್ರಾಮದ ಮಾವಿನಮನೆ ಮಂಜುನಾಥ ನಾಯ್ಕ್ ಅವರ ಮಗನಾದ 4 ವರ್ಷದ ಸುಶಾಂತ್ ಕಳೆದ ನಾಲ್ಕು ವರ್ಷದಿಂದ ಥಲಸ್ಸಿಮಿಯಾ ಮೇಜರ್ ಎಂಬಂತಹ ಅಪರೂಪದ ಖಾಯಿಲೆಗೆ ತುತ್ತಾಗಿದ್ದಾನೆ. ಇತ್ತಿಚೆಗೆ ತಪಾಸಣೆ ನಡೆಸಿದ ಬೆಂಗಳೂರಿನ ನಾರಾಯಣ ಹೃದಯಾಲದ ವೈದ್ಯರು ಬೋನ್ ಮ್ಯಾರೋ ಟ್ರಾಸ್ಪರೇಂಟ್ ಎನ್ನುವ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ಹಾಗೂ ಈ ಚಿಕಿತ್ಸೆಯ 30 ಲಕ್ಷ ರೂ. ವೆಚ್ಚವಾಗುವುದಾಗಿಯೂ ತಿಳಿಸಿದ್ದಾರೆ. ಸುಶಾಂತ್’ನ ತಂದೆ ಮಂಜುನಾಥ ನಾಯ್ಕ್ ಕೂಲಿ ಕೆಲಸ ಮಾಡಿಕೊಂಡಿದ್ದು, ಈಗಾಗಲೇ ಮಗನ ಚಿಕಿತ್ಸೆಗೆ ಕಳೆದ 4 ವರ್ಷಗಳಿಂದ ಲಕ್ಷಾಂತರ ರೂಪಾಯಿ ವ್ಯಯಿಸಿದ್ದಾರೆ. ಈಗ ಇಷ್ಟು ದೊಡ್ಡ ಮಟ್ಟದ ಚಿಕಿತ್ಸೆಗೆ 30 ಲಕ್ಷ ರೂ ಹಣ ಭರಿಸುವಲ್ಲಿ ಅವರು ಅಸಾಯಕರಾಗಿದ್ದು, ಸಹೃದಯಿಗಳ ನೆರವು ಕೋರಿದ್ದಾರೆ.. ಸುಶಾಂತ್ ಅವರಿಗೆ ಸಹಾಯ ಮಾಡಲಿಚ್ಚಿಸುವವರು ಆತನ ತಂದೆಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು. ಕೆನರಾ ಬ್ಯಾಂಕ್ ಕೊಲ್ಲೂರು ಶಾಖೆ ಉಳಿತಾಯ ಸಂಖ್ಯೆ: 01102200039683 ಐಎಫ್ಎಸ್ಸಿ ಕೋಡ್ CANRB0010175, googlepay/phonepay/ptm: 9945272627ಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕೋಡಿ ಕಡಲ ಕಿನಾರೆಯ ಲೈಟ್ ಹೌಸ್ ಬಳಿಯ ತಾತ್ಕಾಲಿಕವಾಗಿ ನಿರ್ಮಿಸಿದ ಹ್ಯಾಚರಿಯಿಂದ 72 ಕಡಲಾಮೆ ಮರಿಗಳು ಹೊರಬಂದು ಅರಬ್ಬಿ ಸಮುದ್ರವನ್ನು ಸೇರಿದೆ. ಅರಣ್ಯ ಇಲಾಖೆಯು ಸೇವಾ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳಿಯರ ಸಹಕಾರದೊಂದಿಗೆ ನಡೆಸಿದ್ದ ರಕ್ಷಣಾ ಕಾರ್ಯಾಚರಣೆಯಲ್ಲಿ ಕಳೆದ ಜ. 22 ರಿಂದ ಮಾ. 3 ರವರೆಗೆ ಕಡಲಾಮೆ ಮೊಟ್ಟೆಗಳನ್ನು ಪತ್ತೆ ಮಾಡಲಾಗಿತ್ತು. ಅವುಗಳ ಸಂರಕ್ಷಣೆಗೆ ಸಮುದ್ರ ತೀರದಲ್ಲಿ 11 ನೈಸರ್ಗಿಕ ಹ್ಯಾಚರಿಯನ್ನು ನಿರ್ಮಿಸಿದ್ದಲ್ಲದೇ, ಕಾವಲು ನಿಯೋಜಿಸಲಾಗಿತ್ತು. ಹ್ಯಾಚರಿಯಿಂದ ಜನಿಸಿದ 72 ಮರಿಗಳನ್ನು ಮಂಗಳವಾರ ಸುರಕ್ಷಿತವಾಗಿ ಕಡಲಿಗೆ ಸೇರಿಸಲಾಗಿದೆ. ಈವರೆಗೆ ಒಟ್ಟು 7 ಹ್ಯಾಚರಿಗಳಿಂದ ಅಂದಾಜು 370 ಕ್ಕೂ ಅಧಿಕ ಮರಿಗಳು ಮೊಟ್ಟೆಯೊಡೆದು ಹೊರಬಂದು ಕಡಲು ಸೇರಿದೆ.ಕಡಲಾಮೆ ಮರಿಗಳನ್ನು ಕಡಲಿಗೆ ಸೇರಿಸುವ ಕಾರ್ಯಾಚರಣೆ ವೇಳೆ ರಾಜ್ಯ ಅರಣ್ಯ ಕಾರ್ಯ ಪಡೆ ಮುಖ್ಯಸ್ಥ, ಪಿಸಿಸಿಎಫ್ ಸಂಜಯಮೋಹನ್, ಅರಣ್ಯ ಉಪವಿಭಾಗದ ಡಿಎಫ್ಓ ಆಶೀಶ್ ರೆಡ್ಡಿ, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್ , ಹಸ್ತಾ ಶೆಟ್ಟಿ, ನಿರಂತರವಾಗಿ ರಕ್ಷಣಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಹೊರೆ, ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಪುರಜನರ ಬಗ್ಗೆ ಕಾಳಜಿ ಇಟ್ಟು ಜನರಿಗೆ ಹೊರೆಯಾಗದ ನಿರ್ಣಯ ತೆಗೆದುಕೊಳ್ಳಬೇಕಾದ ಕಾಲಘಟ್ಟದಲ್ಲಿ, ನೀವು ಬಿಜೆಪಿ ಸರ್ಕಾರ ಪರವಾದ ನಿರ್ಣಯ ತೆಗೆದುಕೊಳ್ಳುತ್ತಿದ್ದೀರಿ ಎಂದು ಪುರಸಭೆಯ ಕಾಂಗ್ರೆಸ್ ಸದಸ್ಯ ಕೆ. ಚಂದ್ರಶೇಖರ ಖಾರ್ವಿ ಅವರು ಮಾತು ಸಭೆಯಲ್ಲಿ ಆಡಳಿತ ವಿರೋಧ ಪಕ್ಷದ ನಡುವೆ ಕಾವೇರಿದ ಚರ್ಚೆಗೆ ಕಾರಣವಾಯಿತು. ಕೊರೋನಾ ಕಾರಣದಿಂದ ದೇಶವೇ ಆರ್ಥಿಕ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ತೆರಿಗೆ ಏರಿಸುವ ಅವಶ್ಯಕತೆ ಏನಿತ್ತು. ತೆರಿಗೆ ಏರಿಕೆ ಮಾಡದಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದ್ದರೂ, ತೆರಿಗೆ ಏರಿಕೆ ಮಾಡುವ ಪ್ರಾಸ್ತಾಪವನ್ನು ಸರ್ಕಾರಕ್ಕೆ ಕಳುಹಿಸುವ ಔಚಿತ್ಯವೇನಿತ್ತು. ತೆರಿಗೆ ಏರಿಕೆಯಿಂದ ಜನರಿಗೆ ಸಮಸ್ಯೆಯಾಗುವುದರಿಂದ ವರದಿಯನ್ನು ಇನ್ನೊಮ್ಮೆ ಪರಾಮರ್ಶೆ ಮಾಡುವಂತೆ ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯ ಗಿರೀಶ್ ಜಿ.ಕೆ, ಮಾತನಾಡಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಗಿರಿಗೌಡ ಅವರಿಗೆ ಬೈಂದೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಭಿನಂದಿಸಿ ಶಿಕ್ಷಕರ ಸಮಸ್ಯೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ವಿಜೇತ ಶ್ರೀರಾಂಪುರದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ್ ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಗ್ರೇಡ್ -1ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಉಪ್ಪುಂದ ಜೂನಿಯರ್ ಕಾಲೇಜಿನ ಪ್ರಭಾರ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಬಾಡ, ಬೈಂದೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಶ್ರೀರಾಂಪುರದ ಶಾಲೆಯ ಶಿಕ್ಷಕ ವೃಂದದವರು ಹಾಗೂ ಸ್ಥಳೀಯ ವಸತಿ ಗೃಹದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಜರಗಿತು. ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಮತಗಟ್ಟೆಗಳಲ್ಲಿ ಬೂತ್ ಅಧ್ಯಕ್ಷರ ಮತ್ತು ಶಕ್ತಿ ಕೇಂದ್ರದ ಅಧ್ಯಕ್ಷರ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸಲಾಯಿತು. ಬಿಜೆಪಿ ಬೆಳೆದು ಬಂದ ಹಾದಿ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮತ್ತು ರಾಜ್ಯದ ಬಿಜೆಪಿ ಸರಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಅಶೋಕ ಎನ್.ಡಿ., ಮಿಥನ್ ದೇವಾಡಿಗ, ರವೀಂದ್ರ ಖಾರ್ವಿ ಕಂಚುಗೋಡು, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಬೂತ್ ಕಾರ್ಯದರ್ಶಿಗಳು, ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮ ದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಬಿ ಪ್ರವರ್ಗ 4 ಮತ್ತು ಸಿ ಪ್ರವರ್ಗದ 76 ಅಧಿಸೂಚಿತ ಸಂಸ್ಥೆಗಳು, ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಿ ಪ್ರವರ್ಗದ ದೇವಸ್ಥಾನಗಳು – ಉಡುಪಿ ತಾಲೂಕಿನ ಉದ್ಯಾವರದ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಪಿತ್ರೋಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನ, ಹೆರ್ಗದ ಶ್ರೀ ಫರೀಕ ಮಹಾಲಿಂಗೇಶ್ವರ ದೇವಸ್ಥಾನ, ನೈಯಂಪಳ್ಳಿ ಪುತ್ತೂರಿನ ಶ್ರೀ ಮಡಿಮಲ್ಲಿಕಾರ್ಜುನ ದೇವಸ್ಥಾನ, ಇಂದ್ರಾಳಿಯ ಶ್ರೀ ಇಂದ್ರಾಣಿ ಪಂಚದುರ್ಗಾಪರಮೇಶ್ವರಿ ದೇವಸ್ಥಾನ, ಕೊರಂಗ್ರಪಾಡಿಯ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ತೆಂಕನಿಡಿಯೂರಿನ ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹೆರ್ಗದ ಶ್ರೀ ಮಾಣಿಕೋಡು ವಿಷ್ಣುಮೂರ್ತಿ, ಶ್ರೀ…

Read More