ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ತಾಲೂಕಿನ ಗೋಳಿಹೊಳೆ ಗ್ರಾಮದ ತಾಯ್ನಾಡು ಎಂಬಲ್ಲಿ ಕಾನನದ ನಡುವೆ ಕಿರು ನದಿಯ ತಟದಲ್ಲಿನ ಗುಹೆಯೊಳಕ್ಕೆ ನೆಲೆನಿಂತಿರುವ ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ಶಿವರಾತ್ರಿಯ ಸಂಭ್ರಮ ಮನೆಮಾಡಿತ್ತು. ಸಿದ್ಧಿ ಪುರುಷರು ಆರಾಧಿಸಲ್ಪಟ್ಟ ತಪೋಭೂಮಿ ಎಂಬ ಐತಿಹ್ಯವುಳ್ಳ ಕ್ಷೇತ್ರವು ಇತ್ತಿಚಿನ ದಿನಗಳಲ್ಲಿ ಪ್ರಸಿದ್ದಿಗೆ ಬರುತ್ತಿದ್ದು, ಶಿವರಾತ್ರಿಯಂದು ಸುತ್ತಲಿನ ಊರುಗಳ ಜನರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಶಿವರಾತ್ರಿಯ ಅಂಗವಾಗಿ ದೇವಳದಲ್ಲಿ ಗಣಹೋಮ, ದುರ್ಗಾಹೋಮ, ರುದ್ರಾಭಿಷೇಕ, ಪರಿವಾರ ದೇವರುಗಳ ಪೂಜೆ, ಭಜನಾ ಕಾರ್ಯಕ್ರ ಹಾಗೂ ಅನ್ನಸಂತರ್ಪಣೆ ವಿಶೇಷವಾಗಿ ಜರುಗಿದವು. ಶಿವರಾತ್ರಿಯ ಮುನ್ನಾದಿನ ನಾಗಸರ್ಪವೊಂದು ಭಕ್ತರಿಗೆ ಗೋಚರಿಸಿ ಮತ್ತೆ ಅದೇ ಗುಹೆಯೊಳ್ಳಕ್ಕೆ ತೆರಳಿದ್ದು ದೇವರ ಪವಾಡವೇ ಸರಿ ಎನ್ನಲಾಗುತ್ತಿದೆ. ದೇವರ ಸಾನಿಧ್ಯದಲ್ಲಿಯೇ ಸರ್ಪ ಕಾಣಿಸಿಕೊಂಡಿರುವುದು ಸ್ಥಳದ ಮಹಿಮೆ ಎನ್ನಲಾಗುತ್ತಿದೆ. ಐತಿಹ್ಯ: ಗೊಳಿಹೊಳೆ ಗ್ರಾಮದ ತಾಯ್ನಾಡು ಶ್ರೀ ಅಮೃತೇಶ್ವರಿ ಹಾಗೂ ಶ್ರೀ ಸಿದ್ದಲಿಂಗೇಶ್ವರ ಸನ್ನಿಧಿಯು ಸಹಸ್ರ ವರ್ಷಗಳಿಂದ ಸಿದ್ಧರು, ಯೋಗಿಗಳು ಹಾಗೂ ತಪಸ್ವಿಗಳಿಂದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಲ್ಲಿ ಶಿವರಾತ್ರಿ ಸಂಭ್ರಮ ವಿಶೇಷವಾಗಿತ್ತು. ಮುಂಜಾನೆ ನವಗ್ರಹಯುಕ್ತ ರುದ್ರಹೋಮ, ಮಹಾಮಂಗಳಾರತಿ, ಪನಿವಾರ ವಿತರಣೆ ನಡೆದವು. ರಾತ್ರಿ ನಗರೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶಿವರಾತ್ರಿಯ ಅಂಗವಾಗಿ ಜರುಗುತ್ತದೆ. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ ► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45936 . ► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=45940 . ► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=45932 . ► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಭಕ್ತರು – https://kundapraa.com/?p=45943 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಪರಶುರಾಮ ಸೃಷ್ಟಿಯ ಸಪ್ತ ಮೊಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಶ್ರೀ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ► ಕೋಟೇಶ್ವರ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಐತಿಹ್ಯ – https://kundapraa.com/?p=1512 .
ಕುಂದಾಪ್ರ ಡಾಟ್ ಕಾಂ ವರದಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರು ತಾಲೂಕಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದಂದು ಭಕ್ತರು ಭಕ್ತಿ-ಭಾವದೊಂದಿಗೆ ಶಿವಲಿಂಗ ಸ್ವರ್ಶಿಸಿ ಪುನೀತರಾದರು. ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮರುದಿನ ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ. ಈ ಭಾರಿ ಅಷ್ಟಮಂಗಲ ಪ್ರಶ್ನೆಯಂತೆ ಗರ್ಭಗುಡಿ ಸ್ವರ್ಶಿಸುವ ಭಕ್ತರಿಗೆ ದೇವಳದ ಕೆರೆಯಲ್ಲಿ ಸ್ನಾನ ಮಾಡುವುದು ಕಡ್ಡಾಯವಾಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಸ್ನಾಹಗೃಹ ನಿರ್ಮಿಸಲಾಗಿತ್ತು. ಗರ್ಭಗುಡಿ ಪ್ರವೇಶಿಸದ ಭಕ್ತರು ದೇವರ ಉತ್ಸವ ಮೂರ್ತಿ ಸ್ಪರ್ಶಿಸಿ ಪುನೀತರಾದರು. ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ನುಕುನುಗ್ಗಲು ಇರಲಿಲ್ಲ.ಕುಂದಾಪ್ರ ಡಾಟ್ ಕಾಂ ಲೇಖನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಐತಿಹಾಸಿಕ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಶಿವನಾಮ ಸ್ಮರಣೆ ನಡೆದವು. ಐತಿಹ್ಯ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. 20 ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ. ಈ ಮೊದಲು ಶಿವರಾತ್ರಿಯಂದು ಗುಹೆಯೋಳಗಿನ ಉದ್ಭವರೂಪಿ ಗುಹೇಶ್ವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಕಳೆದೆರಡು ವರ್ಷದಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಪ್ರಾಚಿನ ದೇವಾಲಯಗಳಲ್ಲೊಂದಾಗ ಶ್ರೀ ಗುಹೇಶ್ವರ ದೇವಾಲಯದ ಈಶ್ವರ, ಸ್ಕಂದ, ಗಣಪತಿ ಹಾಗೂ ಅಮ್ಮನವರ ಸಾನಿಧ್ಯವಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸ್ವಯಂ ಸೇವಕರು, ಗುಜ್ಜಾಡಿಯ ಯುವಕರು ಶಿವರಾತ್ರಿಯಂದು ಒಂದಾಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಮಾರ್ಗದರ್ಶನ ನೀಡುತ್ತಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಒಂದೆನಿಸಿರುವ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ದೇವರ ದೀಪಕ್ಕೆ ಎಣ್ಣೆ ತಂದವರು ಅದನ್ನು ಉರಿಯುತ್ತಿರುವ ದೀಪದ ಸುರಿದು ದೇವರಿಗೆ ನಮಿಸುವುದು ಕಂಡುಬಂತು. ದೇವಾಲಯದ ಬಯಲು ರಂಗಮಂಟಪದಲ್ಲಿ ಭಜನಾ ಕಾರ್ಯಕ್ರಮ ಜರುಗಿತು. ರಾತ್ರಿ ಕಾಲದಲ್ಲಿ ಕುಂದೇಶ್ವರನ ಸನ್ನಿಧಿಯಲ್ಲಿ ನಡೆಯುವ ರಂಗಪೂಜೆ ಮತ್ತು ಮಹಾಮಂಗಳಾರತಿಯಲ್ಲಿ ಭಕ್ತಾದಿಗಳೆಲ್ಲ ಭಾಗವಹಿಸಿ, ಮಂತ್ರ ಪುಷ್ಪ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟತಟ್ಟು ಪಡುಕೆರೆಯ ಶಿರಸಿ ಮಾರಿಕಾಂಬಾ ದೇವಸ್ಥಾನದ ಬಾವಿಗೆ ವ್ಯಕ್ತಿ ಒಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕೋಟತಟ್ಟು ಪಡುಕೆರೆಯ ಚೆನ್ನಿ ಪೂಜಾರಿ(50) ಎಂದು ಗುರುತಿಸಲಾಗಿದೆ. ಇವರು ಮಣೂರು ಪಡುಕೆರೆಯಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದು ಮದುವೆಯಾಗಿ ಎರಡು ಮಕ್ಕಳಿದ್ದು ಹತ್ತು ವರ್ಷ ಹಿಂದೆ ವಿಚ್ಚೆದನ ಪಡೆದಿದ್ದು ಇದರಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ದೇವಸ್ಥಾನದ ಬಾವಿಯ ಹಗ್ಗವನ್ನು ಉಪಯೋಗಿಸಿ ಬಾವಿಯೊಳಗೆ ಚೆನ್ನಿ ಪೂಜಾರಿ ಆತ್ಮಹತ್ಯೆಗೆ ಶರಣಾಗಿದ್ದರು. ಬೆಳಿಗ್ಗೆ 5.30 ಗಂಟೆಗೆ ದೇವಸ್ಥಾನದ ಭಟ್ಟರು ಪೂಜೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿಯಬೇಕಾಗಿದೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರ ಆಶ್ರಯದಲ್ಲಿ ಮಾರ್ಚ್ 21ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಮೊದಲ ಯುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷರಾಗಿ ಶಿಕ್ಷಕ, ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ವಿ ಆನಂದ ಸಾಲಿಗ್ರಾಮ ಅವರನ್ನು ಆಯ್ಕೆ ಮಾಡಲಾಗಿದೆ. ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕ ಹಾಗೂ ಜೇಸಿರೆಟ್ ವಿಂಗ್ ಆಫ್ ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಸನ್ಮಾನಿಸಲಾಯಿತು. ಡಾ. ಶ್ರಾವ್ಯ (ಸಮಾಜಸೇವೆ), ಮಮತಾ ಆರ್. ಶೆಟ್ಟಿ ಹದ್ದೂರು (ಕೃಷಿ), ಲಿರಾ ಜೂಲಿಯೇಟ್ (ವ್ಯಾವಹಾರಿಕ), ಡಾ. ಸರೋಜಿನಿ (ಶಿಕ್ಷಣ), ನಿವೇದಿತಾ ತೃತೀಯ ಬಿ.ಕಾಂ. (ಕ್ರೀಡೆ), ಶುಭಲಕ್ಷ್ಮೀ, ದ್ವಿತೀಯ ಬಿ.ಬಿ.ಎ. (ಶಿಕ್ಷಣ) ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಜೇಸಿ ಅಕ್ಷತಾ ಶೆಟ್ಟಿ ನಿರ್ದೇಶಕರು, ಜೇಸಿರೆಟ್ ವಿಭಾಗ, ಜೇಸಿ ಆಯಿಷಾ ಫೈಜಾ, ವಲಯ ಸಂಯೋಜಕರು, ವಿಜಯ ಭಂಡಾರಿ, ಅಧ್ಯಕ್ಷರು ಜೆಸಿಐ ಕುಂದಾಪುರ ಸಿಟಿ, ಉಪಾಧ್ಯಕ್ಷ ಅಭಿಲಾಷ್, ಪ್ರಶಾಂತ್ ಹವಾಲ್ದಾರ್, ವಲಯಾಧಿಕಾರಿ ಜೆಸಿಐ ಕುಂದಾಪುರ ಸಿಟಿ, ಜೆಸಿಐ ಕುಂದಾಪುರ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ರೇಖಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಲೆಕ್ಕಾಪರಿಶೋಧನೆ ಸರಿಯಾಗಿಲ್ಲ. ಮುಜರಾಯಿ ಇಲಾಖೆಯಡಿ ಬಡುವ ದೇವಾಯಲಗಳ ಆರ್ಥಿಕ ಸ್ಥಿತಿ ಒಂದೇ ಸಾಲಿನಲ್ಲಿದೆ. ಮಹಾಸಂಗವು ಇತರ ಮುಜರಾಯಿ ದೇವಾಲಯದ ಆರ್ಥಿಕ ಅವ್ಯವಹಾರವನ್ನು ಒಂದೊಂದಾಗಿ ಬಹಿರಂಗಪಡಿಸುತ್ತದೆ. ಕೊಲ್ಲೂರು ಕರ್ನಾಟಕದ ಎರಡನೇ ಅತಿ ದೊಡ್ಡ ಆದಾಯ ಗಳಿಸುವ ದೇವಾಲಯವಾಗಿದೆ ಎಂದು ಮಹಾಸಂಘದ ವಕ್ತಾರ ಗುರುಪ್ರಸಾದ್ ಗೌಡ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಕೊಲ್ಲೂರು ದೇವಾಲಯದಲ್ಲಿ ಆರ್ಥಿಕ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಿದರು. 2018-19ನೇ ಸಾಲಿನಲ್ಲಿ ಜಿಲ್ಲಾ ಆಯುಕ್ತರ ಮನೆಯ 23,363 ರೂ. ದೂರವಾಣಿ ಬಿಲ್ ಅನ್ನು ದೇವಾಲಯ ಸಮಿತಿಯೇ ಪಾವತಿಸಿದೆ. ಕೆಲವು ಸರ್ಕಾರಿ ನೌಕರರ ವೇತನವನ್ನು ದೇವಾಲಯದಿಂದಲೂ ನೀಡಲಾಗುತ್ತದೆ. ದೇವಾಲಯದ ಲೆಕ್ಕಪರಿಶೋಧನೆ ಸರಿಯಿಲ್ಲ. 20 ಕೋಟಿಗೂ ಅಧಿಕ ಆರ್ಥಿಕ ಅವ್ಯವಹಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈಗ ಮಹಾಸಂಘವು ಪೊಲೀಸ್ ಇಲಾಖೆಯಿಂದ ನ್ಯಾಯಯುತ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದೆ. ”ಹಣಕಾಸಿನ ದುರುಪಯೋಗವು 2016 ರಲ್ಲಿ ಬೆಳಕಿಗೆ ಬಂದಿದೆ.…
