ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗುರುವಾರ ಬೆಳಗಿನ ಜಾವ ನಾಗೂರಿನಲ್ಲಿ ನಡೆದ ಅಪಘಾತದಲ್ಲಿ ಬೈಂದೂರು ಪೊಲೀಸ್ ಠಾಣೆಯ ಪೇದೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಶಿರೂರು ಕರಾವಳಿಯ ನಾಣು ಬಿಲ್ಲವ ಅವರ ಪುತ್ರ ನಾಗೇಶ್ ಬಿಲ್ಲವ (34) ಮೃತ ದುರ್ದೈವಿ. ಬೈಂದೂರು ಪೊಲೀಸ್ ಠಾಣೆಯಲ್ಲಿಯಲ್ಲಿ ಗುಪ್ತ ಮಾಹಿತಿ ಸಿಬ್ಬಂಧಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು ರಾತ್ರಿ ಪಾಳಿಯ ಗಸ್ತಿನಲ್ಲಿದ್ದರು. ರಸ್ತೆಯಲ್ಲಿ ಯಾವುದೇ ಸೂಚನೆಗಳಿಲ್ಲದೇ ನಿಲ್ಲಿಸಲಾಗಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ನಾಗೇಶ್ ಅವರ ಎದೆಯ ಭಾಗಕ್ಕೆ ತೀವ್ರ ಹೊಡೆದ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ. ನಾಗೇಶ್ ಅವರು ಈ ಹಿಂದೆ ಕುಂದಾಪುರ ಸಂಚಾರಿ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದು, ವರ್ಷದ ಹಿಂದಷ್ಟೆ ಬೈಂದೂರು ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರಿಗೆ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ಮೃತರು ಹೆಂಡತಿ, ತಂದೆ ತಾಯಿ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಂದೆ ತಾಯಿ ಹಾಗೂ ಮಕ್ಕಳದ್ದು ಬಿಡಿಸಲಾಗದ ಭಾವನಾತ್ಮಕ ಸಂಬಂಧ. ಮಕ್ಕಳಿಗೆ ಸಂಸ್ಕಾರ ಕೊಡುವುದು ಮುಖ್ಯವಾದದ್ದು. ತಂದೆ ತಾಯಿಯರನ್ನೇ ಮಕ್ಕಳು ಅನುಸರಿಸುತ್ತಾರೆ. ನಮ್ಮ ಆಚರಣೆಗಳು ಉತ್ತಮವಾದಷ್ಟು ಮಕ್ಕಳು ಉತ್ತಮ ಸಂಸ್ಕಾರ ಹೊಂದುತ್ತಾರೆ ಆದುದರಿಂದ ತಂದೆ ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಸರಿಯಾದ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಮರೆಯಬಾರದು ಎಂದು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರು ಹೇಳಿದರು. ಅವರು ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದಲ್ಲಿ ನ. 8ರಂದು ಸುದ್ದಿಮನೆ ವಾರಪತ್ರಿಕೆ ದಶಮ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಮಾತೃಪಿತೃ ವಂದನಾ ಅಭಿಯಾನ 2018-19ಕ್ಕೆ ಚಾಲನೆ ನೀಡಿ ಆಶಿರ್ವಚನವಿತ್ತರು. ನಮ್ಮ ಪೂರ್ವಜರು ಸಮಾಜಕ್ಕೆ ಹಲವಾರು ಬಗೆಯ ಆಚರಣೆಗಳನ್ನು ನೀಡಿ ಹೋಗಿದ್ದಾರೆ. ಅದರಲ್ಲಿ ಈಗಿನ ದಿನಮಾನಕ್ಕೆ ಯಾವುದು ಅಗತ್ಯ ಎಂಬುದನ್ನು ವಿವೇಕಯುವಾದ ಚಿಂತನೆಯ ಮೂಲಕ ಅರಿತು ಬೆಳಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಎಲ್ಲರೂ ಅಳಿಲು ಸೇವೆ ಸಲ್ಲಿಸೋಣ, ಮಾತೃಪಿತೃ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2014ನೇ ಇಸವಿಯಲ್ಲಿ ದಾಖಲುಗೊಂಡ ಪೋಸ್ಕೊ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆಶನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ, ಶಿಕ್ಷೆಗೆ ಒಳಗಾಗಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಬೆಳ್ವೆ ಗ್ರಾಮದ ಮಾರಿಕೊಡ್ಲು ನಿವಾಸಿ ಸತೀಶ್ ನಾಯ್ಕ (30) ಎಂಬುವನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಆಪಾಧಿತನ್ನು ಶಂಕರನಾರಾಯಣ ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನಿಗೆ ನ್ಯಾಯಂಗ ಬಂಧನ ವಿಸ್ತರಿಸಲಾಗಿದೆ. 2014ರಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 9 ವರ್ಷದ ಬಾಲಕಿಯನ್ನು ಬಲವಂತವಾಗಿ ಬಾಯಿಮುಚ್ಚಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಶಂಕರನಾರಾಯಣ ಪಿ.ಎಸ್.ಐ ಪ್ರಕಾಶ್ ಕೆ ಮಾರ್ಗದರ್ಶನದಲ್ಲಿ ಎ.ಎಸ್.ಐ. ಪ್ರಭಾಕರ ಬಿ. ಮತ್ತು ಹೆಡ್ ಕಾನ್ಸ್’ಟೇಬಲ್ ನಾರಾಯಣ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿದ್ದಜಿದ್ದಿನ ಕಣವಾಗಿದ್ದ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಅವರು ಮುನ್ನಡೆ ಸಾಧಿಸಿ ವಿಜಯದ ನಗೆ ಬೀರಿದ್ದಾರೆ. ರಾಘವೇಂದ್ರ 5,16415 ಮತಗಳನ್ನು, ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ 4,68,547 ಮತಗಳನ್ನು ಪಡೆದಿದ್ದು, 47868 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್, ಜಮಖಂಡಿಯಲ್ಲಿ ಕಾಂಗ್ರೆಸ್ ಜೆಡಿಎಸ್, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. <iframe width=”560″ height=”315″ src=”https://www.youtube.com/embed/HoB3NAJrykE” frameborder=”0″ allow=”accelerometer; autoplay; encrypted-media; gyroscope; picture-in-picture” allowfullscreen></iframe>
ಎಲ್ಲಾ ಮೊಬೈಲ್ ಖರೀದಿಯ ಮೇಲೂ ಡಿಸ್ಕೌಂಟ್, ವಿಶೇಷ ಆಫರ್ ಕುಂದಾಪ್ರ ಡಾಟ್ ಕಾಂ ಕುಂದಾಪುರ: ಯಶಸ್ವಿಯಾಗಿ ಮುನ್ನಡೆಯುತ್ತಿರುವ ಮೊಬೈಲ್ ಉತ್ಪನ್ನಗಳ ಉತ್ಕೃಷ್ಟ ಮಳಿಗೆ ‘ಮೊಬೈಲ್ ಎಕ್ಸ್’ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಹಾಗೂ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ನೀವು ಖರೀದಿಸುವ ಪ್ರತಿ ಉತ್ಪನ್ನಕ್ಕೂ ವಿಶೇಷ ಆಫರ್ ನೀಡುತ್ತಿರುವ ಮೊಬೈಲ್ ಎಕ್ಸ್ – ಕಂಪ್ಲೀಟ್ ಮೊಬೈಲ್ ಶಾಪ್ ಇದೀಗ ಕುಂದಾಪುರ ಬಹು ನಂಬುಗೆಯ, ಬಹು ಬೇಡಿಕೆಯ ಮೊಬೈಲ್ ಶೋರೂಮಂಗಳಲ್ಲಿ ಒಂದೆನಿಸಿದೆ. ದೀಪಾವಳಿಯ ಸಂದರ್ಭ ಮೊಬೈಲ್ ಎಕ್ಸ್ ನಲ್ಲಿ ಯಾವುದೇ ಮೊಬೈಲ್ ಖರೀದಿಸುವವರಿಗೆ ಕಾಂಬೋ ಆಫರ್ ನೀಡಲಾಗುತ್ತಿದೆ. ವಿವೋ ವಿ11 ಪ್ರೋ, ಒಪ್ಪೊ ಏಫ್9 ಹಾಗೂ ಏಫ್9 ಪ್ರೋ, ಆಸಸ್ ಮಾಕ್ಸ್ ಎಂ1 ಪ್ರೋ, ಐಪೋನ್ ಎಕ್ಸ್’ಎಸ್ ಮಾಕ್ಸ್, ನೋಟ್ 5 ಪ್ರೋ ಎಂಐ ಹಾಗೂ ಸ್ಯಾಮಸಂಗ್, ಎಚ್.ಟಿ.ಸಿ, ಸೋನಿ, ಮೈಕ್ರೋಮ್ಯಾಕ್ಸ್, ಮೈಕ್ರೋಸಾಫ್ಟ್, ಲಾವಾ, ಲೆನೋವಾ ಇಂಟೆಕ್ಸ್, ಐಪೋನ್ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಉತೃಷ್ಟ ಮೊಬೈಲ್ಗಳನ್ನು ಇಲ್ಲಿ ಲಭ್ಯವಿದೆ. ಈ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆಯ ಯೋಗಪಟು ಕುಶ ಪೂಜಾರಿ ವಿಯೆಟ್‌ನಾಮ್‌ನ ಮಿಕೊ ಫಿಟ್‌ನೆಸ್ ಸೆಂಟರ್‌ನಲ್ಲಿ ಯೋಗ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಯೋಗ ವಿಜ್ಞಾನದಲ್ಲಿ ಎಮ್ ಎಸ್ಸಿ ಪದವಿ ಗಳಿಸಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಮಲಯೇಷ್ಯಾದಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಪಡೆದಿದ್ದರು. ಮರವಂತೆಯ ರಾಮಚಂದ್ರ ಪೂಜಾರಿ-ನೀಲು ಪೂಜಾರಿಯ ಪುತ್ರರಾಗಿರುವ ಅವರು ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮರವಂತೆ ಪ್ರೌಢಶಾಲೆ, ನಾವುಂದ ಪದವಿಪೂರ್ವ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಪಡೆದು, ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಎಂ. ಎ. ಲಮಾಣಿ, ಯಶೋದಾ ಕರನಿಂಗ, ಡಾ. ಕೆ. ಕೃಷ್ಣ ಶರ್ಮ ಅವರಿಗೆ ಯೋಗ ಕಲಿಸಿದ್ದರು,. ಬಿ.ಬಿ. ಹೆಗ್ಡೆ ಕಾಲೇಜಿನ ನಿರ್ದೇಶಕ ದೋಮ ಚಂದ್ರಶೇಖರ್ ನೀಡಿದ ಪ್ರೋತ್ಸಾಹದ ಫಲವಾಗಿ ವಿಶೇಷ ಸಾಧನೆ ಸಾಧ್ಯವಾಯಿತು ಎಂದಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ೬೩ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ರೆ. ಫಾ. ಡಾ. ವಿನ್ಸೆಂಟ್ ಜಾರ್ಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ, ಹೆಗ್ಗದ್ದೆ ಪ್ರಕಾಶನದ ಸಂದೀಪ್ ಶೆಟ್ಟಿ ಹೆಗ್ಗದ್ದೆ, ಮಾತನಾಡಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಾಯಕ ನಿಜಕ್ಕೂ ಶ್ಲಾಘನೀಯ, ವಿದ್ಯಾರ್ಥಿ ಪ್ರತಿಭೆಗಳು ಅರಳಲು ಇಂತಹ ವೇದಿಕೆಗಳು ಸಾಕ್ಷಿ ಎಂದ ಶುಭಹಾರೈಸಿದರು. ಈ ಸಂದರ್ಭ ವಿದ್ಯಾರ್ಥಿ ರಚನೆಯ ಐದನೇಯ ಕವನ ಸಂಕಲನ ’ನವಿರು’ ಹಾಗೂ ವಿದ್ಯಾರ್ಥಿ ಚಿಂತನ ಮಂಥನಗಳ ಧ್ವನಿ ಸುರುಳಿ ’ಅಂತರಂಗ’ವನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಸಾಹಿತ್ಯ ಸಿರಿ ಪ್ರಶಸ್ತಿ ವಿಜೇತ ಕಾಲೇಜು ವಿಭಾಗದ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿ ಪೋಷಕ ಪ್ರತಿನಿಧಿಗಳಾಗಿರುವ ಉದಯ್, ಜಯರಾಮ ಶೆಟ್ಟಿ, ಹಾಗೂ ಸಂಸ್ಥೆ ಬೋಧಕವ್ರಂದ, ವಿದ್ಯಾರ್ಥಿಗಳು, ಪೋಷಕವ್ರಂದದವರು ಉಪಸ್ಥಿತರಿದ್ದರು.…
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ನವಂಬರ್ ತಿಂಗಳ 16, 17, 18ರಂದು 3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭವು ’ರತ್ನಾಕರವರ್ಣಿ ’ ವೇದಿಕೆಯಲ್ಲಿ ನವಂಬರ್ 16ರಂದು ಬೆಳಿಗ್ಗೆ ನೆರವೇರಲಿದೆ. ಉಳಿದಂತೆ 3 ದಿನಗಳ ಸಮ್ಮೇಳನವು ಪ್ರತಿವರ್ಷದಂತೆ ಸಮಾನಾಂತರ ವೇದಿಕೆಗಳಲ್ಲಿ ಜರುಗಲಿದೆ.
ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ಕುಂದಗನ್ನಡ ಕಂಪನ್ನು ನಾಡಿನಾದ್ಯಂತ ಪಸರಿಸಿದ ಖ್ಯಾತ ಲೇಖಕಿ ವೈದೇಹಿ ಅವರ ಕೃತಿಯಾಧಾರಿತ “ಅಮ್ಮಚ್ಚಿಯೆಂಬ ನೆನಪು” ಕುಂದಗನ್ನಡದ ಸಿನೆಮಾ ನ.1ರಂದು ತೆರೆಗೆ ಬರುತ್ತಿದೆ. ಚಂಪಾ. ಪಿ. ಶೆಟ್ಟಿ ನಿರ್ದೇಶನದಲ್ಲಿ ಸಂಪೂರ್ಣ ಕುಂದಾಪುರ ಕನ್ನಡದಲ್ಲೇ ಸಿನೆಮಾ ಮೂಡಿಬಂದಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿದೆ. ಸಿನೆಮಾದ ಸಂಭಾಷಣೆಯನ್ನು ವೈದೇಹಿಯವರೇ ಬರೆದಿದ್ದಾರೆ. “ಒಂದು ಮೊಟ್ಟೆಯ ಕಥೆ” ಖ್ಯಾತಿಯ ರಾಜ್. ಪಿ. ಶೆಟ್ಟಿಯವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಾವು ಮಾಡಿದ ಬೇರೆ ಸಿನೆಮಾಗಳ ಪಾತ್ರಗಳಿಗಿಂತ ಹೆಚ್ಚು ಆಪ್ತವಾಗುವ, ಅಭಿನಯಕ್ಕೆ ಪುಷ್ಟಿ ಕೊಡುವ ಪಾತ್ರವಾದ ವೆಂಕಪ್ಪಯ್ಯನ ಪಾತ್ರ ಎಂದು ಹೇಳಿದ್ದಾರೆ. ಇವರಲ್ಲದೇ ವೈಜಯಂತಿ ಅಡಿಗ, ದಿಯಾ ಪಲಕ್ಕಲ್, ದೀಪಿಕಾ ಆರಾದ್ಯ, ರಾಧಾಕೃಷ್ಣ ಉರಾಳ, ಗೀತಾ ಸುರತ್ಕಲ್, ವಿಶ್ವನಾಥ ಉರಾಳ, ಬಿ.ಜಿ. ರಾಮಕೃಷ್ಣ, ಚಂದ್ರಹಾಸ ಉಲ್ಲಾಳ, ಶೃಂಗೇರಿ ರಾಮಣ್ಣ, ಕುಂದಾಪ್ರ ಡಾಟ್ ಕಾಂ ಅಂಕಣಕಾರ ದಿಲೀಪ್ ಶೆಟ್ಟಿ ಮುಂತಾದ ಖ್ಯಾತನಾಮರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಹುತೇಕ ರಂಗಭೂಮಿಯ ಕಲಾವಿದರು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಸಂಗೀತ ಕ್ಷೇತ್ರದಲ್ಲಿಯೂ ಗಣನೀಯ ಬದಲಾವಣೆಗಳಾಗಿವೆ. ಶಾಸ್ತ್ರೀಯ ಸಂಗೀತಗಾರರ ಮತ್ತು ಸಂಗೀತ ಪ್ರಿಯರ ಸಂಖ್ಯೆ ಹೆಚ್ಚಿದೆ ಎಂದು ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಹೇಳಿದರು. ನೂತನವಾಗಿ ಅಸ್ತಿತ್ವಕ್ಕೆ ಬಂದ ಗುರುಪರಂಪರಾ ಸಂಗೀತ ಸಭಾವನ್ನು ಕುಂದಾಪುರದ ಶ್ರೀ ಸತ್ಯಸಾಯಿ ಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿದರು. ಕುಂದಾಪುರದಲ್ಲಿ ಶಾಸ್ತ್ರೀಯ ಸಂಗೀತದ ಪ್ರಜ್ಞೆ ತಡವಾಗಿ ಆರಂಭವಾಯಿತು. ’ಸಂಗೀತ ಭಾರತಿ’ ಸಂಸ್ಥೆಯ ಆರಂಭ ಮತ್ತು ಅದರ ಚಟುವಟಿಕೆಗಳು ಸೀಮಿತ ವರ್ಗವನ್ನು ಸೆಳೆದಿದೆ. ಸುದೀರ್ಘ ಹಿನ್ನೆಲೆಯ ಸನಾತನ ಕಲೆಯನ್ನು ನಮ್ಮ ಕಾಲದಲ್ಲಿ ಮುನ್ನಡೆಸಲು ಮತ್ತು ಮುಂದಿನ ತಲೆಮಾರಿಗೆ ದಾಟಿಸಲು ಅಷ್ಟು ಸಾಲದು. ಸಂಗೀತದ ಶಿಕ್ಷಣ, ಮತ್ತು ಕಾರ್ಯಕ್ರಮಗಳ ಆವರಣ ಇನ್ನಷ್ಟು ವಿಸ್ತಾರವಾಗಬೇಕು. ನಿರುಪಯುಕ್ತ ಮತ್ತು ಹಾನಿಕಾರಕ ಉಪಕರಣಗಳೊಂದಿಗೆ ಕಾಲಹರಣ ಮಾಡುವ ಯುವ ಪೀಳಿಗೆಯನ್ನು ಅದರಲ್ಲಿ ತೊಡಗಿಸಬೇಕು. ಕಲಿತು ವಿದ್ವಾಂಸರಾಗದಿದ್ದರೂ ಉತ್ತಮ ಶ್ರೋತೃಗಳಾಗಲು ಅಗತ್ಯವಿರುವ ಹಿನ್ನೆಲೆಯನ್ನು ಅವರು ಗಳಿಸುವಂತಾಗಬೇಕು. ಆ ನಿಟ್ಟಿನಲ್ಲಿ ಇಂದು…
