ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ಲೋಕಸಭಾ ಚುನಾವಣಾ ಸಂದರ್ಭ ತಮ್ಮ ಬಣ್ಣದ ಮತುಗಳಿಂದ ಜನರನ್ನು ಮೋಡಿ ಮಾಡಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದು, ಅವರು ಮನ್ ಕಿ ಬಾತ್ ಬದಲು ಕಾಮ್ ಕಿ ಬಾತ್ ಬಗ್ಗೆ ಪ್ರತಿಕ್ರೀಯಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಾಗೂರು ಮೈದಾನದಲ್ಲಿ ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಗುರುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ನೀಡಿದ ಯಾವ ಭರವಸೆಯೂ ಈಡೇರಿಲ್ಲ. ಅವರು ಹೇಳುವ ಅಚ್ಛೇದಿನ್ ಬಂದಿಲ್ಲ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ದಿನಬಳಕೆಯ ಸಾಮಗ್ರಿ ಬೆಲೆ ಗಗನಕ್ಕೇರಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ರಫೆಲ್ ಹಗರಣ ಅವರನ್ನು ಸುತ್ತಿಕೊಂಡಿದೆ. ದೇಶ ಆರ್ಥಿಕ ಪರಿಸ್ಥತಿ ತೀರ ಹದಗೆಟ್ಟಿದೆ. ಬಿಜೆಪಿ ಸರ್ಕಾರದಡಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಆತಂಕದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀಟೂ ಮೂಲಕ ಹೆಣ್ಣಿಗೆ ತನ್ನ ಮೇಲಾಗಿರಬಹುದಾದ ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿದೆ. ಅವಳಿಗೆ ಅದರಿಂದ ಬಲ ಬಂದಿದೆ. ಆದರೆ ಮೀಟೂಗೆ ಕಾನೂನಿನ ಬೆಂಬಲ ಸಿಗುವ ವರೆಗೆ ನಿರೀಕ್ಷಿತ ಪರಿಹಾರ ಸಿಗದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು. ಬೈಂದೂರು ಕ್ಷೇತ್ರದ ನಾಗೂರಿನಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ನನಗೆ ತಿಳಿದಿರುವಂತೆ ಅರ್ಜುನ ಸರ್ಜಾ ಒಬ್ಬ ಸಜ್ಜನ ನಟ. ಮಹಿಳೆಯರ ಕೆಲಸದ ಸ್ಥಳದಲ್ಲಿ ಅವರ ವಿರುದ್ಧ ನಡೆಯುವ ಕಿರುಕುಳ, ದೌರ್ಜನ್ಯ ಸಂದರ್ಭಗಳಲ್ಲಿ ಪರಿಹಾರ ಕಂಡುಕೊಳ್ಳಲು ಆಂತರಿಕ ಸಮಿತಿಗಳು ಇರಬೇಕು ಎಂದು ವಿಶಾಕಾ ಪ್ರಕರಣದಲ್ಲಿ ನ್ಯಾಯಾಂಗ ನೀಡಿದ ತೀರ್ಪಿನಂತೆ ಚಲನಚಿತ್ರ ಕ್ಷೇತ್ರದಲ್ಲೂ ಅವು ಇರಬೇಕು. ಅದನ್ನು ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಿಳಿಸುತ್ತೇನೆ ಎಂದರು. ಇಂತಹ ಅನುಭವ ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮದು ಸುವರ್ಣಯುಗ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನ ನಡುವಿನ ಸಂಘರ್ಷ ಹಿಂಸೆಗೆ ತಿರುಗಿದೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ, ಗುಂಪು ಕಟ್ಟಿಕೊಂಡು ಬಂದು ಕುಕ್ಕೆಯ ಸ್ಥಳೀಯ ಯುವಕರ ಮೇಲೆ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಆಪಾದಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಮಠ ಮತ್ತು ದೇವಸ್ಥಾನದ ಸಂಘರ್ಷ ಮೊನ್ನೆ ನವರಾತ್ರಿಯ ಮಧ್ಯೆ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹಾಗೆಯೇ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು. ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಹಿತ್ಯವೆಂಬುದು ಕೇವಲ ಮನೋರಂಜನೆಗಷ್ಟೇ ಸೀಮಿತವಾಗದೇ, ಶತಮಾನಗಳಿಂದ ತುಳಿತಕ್ಕೊಳಗಾದ ಜನಸಾಮಾನ್ಯರ ಧ್ವನಿಯಾಗಬೇಕು. ಜಾತಿ, ಮತ ಪಂಥಗಳ ಕುರಿತು ರಚಿತವಾದ ಅರಿವಿನ ಸಾಹಿತ್ಯ ಜನಸಾಮಾನ್ಯರ ತಿದ್ದಿ ನಡೆಯಲು ಪ್ರೇರಣೆಯಾಗಬೇಕು. ಕಾವ್ಯ ವ್ಯಕ್ತಿಗತವಾಗಿರದೇ ಸಾಮಾಜಿಕವಾಗಬೇಕು. ಮನಸ್ಸಿನ ನೆಮ್ಮದಿಗಾಗಿ ಕಾವ್ಯ ರಚಿಸದೇ ಮನಷ್ಯನ ಬದುಕನ್ನು ಅರಳಿಸುವ ಕೆಲಸಕ್ಕದು ಪ್ರೇರಣೆಯಾಗಬೇಕು ಎಂದು ಹಿರಿಯ ಸಾಹಿತಿ ಎಂ. ಜೆ. ದೇಶಪಾಂಡೆ ಹೇಳಿದರು. ಅವರು ಭಾನುವಾರ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾ ಭವನದಲ್ಲಿ ಶ್ರೀಮತಿ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ ನಾಯ್ಕನಕಟ್ಟೆ, ಕುಂದ ಅಧ್ಯಯನ ಕೇಂದ್ರ ರಿ. ಉಪ್ಪುಂದ, ಸುವಿಚಾರ ಬಳಗ ರಿ. ಉಪ್ಪುಂದ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಾಹಿತಿ ಕೆ. ಪುಂಡಲೀಕ ನಾಯಕ್ ಅವರ ಕಿರುಗಜ್ಜೆ ಕವನ ಸಂಕಲನ ಅನಾವರಣ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹಕಾರಿ ಕ್ಷೇತ್ರದಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಪುಂಡಲೀಕ ನಾಯಕರು ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜವನ್ನು ಒಡೆದು ಆಳುವ ಪರಿಪಾಠವನ್ನು ಮೈಗೂಡಿಸಿಕೊಂಡಿರುವ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಪಾಠ ಕಲಿಸಬೇಕಿದೆ. ಪ್ರೀತಿ ಹಾಗೂ ವಿಶ್ವಾಸಕ್ಕಿಂತ ದೊಡ್ಡ ಧರ್ಮವಿಲ್ಲ. ಸುಳ್ಳಿನ ಮೂಲಕ ಸಮಾಜ ವಿಘಟಿಸುವ ಶಕ್ತಿಯ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹೇಳಿದರು. ಅವರು ಬೈಂದೂರು ರೋಟರಿ ಭವನದಲ್ಲಿ ಜರುಗಿದ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಬೆಂಬಲಿಸುವ ಸಲುವಾಗಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದಿದೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಆದರೆ ಭರವಸೆಗಳನ್ನು ನೀಡಿ ಅಧಿಕಾರ ಹಿಡಿದ ಕೇಂದ್ರ ಸರಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್ ಜೆಡಿಎಸ್ ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಕೋಮವಾದ ಪಕ್ಷವನ್ನು ಎದುರಿಸಿ ಗೆಲ್ಲಬೇಕಾಗಿದೆ ಎಂದರು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ ಉಪ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಭಾಗಗಳಲ್ಲಿ ಉದ್ಯಮಗಳ ಆರಂಭದಿಂದ ಉದ್ಯೋಗ ಸೃಷ್ಠಿ ಹಾಗೂ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ. ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಉದ್ಯಮದ ಯಶಸ್ಸಿಗೆ ಕಾರಣವಾಗಿದ್ದು, ಸ್ಥಳೀಯರ ಮತ್ತು ನೌಕರರ ಸಹಕಾರವೂ ಅಗತ್ಯ ಎಂದು ಉಪ್ಪುಂದ ಸುಮುಖ ಗ್ರೂಪ್ಸ್ ಆಫ್ ಇಂಡಸ್ಟ್ರೀಸ್‌ನ ಆಡಳಿತ ನಿರ್ದೇಶಕ ಬಿ. ಎಸ್. ಸುರೇಶ್ ಶೆಟ್ಟಿ ಹೇಳಿದರು. ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯಲ್ಲಿ ಆರಂಭಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಶಾಂತೇರಿ ಬೊಟ್ಲಿಂಗ್ ಕಂಪೆನಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಸಮೀಕ್ಷೆ ಪ್ರಕಾರ ಅಗತ್ಯವಿರುವ ಇಂಧನ, ಆಹಾರ ಹಾಗೂ ಶುದ್ದ ನೀರು ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈ ನೆಲೆಯಲ್ಲಿ ಇವುಗಳನ್ನು ಮಾರುಕಟ್ಟೆಗೆ ಪೂರೈಸುವಲ್ಲಿ ಉದ್ಯಮಿಗಳು ಯೋಚಿಸಬೇಕಾಗಿದೆ. ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವ ಯುವಜನತೆ ಸೋಲಿಗೆ ಹೆದರಿ ಪಲಾಯನ ಮಾಡದೇ ಧನಾತ್ಮಕ ಚಿಂತನೆ, ಧೈರ್ಯ ಮತ್ತು ಛಲದಿಂದ ಉದ್ಯಮಶೀಲ ಗುಣಗಳನ್ನು ಅಳವಡಿಸಿಕೊಂಡು ವ್ಯವಹರಿಸಿದಾಗ ಭವಿಷ್ಯದಲ್ಲಿ ಯಶಸ್ಸು ಕಾಣಬಹುದು ಎಂದರು. ಕೆರ್ಗಾಲು ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ’ವ್ಯಕ್ತಿ ತನ್ನ ವ್ಯವಹಾರದ ದೃಷ್ಟಿಯಿಂದ ಮಾಡಿದ ಕೆಲಸವಾದರೂ ಅದರಿಂದ ಜನರಿಗೆ ಅನುಕೂಲ, ಸಂತೋಷ ಆಗುವುದಾದರೆ ಆ ಕೆಲಸ ದೇವರ ಪೂಜೆಗೆ ಸಮನಾದುದು. ವೈ. ಬಾಬು ರಾವ್ ಕುಟುಂಬ ನಂದನವನದಲ್ಲಿ ನಿರ್ಮಿಸಿರುವ ಸಭಾ ಭವನ ಮತ್ತು ಹೋಟೆಲ್ ಸಮುಚ್ಚಯ ಗ್ರಾಮದ ಜನರಿಗೆ ನಗರದ ಸೌಲಭ್ಯ ಒದಗಿಸುವುದರಿಂದ ಅಂತಹ ಕೆಲಸದ ಸಾಲಿಗೆ ಸೇರುತ್ತದೆ’ ಎಂದು ಉಡುಪಿಯ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು. ಉಪ್ಪುಂದದ ಅಂಬಾಗಿಲು ಸಮೀಪದ ನಂದನವನದಲ್ಲಿ ನವಿ ಮುಂಬಯಿಯ ಹೋಟೆಲ್ ಉದ್ಯಮವಾದ ’ವೈ. ಬಾಬು ರಾವ್ ಹಾಸ್ಪಿಟ್ಯಾಲಿಟಿ ಎಂಡ್ ಸರ್ವೀಸಸ್’ ನಿರ್ಮಿಸಿರುವ ದೇವಕಿ ಸಭಾ ಭವನ, ಪರಿಚಯ ವಸತಿ ಗೃಹ ಮತ್ತು ಪ್ರಕೃತಿ ರೆಸ್ಟೊರಂಟ್ ಸಮುಚ್ಛಯವನ್ನು ಬುಧವಾರ ಉದ್ಘಾಟಿಸಿದ ಬಳಿಕ ಆಶೀರ್ವಚನ ನೀಡಿದರು. ’ದೇವರ ಅನುಗ್ರಹ ಮತ್ತು ಸ್ವಪ್ರಯತ್ನ ವ್ಯಕ್ತಿಯ ಬದುಕಿನ ರಥದ ಎರಡು ಚಕ್ರಗಳು. ಅವು ಜತೆಯಲ್ಲಿ ಸಾಗಿದರಷ್ಟೆ ಯಶಸ್ಸಿನ ಯಾತ್ರೆಯ ಗುರಿ ತಲಪಲು ಸಾಧ್ಯ. ಇಲ್ಲಿ ನಿರ್ಮಿಸಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮಕ್ಕಳಲ್ಲಿ ಅಭಿಜಾತ ಪ್ರತಿಭೆ ಇದೆ. ಬಿಲ್ಲುವಿದ್ಯೆಯಲ್ಲಿ ಅವರು ತೋರಿದ ಪರಿಶ್ರಮ ಇದಕ್ಕೆ ನಿದರ್ಶನ. ಅವರು ಪಡೆದ ಶಿಕ್ಷಣ ಸಂಬಂಧಿತ ಚಟುವಟಿಕೆಗಳನ್ನು ಕೈಬಿಡದೆ ಮುಂದುವರಿಸಿದರೆ ಆ ಕೌಶಲ ವೃದ್ಧಿಸುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಕುಂಭಾಶಿಯ ಡಾ. ಬಿ. ಆರ್. ಅಂಬೇಡ್ಕರ್ ನಗರದ ’ಮಕ್ಕಳಮನೆ’ಯಲ್ಲಿ ನಡೆದ ಕೊರಗ ಮಕ್ಕಳ ಬಿಲ್ಲುವಿದ್ಯೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕುಂಭಾಶಿಯ ಕೊರಗರ ’ಮಕ್ಕಳ ಮನೆ’ಯಲ್ಲಿ ವಿಶೇಷ ಅನುಭವ ನೀಡುವ ವಾತಾವರಣ ಇದೆ. ಈ ಕಾರ್ಯಕ್ರಮ ಒಂದು ಕನಸಿನ ಲೋಕದಲ್ಲಿ ನಡೆದಿದೆ. ಇಲ್ಲಿ ಕ್ರಿಯಾಶೀಲತೆ ಇದೆ. ಇದು ಸರ್ಕಾರಿ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಅಲಭ್ಯ. ಅನ್ಯ ಸಮುದಾಯದ ಮಕ್ಕಳಿಗೆ ಇಂತಹ ಅನುಭವ ಸಿಗದಿರುವ ಬಗ್ಗೆ ಬೇಸರವಿದೆ. ಇಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಬರುವೆನೆಂದ ಜಿಲ್ಲಾಧಿಕಾರಿ, ಕೊರಗ ಸಮುದಾಯದ ಸದಸ್ಯರು ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ ಎಂದು ದೂರಿದ್ದಿಲ್ಲ. ಅವರು…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ಲೇಖನ ತನ್ನ ಸ್ನೇಹಮಯಿ ವ್ಯಕ್ತಿತ್ವ ಹಾಗೂ ಹುರುಪಿನ ಮಾತುಗಾರಿಕೆಯ ಮೂಲಕ ಸಹಕಾರಿ, ಸಾಮಾಜಿಕ ಹಾಗೂ ಧಾರ್ಮಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಕವಿಹೃದಯಿ ನಾಯ್ಕನಕಟ್ಟೆಯ ಕೆ. ಪುಂಡಲೀಕ ನಾಯಕ್. ವೃತ್ತಿ ಬದುಕಿನ ನಿವೃತ್ತಿಯ ತರುವಾಯ ಪುಂಡಲೀಕ ನಾಯಕ್ ಅವರ ಆಸಕ್ತಿ ಹೊರಳಿದ್ದು ಸಾಹಿತ್ಯ ಪ್ರಕಾರವೊಂದರೆಡೆಗೆ. ಮೊದಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಕವನ ರೂಪದಲ್ಲಿ ಅವರು ನೀಡುತ್ತಿದ್ದ ಪ್ರತಿಕ್ರಿಯೆಗಳೇ ಕ್ರಮೇಣ ಹವ್ಯಾಸವಾಗಿ, ಹನಿಗವಿತೆಗಳಾಗಿ, ಮುಂದೆ ಸಾಲು ಸಾಲು ಕವನವಾಗಿ ಈಗ ’ಕಿರುಗೆಜ್ಜೆ’ ಕವನ ಸಂಕಲನವೊಂದನ್ನು ಹೊರತರುವಲ್ಲಿಗೆ ಬಂದು ನಿಂತಿದೆ. 1972ರಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಚಿಕ್ಕ ರೈತರ ಅಭಿವೃದ್ಧಿ ಯೋಜನೆಯಡಿಯಲ್ಲಿ ನೇರ ನೇಮಕಾತಿ ಪಡೆದು ವೃತ್ತಿ ಬದುಕು ಆರಂಭಿಸಿದ್ದ ಪುಂಡಲೀಕ ನಾಯಕ್ ಅವರು ಮುವತ್ತೆಂಟುವರೆ ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಕೊನೆಯ ಮೂರು ವರ್ಷ ಸಂಸ್ಥೆಯ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದ್ದರು. ಆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಂಟ್ಸ್ ಕತಾರ್ ಸಂಸ್ಥೆಯ 2018-20ನೇ ಸಾಲಿನ ಅಧ್ಯಕ್ಷರಾಗಿ ದೀಪಕ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾಗಿ ರಾಮಣ್ಣ ಎಸ್. ಹೆಗ್ಡೆ, ಕಾರ್ಯದರ್ಶಿಯಾಗಿ ಅಶ್ವಿನಿ ಶೆಟ್ಟಿ, ಖಜಾಂಚಿಯಾಗಿ ನರೇಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಡಾ. ಪದ್ಮಶ್ರೀ ಶೆಟ್ಟಿ, ಪ್ರಮುಖ ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ, ಸದಸ್ಯತ್ವ ಕಾರ್ಯದರ್ಶಿಯಾಗಿ ನಿತ್ಯಾನಂದ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಅಕ್ಷಿನಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಸ್ವರೂಪ್ ಶೆಟ್ಟಿ, ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಪ್ರೀಯಾ ಶೆಟ್ಟಿ, ಕಾರ್ಯಕ್ರಮಗಳ ಕಾರ್ಯದರ್ಶಿಯಾಗಿ ನಿತೀನ್ ಶೆಟ್ಟಿ, ಸಲಹಾ ಸಮಿತಿ ಮುಖ್ಯಸ್ಥರಾಗಿ ನವನೀತ್ ಶೆಟ್ಟಿ ಆಯ್ಕೆಯಾಗಿದ್ದಾರೆ.
