Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀನುಗಾರರ ಒಕ್ಕೂಟದ ವತಿಯಿಂದ ನಾಡದೋಣಿ ಮೀನುಗಾರರು ಸಮುದ್ರ ಪೂಜೆ ಹಾಗೂ ಕಡಲಿಗೆ ಬಾಗಿನ ಅರ್ಪಿಸಿ, ಈ ಮೀನುಗಾರಿಕೆ ಋತುವಿನಲ್ಲಿ ಸುರಕ್ಷಿತ ಹಾಗೂ ಸಮೃದ್ಧ ಮತ್ಸ್ಯಸಂಪತ್ತನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಪ್ರತೀ ವರ್ಷದ ಸಂಪ್ರದಾಯದಂತೆ ನಾಡದೋಣಿ ಮೀನುಗಾರರು ಕಡಲಿಗೆ ಮೀನುಗಾರಿಕೆಗೆ ಇಳಿಯುವ ಮುನ್ನ ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಬಳಿ ಸಮುದ್ರ ಪೂಜೆ ಸಲ್ಲಿಸುವುದು ವಾಡಿಕೆ. ಸಂಪ್ರದಾಯದಂತೆ ಗುರುವಾರ ಬೆಳಿಗ್ಗೆ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಶ್ರೀದೇವರಿಗೆ ಪೂಜೆ ಸಲ್ಲಿಸಿ, ದೇವಸ್ಥಾನದ ಸಮೀಪದ ತೀರದಲ್ಲಿ ಸಮುದ್ರ ದೇವತೆಯ ಲಿಂಗ ರಚಿಸಿ ಪೂಜೆ ಮಾಡಿದ ಬಳಿಕ ಸಮುದ್ರ ಪೂಜೆ ನಡೆಯಿತು. ಅರ್ಚಕ ನರಸಿಂಹ ಅಡಿಗ ಅವರು ಸಮುದ್ರ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಮುದ್ರ ಪೂಜೆಯ ಬಳಿಕ ಉತ್ತಮ ಮೀನುಗಾರಿಕಾ ಋತುವಿನ ನಿರೀಕ್ಷೆಯೊಂದಿಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯುತ್ತಾರೆ. ಈ ಸಂದರ್ಭದಲ್ಲಿ ಮರವಂತೆಯ ಶ್ರೀ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಧರ್ಮದರ್ಶಿ ರಾಮಚಂದ್ರ ಹೆಬ್ಬಾರ್, ಗಂಗೊಳ್ಳಿ ವಲಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಚಿತ್ರರಂಗದ ಭರವಸೆಯ ನಟ ರಕ್ಷಿತ್ ಶೆಟ್ಟಿ ವಿರುದ್ಧ ಟಿವಿ ಕಾರ್ಯಕ್ರಮವೊಂದರಲ್ಲಿ ಅವಾಚ್ಯ ಪದಗಳನ್ನು ಬಳಸಿ ತೇಜೋವಧೆ ಮಾಡಿರುವುದನ್ನು ಖಂಡಿಸಿ ಖಾಸಗಿ ವಾಹಿನಿಯೊಂದರ ವಿರುದ್ಧ ತಾಲೂಕಿನ ಶಂಕರನಾರಾಯಣ ಠಾಣೆಯಲ್ಲಿ ದೂರು ನೀಡಲಾಗಿದೆ. ನಟ ರಕ್ಷಿತ್ ಶೆಟ್ಟಿಯನ್ನು ನಿಂದಿಸುವ ಉದ್ದೇಶದಿಂದಲೇ ಕಾರ್ಯಕ್ರಮ ರೂಪಿಸಿದ್ದಾರೆಂದು ಆರೋಪಿಸಿ ಬುಧವಾರ ರಾತ್ರಿಯಿಂದಲೇ ರಕ್ಷಿತ್ ಶೆಟ್ಟಿ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕುತ್ತಿದ್ದು ಇದೀಗ ಶಂಕರನಾರಾಯಣದ ಭರತ್ ತಲ್ಲಂಜೆ ಎಂಬುವವರು ಠಾಣೆಯಲ್ಲಿ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ದೂರಿನ ಸಾರಾಂಶವೇನು? ಬುಧವಾರ ಸಂಜೆ 7:30ಕ್ಕೆ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಸಿನಿ ಅಡ್ಡ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಅವರು ರಸ್ತೆ ಬದಿಯಲ್ಲಿ ಪಾನಿಪುರಿ ಮಾರಲಿಕ್ಕೂ ನಾಲಾಯಕ ಎಂದು ಅಪಪ್ರಚಾರ ಮಾಡಿರುತ್ತಾರೆ. ರಕ್ಷಿತ್ ಶೆಟ್ಟಿಯವರ ತೆಜೋವಧೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರಸರಣ ಮಾಡಿರುತ್ತಾರೆ ಮಹೇಶದೇವ ಶೆಟ್ಟಿ ಎಂಬುವರು ಪ್ರೊಗ್ರಾಮ್ ಪ್ರೊಡ್ಯೂಸರ್ ಆಗಿ, ದಿವ್ಯಜ್ಯೋತಿ ಎಂಬುವರು ನಿರೂಪಕಿಯಾಗಿ ಈ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಜೂನ್ 28 ರಿಂದ ಚಾಲನೆ ನೀಡಲಾಗಿದ್ದು, ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗಿರುತ್ತದೆ. ರೈತರು ಗೂಗಲ್ ಪ್ಲೇ-ಸ್ಟೋರ್ನಿಂದ ಅಥವಾ https://play.google.com/store/apps/details  id=com.csk.Khariffarmer2021.cropsurvey ಲಿಂಕ್ ಬಳಸಿ, Kharif Season Farmer Crop Survey 2021-22 ಆ್ಯಪ್‌ನ್ನು ಡೌನ್ಲೋಡ್ ಮಾಡಿಕೊಂಡು ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಬೇಕು. ನಂತರ ಆಧಾರ್ QR Codeನ್ನು Scan ಮಾಡಿ ಅಥವಾ ಆಧಾರ್ನಲ್ಲಿರುವಂತೆ ಮಾಹಿತಿಯನ್ನು ದಾಖಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬರುತ್ತದೆ. ಈ ಓ.ಟಿ.ಪಿ ನ್ನು ದಾಖಲಿಸಿ, ಮಾಸ್ಟರ್ ವಿವರ ಡೌನ್ಲೋಡ್ ಮಾಡಿಕೊಂಡು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ, ನಂತರ ಸರ್ವೆ ನಂಬರ್ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು. ಬೆಳೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿನ ಬ್ಯಾಂಕುಗಳು ಗೃಹಸಾಲ, ಸಣ್ಣ ಹಾಗೂ ಮಧ್ಯಮ ಉದ್ಯಮಕ್ಕೆ, ಶಿಕ್ಷಣ ಹಾಗೂ ಆದ್ಯತಾ ವಲಯದವರಿಗೆ ಸಾಲ ನೀಡುವ ಯೋಜನೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕು ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಬ್ಯಾಂಕ್ಗಳಲ್ಲಿ ಸಾರ್ವಜನಿಕರ ಠೇವಣಿ ಹಣ ಬ್ಯಾಂಕುಗಳು ನೀಡುವ ಸಾಲದ ಅನುಪಾತವು ಆರ್.ಬಿ.ಐ ಸೂಚಿಸಿರುವ ಠೇವಣಿ ಹಣದ ಶೇಕಡಾ 60 ರಷ್ಟು ಹಣವನ್ನು ಸಾಲ ನೀಡುವ ಮೂಲಕ ನಿರ್ಧಿಷ್ಟ ಗುರಿ ಸಾಧಿಸಬೇಕು. ಆದರೆ ಜಿಲ್ಲೆಯಲ್ಲಿ ನಿಗದಿತ ಗುರಿಗಿಂತ ಸ್ವಲ್ಪ ಕಡಿಮೆ ಇದೆ. ಇದರಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂದು ಸೂಚನೆ ನೀಡಿದರು. ವಾಣಿಜ್ಯ ಬ್ಯಾಂಕುಗಳು ಸಮಾಜದಲ್ಲಿನ ಜನರು ಆರ್ಥಿಕ ಚಟುವಟಿಕೆ ಸೇರಿದಂತೆ ಮತ್ತಿತರೆ ಕಾರ್ಯಗಳಿಗೆ ನೀಡುವ ವಿವಿಧ ಸಾಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಬಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಟೀಮ್ ಹಾಗೂ ಫೇಸ್ ಶೀಲ್ಡ್‌ನ್ನು ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಟೀಮ್ ಹಾಗೂ ಫೇಸ್ ಶೀಲ್ಡ್ ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ,ಅವರು ಕೋವಿಡ್ ನಿಯಂತ್ರಣದಲ್ಲಿ ಪ್ರತಿಯೊಬ್ಬ ನಾಗರೀಕರ ಜವಬ್ದಾರಿ ಅತ್ಯಂತ ಮುಖ್ಯವಾಗಿದೆ.ನಮ್ಮ ಕುಂದಾಪ್ರ ಕನ್ನಡ ಬಳಗ ಕಳೆದ ಹಲವು ವರ್ಷಗಳಿಂದ ಊರಿನ ಸಮಸ್ಯೆಗೆ ಮತ್ತು ವಿದೇಶದಲ್ಲಿ ಕುಂದಾಪುರ ಕನ್ನಡಿಗರಿಗೆ ಸ್ಪಂದಿಸುವ ಮೂಲಕ ಉತ್ತಮ ಸ್ಪಂದನೆ ನೀಡುತ್ತಿದೆ ಎಂದರು. ಈ ಸಂದರ್ಭ ಉಡುಪಿ ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರೇಮಾನಂದ, ಬೈಂದೂರು ತಹಶೀಲ್ದಾರ ಶೋಭಾಲಕ್ಷ್ಮಿ ಎಚ್.ಎಸ್, ಬೈಂದೂರು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಿನಿ, ಪಟ್ಟಣ ಪಂಚಾಯತ್ ಅಧಿಕಾರಿ ನವೀನ್, ನಮ್ಮ ಕುಂದಾಪ್ರ ಕನ್ನಡ ಬಳಗದ ಶೀನ ದೇವಾಡಿಗ, ಸುಧಾಕರ ಶೆಟ್ಟಿ ಹುಂತರ‍್ಕಿ, ಪ್ರಕಾಶ ಹಾಗೂ ಆರೋಗ್ಯ ಇಲಾಖೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿರೂರು ಎಮ್‌ಎಮ್.ಹೌಸ್ ಇದರ ವತಿಯಿಂದ ಕೋವಿಡ್ ನೆರವಿಗಾಗಿ ಉಡುಪಿ ಜಿಲ್ಲಾಡಳಿತಕ್ಕೆ 37 ಆಕ್ಸಿಜನ್ ಸಿಲಿಂಡರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಎಮ್.ಎಮ್.ಹೌಸ್ ಪರವಾಗಿ ಮಣೆಗಾರ್ ಜಿಪ್ರಿ ಅವರು ಅಪರ ಜಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಕೋವಿಡ್ ಎರಡನೇ ಅಲೆ ಆರಂಭದಲ್ಲಿ ಕೋವಿಡ್ ನಿಯಂತ್ರಣ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಆಮ್ಲಜನಕ ಕೊರತೆ ಕಾಡಿದ್ದು ಜಿಲ್ಲಾಡಳಿತದ ಸಕಾಲಿಕ ಕ್ರಮಗಳ ಮೂಲಕ ಸಂಭವಿಸಬಹುದಾದ ಅನಾಹುತಗಳಿಂದ ಪಾರಾಗಿರುವುದು ಜಿಲ್ಲೆಯ ಹೆಮ್ಮೆಯಾಗಿದೆ. ಕೋವಿಡ್ ನಿಯಂತ್ರಣದಲ್ಲಿ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರ ಅಪಾರವಾಗಿದೆ. ಜಿಲ್ಲೆಯ ತುತ್ತತುದಿಯ ಗ್ರಾಮವಾದ ಶಿರೂರಿನ ಮೀರಾನ್ ಸಾಹೇಬ್ ಅವರ ಸಹಕಾರಕ್ಕೆ ಜಿಲ್ಲಾಡಳಿತ ಅಬಾರಿಯಾಗಿದೆ. ಮಾತ್ರವಲ್ಲದೆ ಸಾರ್ವಜನಿಕರ ಈ ರೀತಿಯ ಸಹಕಾರದಿಂದ ಉಡುಪಿ ಜಿಲ್ಲೆ ಇನ್ನಷ್ಟು ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದರು. ಎಮ್.ಎಮ್.ಹೌಸ್ ಶಿರೂರು ಪರವಾಗಿ ಮಣೆಗಾರ್ ಜಿಪ್ರಿ ಸಾಹೇಬ್ ಮಾತನಾಡಿ, ಕೋವಿಡ್ ಜಗತ್ತಿಗೆ ಬಂದಿರುವ ವಿಪತ್ತಾಗಿದೆ. ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ, ಅಭಯ ಹಸ್ತ ಹೆಲ್ಪ್ಲೈನ್ ಉಡುಪಿ ಗೆಳೆಯರ ಬಳಗ ಆನಗಳ್ಳಿ, ದತ್ತಾಶ್ರಮ ಆನಗಳ್ಳಿ, ಹ್ಯಾಲ್ಪಿಂಗ್ ಹ್ಯಾಂಡ್ಸ್ ಕುಂದಾಪುರ ಇವರ ಸಹಕಾರದಲ್ಲಿ ಗೆಳೆಯರ ಬಳಗ ಆನಗಳ್ಳಿ ಕುಂದಾಪುರ ಸಭಾಂಗಣದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು. ಉಡುಪಿ ಅಭಯ ಹಸ್ತ ಹೆಲ್ಪ್ ಲೈನ್ ಇದರ ಅಧ್ಯಕ್ಹರಾದ ಯಶ್ ಪಾಲ್ ಸುವರ್ಣ ರಕ್ತದಾನ ಶಿಬಿರಕ್ಕೆ ಆಗಮಿಸಿ ಶುಭಕೋರಿದರು. ಉದ್ಯಮಿ ಜಗದೀಶ್ ಕೊಟೇಶ್ವರ ಉದ್ಘಾಟಿಸಿದರು, ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಅದ್ಯಕ್ಷರಾದ ಜಯಕರ ಶೆಟ್ಟಿ ಅಧ್ಯಕ್ಹತೆ ವಹಿಸಿದ್ದರು. ಈ ಸಂದರ್ಭದಲ್ಲಿ ರಕ್ತದಾನ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಿದ ಸಂಘಟನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು ಮುಖ್ಯ ಅತಿಥಿಗಳಾಗಿ ಸುದಾಕರ್ ಕಾಂಚನ್ ಕುಂದಾಪುರ, ಉಡುಪಿ ಅಭಯ ಹಸ್ತ ಹೆಲ್ಫ್ ಲೈನ್ ಅಧ್ಯಕ್ಷರಾದ ರಾಜೇಶ ಶೆಟ್ಟಿ ಮುನಿಯಾಲು, ಉಡುಪಿ ಅಭಯಹಸ್ತ ಹೆಲ್ಫ್ ಲೈನ್ ಸಂಸ್ಥಾಪಕ ಅಧ್ಯಕ್ಷರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಹೆತ್ತವರನ್ನು ಕಳೆದುಕೊಂಡ ಅವಲಂಬಿತ ಮಕ್ಕಳು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯು ಉಚಿತ ಶಿಕ್ಷಣವನ್ನು ನೀಡುವುದು ಎಂದು ಕಾಲೇಜಿನ ಆಡಳಿತ ತಿಳಿಸಿದೆ. ಪ್ರಸ್ತುತ ವರ್ಷ ಅಂತಹ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ಸಾಮರ್ಥ್ಯದ ಬೆಳವಣಿಗೆಯ ದೃಷ್ಟಿಯಿಂದ ಈ ಆರ್ಥಿಕ ಸಹಾಯವು ಅನುಕೂಲವಾಗಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೆಹಲಿಯಲ್ಲಿ ನಡೆದ ಇಂಟರ್ನ್ಯಾಷನಲ್ ಅಚಿವರ್ಸ್ ಕಾನ್ಫರೆಸ್ಸ್ ಸಮಾರಂಭದಲ್ಲಿ ಶೆಫ್‌ಟಾಕ್ ಸಂಸ್ಥೆಯು ಅಹಾರದ ಅತ್ಯತ್ತಮ ಗುಣಮಟ್ಟಕ್ಕೆ ಕ್ವಾಲಿಟಿ ಪುಡ್ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಅವಾರ್ಡ್‌ನ್ನು ಶೆಫ್‌ಟಾಕ್ ಸಂಸ್ಥೆಯ ಎಂಡಿ ಗೋವಿಂದ ಬಾಬು ಪೂಜಾರಿ ಪಡೆದುಕೊಂಡಿದ್ದಾರೆ. ಪರಿಶ್ರಮದಿಂದಲೇ ಬದುಕು ಕಟ್ಟಿಕೊಂಡ ಗೋವಿಂದ ಬಾಬು ಪೂಜಾರಿ ಅವರು ಹಂತ ಹಂತವಾಗಿ ಸಾಧನೆಯ ಶಿಖರವೇರಿದವರು. ಶೆಫ್‌ಟಾಕ್ ಪುಡ್ & ಹಾಸ್ಪಿಟಾಲಿಟಿ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗೋವಿಂದ ಪೂಜಾರಿ ಅವರು ಮುಂಬೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಆರೋಗ್ಯ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶ್ರೀ ವರಲಕ್ಷ್ಮೀ ಚಾರಿಟೇಬಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯ ಸಾರಿಗೆ ಆಯುಕ್ತರ ಆದೇಶ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಜಿಲ್ಲೆಯ ಎಲ್ಲಾ ಖಾಸಗಿ ಬಸ್ಸು, ಮ್ಯಾಕ್ಸಿಕ್ಯಾಬ್ ಹಾಗೂ ಟ್ಯಾಕ್ಸಿಗಳು ಮುಂಗಡ ತೆರಿಗೆ ಪಾವತಿಸಿ, ಅನುಪಯುಕ್ತತೆಯಿಂದ ಬಿಡುಗಡೆಗೊಳಿಸಿಕೊಂಡು ಮಾತ್ರ ವಾಹನವನ್ನು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಆದೇಶಿಸಿರುತ್ತಾರೆ. ಆದರೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕಚೇರಿಯ ಮೋಟಾರು ವಾಹನ ನಿರೀಕ್ಷಕರು, ನಿಯಮ ಉಲ್ಲಂಘಿಸಿ ವಾಹನ ತೆರಿಗೆ ಪಾವತಿಸದೇ, ಅದ್ಯರ್ಪಣಯಿಂದ ಬಿಡುಗಡೆಗೊಳಿಸಿಕೊಳ್ಳದೇ ಖಾಸಗಿ ಕಂಪೆನಿಯ ನೌಕರರನ್ನು ಸಾರ್ವಜನಿಕ ರಸ್ತೆಯ ಮೇಲೆ ಕೊಂಡೊಯ್ಯುತ್ತಿದ್ದ ಉಡುಪಿಯಿಂದ ಹೆಬ್ರಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು (ಕೆಎ-51/ ಬಿ 9646) ತಪಾಸಣೆ ನಡೆಸಿ, ವಾಹನವನ್ನು ಮುಟ್ಟುಗೋಲು ಹಾಕಿ, ಕಾನೂನು ರೀತಿಯ ಕ್ರಮ ಕೈಗೊಂಡು, ಮುಂದಿನ ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಒಪ್ಪಿಸಿರುತ್ತಾರೆ. ಆದ್ದರಿಂದ ಅನಾವಶ್ಯಕವಾಗಿ ಸಾರ್ವಜನಿಕರಿಗೆ ತೊಂದರೆ ನೀಡದೇ, ಮುಂಗಡ ವಾಹನ ತೆರಿಗೆ ಪಾವತಿಯೊಂದಿಗೆ ಅದ್ಯರ್ಪಣದಿಂದ ಬಿಡುಗಡೆಗೊಳಿಸಿದ ನಂತರ ಮಾತ್ರ ವಾಹನವನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಾಡಿಸುವಂತೆ ಪ್ರಾದೇಶಿಕ ಸಾರಿಗೆ…

Read More