Author: ನ್ಯೂಸ್ ಬ್ಯೂರೋ

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಮೀಟ್ – ಗ್ರೀಟ್ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾಷೆ ಮಾತಿಗೆ ಮಾತ್ರ ಸೀಮಿತವಲ್ಲ. ಅದು ಆಯಾ ಭಾಷಿಕರನ್ನು ಭಾವನಾತ್ಮಕವಾಗಿ ಬೆಸೆಯುತ್ತದೆ. ಅದು ನಮ್ಮೊಳಗಿನ ಭಾವನೆಗಳ ಅಭಿವ್ಯಕ್ತಿಯೂ ಹೌದು. ಒಂದು ಊರಿನ ಸಂಸ್ಕ್ರತಿ, ಸಾಂಸ್ಕ್ರತಿಕ ಪರಂಪರೆ, ಆಚರಣೆಗಳು ಅಲ್ಲಿನ ಜನರ ಒಡನಾಟದಿಂದ ತಿಳಿಯುತ್ತದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪುರ ಸಹನಾ ಮಿನಿ ಹಾಲ್‌ನಲ್ಲಿ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳಿಗೆ ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ಜಾಗತಿಕ ಮಟ್ಟದಲ್ಲಿ ಕುಂದಾಪ್ರ ಕನ್ನಡಿಗರ ಸಾಧನೆ ಅಪಾರವಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆಯ ಸೊಗಡನ್ನು ಉಳಿಸಲು ಹೆಣಗಬೇಕಾಗಿರುವುದು ವಿಷಾದನೀಯ ಎಂದರು. ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರೂ ಸಹ ದುಬ ನೆಲದಲ್ಲೂ ಕುಂದಾಪುರ ಭಾಷೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ವಿಹಿಂಪ ಮತ್ತು ಬಜರಂಗದಳ ಬೈಂದೂರು ಪ್ರಖಂಡದ ಕಾರ್ಯಕರ್ತರ ಸಮಾವೇಶ ನಡೆಯಿತು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಿ. ವಿಲಾಸ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಗಳಲ್ಲಿ ಒಗ್ಗಟ್ಟಿನ ಕೊರತೆ ಇದ್ದು ಪ್ರತಿಯೊಂದು ಕ್ಷಣದಲ್ಲೂ ಒಗ್ಗಟ್ಟು ಪ್ರದರ್ಶಿಸಬೇಕು. ನಮ್ಮ ರಾಷ್ಟ್ರ ಹಾಗೂ ಹಿಂದುತ್ವ ರಕ್ಷಣೆಗೆ ಪ್ರಾಣ ಕೊಡಲು ಸನ್ನದ್ಧರಾಗಬೇಕು. ಗ್ರಾಮ ಮಟ್ಟದಲ್ಲಿ ಪ್ರತಿ ಹಿಂದು ಮನೆಯ ಒರ್ವ ಸದಸ್ಯ ಸಂಘಟನೆಗೆ ಸೇರುವ ಮೂಲಕ ಹಿಂದು ಸಮಾಜ ರಕ್ಷಣೆಯ ನೇತಾರರಾಗಬೇಕು ಎಂದು ಕರೆ ನೀಡಿದರು. ಹಿಂದು ಬಾಂಧವರು ಗೋವುಗಳ ಮಹತ್ವವನ್ನು ಅರಿತು ಗೋವುಗಳ ರಕ್ಷಣೆಗೆ ಮುಂದಾಗಬೇಕು. ಹಿಂದು ಸಮಾಜವನ್ನು ಸಂಕುಚಿತಗೊಳಿಸುವ, ವಿಕೃತಗೊಳಿಸುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಿದೆ. ಯುವ ಜನರನ್ನು ದಾರಿ ತಪ್ಪಿಸಿ ನಾಶಗೊಳಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಹೀಗಾಗಿ ಹಿಂದು ಸಮಾಜ ಜಾಗೃತವಾಗಬೇಕು ಎಂದರು. ಇಂದು ಹಿಂದೂ ಎಂದು ಹೇಳಿಕೊಂಡರೂ ಕೋಮುವಾದಿ ಎಂದು ಬಿಂಬಿಸುವ ವಾತಾವರಣ ಸೃಷ್ಠಿಯಾಗಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್‌ನ ಮಾಜಿ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಅವರನ್ನು ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿ ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಶಾಂತವೀರ ನಾಯ್ಕ್ ಆದೇಶಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಬೆಳೆಯುತ್ತಿರುವ ಪಟ್ಟಣವಾಗಿದ್ದು ವಾಹನಗಳ ಸಂಖ್ಯೆ ಏರುತ್ತಲಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಅಗಲಕಿರಿದಾದುರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತದೆ. ಒಳ ರಸ್ತೆಗಳಲ್ಲೂ ಸಮಸ್ಯೆಗಳಿವೆ. ವಾಹನ ಚಾಲಕರೂ ರಸ್ತೆ ನಿಯಮಗಳನ್ನು ಪಾಲಿಸದಿದ್ದರೆ ಅವಘಡಗಳೂ ಉಂಟಾಗುತ್ತದೆ. ಒಂದು ಶಾಶ್ವತ ಸಂಚಾರಿ ನಿಯಮ ಕುಂದಾಪುರದಲ್ಲಿ ರೂಪಿಸಬೇಕಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಗಳ ಇಲಾಖೆಯವರೆಲ್ಲಾ ಸೇರಿ ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಸೇರಿ ಚರ್ಚಿಸಿ ಒಂದು ನಿಯಮ ರೂಪಿಸಬಹುದು” ಎಂದು ಕುಂದಾಪುರ ವಲಯದ ವೃತ್ತ ನಿರೀಕ್ಷಕ ಡಿ.ಆರ್. ಮಂಜಪ್ಪ ಹೇಳಿದರು. ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ಮೇಕ್ ರೋಡ್ ಸೇಫ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಹೇಳಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕೆ ಅಪಘಾತಗಳಾಗುತ್ತವೆ. ಚಾಲಕರು ಯಾವ ರೀತಿ ನಿಯಮಗಳನ್ನು ಪಾಲಿಸದೇ ನಿರ್ಲಕ್ಷದಿಂದ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣರಾಗುತ್ತಾರೆ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ ಅವರು ವಾಹನ ಚಲಾವಣೆಯಲ್ಲಿ ಮೊಬೈಲ್ ಬಳಕೆ ಅಪಾಯಕಾರಿ, ಮನೆಯಲ್ಲಿ ತಮ್ಮನ್ನು ನಂಬಿದ ಒಡಹುಟ್ಟಿದವರು ಪತ್ನಿ, ಮಕ್ಕಳು ಹೆತ್ತವರು ಇದ್ದಾರೆ ಎಂಬ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯು ತನ್ನ ೨೫ ನೇ ವರ್ಷಾಚರಣೆಯ ಸಂದರ್ಭದಲ್ಲಿ ಬೆಳ್ಳಿಹಬ್ಬದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೈಂದೂರಿನ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ಳಿಹಬ್ಬದ ಲಾಂಛನವನ್ನು ಬಿಡುಗೊಡೆಗೊಳಿಸಿ, ಮಾತನಾಡಿದ ಅವರು ಕಿರಿಮಂಜೇಶ್ವರದಲ್ಲಿ ಹಿಂದೆ ಸಣ್ಣ ಹಂಚಿನ ಕಟ್ಟಡದಲ್ಲಿ ಶಾಲೆಯನ್ನು ಆರಂಭಿಸಿ ಇಂದು ತನ್ನದೇ ಆದ ಸುಸಜ್ಜಿತ ಸ್ವಂತ ಕಟ್ಟಡದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಡಾ| ಎನ್ ಕೆ ಬಿಲ್ಲವ ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ಕ್ಲಸ್ಟ್‌ರ್ ಮಟ್ಟದಲ್ಲಿ ಪ್ರತಿಭಾ ಕಾರಂಜಿ ವಿಜೇತರಾದ ಪುಟಾಣಿಗಳನ್ನು ಪ್ರಶಸ್ತಿಯೊಂದಿಗೆ ಪುರಸ್ಕರಿಸಲಾಯಿತು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ. ಎನ್ ಕೆ ಬಿಲ್ಲವ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ೨೫ ವರ್ಷಗಳ ಏಳು-ಬೀಳುಗಳನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿ ಇನ್ನೂ ಅತುತ್ತಮ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು. ಮುಖ್ಯ ಶಿಕ್ಷಕರಾದ ರವಿದಾಸ್ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಬಾಳೆಕುದ್ರು ಶ್ರೀಮಠದಲ್ಲಿ ನೃಸಿಂಹಾಶ್ರಮ ಸ್ವಾಮೀಜಿಯವರ ಚಾತುರ್ಮಾಸ್ಯ ವೃದಲ್ಲಿರುವ ಶ್ರೀಗಳವರನ್ನು ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಭೇಟಿಯಾಗಿ ಗುರು ನಮನ ಸಲ್ಲಿಸಿದರು. ಈ ಸಂದರ್ಭ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರದ ಹಲವು ಸಾಧನೆಗಳ ಪರಿಚಯದ ಶುದ್ಧ ನಡೆ ಸೂಕ್ತ ವಿಕಾಸ ಪುಸ್ತಕವನ್ನು ಶ್ರೀಗಳವರೀಗೆ ಶ್ರೀಗಳವರಿಗೆ ನೀಡಿದರು. ಐರೋಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೇಬಿ ಕೃಷ್ಣ ಪೂಜಾರಿ. ಸದಸ್ಯರಾದ ಇಂದಿರಾ ಪೂಜಾರಿ, ರಾಜೇಶ್ ಪೂಜಾರಿ, ಪ್ರೇಮ ಆಚಾರ್ಯ , ದಿನೇಶ್ ಅಮೀನ್ , ಬಿಜೆಪಿಯ ಮುಖಂಡರಾದ ವಿಠಲ್ ಪೂಜಾರಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಪ್ ಇದರ ವತಿಯಿಂದ ಕುಂದಾಪ್ರ ಕನ್ನಡ ಭಾಷೆ ಮಾತನಾಡುವ ವ್ಯಾಪ್ತಿಯಲ್ಲಿನ ಜನಪ್ರತಿನಿಧಿಗಳನ್ನು ಗೌರವಿಸುವ ಮೀಟ್ – ಗ್ರೀಟ್ ಕಾರ್ಯಕ್ರಮ ಆಗಸ್ಟ್ 6ರಂದು ಸಂಜೆ 6ರಿಂದ 8ರ ತನಕ ಕುಂದಾಪುರ ಸಹನಾ ಮಿನಿ ಹಾಲ್‌ನಲ್ಲಿ ನಡೆಯಲಿದೆ. ಮೀಟ್ – ಗ್ರೀಟ್ ಕಾರ್ಯಕ್ರಮದ ಅಧ್ಯಕ್ಷರಾಗಿ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಮ್.ಸುಕುಮಾರ ಶೆಟ್ಟಿ, ರಘುಪತಿ ಭಟ್, ಸುನೀಲ್ ಕುಮಾರ್ ಆಗಮಿಸಲಿದ್ದಾರೆ. ದುಬೈನಲ್ಲಿ ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುವ ಜೊತೆಗೆ ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿದ ಹೆಗ್ಗಳಿಕೆ ನಮ್ಮ ಕುಂದಾಪ್ರ ಕನ್ನಡ ಬಳಗದ್ದಾಗಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸಂಕಷ್ಟದಲ್ಲಿರುವವರಿಗೆ ಸಹಾಯ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಕುಂದಾಪುರ ಭಾಷಿಗರನ್ನು ಒಗ್ಗೂಡಿಸುವುದು ಹಾಗೂ ಪರಸ್ಪರ ಭಾಂದವ್ಯ ಬೆಳೆಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು/ ಬೆಳಗಾವಿ ಮತ್ತು ಆಲ್ ಇಂಡಿಯಾ ಕಲ್ಚರ್ ಮತ್ತು ಹೆರಿಟೇಜ್ ಡೆವಲಪ್ಮೆಂಟ್ ಸೆಂಟರ್ ನ್ಯೂಡೆಲ್ಲಿ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಕುಂದಾಪುರದ ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ರಿ. ಹಾಗೂ ಮಾತೃಶ್ರೀ ಟ್ಯುಟೋರಿಯಲ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ ವಾಸುದೇವ ಬೈಂದೂರು ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಗುರುಶಾಂತೇಶ್ವರ ಹಿರೇಮಠ ಹಲಿಕ್ಕೇರಿ ಬೆಳಗಾವಿ ಮತ್ತು ಸನ್ಮಾನ್ಯ ನ್ಯಾಯಮೂರ್ತಿ ಶ್ರೀ ಶಿವರಾಜ್ .ವಿ ಪಾಟೀಲ್ ನಿವೃತ್ತ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ದೆಹಲಿ ಮತ್ತು ಪ್ರೊ ಚಂದ್ರಶೇಖರ ಪಾಟೀಲ ಹಿರಿಯ ಸಾಹಿತಿ ಇವರ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಹುಪಾಲು ಕರಾವಳಿಯ ಕಲಾವಿದರೇ ನಟಿಸಿ, ನಿರ್ದೇಶಿಸಿರುವ; ವಿಭಿನ್ನ ಕಧಾ ಹಂದರದ ಸಿನೆಮಾ ಕತ್ತಲೆಕೋಣೆ ಸಿನೆಮಾ ಅಗಸ್ಟ್ 10ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಕುಂದಾಪುರ ಬೈಂದೂರು ಹಾಗೂ ಉಡುಪಿಯ ಚಿತ್ರಮಂದಿರಗಳಲ್ಲಿಯೂ ಮೊದಲ ವಾರವೇ ಬಿಡುಗಡೆಗೊಳ್ಳಲಿದೆ ಎಂದು ಕತ್ತಲೆಕೋಣೆ ಸಿನೆಮಾ ತಂಡದ ಅಶ್ವತ್ ಆಚಾರ್ಯ ಯಡಬೆಟ್ಟು ಹೇಳಿದರು. ಅವರು ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಸಂದೇಶ್ ಶೆಟ್ಟಿ ಆಜ್ರಿ ಅವರ ಎಂಟು ವರ್ಷದ ಸಿನೆಮಾ ಕನಸು ಅಂತಿಮ ಘಟ್ಟ ತಲುಪಿದ್ದು ದೀಪಕ್ ಗಂಗಾಧರ್ ಮೂವೀಸ್ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದರು. ಚಿತ್ರವನ್ನು ನಿರ್ದೇಶಿಸಿದರು ಸಂದೇಶ್ ಶೆಟ್ಟಿ ಆಜ್ರಿ ನಾಯಕ ನಟನಾಗಿ ಕಾಣಿಸಿಕೊಂಡಿರುವುದಲ್ಲದೇ, ಸಿನೆಮಾಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ನಾಯಕ ನಟಿಯಾಗಿ ಹೆನಿಕಾ ರಾವ್ ಮೊದಲ ಭಾರಿಗೆ ಹಿರಿತೆರೆ ಪ್ರವೇಶಿಸುತ್ತಿದ್ದಾರೆ. ಮುಖ್ಯ ಪಾತ್ರದಲ್ಲಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಪುತ್ರ ರಿತೀಕ್ ಮುರ್ಡೇಶ್ವರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲದ ವತಿಯಿಂದ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಕೆಸರುಗದ್ದೆಯ ಕ್ರೀಡಾಕೂಟ ಹಾಗೂ ನಾಟಿ ಕಾಯ೯ ಕಟ್ಕೆರೆಯ ಹಡಿಲು ಬಿದ್ದ ಬಯಲಿನಲ್ಲಿ ನಡೆಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರುಣಾಕರ ಶೆಟ್ಟಿಯವರು ಮಾತನಾಡಿ ಕೃಷಿಯನ್ನು ಕಡೆಗಣಿಸುತ್ತಿರುವ ಇಂದಿನ ಕಾಲದಲ್ಲಿ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲದ ಸದಸ್ಯರು ಹಡಿಲು ಬಿದ್ದಿರುವ ಗದ್ದೆಯಲ್ಲಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿರುವುದು ಶ್ಲಾಘನೀಯ ಕಾಯ೯ವಾಗಿದೆ ಎಂದರು. ಯುವಕ ಮಂಡಲದವರು ಪ್ರತಿ ವಷ೯ ಕಟ್ಕೆರೆಯ ಉತ್ತಮ ಕೃಷಿಕರನ್ನು ಗುರುತಿಸಿ ನಮ್ಮೂರ ಅನ್ನದಾತ ಎನ್ನುವ ಪ್ರಶಸ್ತಿಯನ್ನು ನೀಡಿ ಗುರುತಿಸಿ ಗೌರವಿಸುವ ಮೂಲಕ ಕೃಷಿಯನ್ನು ಪ್ರೊತ್ಸಾಯಿಸುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪ್ರಥಮ ದಜೆ೯ ಗುತ್ತಿಗೆದಾರರಾದ ಸುಭೋಧ ಹೆಗ್ಡೆ ಕಟ್ಟೆರೆ, ಅರಣ್ಯ ಗುತ್ತಿಗೆದಾರರಾದ ಜಯಪ್ರಕಾಶ ಹೆಗ್ಡೆ ಕಟ್ಕೆರೆ, ಶಿಕ್ಷಕರಾದ ಅಜ್ಜರಗುಡ್ಡೆಮನೆ ಕರುಣಾಕರ ಶೆಟ್ಟಿ ಕಟ್ಕೆರೆ , ಕಿಶೋರಚಂದ್ರ ಶೆಟ್ಟಿ ಕಟ್ಕೆರೆ, ಲಕ್ಷಣ ಶೆಟ್ಟಿ ಕಟ್ಕೆರೆ ಇದ್ದರು. ನೆಜಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವಶಕ್ತಿ…

Read More