ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಂಗಳೂರು/ ಬೆಳಗಾವಿ ಮತ್ತು ಆಲ್ ಇಂಡಿಯಾ ಕಲ್ಚರ್ ಮತ್ತು ಹೆರಿಟೇಜ್ ಡೆವಲಪ್ಮೆಂಟ್ ಸೆಂಟರ್ ನ್ಯೂಡೆಲ್ಲಿ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಕುಂದಾಪುರದ ಮಾತೃಶ್ರೀ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ರಿ. ಹಾಗೂ ಮಾತೃಶ್ರೀ ಟ್ಯುಟೋರಿಯಲ್ಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಬಿ ವಾಸುದೇವ ಬೈಂದೂರು ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಗುರುಶಾಂತೇಶ್ವರ ಹಿರೇಮಠ ಹಲಿಕ್ಕೇರಿ ಬೆಳಗಾವಿ ಮತ್ತು ಸನ್ಮಾನ್ಯ ನ್ಯಾಯಮೂರ್ತಿ ಶ್ರೀ ಶಿವರಾಜ್ .ವಿ ಪಾಟೀಲ್ ನಿವೃತ್ತ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ದೆಹಲಿ ಮತ್ತು ಪ್ರೊ ಚಂದ್ರಶೇಖರ ಪಾಟೀಲ ಹಿರಿಯ ಸಾಹಿತಿ ಇವರ ಉಪಸ್ಥಿತರಿದ್ದರು.