ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಕಲ್ಯಾಣಪುರದಲ್ಲಿ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪ. ಪೂ. ಕಾಲೇಜು ದ್ವಿತೀಯ ವರ್ಷದಲ್ಲೂ ಶೇಕಡ 100 ಫಲಿತಾಂಶದ ದಾಖಲಿಸಿದೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಮೃತ ಬಸವರಾಜ್ ಬಣಕರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ ಪಡೆದು ಸಂಸ್ಥೆಗೆ ಮತ್ತು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಶ್ರೀರಕ್ಷಾ 589 ಅಂಕ, ಸುಶ್ಮಿತಾ 588 ಅಂಕ, ಆಕಾಶ್ ಶೇಥಿಯಾ 586 ಅಂಕ, ಶಶಾಂಕ್ ಎಸ್ ಭಟ್ 585 ಅಂಕಗಳನ್ನು ಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಗೆ ಹಾಜರಾದ 162 ವಿದ್ಯಾರ್ಥಿಗಳಲ್ಲಿ 108 ಅತ್ಯುನ್ನತ ದರ್ಜೆ ಹಾಗೂ 54ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಪಡೆದಿದ್ದಾರೆ. ತ್ರಿಷಾ ವಿದ್ಯಾ ಸಂಸ್ಥೆಯು ತನ್ನ ಪ್ರಾರಂಭದ ವರ್ಷದಿಂದಲೂ ಶೇ. 100ರ ಫಲಿತಾಂಶದ ದಾಖಲಿಸಿದ್ದು, ಅತ್ಯುತ್ತಮ ಬೋಧಕ ಮತ್ತು ಬೋಧಕೇತರ ವೃಂದದವರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆಯಾಗಿ ಬೆಳೆಯುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿಯ ಫಲಿತಾಂಶ ದಾಖಲಿಸಿರುವ ಸಂಸ್ಥೆ ಉಡುಪಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 10 ರ್ಯಾಂಕ್ ಪಡೆಯುವುದರ ಮೂಲಕ ಶೇ. 100 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿನಿ ಸುಮಿತ್ರಾ ಭಟ್ (593 ) ರಾಜ್ಯಕ್ಕೆ 7ನೇ ರ್ಯಾಂಕ್, ಸನ್ನಿಧಿ ಎಮ್ (592) 8ನೇ ರ್ಯಾಂಕ್, ಕೀರ್ತನಾ, ರಂಜಿತಾ (591), 9ನೇ ರ್ಯಾಂಕ್, ಅನನ್ಯ, ಚೈತ್ರಾ, ನಿಶಾ, ಸಾತ್ವಿಕ್( 590) 10ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿ. ದಿವೀಶ್ ಶೆಣೈ (592) 8ನೇ ರ್ಯಾಂಕ್, ಪ್ರಣವಿ ಉಳ್ಳೂರ್ ಕೆ. (590) 10ನೇ ರ್ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಾಧನೆ ಮೆರೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 183 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 125 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ154 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 110 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 44ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಕೃತ 42, ಸಂಖ್ಯಾಶಾಸ್ತ್ರ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಶಂಕರನಾರಾಯಣದ ಮದರ್ ತೆರೇಸಾ’ಸ್ ಪಿ ಯು ಕಾಲೇಜಿಗೆ ರಾಜ್ಯಮಟ್ಟದಲ್ಲಿ 2 ರ್ಯಾಂಕ್ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಅಕ್ಷಿತಾ 590 ಅಂಕ 98.3 ಪ್ರತಿಶತದೊಂದಿಗೆ ರಾಜ್ಯಮಟ್ಟದಲ್ಲಿ 9ನೇ ರ್ಯಾಂಕ್ ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ನಿಶಾ ನಾರಾಯಣ್ ತೊಳಾರ್ 593 ಅಂಕ 98.83 ಪ್ರತಿಶತದೊಂದಿಗೆ ರಾಜ್ಯಮಟ್ಟದಲ್ಲಿ 6ನೇ ರ್ಯಾಂಕ್ ಪಡೆದು ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅಕ್ಷಿತಾ ಗಣಿತದಲ್ಲಿ 100 ಅಂಕ ಪಡೆದಿದ್ದಾರೆ. ನಿಶಾ ಅರ್ಥಶಾಸ್ತ್ರದಲ್ಲಿ -100, ವ್ಯವಹಾರ ಅಧ್ಯಯನ -100,ಲೆಕ್ಕಶಾಸ್ತ್ರ- 100 ಸಂಖ್ಯಾಶಾಸ್ತ್ರದಲ್ಲಿ – 100 ಅಂಕ ಪಡೆದಿದ್ದಾರೆ. ಅತ್ತ್ಯುತ್ತಮ ಫಲಿತಾಂಶ ದಾಖಲಿಸಿ ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವೃಂದ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80.76 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ಒಟ್ಟು 655 ವಿದ್ಯಾರ್ಥಿಗಳ ಪೈಕಿ 529 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ 202 ವಿದ್ಯಾರ್ಥಿಗಳು ಹಾಗೂ 327 ವಿದ್ಯಾರ್ಥಿನಿಯರಿದ್ದಾರೆ. ವಿಷಯವಾರು ಫಲಿತಾಂಶದಲ್ಲಿ ಹಿಂದಿ, ಸಂಸ್ಕೃತ, ಬಯಾಲಾಜಿ, ಐಟಿ ಹಾಗೂ ಆಟೋಮೊಬೈಲ್ ವಿಷಯದಲ್ಲಿ ಶೇ.100 ಫಲಿತಾಂಶ ಬಂದಿದ್ದು, ಬ್ಯುಸಿನೆಸ್ ಸ್ಟಡೀಸ್ ವಿಷಯದಲ್ಲಿ ಶೇ.88.06 ಫಲಿತಾಂಶ ದಾಖಲಿಸಿದ್ದಾರೆ. ಉಳಿದ ವಿಷಯಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ ದಾಖಲಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಬಾಂಡ್ಯಾ ಎಜುಕೇಶನಲ್ ಟ್ರಸ್, ವಕ್ವಾಡಿ ಗುರುಕುಲ ಪದವಿಪೂರ್ವ ಕಾಲೇಜಿನ 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 46 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ. 15 ಮಂದಿ ವಿಶಿಷ್ಟ ಶ್ರೇಣಿ ಮತ್ತು 31 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಅವಿನಾಶ್ ಅವರು ತಿಳಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ಆಪ್ತ ಎಚ್ ಆರ್ (584), ಹಿಮಾನಿ ಡಿ.ಎಮ್(575), ಕೆ.ಅಮೂಲ್ಯ ಶೇಟ್(546) ವಾಣಿಜ್ಯ ವಿಭಾಗದ ಸಿಯಾ ಎಸ್ ಶೆಟ್ಟಿ (579), ಕಾವ್ಯ (572), ವೈಭವ್ ಜಿ (546) ಅಂಕ ಗಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಎ.08: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು 93.90% ಸಾಧನೆ ಮಾಡುವ ಮೂಲಕ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ (93.57%), ಕೊನೆ ಸ್ಥಾನವನ್ನು ಯಾದಗಿರಿ (73.45%) ಪಡೆದುಕೊಂಡಿದೆ. ರಾಜ್ಯದಲ್ಲಿ ಒಟ್ಟು 73.45% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 6,37,805 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ಅಮೂಲ್ಯ ಕಾಮತ್ 599 ಅಂಕ ಪಡೆದು ಮೊದಲ ಸ್ಥಾನ ಪಡೆದರೆ ಕಲಾ ವಿಭಾಗದಲ್ಲಿ ಬಳ್ಳಾರಿಯ ಇಂದೂ ಪಿಯು ಕಾಲೇಜಿನ ಸಂಜನಾ ಬಾಯಿ 597 ಮೊದಲ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೆನರಾ ಕಾಲೇಜಿನ ದೀಪಾಶ್ರೀ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಲ್ಲಾವಾರು ಫಲಿತಾಂಶ:ಉಡುಪಿ ಜಿಲ್ಲೆ ಶೇ. 93.90 ದಕ್ಷಿಣ ಕನ್ನಡ ಜಿಲ್ಲೆ ಶೇ. 93.57 ಬೆಂಗಳೂರು ದಕ್ಷಿಣ ಶೇ. 85.36, ಕೊಡಗು ಜಿಲ್ಲೆ ಶೇ. 83.84 ಬೆಂಗಳೂರು ಉತ್ತರ ಶೇ.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಕ್ಕಳಲ್ಲಿ ಮೂಡುವ ಆಲೋಚನೆಗಳು, ಚಿಂತನೆಗಳನ್ನು ಸರಿಯಾಗಿ ಬಳಸಿಕೊಂಡು ಅವುಗಳ ಮೂಲಕ ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಲು ಅಟಲ್ ಟಿಂಕರಿಂಗ್ ಲ್ಯಾಬ್ ಒಂದು ವೇದಿಕೆಯಾಗಲಿದೆ ಎಂದು ಜಿ.ಎಸ್.ವಿ.ಎಸ್. ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಹೇಳಿದರು. ಅವರು ಇಲ್ಲಿನ ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಗಂಗೊಳ್ಳಿ ರೋಟರಿ ಕ್ಲಬ್ ಸಹಕಾರದೊಂದಿಗೆ ಎಸ್.ವಿ. ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ನಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಅಟಲ್ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹೊಸ ಹೊಸ ಅನ್ವೇಷಣೆ ನಡೆಸಲು ವಿದ್ಯಾರ್ಥಿಗಳಿಗೆ ಅಟಲ್ ಟಿಂಕರಿಂಗ್ ಲ್ಯಾಬ್ ಸಹಕಾರಿಯಾಗುತ್ತಿದ್ದು, ಇದರ ಮೂಲಕ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಬಹುದು. ಅಟಲ್ ಬೇಸಿಗೆ ಶಿಬಿರದ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವಂತಾಗಬೇಕು ಎಂದರು. ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶಾಂತಿ ಡಿಕೋಸ್ಟ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕಿ ಜಯಶ್ರೀ ನಾಯಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯಕ್ಷಗಾನ ಹಿನ್ನೆಲೆಯ ವೀರ ಚಂದ್ರಹಾಸ ಚಿತ್ರ ತಂಡದಿಂದ ಕುಂಭಾಶಿ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಯಕ್ಷಗಾನ ಕಲಾವಿದರು, ಚಿತ್ರದಲ್ಲಿ ನಟಿಸಿದ ಕಲಾವಿದರು, ಭಾಗವತರಿಗೆ ಸಮ್ಮಾನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ಯಕ್ಷಗಾನ ಕಲಾವಿದರಾದ ನರಾಡಿ ಭೋಜರಾಜ ಶೆಟ್ಟಿ, ಉಳ್ಳೂರು ನಾರಾಯಣ ನಾಯ್ಕ, ಸುಧಾಕರ ಕೊಠಾರಿ, ವಿಶ್ವನಾಥ್ ಆಚಾರ್ಯ ತಾರಿಕೊಡ್ಲು, ಪ್ರವೀಣ್ ಗಾಣಿಗ ಕೆಮ್ಮಣ್ಣು, ಕೃಷ್ಣ ಗಾಣಿಗ ಹೊಸಂಗಡಿ, ಸದಾಶಿವ ಅಮೀನ್ ಕೊಕ್ಕರ್ಣೆ, ಆಜ್ರಿ ಗೋಪಾಲ ಗಾಣಿಗ, ಸದಾಶಿವ ಶೆಟ್ಟಿ ಯರುಕೋಣೆ ಹಾಗೂ ಹಿರಿಯ ಭಾಗವತ ಸುರೇಶ್ ಶೆಟ್ಟಿ ಶಖಮರನಾರಾಐಣ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರಾದ ಶಿಥಿಲ್ ಶೆಟ್ಟಿ ಐರೆಬೈಲ್, ಪ್ರಸನ್ನ ಶೆಟ್ಟಿಗಾರ್, ರವೀಂದ್ರ ದೇವಾಡಿಗ ಕಮಲಶಿಲೆ, ನವೀನ್ ಶೆಟ್ಟಿ ಐರೆಬೈಲ್, ಶ್ವೇತಾ ಅರೆಹೊಳೆ , ಗೋವಿಂದ ಸಾಲಿಮಕ್ಕಿ, ಶೇಖರ್ ಶೆಟ್ಟಿ ಯಳಬೇರು, ಉದಯ ಹೆಗಡೆ ಕಡಬಾಳ್, ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಪ್ರಸಾದ್ ಮೊಗೆಬೆಟ್ಟು, ಮದ್ದಲೆ ವಾದಕ ವಿಶ್ವಂಭರ ಅಲ್ಲೆ ಐರೋಡಿ, ಸುನೀಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿಯಾಗಿ ಸಹ ಸವಾರ ಸಾವನ್ನಪ್ಪಿದ ಘಟನೆ ತ್ರಾಸಿ -ಗಂಗೊಳ್ಳಿ ಮುಖ್ಯ ರಸ್ತೆಯ ಕೊಡಪಾಡಿಯ ಮಾರಿಕಾಂಬಾ ದೇವಸ್ಥಾನದ ಬಳಿ ನಡೆದಿದೆ. ಸಹ ಸವಾರ ಮೊಹಮ್ಮದ್ ಕೈಸ್ ಕಿದಿಯೂರು (17) ಸಾವನ್ನಪ್ಪಿದವರು. ಅವರು ಆಸಾಸ್ ಅವರ ಬೈಕ್ನಲ್ಲಿ ಸಂಚರಿಸುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದ ಪರಿಣಾಮ ಸಹ ಸವಾರ ಮೊಹಮ್ಮದ್ ಕೈಸ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಬೈಕ್ ಸವಾರ ಆನಾಸ್ ಸಹ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಬೋಳಂಬಳ್ಳಿಯ ಶ್ರೀ ಪದ್ಮಾವತಿ ದೇವಿ ಕ್ಷೇತ್ರದಲ್ಲಿ ಹುಂಬುಜ ಮಠದ ಪೀಠಾಧಿಪತಿ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ಮಹಾಸ್ವಾಮೀಜಿ ಅವರ ದಿವ್ಯ ಮಾರ್ಗದರ್ಶನದಲ್ಲಿ 27 ಅಡಿ ಎತ್ತರದ ಏಕಶಿಲಾ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಹಾಗೂ 21 ಅಡಿ ಎತ್ತರದ ಭಗವಾನ್ ಶ್ರೀ ರಾಮಚಂದ್ರ ದೇವರ ಪ್ರತಿಮೆ ಪ್ರತಿಷ್ಠಾಪಿಸಲಾಯಿತು. ಈ ಪುಣ್ಯ ಕಾರ್ಯದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಧರ್ಮರಾಜ್ ಜೈನ್ ಮತ್ತು ವನಿತಾ ಧರ್ಮರಾಜ್ ದಂಪತಿಗಳು ಅಲಂಕಾರಿಕ ಆರತಿ ಬೆಳಗುವ ಮೂಲಕ ಮುನ್ನುಡಿ ಹಾಕಿದರು. ಈ ವೇಳೆ ಗ್ರಾ.ಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಡಾ. ಆಕಾಶ್ರಾಜ್, ಮೂಡುಬಿದಿರೆಯ 18 ಬಸದಿಗಳ ಆಡಳಿತ ಮೊಕೇಸರ ಆದರ್ಶ್ ಎಂ., ಸಮುದಾಯದ ಪ್ರಮುಖರಾದ ಸುಭಾಶ್ ಜೈನ್ ಕುಂದಾಪುರ, ಪದ್ಮಪ್ರಸಾದ್ ಜೈನ್ ನಾಗರಾಜ್, ಡಾ. ಅಕ್ಷತಾ ಆದರ್ಶ್, ಎಂ.ಎನ್. ವಿಜಯೇಂದ್ರ ಮಳೂರು, ಪಾವನ ರಾಜ್, ಪಾರೀಷ್ ಮತ್ತು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಶ್ರೀ ಬಾಹುಬಲಿ ವಿಗ್ರಹವು ಉಡುಪಿ ಜಿಲ್ಲೆಯಲ್ಲಿನ ಎರಡನೇ ಬಾಹುಬಲಿ…
