Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದ 15ನೇ ಹಣಕಾಸು ಆಯೋಗ ನಿಗದಿಗೊಳಿಸಿದ ಅನುದಾನ ವೆಚ್ಚಕ್ಕೆ ವಿಧಿಸಿದ ನಿರ್ಬಂಧಗಳು ಗ್ರಾಮದ ಅಗತ್ಯಗಳಿಗೆ ವೆಚ್ಚ ಮಾಡಲು ತಡೆಯಾಗುವುದರಿಂದ ಅವುಗಳನ್ನು ಸಡಿಲಿಸಬೇಕು ಎಂದು ಶಿರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಅಳ್ವೆಗದ್ದೆ ಆಗ್ರಹಿಸಿದ್ದಾರೆ. ಇದು ಗ್ರಾಮ ಪಂಚಾಯಿತಿಗಳ ಜನಸಂಖ್ಯೆ ಆಧರಿಸಿ ನಿಗದಿಯಾಗುವ ದೊಡ್ಡ ಮೊತ್ತದ ಅನುದಾನ. ಈ ಬಾರಿಯ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಇದರ ಶೇ40 ಅನಿರ್ಬಂಧಿತ ಮತ್ತು ಶೇ 60 ನಿರ್ಬಂಧಿತ ಅನುದಾನ. ನಿರ್ಬಂಧಿತ ಅನುದಾನದ ಶೇ30 ಕುಡಿಯುವ ನೀರು, ಶೇ 30 ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆ ಹೊರತಾಗಿ ಅನ್ಯ ಉದ್ದೇಶಗಳಿಗೆ ವೆಚ್ಚ ಮಾಡುವಂತಿಲ್ಲ. ಶೇ 40ರ ಅನಿರ್ಬಂಧಿತ ಭಾಗವನ್ನು ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾದರೂ ಅದರಲ್ಲಿ ಶೇ 25 ಪರಿಶಿಷ್ಟ ಜಾತಿ, ಪಂಗಡದ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಬೇಕು. ರೂ 50 ಲಕ್ಷ ಅನುದಾನ ಪಡೆಯುವ ಗ್ರಾಮ ಪಂಚಾಯಿತಿ ರೂ 15ಲಕ್ಷವನ್ನು ಮಾತ್ರ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಕಾಡಿನತಾರು ಅವರು ಮುಖ್ಯಮಂತ್ರಿ ಚಿನ್ನದ ಪದಕದೊಂದಿಗೆ ಪಡೆದ 10,000 ರೂ. ಮೊತ್ತವನ್ನು ವಿಲ್ಸ್‌ನ್ ಡಿಸೀಸ್ ಖಾಯಿಲೆಯಿಂದ ಬಳಲುತ್ತಿರುವ ಕೋಟದ ಬಾಲಕಿಯ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಗೆ ಮಂಗಳವಾರ ಹಸ್ತಾಂತರಿದರು. ಈ ಸಂದರ್ಭ ಕೋಟ ಅಮೃತೇಶ್ವರಿ ದೇವಸ್ಥಾನದ ಮೆನೇಜರ್ ಗಣೇಶ್ ಹೊಳ್ಳ, ಮಗುವಿನ ಅಜ್ಜಿ, ಅರ್ಚಕರಾದ ಅಮೃತ್ ಜೋಗಿ, ಪಡುಕೆರೆ ಪೊಲೀಸ್ ಸಿಬ್ಬಂದಿ ಪ್ರಶಾಂತ್ ಉಪಸ್ಥಿತರಿದ್ದರು. ಬಾಲಕಿಯ ಚಿಕಿತ್ಸೆಗೆ ಬೇಕಿದೆ ನೆರವುಕೋಟ ಅಮೃತೇಶ್ವರಿ ದೇವಸ್ಥಾನದ ಸಮೀಪ ವಾಸಿಸುತ್ತಿರುವ ದಾಮೋದರ ಹಾಗೂ ದೀಕ್ಷಾ ದಂಪತಿಗಳ ಪುತ್ರಿ ಮಾನ್ಯ ಜೋಗಿ (೬) ವಿಲ್ಸ್‌ನ್ ಡಿಸೀಸ್‌ನಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಟರ್ ಇಂಟಿಗ್ರೆಟೆಡ್ ಲಿವರ್ ಕೇರ್ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿದಾಗ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಚಿಕಿತ್ಸೆಯ ಅಗತ್ಯವಿರುದಾಗಿ ತಿಳಿಸಿದ್ದಾರೆ. ಚಿಕಿತ್ಸೆಗೆ ಸುಮಾರು 15ರಿಂದ 20 ಲಕ್ಷ ರೂ. ಹಣದ ಅವಶ್ಯಕತೆಯಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ 15 ದಿನಗಳ ಒಳಗೆ ಭರಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ತೆರಳಿದ ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಆರ್ಡಿ ಗ್ರಾಮದ ಗಂಟುಬೀಳು ಎಂಬಲ್ಲಿ ಸೋಮವಾರ ನಡೆದಿದೆ. ಅಲ್ಬಾಡಿ ಗ್ರಾಮದ ನಿವಾಸಿ ಮೋಹನ ನಾಯ್ಕ್ (22) ಹಾಗೂ ಸುರೇಶ ನಾಯ್ಕ್ (19) ಮೃತ ದುರ್ದೈವಿಗಳು. ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ. ಕಾಳ ನಾಯ್ಕ್ ಅವರ ಪುತ್ರ ಮೋಹನ ನಾಯ್ಕ್ (22) ಹಾಗೂ ಮಹಾಬಲ ನಾಯ್ಕ್ ಅವರ ಪುತ್ರ ಸುರೇಶ (19) ಸಾವನ್ನಪ್ಪಿದ ದುರ್ದೈವಿಗಳು. ಆಗಿದ್ದೇನು?ಅಲ್ಬಾಡಿ ಗ್ರಾಮದ ನಿವಾಸಿಗಳಾದ ದಿ. ಕಾಳ ನಾಯ್ಕ್ ಅವರ ಪುತ್ರ ಮೋಹನ ನಾಯ್ಕ್ (22) ಹಾಗೂ ಮಹಾಬಲ ನಾಯ್ಕ್ ಅವರ ಪುತ್ರ ಸುರೇಶ (19) ಅವರೊಂದಿಗೆ ಗಾರೆ ಕೆಲಸಕ್ಕೆ ಆರ್ಡಿ ಗ್ರಾಮದ ಗಂಟುಬೀಳು ಎಂಬಲ್ಲಿರುವ ಮನೆಯೊಂದಕ್ಕೆ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕೆಲಸ ಮುಗಿಸಿ, ಸ್ನಾನಕ್ಕೆಂದು ಆ ಮನೆಯ ಸಮೀಪವೇ ಇದ್ದ ಹೊಳೆಗೆ ತೆರಳಿ ನೀರಿಗೆ ಇಳಿದ ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ. ಹೊಳೆ ಸುಮಾರು 15 ಅಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸದಸ್ಯತ್ವ ಅಭಿಯಾನವು ರಾಜ್ಯಾದ್ಯಂತ ‘ಒಗ್ಗಟ್ಟಿನಲ್ಲಿ ಬಲವರ್ಧನೆ, ಭಿನ್ನ ಧ್ವನಿಯ ರಕ್ಷಣೆ’ ಎಂಬ ಘೋಷಾ ವಾಕ್ಯದಡಿ ಪ್ರಾರಂಭವಾಗಿದ್ದು, ಇದರ ಭಾಗವಾಗಿ ಜಿಲ್ಲಾ ಸದಸ್ಯತ್ವ ಅಭಿಯಾನಕ್ಕೆ ಕುಂದಾಪುರದಲ್ಲಿ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲಾ ಮುಖಂಡರಾದ ನವಾಜ್ ಶೇಕ್ ಸದಸ್ಯತ್ವ ಕೂಪನ್ ವಿದ್ಯಾರ್ಥಿಗಳಿಗೆ ನೀಡುವ ಮುಖಾಂತರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಝೀಶಾನ್ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಯಡ್ತರೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಭಟ್ಕಳ ತಾಲೂಕಿನ ಜಾಲಿಯ ಮಂಜುನಾಥ ನಾಯ್ಕ್ (44) ದಾರುಣವಾಗಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಉಪ್ಪುಂದ ಕರ್ಕಿಕಳಿ ನಿವಾಸಿ ಕಿರಣ್ (21) ಗಂಭೀರ ಗಾಯಗೊಂಡಿದ್ದಾನೆ. ಘಟನೆಯ ವಿವರ:ಟೆಂಪೋ ಟ್ರ್ಯಾಕ್ಸ್ ಮೂಲಕ ಧರ್ಮಸ್ಥಳಕ್ಕೆ ತೆರಳಿ ಊರಿಗೆ ಹಿಂತಿರುಗುತ್ತಿದ್ದ ಭಟ್ಕಳ ಜಾಲಿಯ ತಂಡವೊಂದು ರಾಹುತನಕಟ್ಟೆ ಬಳಿ ವಾಹನ ನಿಲ್ಲಿಸಿದ್ದು, ಅವರಲ್ಲಿ ಮಂಜುನಾಥ್ ನಾಯ್ಕ್ ಎಂಬುವವರು ರಾಷ್ಟ್ರೀಯ ಹೆದ್ದಾರಿಯ ಎದುರು ಬದಿ ಇದ್ದ ಮೀನಿನ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಬುಲೆಟ್ ಬೈಕಿನಲ್ಲಿ ಬಂದ ಯುವಕ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಫಘಾತದ ರಭಸಕ್ಕೆ ರಸ್ತೆ ದಾಟುತ್ತಿದ್ದ ವ್ಯಕ್ತಿಯು ಬದಿಗೆ ಎಸೆಯಲ್ಪಟ್ಟು ಅಲ್ಲಿಯೇ ಮೃತಟ್ಟಿದ್ದಾರೆ. ಬುಲೆಟ್ ಬೈಕ್ ಸವಾರ ಡಿವೈಡರ್ ಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ. ಬೈಂದೂರು ಪೊಲೀಸ್ ಪಿಎಸೈ ಪವನ್ ನಾಯಕ್ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ಪರವಾಗಿ ಶ್ರೀ ಮಹಾಕಾಳಿ ದೇವಳದ ಅಧ್ಯಕ್ಷರಾದ ಜಯಾನಂದ ಖಾರ್ವಿ ಮುಂದಾಳತ್ವದಲ್ಲಿ ಇಲ್ಲಿನ ಕೋಡಿ ಕಿನಾರೆಯಲ್ಲಿ ಸಾಂಪ್ರದಾಯಿಕ ಸಮುದ್ರ ಪೂಜೆ ಇತ್ತೀಚೆಗೆ ಜರುಗಿತು. ದೇವಳದ ಪ್ರದಾನ ಅರ್ಚಕರಾದ ಸುಮಂತ್ ಭಟ್ ಪೋರೋಹಿತ್ಯದಲ್ಲಿ ಜರುಗಿದ ಧಾರ್ಮಿಕ ಪೂಜಾ ಕಾರ್ಯದಲ್ಲಿ ಉಪಾಧ್ಯಕ್ಷರಾದ ಪಿ.ಗಣಪತಿ ಖಾರ್ವಿ ಮದ್ದುಗುಡ್ಡೆ, ಮುಕ್ತೇಸರಾದ ಆನಂದ ನಾಯ್ಕ್ , ಸಲಹೆಗಾರರಾದ ಪ್ರಕಾಶ್.ಆರ್ ಖಾರ್ವಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ನಾಮದೇವ ಖಾರ್ವಿ ಸಹಿತ ಆಡಳಿತ ಮಂಡಳಿಯ ಸದಸ್ಯರು, ಸಾರ್ವಜನಿಕರು ಹಾಜರಿದ್ದರು. ಕಾರ್ಯಕ್ರಮದ ಸಂಯೋಜನೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ಸುನಿಲ್ ಖಾರ್ವಿ ತಲ್ಲೂರು ನೆರವೇರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತಿಯನ್ನು ಆಚರಿಸಲಾಯಿತು. ಆಡಳಿತ ಮಂಡಳಿಯ ಸದಸ್ಯರಾದ ಆರ್. ಕೆ. ಬಿಲ್ಲವ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. ಮುಖ್ಯ ಶಿಕ್ಷಕರಾದ ರವಿದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಇವರು ಜಗತ್ತಿನ ಶ್ರೇಷ್ಠ ಚಿಂತಕರಾಗಿದ್ದರು. ಮಾನವ ಜನಾಂಗಕ್ಕೆ ಸಾರ್ವಕಾಲಿಕ ಸತ್ಯವನ್ನು ಸಾರಿದ ವಿಶ್ವ ಮಾನವರಾಗಿದ್ದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ನಾಖುದಾ ವೆಲ್ಫೇರ್ ಅಸೋಸಿಯೇಷನ್ ಶಿರೂರು ಇವರ ಸಹಯೋಗದಲ್ಲಿ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಇಲ್ಲಿನ ಶಿರೂರಿನ ಮದ್ರಸಾ ಮಿಫ್ತಾ ಉಲ್ ಉಲೂಮ್ ಸಭಾಂಗಣದಲ್ಲಿ ನಡೆಯಿತು. ಬೈಂದೂರು ತಾಲೂಕಿನ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ 19 ವಿಧ್ಯಾರ್ಥಿಗಳನ್ನು ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿಸಲ್ಪಟ್ಟ ಪಿಯುಸಿ ವಿಧ್ಯಾರ್ಥಿಗಳು:ಮುಹಮ್ಮದ್ ಸಮಾನ್ ಶೇಖ್ಜಿ, ಶಿರೂರು (98%) ಮುಹಮ್ಮದ್ ಉವೇಝ್ ಕೆ. ಹಳಗೇರಿ (97%) ಹಮ್ದಾನ್ ಕಾರಾನಿ ಶಿರೂರು (97%) ಅಲ್ ರಿಫಾ (96%) ಮುಹಮ್ಮದ್ ಸುಲೈಮ್ ತಾರಾಪತಿ, ಬೈಂದೂರು (94.5%) ಬಿ.ಬಿ. ನಮೀರಾ, ಶಿರೂರು (94%) ಕಾಪ್ಸಿ ಮುಹಮ್ಮದ್ ಇರ್ಬಾಝ್, ಶಿರೂರು (93%) ಮಫೂಝಾ, (90.3%) ಗಂಗೊಳ್ಳಿ ಮುಹಮ್ಮದ್ ಫಾಹಿಕ್ (90%) ಶಮೀಮ್ ಬಾನು (89.3%) ಸನ್ಮಾನಿಸಲ್ಪಟ್ಟ ಎಸ್‌ಎಸ್‌ಎಲ್‌ಸಿ ವಿಧ್ಯಾರ್ಥಿಗಳು:ರಮೀನ್ ಕಾರಾನಿ, ಶಿರೂರು (98.2%) ನಮೀರಾ ಸಾನಿಯಾ, (96.2%) ಚೌ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ ಹಾಗೂ ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಾ ಕಾರ್ಯಕರ್ತರಿಗೆ ಕ್ಷಯ ರೋಗದ ಬಗ್ಗೆ ತರಬೇತಿ ಕಾರ್ಯಕ್ರಮ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತಾ ತರಬೇತಿಯನ್ನು ನೀಡಿದರು. ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕನ್ನು ವಿತರಿಸಲಾಯಿತು. ರೋಟರಿ ಕ್ಲಬ್‌ನ ಸದಸ್ಯರಾದ ಜನಾರ್ಧನ ಪೂಜಾರಿ, ಬಿ. ಲಕ್ಷ್ಮೀಕಾಂತ ಮಡಿವಾಳ, ಪ್ರೇಮಾ ಸಿ. ಪೂಜಾರಿ, ಚಂದ್ರಕಲಾ, ಗೋಪಾಲ ಪೂಜಾರಿ, ಪ್ರೀತಿ ಫೆರ್ನಾಂಡಿಸ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ.ಜಿ. ಸ್ವಾಗತಿಸಿದರು. ವಲಯ ಸೇನಾನಿ ಕೆ.ರಾಮನಾಥ ನಾಯಕ್ ಪ್ರಾಸ್ತಾವಿಕ ಮಾತನಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಶಾಲಾ ಪೂರ್ವ ವಿದ್ಯಾರ್ಥಿ ವಂಡ್ಸೆ ಕಟ್ಟೆಮನೆ ಸುಧಾಕರ ಶೆಟ್ಟಿಯವರ ಕೊಡುಗೆಯಾಗಿ ಅಂದಾಜು ರೂ.8 ಲಕ್ಷ ಮೊತ್ತದಲ್ಲಿ 5 ಕೆವಿ ಸಾಮರ್ಥ್ಯದ ಸೋಲಾರ್ ಅಳವಡಿಕೆಯಾಗಿದ್ದು, ಶಾಲಾ ಬಳಕೆಗೆ ಹಸ್ತಾಂತರಿಸಲಾಯಿತು. ಶಾಲಾ ಬೇಡಿಕೆಗಳಲ್ಲಿ ಒಂದಾದ ಸೋಲಾರ್ ವ್ಯವಸ್ಥೆಯು ಅತೀ ಅಗತ್ಯವಾಗಿದ್ದು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಉಪಯುಕ್ತವಾಗಿದೆ. ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್, ಪ್ರಾಜೆಕ್ಟರ್ ಇದ್ದು ಸೋಲಾರ್ ಅಳವಡಿಕೆ ಹೆಚ್ಚು ಅನುಕೂಲವಾಗಿದೆ. ಶಾಲೆಯ ಬಳಕೆಯಾಗಿ ಉಳಿಕೆ ವಿದ್ಯುತ್‌ನ್ನು ಮೆಸ್ಕಾಂ ನೀಡುವ ಯೋಜನೆಯೂ ಕೂಡಾ ಇದರೊಂದಿಗೆ ಜೋಡಿಸಿಕೊಳ್ಳಲಾಗಿದೆ. ಶಾಲೆಗೆ ಉಪಯೂಕ್ತವಾದ ಸೌರ ವಿದ್ಯುತ್ ಘಟಕವನ್ನು ಒದಗಿಸಿದ ದಾನಿಗಳಾದ ವಂಡ್ಸೆ ಕಟ್ಟೆಮನೆ ಸುಧಾಕರ್ ಶೆಟ್ಟಿಯವರನ್ನು ಶಾಲಾ ಮುಖ್ಯೋಪಾಧ್ಯಾಯರಾದ ಚಂದ್ರ ನಾಯ್ಕ, ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ಮಂಜರು, ಕಾರ್ಯದರ್ಶಿ ಉದಯಕುಮಾರ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಎ.ಜಿ ಕೃತಜ್ಞತೆ ಸಲ್ಲಿಸಿದರು. ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆಯಲ್ಲಿ 2016ರಲ್ಲಿ 89 ವಿದ್ಯಾರ್ಥಿಗಳಿದ್ದು…

Read More