ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಶ್ರೀಮಠ ಸಾಣೆಹಳ್ಳಿ ಇವರ ಸಹಯೋಗದಲ್ಲಿ ಮತ್ತೆ ಕಲ್ಯಾಣಶೀರ್ಷಿಕೆಯಲ್ಲಿ ವಚನಕಾರರ ಬದುಕು-ಬರಹದ ಕುರಿತು ಅರಿವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಗಳಾಗಿ ಆಗಮಿಸಿದ್ದ ನಾವುಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ ದೇವಾಡಿಗರವರು ವಚನಕಾಲವು ೯೦೦ ವರುಷಗಳ ಹಿಂದೆ ನಡೆದ ವಚನಗಳ ಚಳುವಳಿ. ಈ ನಾಡಿನ ಇತಿಹಾಸದಲ್ಲಿ ಬಹಳ ಮಹತ್ವವಾದುದು. ಜೇಡ, ಬೇಡ, ಮಡಿವಾಳ, ಮಾದರ, ಅಂಬಿಗ ಹೀಗೆ ಬಹುರೂಪಿ ನೆಲೆಯಲ್ಲಿದ್ದ ದುಡಿಮೆಗಾರರು ಶಿವಭಕ್ತಿ ಎಂಬ ಮಹಾಮನೆಯೊಳಗೆ ಒಂದಾಗಿ ತಮ್ಮ ಚಿಂತನೆ ಮತ್ತು ಅನುಭವಗಳಿಗೆ ಅಭಿವ್ಯಕ್ತಿಸಿದ ಕಾಲವದು. ದಾಸೋಹ, ದಯೇಯ ಧರ್ಮ ಮುಂತಾದ ಜೀವಪರ ಚಿಂತನೆಗಳೇ ಅವರ ಪರಮ ಧ್ಯೇಯವಾಗಿತ್ತು. ಅದೊಂದು ಸಂಘಟನಾತ್ಮಕ ಪರಿಸರವಾಗಿದ್ದು, ಸಾಮಾಜಿಕ ವ್ಯವಸ್ಥೆ, ಧರ್ಮ, ದೇವರುಗಳ ಕುರಿತು ಅವರು ನಡೆಸಿದ ಸಂವಾದ, ಮರುಶೊಧನೆಗಳು ಇಂದಿಗೂ ಪ್ರಸ್ತುತವೆನಿಸಿದೆ. ತಮ್ಮ ಬದುಕಿನ ಅನುಭವಗಳ ಮಖೇನ ಉದ್ದಕ್ಕೂ ಸಾಮಾಜಿಕ ಸಂಗತಿಗಳಿಗೆ ಮುಖಾಮುಖಿಯಾಗುತ್ತಾ ಸಾಗಿರುತ್ತಾರೆ. ಅವರಲ್ಲಿ ನುಡಿ ಮತ್ತು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ, ಜು. 24: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಮುಂಗಾರು ಪತ್ರಿಕೆಯ ಸಂಪಾದಕ ದಿ| ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ ‘ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಜು.೨೪ ರಂದು ರಘುರಾಮ ಶೆಟ್ಟರ ವಡ್ಡರ್ಸೆಯ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ಅತಿಥಿಗಳು ಜತೆಯಾಗಿ ಆಮಂತ್ರಣ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿ ಉಡುಪಿ ಜಿಲ್ಲಾ ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಮಾತನಾಡಿ, ರಘುರಾಮ ಶೆಟ್ಟರ ಹೆಸರಿನಲ್ಲಿ ಅದ್ಬುತವಾದ ಶಕ್ತಿ ಇದೆ. ಅವರ ಹೆಸರನ್ನು ಉಳಿಸಿ-ಬೆಳೆಸುವ ಸಲುವಾಗಿ ಬ್ರಹ್ಮಾವರ ಪತ್ರಕರ್ತರ ಸಂಘ ನಡೆಸುತ್ತಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ಸಾಮಾಜಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಮಾತನಾಡಿ, ಇಂದಿನ ಪ್ರತಿಕೋದ್ಯಮ ಕ್ಷೇತ್ರಕ್ಕೆ ವಡ್ಡರ್ಸೆಯವರ ಚಿಂತನೆಗಳನ್ನು ಅತೀ ಅಗತ್ಯ .ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಆ.೪ರಂದು ಬ್ರಹ್ಮಾವರ ಬಂಟರಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ…
ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪ್ರ ಕನ್ನಡದ್ ತಾಕತ್ತೇ ಹಾಂಗ್ ಕಾಣಿ. ಅದ್ರ ಹೆಸ್ರಂಗ್ ಎಂತ ಮಾಡುಕ್ ಹ್ವಾರೂ ಸುದ್ದಿ ಆತ್ತ್. ಅಂತದ್ರಗೆ ನಮ್ ಯುವಕ್ರೆಲ್ಲಾ ಸೇರ್ಕಂಡ್ ನಮ್ ಕುಂದಾಪ್ರ ಕನ್ನಡಕ್ಕೂ ಒಂದು ದಿನು ಇಲ್ರಿ, ಕುಂದಾಪ್ರ ಭಾಷಿ ಮಾತಾಡ್ವರ್ ಯಾರ್ ಯಾರ್ ಎಲ್ಲೆಲ್ಲಿದ್ರೋ ಅಲ್ಲಲ್ಲೇ ಕುಂದಾಪ್ರ ಕನ್ನಡದ್ ಸಲುವಾಯಿ ಒಂಚೂರ್ ಆರೂ ಸಮಯ್ ಕೊಡ್ಲಿ ಅಂದೇಳಿ ಆಟಿ ಅಮಾಸಿ ದಿನವೇ ’ವಿಶ್ವ ಕುಂದಾಪ್ರ ಕನ್ನಡ ದಿನ’ಅಂದೇಳಿ ಮಾಡುಕ್ ಹೊರ್ಟಿರ್. ನಮ್ ಕುಂದಾಪ್ರದರ್ ಬಗ್ಗೆ ಕೇಣ್ಕಾ? ಸು ಅಂದ್ರೆ ಸುಕ್ಕಿನುಂಡಿ ಅಂತ್ರ್. ಅಂತದ್ರಗ್ ಕುಂದಾಪ್ರ ಕನ್ನಡ ದಿನು ಅಂದಂದೆ ಸೈ, ಬ್ರಹ್ಮಾವರದಿಂದ್ ಬೈಂದೂರು ಶಿರೂರ್ ತನಕ್ ಎಲ್ಲಾ ಕಡೆ ಕಾರ್ಯಕ್ರಮ ಮಾಡುಕ್ ತಯಾರಿ ಮಾಡ್ಕಂತಿದ್. ಸೋಶಿಯಲ್ ಮೀಡಿಯಾದಗಂತೂ ಭಾರಿ ಸದ್ದ್ ಮಾಡ್ತಿತ್. ವಿಶ್ವ ಕುಂದಾಪ್ರ ಕನ್ನಡ ದಿನ: ಕುಂದಾಪ್ರ ಕನ್ನಡ ಭಾಷೆಗೆ ತನ್ನದೇ ಆದ ಹಿರಿಮೆ-ಗರಿಮೆ ಇದೆ. ಕನ್ನಡ ಭಾಷೆಯ ಅತ್ಯಂತ ಸರಳ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾದಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಮತ್ತು ಅವರ ಪಟ್ಟ ಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಬದ್ರಿನಾಥದ ಶ್ರೀ ಬದ್ರಿನಾಥ ದೇವಾಲಯಕ್ಕೆ ಬುಧವಾರ ಸಂಜೆ ಭೇಟಿ ನೀಡಿದರು. ದೇವಾಲಯಕ್ಕೆ ಭೇಟಿ ನೀಡಿದ ಗುರುವರ್ಯರು ಶ್ರೀದೇವರ ದರ್ಶನ ಪಡೆದು ದೇವಾಲಯದ ಪರಿಸರವನ್ನು ವೀಕ್ಷಿಸಿದರು. ಬಳಿಕ ಅಲಕಾನಂದ ಹಾಗೂ ಬ್ರಹ್ಮಕಪಾಲ ಪ್ರದೇಶಕ್ಕೆ ಭೇಟಿ ನೀಡಿದರು. ಹನುಮಂತ ಪುತ್ತು ಪೈ ಭಟ್ಕಳ, ಯು.ಗಣೇಶ ಮಲ್ಯ ದೆಹಲಿ, ಎಸ್.ಪ್ರಭಾಕರ ಕಾಮತ್ ಮಂಗಳೂರು, ಜಿ.ಎಸ್.ಕಾಮತ್ ಕುಮಟಾ, ಮಹೇಶ ಎಸ್.ನಾಯಕ್ ಯಲ್ಲಾಪುರ, ಡಾ.ಕಾಶೀನಾಥ ಪೈ ಗಂಗೊಳ್ಳಿ, ಯೋಗೇಶ್ ಜಿ.ಕಾಮತ್ ಕುಮಟಾ, ನಾರಾಯಣ ಪೈ ಮತ್ತಿತರರು ಶ್ರೀಗಳೊಂದಿಗೆ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತಿಚಿಗೆ ರಚನೆಗೊಂಡ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 1982-90ರ ಅವಧಿಯಲ್ಲಿ ಸೇವೆಗೈದ ಉಪನ್ಯಾಸಕರಿಗಳಿಗೆ ಗುರುವಂದನೆ ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣಚಂದ್ರ ಶೆಟ್ಟಿ ಮಾತನಾಡಿ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿ ಸಂಘವನ್ನು ಸೇರ್ಪಡೆಗೊಳ್ಳುವಂತೆ ಕರೆ ನೀಡಿ, ಹಳೆ ವಿದ್ಯಾರ್ಥಿಗಳ ಪುನರ್ ಮಿಲನದಿಂದ ಸಾಮಾಜಿಕವಾಗಿ, ವ್ಯಾವಹಾರಿಕವಾಗಿ ಮತ್ತಷ್ಟು ಕೆಲಸಗಳನ್ನು ಮಾಡಲು ಸಾಧ್ಯವಿದೆ ಎಂದರು. ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿ. ಎ. ಮೇಳಿ ಮಾತನಾಡಿ ಶುಭಹಾರೈಸಿದರು. ನಿವೃತ್ತ ಉಪನ್ಯಾಸಕರಾದ ಎಮ್. ಎನ್. ಹೆಗ್ಡೆ, ಬಿ. ಜಗದೀಶ್ ರಾವ್, ಮೊಹಮ್ಮದ್ ಹಬೀಬ್, ಡಾ. ಶ್ಯಾಮ್ ಸುಂದರ್, ದಯಾಕರ್ ಮೊದಲಾದವರನ್ನು ಸನ್ಮಾನಿಸಲಾಯಿತು. ಸಿಎ ರಾಮಚಂದ್ರ ಪ್ರಭು, ಮುತ್ತಯ್ಯ ಎಸ್., ಮೋಹನ ಪೂಜಾರಿ ಉಪ್ಪುಂದ ಮೊದಲಾದವರು ಇದ್ದರು. ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರ ರಮೇಶ್ ಭಟ್ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಲ್. ಹರೀಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟದಂತಹ ಗ್ರಾಮೀಣ ಪರಿಸರದಲ್ಲಿ ನೆನಪು ಮೂವೀಸ್‌ನಂತಹ ಸಂಸ್ಥೆ ಸ್ಥಾಪಿಸಿ ಆ ಮೂಲಕ ಕಲಾತ್ಮಕ ಚಲನಚಿತ್ರ ನಿರ್ಮಿಸಿದ ಸಾಧನೆ ಅನನ್ಯ. ಇದರ ಹಿನ್ನೆಲೆ ಶಕ್ತಿಯಾಗಿರುವ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಸಾಹಿತಿ ಶ್ರೀ ಎಮ್ ರಾಮದೇವ ಐತಾಳ್ ನುಡಿದರು. ಅವರು ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ನೆನಪು ಮೂವೀಸ್ ಕೋಟದ ಚೊಚ್ಚಲ ಕಾಣಿಕೆ ಸುಗಂಧಿ ಕನ್ನಡ ಚಲನಚಿತ್ರದ ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂತರಾಷ್ಟ್ರೀಯ ಖ್ಯಾತ ನಿರ್ದೇಶಕರಾದ ಶ್ರೀ ಜಿ. ಮೂರ್ತಿ, ಇದೊಂದು ಐತಿಹಾಸಿಕ ದಾಖಲೆಯಾಗುವ ಚಲನಚಿತ್ರ, ಕಾರಂತರು ನಮ್ಮ ಜೊತೆ ಸದಾ ಇದ್ದಾರೆ ಎಂದು ಸಾರುವ ಚಲನಚಿತ್ರವಾಗಿದ್ದು, ಮುಖ್ಯ ಭೂಮಿಕೆಯಲ್ಲಿ ಸಂಜೀವ ಸುವರ್ಣ, ವಿನಯ ಪ್ರಸಾದ್, ವೈಷ್ಣವಿ ಅಡಿಗ ಅಭಿನಯಿಸಿದ್ದು ಪಿ.ಕೆ.ದಾಸ್, ಪ್ರವೀಣ್ ಗೋಡ್ಖಿಂಡಿ, ಸಂಜೀವ ರೆಡ್ಡಿ, ಗೋಪಿ, ಜಾನ್ಸನ್, ಮೊದಲಾದವರು ದುಡಿದಿದ್ದು ಇದೊಂದು ಹೊಸ ಆಯಾಮ ಸೃಷ್ಠಿಸಲಿದೆ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಜು.24: ಜಿಲ್ಲಾದ್ಯಂತ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಘೋಷಿಸಿದ್ದ ರಜೆ ಜುಲೈ 24ರ ಬುಧವಾರವೂ ಮುಂದುವರಿಯಲಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಅವರು ಜು.23ರಂದು ರಜೆ ಘೋಷಿಸಿದ್ದರು. ಮುಂದಿನ 24 ಗಂಟೆಗಳಲ್ಲಿ ಸುಮಾರು 205ಮಿ.ಮಿ ಮಳೆಯಾಗುವ ಹಾಗೂ ಭಾರಿ ಗಾಳಿ ಬೀಸುವ ಸಂಭವ ಇರುವ ಬಗ್ಗೆ ಮನ್ಸೂಚನೆಯನ್ನು ಹವಮಾನ ಇಲಾಖೆ ನೀಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರು ರಜೆ ನಿಧರ್ಾರವನ್ನು ಮುಂದುವರಿಸಿದ್ದಾರೆ. ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ/ಖಾಸಗಿ ಪ್ರಾಥಮಿಕ ಶಾಲೆ, ಪೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ರಜೆ ಇರಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಜಗತ್ತಿನಲ್ಲಿ ಪ್ರತಿಯೊಬ್ಬರೂ ಹುಟ್ಟಿನಿಂದಲೇ ಗ್ರಾಹಕರು. ಆದ್ದರಿಂದ ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವ ಮುನ್ನ ಸೂಕ್ಮವಾಗಿ ಪರಿಶೀಲಿಸಬೇಕು. ಗ್ರಾಹಕರ ಹಕ್ಕು ಮತ್ತು ಬಾಧ್ಯತೆಗಳನ್ನು ಅರಿತುಕೊಂಡು ವ್ಯವಹರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಒಕ್ಕೂಟದ ಅಧ್ಯಕ್ಷರಾದ ಎಮ್.ಜೆ ಸಾಲಿಯಾನ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಪದವಿ ಅರ್ಥಶಾಸ್ತ್ರ ಹಾಗೂ ವಾಣಿಜ್ಯ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ’ಗ್ರಾಹಕರ ಶಿಕ್ಷಣದಲ್ಲಿ ಸರ್ಟಿಫಿಕೇಟ್ ಕೋರ್ಸ್’ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಿಗೂ ಪ್ರಾಧಾನ್ಯತೆ ನೀಡಬೇಕಾಗುತ್ತದೆ. ಅವುಗಳಲ್ಲೊಂದಾದ ಗ್ರಾಹಕ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಅತಿ ಕಡಿಮೆ. ಈ ನಿಟ್ಟಿನಲ್ಲಿ ಗ್ರಾಹಕ ಶಿಕ್ಷಣ ಜನಸಾಮಾನ್ಯರಿಗೆ ತಲುಪುವಂತೆ ಮಾಡಲು ಪ್ರಯತ್ನಿಸುವುದು ಈ ಕಾಲದ ಬೇಡಿಕೆಯಾಗಿದೆ. ಆ ಹಿನ್ನಲೆಯಲ್ಲಿ ಗ್ರಾಹಕರ ಶಿಕ್ಷಣದಲ್ಲಿ ಸರ್ಟಿಫಿಕೇಟ್ ಕೋರ್ಸ್, ಗ್ರಾಹಕರ ಶಿಕ್ಷಣದ ಜೊತೆಗೆ ಜೀವನ ಮೌಲ್ಯ, ಸಮಯದ ಸದುಪಯೋಗ, ಶಿಸ್ತುನ್ನು ತಿಳಿಸುತ್ತದೆ ಎಂದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಿರೀಶ್ ಕಾರ್ನಾಡ್ ಅವರು ಕಲೆ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ತೊಡಗಿಕೊಂಡದ್ದು ಮಾತ್ರವಲ್ಲದೇ ಅದಕ್ಕಾಗಿಯೇ ತಮ್ಮ ಬದುಕನ್ನು ಮೀಸಲಿರಿಸಿದ್ದರು. ದೇಶ ಭಾಷೆಯ ಬಗೆಗೆ ಅವರಲ್ಲಿ ಅಪಾರ ಒಲವಿತ್ತು. ಶೋಷಣೆಯಿಲ್ಲದ ಸೌಹಾರ್ದಯುತ ಸಮಾಜದ ನಿರ್ಮಾಣ ಅವರ ಗುರಿಯಾಗಿತ್ತು. ಕಾರ್ನಾಡರ ಕನಸುಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಸಮುದಾಯದ ರಾಜ್ಯ ಉಪಾಧ್ಯಕ್ಷ ಬಿ. ಎ. ಇಳಿಗೇರ ಹೇಳಿದರು. ಅವರು ಭಾನುವಾರ ಸಮುದಾಯ ಕುಂದಾಪುರ ಸಂಘಟನೆಯು ಜೆಸಿಐ ಕುಂದಾಪುರ ಹಾಗೂ ಕಸಾಪ ಕೋಟೇಶ್ವರ ಹೋಬಳಿ ಸಹಯೋಗದೊಂದಿಗೆ ಇಲ್ಲಿನ ಜೆಸಿಐ ಭವನದಲ್ಲಿ ಆಯೋಜಿಸಿದ ಕಥಾ ಓದು – 25 ಹಾಗೂ ಕಾರ್ನಾಡರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾರ್ನಾಡರು ಟೀಕೆಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ಶೊಷಿತರ ಪರ ಸದಾ ನಿಲ್ಲುತ್ತಿದ್ದರು. ಸಾರ್ವಭೌಮತೆಗೆ ವಿರುದ್ಧವಾಗಿ ಕಂಡದ್ದನ್ನು ಪ್ರತಿಭಟಿಸುತ್ತಿದ್ದರು. ಬದುಕಿನಲ್ಲಿ ಅಂದುಕೊಂಡಂತೆ ನಡೆದರು. ಬದುಕು ಮುಗಿಸಿದ ಮೇಲೆಯೂ ಅದೇ ಸರಳತೆ ಮೆರೆದರು. ಅವರದ್ದೊಂದು ಮೇರು ವ್ಯಕ್ತಿತ್ವ ಎಂದು ಬಣ್ಣಿಸಿದರು. ಜೆಸಿಐ ಕುಂದಾಪುರದ ಅಧ್ಯಕ್ಷ ಅಶೋಕ್ ತೆಕ್ಕಟ್ಟೆ, ಸಮುದಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದುಡಿಮೆಯ ಒಂದು ಭಾಗವನ್ನಾದರೂ ಸಮಾಜಕ್ಕೆ ಮೀಸಲಿರಿಸಬೇಕು ಎನ್ನುವ ಮನೋಭಾವ ಹೆಚ್ಚಬೇಕು. ಹಾಗಿದ್ದಾಗಲೇ ಸಮಾಜ ಉದ್ದಾರವಾಗುತ್ತದೆ, ದಾನ ಮಾಡಿವುದರಿಂದ ಮನಸ್ಸಿಗೂ ಸಂತೋಷವುಂಟಾವುತ್ತದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು. ಅವರು ಭಾನುವಾರ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಇ. ಬೈಂದೂರು ಇದರ ೭ನೇ ವರ್ಷದ ಟ್ರಸ್ಟ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಟ್ರಸ್ಟ್ ಮೂಲಕ ಮನೆ, ವಿದ್ಯುತ್, ವಿದ್ಯಾಭ್ಯಾಸಕ್ಕೆ ಸಹಕಾರ ಮುಂತಾದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡು ರಾಮಕ್ಷತ್ರಿಯ ಸಮುದಾಯದ ಜನರ ಹೇಳಿಗೆಗೆ ನೆರವಾಗುತ್ತಿರುವುದು ಸಂತೋಷದ ಸಂಗತಿ ಎಂದು ಶ್ಲಾಘೀಸಿದರು. ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ದಿನೇಶ್ ಪ್ರಿಂಟರ‍್ಸ್‌ನ ದಿನೇಶ್ ಕುಂದಾಪುರ, ಮಲ್ಲಿಕ್ ಇಂಜಿನಿಯರಿಂಗ್ ಇಂಡಿಯಾ ಪ್ರೈ. ಲಿನ ಕೆ. ಲಕ್ಷ್ಮೀನಾರಾಯಣ, ಕದಂಬ ಗ್ರೂಫ್ ಆಫ್ ಹೋಟೆಲ್ಸ್‌ನ ದಿನೇಶ್ ನೆರಂಬಳ್ಳಿ, ಶ್ರೀ ರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ. ಚಂದ್ರಶೇಖರ್, ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ…
