ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮೂಡ್ಲಕಟ್ಟೆ ಇಂಜಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜುನಾಥ, ಗುರುಚರಣ್, ಸಂದೇಶ ಹೆಗ್ಡೆ ಮತ್ತು ಶ್ವೇತಾ ರವರು ವಿಭಾಗದ ಮುಖ್ಯಸ್ಥ ಪ್ರೋಫೆಸರ್ ಮೆಲ್ವಿನ್ ಡಿ’ಸೋಜ್‌ರವರ ಮಾರ್ಗದರ್ಶನದಲ್ಲಿ ಅಗ್ರಿಕಲ್ಚರ್ ಡಾಕ್ಟರ್ ಎನ್ನುವ ರೊಬೊಟ್ ತಯಾರಿಸಿದ್ದಾರೆ. ಅಗ್ರಿಕಲ್ಚರ್ ಡಾಕ್ಟರ್ ರೊಬೊಟ್ ಸ್ವಯಂಚಾಲಿತವಾಗಿದ್ದು, ಹೊಲದಲ್ಲಿರುವ ಪೈರಿನ ರೋಗ ರುಜಿನಗಳನ್ನು ಪತ್ತೆಹಚ್ಚಿ ಅದಕ್ಕೆ ಬೇಕಾಗುವ ಕ್ರಿಮಿನಾಶಕ ಮತ್ತುಇತರೆ ಔಷಧಗಳನ್ನು ಸಿಂಪಡಿಸುತ್ತದೆ. ಯಾವುದೇ ಮಾನವನ ಸಹಾಯವಿಲ್ಲದೆ ಕಾರ್ಯನಿರ್ವಹಿಸಲಿದ್ದು, ಅನೇಕ ಉಪಯೋಗಕಾರಿ ಲಕ್ಷಣಗಳನ್ನು ಹೊಂದಿದೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ನೀರಿನಾಂಶವನ್ನು ಕೂಡ ಪತ್ತೆ ಹಚ್ಚುವ ಮಾಹಿತಿಯನ್ನು ನೀಡುತ್ತದೆ. ವೈದ್ಯನ ತರಹ ಕೆಲಸಮಾಡಲಿದ್ದು, ರೈತನು ತಮ್ಮ ಬೆಳೆಗಳಲ್ಲಿ ಕಂಡುಬರುವ ರೋಗಗಳನ್ನು ನಿವಾರಣೆ ಹೇಗೆ ಮಾಡುವುದು ಎಂಬ ವ್ಯಥೆಯನ್ನು ದೂರ ಮಾಡಲಿದೆ. ಈ ರೊಬೊಟ್ ಕಾರ್ಯನಿರ್ವಹಿಸಲು ಬೇಕಾಗುವ ವಿದ್ಯುತ್‌ನ್ನು ಸೌರಶಕ್ತಿಯ ಮೂಲಗಳಿಂದ ಪಡೆಯವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ರೊಬೊಟ್ ಮೇಲೆ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಪ್ರಬಂಧ ಮಂಡಿಸಿದ್ದು, ಬಹುಮಾನಗಳು ಬಂದಿರುತ್ತದೆ. ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: 2019ರ ಪತ್ರಿಕಾ ದಿನದ ಗೌರವವನ್ನು ಹಿರಿಯ ಪತ್ರಿಕೋದ್ಯಮಿ, ಉದಯವಾಣಿ ಸಮೂಹದ ಟಿ. ಸತೀಶ.ಯು.ಪೈ ಅವರಿಗೆ ನೀಡಲಾಗುತ್ತಿದ್ದು ಬೆಂಗಳೂರಿನ ಪತ್ರಕರ್ತರ ವೇದಿಕೆ(ರಿ) ಯ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದನ್ವಯ ಗೌರವಕ್ಕೆ ಪಾತ್ರವಾಗುವ 12 ನೇ ಹಿರಿಯರು ಇವರಾಗಿದ್ದಾರೆ ಎಂದು ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ಸುಧೀರ್ಘ ಕಾಲ ಉದಯವಾಣಿ ಸಮೂಹ ಸಂಸ್ಥೆಗಳ ಮೂಲಕ ಪತ್ರಿಕೋದ್ಯಮವನ್ನು ಸಮರ್ಥವಾಗಿ ಮುನ್ನಡೆಸಿದ ಅವರಿಗೆ ಉದಯವಾಣಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಗೌರವವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಎಂ.ವಿ ಕಾಮತ್, ಅಂಬಾತನಯ ಮುದ್ರಾಡಿ, ಬಿ.ಸಿ ರಾವ್ ಶಿವಪುರ, ಕು.ಗೋ, ಬಿ.ಎ. ಸನದಿ, ರಾಘವ ನಂಬಿಯಾರ್, ಎ.ಎಸ್.ಎನ್ ಹೆಬ್ಬಾರ್, ವಿದ್ವಾನ್ ಬಿ.ಚಂದ್ರಯ್ಯ, ಉಡುಪಿ ವಾಸುದೇವ ಭಟ್, ದಾಮೋದರ ಐತಾಳ್ ಮತ್ತು ಕಾಸರಗೋಡಿನ ಮಲಾರ್ ಜಯರಾಮ ರೈ ಅವರಿಗೆ ಈ ಗೌರವವನ್ನು ಸಮರ್ಪಿಸಲಾಗಿತ್ತು. ಮಣಿಪಾಲದ ಅನಂತ ನಗರದ ಅವರ ನಿವಾಸದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಕೆ.ದಿನಕರ ಶೆಟ್ಟಿ ಪ್ರಚಂಡ ಬಹುಮತದಿಂದ ಆಯ್ಕೆಯಾದರು. ಜೂ.27ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಿತು. ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸುತ್ತಿದ್ದ ಕೆ. ದಿನಕರ ಶೆಟ್ಟಿ ಅವರು ಇದೀಗ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಈ ಹಿಂದೆಯೂ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೋಶಾಧಿಕಾರಿಯಾಗಿ ತೆರಿಗೆ ಇಲಾಖೆಯ ಸಂಜಯ ನಾಯಕ್ ಆಯ್ಕೆಯಾದರು. ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಡಾ| ನಾಗಭೂಷಣ ಉಡುಪ ಆಯ್ಕೆಯಾದರು. ಚುನಾವಣಾಧಿಕಾರಿಕಾರಿಯಾಗಿ ಪರಮೇಶ್ವರ ಬಾಸ್ತ್ರಿ ಕಾರ್ಯನಿರ್ವಹಿಸಿದರು. ಆಯ್ಕೆಗೆ ಸಹಕರಿಸಿದ ಎಲ್ಲ ಸರಕಾರಿ ನೌಕರರಿಗೆ ನೂತನ ಅಧ್ಯಕ್ಷ ಕೆ.ದಿನಕರ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಕಳ್ಳತನ ಹಾಗೂ ಗೋ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗೋವುಗಳ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತಿದ್ದು ಹಿಂದುಗಳ ಧಾರ್ಮಿಕ ಭಾವನೆಯನ್ನು ವಿಡಂಬನೆ ಮಾಡಿ ಮತಿಯ ದ್ವೇಷಕ್ಕೆ ಎಡೆಮಾಡಿಕೊಡುತ್ತಿದೆ. ಯಾವುದೇ ಪರವಾನಿಗೆ ಇಲ್ಲದೇ ರಾಜಾರೋಷವಾಗಿ ಗೋವುಗಳ ಕಳ್ಳತನ ಮಾಡುತ್ತಿರುವುದು ಛೇದಕರ. ತಾಲೂಕಿನಲ್ಲಿ ಗೋವುಗಳ ಪಾಲನೆಗಾಗಿ ಕಾದಿರಿಸಿರುವ ಗೋಮಾಳದ ಜಾಗವನ್ನು ಗುರುತಿಸಿ ಗೋವುಗಳ ಪಾಲನೆಗೆ ಅವಕಾಶ ಮಾಡಿಕೊಡುವುದು, ಏಳಜಿತದಲ್ಲಿ ಮನೆಯಿಂದ ಗೋವುಗಳನ್ನು ಕಳ್ಳತನ ಮಾಡಲಾಗಿದ್ದು, ಆ ಕುಟುಂಬಗಳಿಗೆ ಪರಿಹಾರ ಒದಗಿಸಿಕೊಡಬೇಕು ಹಾಗೂ ಗೋವು ಕಳ್ಳರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೈಂದೂರು ರೋಟರಿ ಭವನದಲ್ಲಿ ಪ್ರತಿಭಟನಾ ಸಭೆ ನಡೆಸಿದ ಬಳಿಕ ಮೆರವಣಿಗೆಯಲ್ಲಿ ತಹಶಿಲ್ದಾರರ ಕಛೇರಿಗೆ ಸಾಗಿಬಂದು ಬೈಂದೂರು ತಹಶೀಲ್ದಾರರು ಹಾಗೂ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಪ್ರಾಂತ ಸಹ ಗೋರಕ್ಷಾ ಪ್ರಮುಖ್ ಜಗದೀಶ್ ಶಿಣವ್, ವಿಹಿಂಪ ಜಿಲ್ಲಾ ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವೆಂಕಟರಮಣ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕ ಮನೆಗೆ ತೆರಳುತ್ತಿದ್ದ ವೇಳೆ ಗದ್ದೆಯ ಅಂಚಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಹಂಗಾರಕಟ್ಟೆ ನಿವಾಸಿ ಸುರೇಶ್ ತಿಂಗಳಾಯ (೩೭) ಮೃತ ದುರ್ದೈವಿ. ಶುಕ್ರವಾರ ಸಂಜೆ ಸುರೇಶ್ ಶಾಲೆಯಿಂದ ಮನೆಗೆ ತನ್ನ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಹಂಗಾರಕಟ್ಟೆಯ ತಮ್ಮ ಮನೆಯ ಸಮೀಪದ ಗದ್ದೆಯಂಚಿನಲ್ಲಿ ಹೋಗುತ್ತಿರುವ ಸಂದರ್ಭ ಸ್ಕಿಡ್ ಆಗಿ ಗದ್ದೆಗೆ ಬಿದ್ದಿದ್ದಾರೆ. ಈ ಸಂದರ್ಭ ಕೆಸರು ಗದ್ದೆಯಲ್ಲಿ ಕವುಚಿ ಬಿದ್ದ ಪರಿಣಾಮ ಮೇಲೇಳಲಾರದೇ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಅವಿವಾಹಿತರಾಗಿರುವ ಸುರೇಶ್ ತಿಂಗಳಾಯ ಕಳೆದ ಹನ್ನೆರಡು ವರ್ಷಗಳಿಂದ ವೆಂಕಟರಮಣ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಸ್ನೇಹಮಯ ವ್ಯಕ್ತಿತ್ವದ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಸುರೇಶ್ ಗುರುತಿಸಿಕೊಂಡಿದ್ದರು. ಶಾಲೆಯಲ್ಲಿ ಸಂತಾಪ ಸೂಚಕ ಸಭೆ ನಡೆಸಿ ರಜೆ ನೀಡಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕಾಲೇಜು ದಿನಗಳಲ್ಲಿ ಕಿವಿಗೆ ಬಿದ್ದ ಚಪ್ಪಾಳೆಯ ಸದ್ದು ಬಣ್ಣದ ಲೋಕದ ಕಡೆಗೆ ತಿರುಗುವಂತೆ ಮಾಡಿತು. ಬಣ್ಣದ ಲೋಕದಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಛಲ ಸಿನೆಮಾದ ನಾಯಕನನ್ನಾಗಿಸಿತು. ಹೌದು ಕ್ಷೇತ್ರ ಯಾವುದೇ ಇರಲಿ ಆಸಕ್ತಿ ಹಾಗೂ ಛಲವೊಂದಿದ್ದರೆ ಕಂಡ ಕನಸನ್ನು ನನಸಾಗಿಸಿಕೊಳ್ಳುವುದು ಕಷ್ಟವೇನಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರದ ಹುಡುಗ, ಸಮಯದ ಹಿಂದೆ ಸವಾರಿ ಚಿತ್ರದ ನಾಯಕ ನಟ ರಾಹುಲ್ ಹೆಗ್ಡೆ. ಪತ್ರಕರ್ತ ಲೇಖಕ ಜೋಗಿ ಅವರ ‘ನದಿಯ ನೆನಪಿನ ಹಂಗು’ ಕಾದಂಬರಿಯ ಎಳೆಯನ್ನಿಟ್ಟುಕೊಂಡು, ಹೆಸರಾಂತ ಸಂಗೀತಕಾರ, ರಂಗಕರ್ಮಿ ರಾಜ್‌ಗುರು ಹೊಸಕೋಟಿ ಅವರ ನಿರ್ದೇಶನದಲ್ಲಿ ಮೂಡಿಬಂದ ಸಿನೆಮಾ ’ಸಮಯದ ಹಿಂದೆ ಸವಾರಿ. ವಿಭಿನ್ನ ಕಥಾವಸ್ತುವಿನೊಂದಿಗೆ ಪ್ರೇಕ್ಷಕರನ್ನು ಎದಿರುಗೊಳ್ಳಬೇಕು ಎಂಬ ಸಿನೆಮಾ ತಂಡದ ಇಂಗಿತದಂತೆ ಪತ್ತೆದಾರಿ ಎಳೆಯನ್ನು ಹೊಂದಿದೆ. ಕುಂದಾಪುರದ ಹುಡುಗ ರಾಹುಲ್ ನಾಯಕ ನಟನಾಗಿ ಮೊದಲ ಭಾರಿಗೆ ತೆರೆಯ ಮೇಲೆ ರಘುನಂದನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಸಿನೆಮಾದಲ್ಲಿ ಸ್ನೇಹಿತನ ಸಾವಿನ ಬಳಿಕ ನಡೆಯುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಪ್ರದೇಶದ ಪ್ರತಿಭಾವಂತ ಪದವೀಧರರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯೊಂದಿಗೆ ಉದ್ಯೋಗಮೇಳವನ್ನು ಹಮ್ಮಿಕೊಂಡಾಗ ಅದು ಫಲಪ್ರಧವಾಗುತ್ತದೆ ಎಂದು ಜೆ.ಪಿ.ಶೆಟ್ಟಿ ಕಟ್ಕೆರೆ ಹೇಳಿದರು. ಅವರು ಉಡುಪಿ ಉದ್ಯೋಗ ವಿನಿಮಯ ಕಛೇರಿ ಮತ್ತು ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕುಂದಾಪುರ, ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಮ್.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯಮಶೀಲಾತಾ ಕೌಶಲ್ಯ ತರಬೇತಿ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಯೋಗಾಂಕಾಕ್ಷಿಗಳನ್ನು ಉದ್ದೇಶಿಸಿ ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅನುಭವದ ಅವಶ್ಯಕತೆಯನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ್, ಉದ್ಯೋಗಾಂಕಾಕ್ಷಿಗಳಿಗೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು. ಉದ್ಯೋಗ ಮಾರ್ಗದರ್ಶನ ಮತ್ತು ಸ್ಥಾನೀಕರಣ ಘಟಕದ ಸಂಚಾಲಕ ಡಾ.ಸುಬ್ರಹ್ಮಣ್ಯ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಉದ್ಯೋಗ ವಿನಿಮಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಧಿಕಾರಿಗಳು ಸರಕಾರ ಹೇಳಿದಷ್ಟನ್ನು ಅಚ್ಚುಕಟ್ಟಾಗಿ ಮಾಡಿದರೂ ಸಾಕು. ಒಂದು ಹಂತದ ಪ್ರಗತಿ ಸಾಧ್ಯವಿದೆ. ಅದರ ಜೊತೆಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ನಿರ್ದಿಷ್ಟ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ನಿರ್ದಿಷ್ಟ ಅವಧಿಯೊಳಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. Watch Video ಅವರು ಬೈಂದೂರು ನಿರೀಕ್ಷಣಾ ಮಂದಿರದಲ್ಲಿ ಜರುಗಿದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನವನ್ನು ಯಶಸ್ವಿಯಾಗಿ ಮಾಡುವುದರ ಜೊತೆಗೆ ಸಣ್ಣ ಯೋಜನೆಗಳ ಬಗೆಗೂ ವಿಶೇಷ ಮುತುವರ್ಜಿ ವಹಿಸುವುದು ಅಗತ್ಯ. ಸರಕಾರ ಅಧಿಕಾರಿಗಳಗೆ ಎಲ್ಲಾ ರೀತಿಯ ಸವಲತ್ತು ಮಾಡಿಕೊಟ್ಟಿದೆ. ಅದಕ್ಕೆ ಸರಿಯಾಗಿ ಸರಕಾರಿ ಕೆಲಸಕ್ಕಾಗಿ ಬರುವ ಜನರನ್ನು ಹೆಚ್ಚು ಸತಾಯಿಸದೇ ಪ್ರತಿಯೊಬ್ಬ ಫಲಾನುಭವಿಗೂ ಯೋಜನೆ ಯಶಸ್ವಿಯಾಗಿ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಿ. ದೇವರು ನಮಗೆ ಒಳ್ಳೆಯನ್ನೇ ಮಾಡಿದ್ದಾನೆ. ಭ್ರಷ್ಟಾಚಾರ ರಹಿತವಾದ ಆಡಳಿತಕ್ಕೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಪಘಾತದಿಂದ ಅರೆಕೋಮಾವಸ್ಥೆಯಲ್ಲಿರುವ ಉಪ್ರಳ್ಳಿ ಮೂಡುಮಠ ನಿವಾಸಿ ಸುರೇಶ್ ಪೂಜಾರಿ ಎಂಬುವವರ ವೈದ್ಯಕೀಯ ವೆಚ್ಚಕ್ಕಾಗಿ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನಿಂದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು 15ಸಾವಿರ ರೂ. ಸಹಾಯಧನದ ಚೆಕ್ಕನ್ನು ಅವರನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಜಿಪಂ ಸದಸ್ಯೆ ಗೌರಿ ದೇವಾಡಿಗ, ಟ್ರಸ್ಟ್ ಸದಸ್ಯರಾದ ಅನಂತಪದ್ಮನಾಭ ನಾಯರಿ, ರಾಘವೇಂದ್ರ ಪೂಜಾರಿ, ಗಣೇಶ್ ಮೊದಲಾದವರು ಇದ್ದರು. ಇದನ್ನೂ ಓದಿ: ► ಅಪಘಾತದಿಂದ ಅರೆಕೋಮಾವಸ್ಥೆಯಲ್ಲಿರುವ ಸುರೇಶ್ ಪೂಜಾರಿಗೆ ಬೇಕಿದೆ ನೆರವು – https://kundapraa.com/?p=32409 .
ಕುಂದಾಪುರ ತಾಪಂ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಮಾರ್ದನಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ-ಮರವಂತೆ ಬೀಚ್‌ನಲ್ಲಿ ತಡೆಗೋಡೆ ರಚನೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿಗೆ ಬರುವ ಪ್ರವಾಸಿದರ ಇದರ ಮೇಲೆಯೇ ನಡೆಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ಪ್ರವಾಸಿಗರ ವಾಹನ ಹಾಗೂ ಇತರ ವಾಹನಗಳು ಸರತಿ ಸಾಲಿನಲ್ಲಿ ನಿಂತು ಅಪಾಯಕ್ಕೆ ದಾರಿ ಪಡೆಕೊಟ್ಟಿದೆ. ಇಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ನಾಮಫಲಕವನ್ನೂ ಅಳವಡಿಸಿಲ್ಲ. ಈ ಬಗ್ಗೆ ಗಮನ ಹರಿಸುವುದು ಯಾರು. ಅಪಘಾತವಾದಗಲೇ ಎಚ್ಚರವಹಿಸಬೇಕೆ. ಮುಂಜಾಗೃತಾ ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ ಸದಸ್ಯ ಪ್ರವೀಣಕುಮಾರ್ ಶೆಟ್ಟಿ ಆಗ್ರಹಿಸಿದರು. ಅವರು ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ 16ನೇ ತಾಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ತಾಪಂ ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ ಬೈಂದೂರಿನಿಂದ ಕುಂದಾಪುರದ ತನಕದ ಚತುಷ್ಪಥ ಹೆದ್ದಾರಿ ಅಪಘಾತಕ್ಕೆ ಎಡೆಮಾಡಿಕೊಟ್ಟಿದೆ. ಅವೈಜ್ಞಾನಿಕ ತಿರುವು, ಪ್ರಮುಖ ವೃತ್ತಗಳಲ್ಲಿ ವೇಗ ನಿಯಂತ್ರಕಗಳನ್ನು ಅಳವಡಿಸದಿರುವುದು ನಾಗರಿಕರ ಪ್ರಾಣಕ್ಕೆ…
