ರಾಜ್ಯ ಸರಕಾರಿ ನೌಕರರ ಸಂಘ: ಕುಂದಾಪುರ ತಾ. ಅಧ್ಯಕ್ಷರಾಗಿ ದಿನಕರ ಶೆಟ್ಟಿ ಆಯ್ಕೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕುಂದಾಪುರ ತಾಲೂಕು ಶಾಖೆಯ ನೂತನ ಅಧ್ಯಕ್ಷರಾಗಿ ಕೆ.ದಿನಕರ ಶೆಟ್ಟಿ ಪ್ರಚಂಡ ಬಹುಮತದಿಂದ ಆಯ್ಕೆಯಾದರು.

Call us

Click Here

ಜೂ.27ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಿತು. ಶಿಕ್ಷಣ ಇಲಾಖೆಯನ್ನು ಪ್ರತಿನಿಧಿಸುತ್ತಿದ್ದ ಕೆ. ದಿನಕರ ಶೆಟ್ಟಿ ಅವರು ಇದೀಗ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ. ಈ ಹಿಂದೆಯೂ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಕೋಶಾಧಿಕಾರಿಯಾಗಿ ತೆರಿಗೆ ಇಲಾಖೆಯ ಸಂಜಯ ನಾಯಕ್ ಆಯ್ಕೆಯಾದರು. ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಡಾ| ನಾಗಭೂಷಣ ಉಡುಪ ಆಯ್ಕೆಯಾದರು.

ಚುನಾವಣಾಧಿಕಾರಿಕಾರಿಯಾಗಿ ಪರಮೇಶ್ವರ ಬಾಸ್ತ್ರಿ ಕಾರ್ಯನಿರ್ವಹಿಸಿದರು. ಆಯ್ಕೆಗೆ ಸಹಕರಿಸಿದ ಎಲ್ಲ ಸರಕಾರಿ ನೌಕರರಿಗೆ ನೂತನ ಅಧ್ಯಕ್ಷ ಕೆ.ದಿನಕರ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

 

Click here

Click here

Click here

Click Here

Call us

Call us

Leave a Reply