ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಸಂಗೀತ ಅವಿನಾಶಿ ಪ್ರತಿಷ್ಠಾನದ ಆಶ್ರಯದಲ್ಲಿ ಕೋಟೇಶ್ವರ ಅಂಕದಕಟ್ಟೆಯ ಚಂದ್ರಮೋಹನ ಧನ್ಯರ ಮನೆ ’ಸಂಸ್ಥಾನಂ’ನಲ್ಲಿ ಸಂಗೀತ ಗುರುಗಳಾದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ದಂಪತಿಯ ಶಿಷ್ಯವೃಂದದೊಂದಿಗೆ ಸೆ.೧೫ರಂದು ನಡೆಸಿದ ಸಂಗೀತ ಕಲಿಕೆ ಕಾರ್ಯಾಗಾರ ನಡೆಯಿತು. ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್ ಬಾಲಚಂದ್ರ ನಾಕೋಡ ಮಾತನಾಡಿ ಸಂಗೀತ ಕಲಿಕೆ ಅನ್ಯ ವಿದ್ಯೆಯ ಕಲಿಕೆಯಂತಲ್ಲ. ಅದರಲ್ಲಿ ಪುಸ್ತಕದ ಓದು, ಅಧ್ಯಯನಕ್ಕೆ ಆದ್ಯತೆ ಇಲ್ಲ. ಬದಲಾಗಿ ಗುರುವಿನ ಮಾರ್ಗದರ್ಶನದಲ್ಲಿ ಗಮನ ಕೇಂದ್ರೀಕರಿಸಿ ನಡೆಸುವ ಮನನ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಅದರ ಮೇಲೆ ಹಿಡಿತ ಸಾಧಿಸಬಹುದು ಎಂದು ಹೇಳಿದರು. ಸಂಗೀತ ಅಭ್ಯಾಸದ ವಿಧಾನವನ್ನು ವಿವರಿಸಿದ ಅವರು ರಾಗದ ಆರೋಹ, ಅವರೋಹದ ವೇಳೆ ಗಮನ ಕೇಂದ್ರೀಕರಣದ ಅಗತ್ಯವನ್ನು ತಿಳಿಸಿದರು. ಸ್ವರಶುದ್ಧಿಯ ಮಹತ್ವವನ್ನು ಮನದಟ್ಟು ಮಾಡಿದರು. ಹಿಂದುಸ್ಥಾನಿ ಸಂಗೀತದಲ್ಲಿ ದಿನದ ಬೇರೆಬೇರೆ ಪ್ರಹರಗಳಲ್ಲಿ ವ್ಯಕ್ತವಾಗುವ ಪ್ರಕೃತಿಯ ಸ್ಥಿತಿಗತಿಗೆ ಹೊಂದಿಕೆಯಾಗುವಂತೆ ಹಾಡಬೇಕಾದ ರಾಗಗಳನ್ನು ನಿಗದಿಗೊಳಿಸಲಾಗಿದೆ. ಅವುಗಳನ್ನು ಉಲ್ಲಂಘಿಸಿದರೆ ರಸಾಭಾಸ ಆಗುವುದರ ಜತೆಗೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಥೆಗಾರ ಹಾಗೂ ಓದುಗ ಮುಖಾಮುಖಿಯಾಗಿ ಸಂವಾದಿಸಿದರೆ ಪ್ರಜ್ಞಾಪೂರ್ವಕ ಹಾಗೂ ಕ್ರೀಯಾಶೀಲವಗಿ ಬೆಳೆಯಲು ಸಾಧ್ಯವಿದೆ. ಕಥಾ ಓದು ಅಂತಹದ್ದೊಂದು ಅವಕಾಶ ಕಲ್ಪಿಸುತ್ತದೆ ಎಂದು ಲೇಖಕ, ಅಂಕಣಕಾರ ಸತೀಶ ಚಪ್ಪರಿಕೆ ಹೇಳಿದರು. ಸಮುದಾಯ ಕುಂದಾಪುರ, ಕನ್ನಡ ಸಾಹಿತ್ಯ ಪರಿಷತ್ತಿನ ಬೈಂದೂರು ತಾಲ್ಲೂಕು ಘಟಕ, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್ ಮತ್ತಿತರ ಸ್ಥಳೀಯ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಖಂಬದಕೋಣೆಯಲ್ಲಿ ನಡೆದ ತಿಂಗಳ ಕಥಾ ಓದು ಕಾರ್ಯಕ್ರಮದಲ್ಲಿ ತಮ್ಮ ಮುಂಬರುವ ಕಥಾಸಂಕಲನ ಹೈಡ್‌ಪಾರ್ಕ್‌ನ ’ಗರ್ಭ’ ಕತೆ ಓದುವ ಮೊದಲು ಮಾತನಾಡಿದರು. ಇದೇ ಪರಿಸರದಲ್ಲಿ ಹುಟ್ಟಿ, ಬಾಲ್ಯ ಕಳೆದು, ಆರಂಭಿಕ ಶಿಕ್ಷಣ ಪಡೆದ ತಮಗೆ ಇದೇ ಪರಿಸರದ ಹಿನ್ನೆಲೆಯಲ್ಲಿ ರಚಿಸಿದ ಕತೆ ಓದುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎಂದರು. ಉದಯ ಶೆಟ್ಟಿ, ಎಸ್. ಜನಾರ್ದನ, ಎಂ. ಗೋವಿಂದ ಕತೆಯ ಕುರಿತು ತಮ್ಮ ಅನ್ನಿಸಿಕೆ ವ್ಯಕ್ತಪಡಿಸಿ, ಕತೆಗಾರರೊಂದಿಗೆ ಸಂವಾದ ನಡೆಸಿದರು. ಬೈಂದೂರು ವಲಯ ಶಿಕ್ಷಣ ಸಂಯೋಜಕ ಅಬ್ದುಲ್ ರವೂಫ್ ಚದುರಂಗರ ’ನಾಲ್ಕು ಮೊಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರಿನ ಕುಸುಮಾ ಫೌಂಡೇಶನ್ ಪ್ರತಿವರ್ಷ ನೀಡುವ ‘ಕುಸುಮಶ್ರೀ’ ಪ್ರಶಸ್ತಿಗೆ ಈ ಬಾರಿ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಆಯ್ಕೆಮಾಡಲಾಗಿದೆ. ಡಿಸೆಂಬರ್ 22, 23ರಂದು ನಡೆಯುವ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೌಂಡೇಶನ್ ಸಂಸ್ಥಾಪಕ ನಳಿನಕುಮಾರ ಶೆಟ್ಟಿ ಭಾನುವಾರ ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು. ಈ ಬಾರಿ ಕುಸುಮಾಂಜಲಿ ಕಾರ್ಯಕ್ರಮವನ್ನು ಎರಡು ದಿನ ನಡೆಸಲಾಗುವುದು. ಎರಡೂ ದಿನ ಬೆಳಿಗ್ಗೆ ೧೦ರಿಂದ ರಾತ್ರಿ ೧೦ರ ವರಗೆ ಅವಿರತವಾಗಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಗಾಯನ, ಸಂಗೀತ ಸಂಧ್ಯಾ, ನಾಟ್ಯಾಂಜಲಿ ಪ್ರಸ್ತುತಗೊಳ್ಳುವುವು. ಖ್ಯಾತ ಗಾಯಕಿ ಅರ್ಚನಾ ಉಡುಪ, ಪ್ರಸಿದ್ಧ ಹಿನ್ನೆಲೆ ಗಾಯಕ ಅಜಯ ವಾರಿಯರ್, ಈ ವರ್ಷದ ಗಾನಕುಸುಮ ಪ್ರಶಸ್ತಿ ವಿಜೇತರು, ಸ್ಪರ್ಧೆಯಲ್ಲಿ ಭಾಗವಹಿಸಿದ ಕಿರಿಯ ಕಲಾವಿದರು ಗಾಯನ ಪ್ರಸ್ತುತಪಡಿಸುವರು. ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಗಾನ, ಬೆಂಗಳೂರಿನ ತಂಡದಿಂದ ಭರತನಾಟ್ಯ ಪ್ರದರ್ಶನಗೊಳ್ಳುವುದು. ಮಂಗಳೂರಿನ ಸಾಯಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಶಿರೂರು: ಜೆಸಿಐ ಶಿರೂರು ಇದರ ಸಾತ್ ಸುರ್ ಪರಿಸರ ಸ್ನೇಹಿ ಜೆಸಿಐ ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಸಮಯದ ನಿರ್ವಹಣೆ ಎಂಬ ವಿಷಯದ ಕುರಿತು ಜೆಸಿಐ ವಲಯ ಹದಿನೈದರ ಉಪಾಧ್ಯಕ್ಷ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಪ್ರಭು ಕರ್ವಾಲೋ ಉಪನ್ಯಾಸ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಚೆ ಬರೆದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿರೂರು ಇದರ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ ವಹಿಸಿಕೊಂಡರು. ಮುಖ್ಯ ಅಥಿತಿಗಳಾಗಿ ಶ್ವೇತಾ ಪಾಂಡುರಂಗ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಪ್ರಾಂಶುಪಾಲ ರಮೇಶ ನಾಯ್ಕ ಸ್ವಾಗತಿಸಿದರು. ಕೃಷ್ಣ ಎನ್. ಪೂಜಾರಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಯುವಕರೇ ಬಹುಸಂಖ್ಯಾತರಿರುವ ನಮ್ಮ ದೇಶದಲ್ಲಿ ಮಾದಕದ್ರವ್ಯ ವ್ಯಸನ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಯುವಜನತೆಯೇ ಹೆಚ್ಚು ವ್ಯಸನಕ್ಕೆ ಬಲಿಯಾಗುತ್ತಿರುವುದು ಖೇದಕರ. ಕಣ್ಣಿಗೆ ಕಾಣದೆ ಆಂತರಿಕವಾಗಿ ನಡೆಯುತ್ತಿರುವ ಈ ದಾಳಿಯನ್ನು ತಡೆಗಟ್ಟುವುದು ಇಂದಿನ ಅಗತ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಹೇಳಿದರು. ಅವರು ಉಡುಪಿ ಜಿಲ್ಲಾ ಪೊಲೀಸ್ ಕುಂದಾಪುರ ಉಪವಿಭಾಗ, ಕುಂದಾಪುರ ತಾಲೂಕು ಪತ್ರಕರ್ತರ ಸಂಘ ಹಾಗೂ ಹಲವಾರು ಸಂಘಸಂಸ್ಥೆಗಳ ಸಂಯುಕ್ತಾ ಶ್ರಯದಲ್ಲಿ ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಮಾದಕದ್ರವ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸೆ ನೋ ಟುಡ್ರಗ್ಸ್‌ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸೈಕ್ಲಾಥಾನ್‌ನ ಸಮಾರೋಪ ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು. ಸುಮಾರು ೨೫ ಕಿ.ಮೀ ಅಧಿಕ ದೂರಗಳ ಕಾಲ ಸೈಕಲ್‌ಜಾಥಾ ನಡೆಯಿತು. ಕುಂದಾಪುರ ಉಪವಿಭಾಗದ ಸಹಾಯಕಆಯುಕ್ತ ಟಿ. ಭೂಬಾಲನ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಡಿವೈಎಸ್‌ಪಿ ಬಿ. ಪಿ ದಿನೇಶ್‌ಕುಮಾರ್, ಸರ್ಕಲ್‌ಇನ್ಸ್‌ಪೆಕ್ಟರ್ ಮಂಜಪ್ಪ, ಪರಮೇಶ್ವರ ಗುನಗಾ, ಕುಂದಾಪುರ ಪಿಎಸ್‌ಐ ಹರೀಶ್‌ಆರ್, ಕಂಡ್ಲೂರು ಪಿಎಸ್‌ಐ ಶ್ರೀಧರ ನಾಯ್ಕ್, ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಹೆಸರಾಗಿರುವ ಶ್ರೀ ದುರ್ಗಾಂಬ ಸಾರಿಗೆ ಸಂಸ್ಥೆಯ ಪಾಲುದಾರರಲ್ಲಿ ಓರ್ವರಾದ ಸುನಿಲ್ ಚಾತ್ರ (42) ಅವರು ಶುಕ್ರವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ ಅವರ ದ್ವಿತೀಯ ಪುತ್ರರಾದ ಇವರು ಬಸ್ಸಿನ ವ್ಯವಹಾರ ನಿಮಿತ್ತ ತಮಿಳುನಾಡಿಗೆ ತೆರಳಿದ್ದು ಬೆಂಗಳೂರಿಗೆ ವಾಪಾಸಾಗುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ. ಶುಕ್ರವಾರ ಅಪರಾಹ್ನ 3.30ರ ವೇಳೆಗೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಾರಾಮತಿ ವೆಲ್ಲೂರು ಕ್ರಾಸ್ ಬೈಪಾಸ್ ಬಳಿ ಇವರು ಪಯಣಿಸುತ್ತಿದ್ದ ಪಜೋರೊ ಕಾರಿಗೆ ಅಡ್ಡಬಂದ ಸೈಕಲ್ ಸವಾರರನ್ನು ತಪ್ಪಿಸುವ ಭರದಲ್ಲಿ ನಿಯಂತ್ರಣ ತಪ್ಪಿ ಮಗುಚಿಬಿದ್ದು ತಲೆಗೆ ಗಂಭೀರ ಏಟು ತಗುಲಿ ಸುನಿಲ್ ಸ್ಥಳದಲ್ಲೇ ಮೃತಪಟ್ಟರು. ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಸರಳ ಸಜ್ಜನಿಕೆ, ಮುಗ್ಧತೆಯ ಪ್ರತೀಕವಾಗಿದ್ದ ಇವರ ಅಕಾಲಿಕ ಅಗಲುವಿಕೆ ಕುಂದಾಪುರಕ್ಕೆ ಭಾರಿ ಆಘಾತ ನೀಡಿದೆ. 1993-94 ಭಂಡಾರ್‌ಕಾರ್ಸ್ ಕಾಲೇಜಿನ ಪಿಯುಸಿ ವ್ಯಾಟ್ಸ್ ಆ್ಯಪ್ ಗ್ರೂಪ್ ಮೂಲಕ ಸದ್ದಿಲ್ಲದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಯಾಣಿಕರ ಕೊರತೆಯ ಕಾರಣ ರದ್ದಾಗಿರುವ ಕಾಸರಗೋಡು-ಕಣ್ಣೂರು-ಬೈಂದೂರು ಮೂಕಾಂಬಿಕಾ ರೋಡ್ ರೈಲನ್ನು ಸೂಕ್ತ ಮಾರ್ಪಾಡಿನೊಂದಿಗೆ ಪುನರಾರಂಭಿಸಬೇಕು ಎಂದು ರಾಷ್ಟ್ರೀಯ ರೈಲು ಬಳಕೆದಾರರ ಸಮಾಲೋಚನಾ ಸಮಿತಿಯ ಸದಸ್ಯ ಕೆ. ವೆಂಕಟೇಶ ಕಿಣಿ ಬೈಂದೂರು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಉತ್ತರ ಮಲಬಾರು ಮತ್ತು ಕರಾವಳಿ ಕರ್ನಾಟಕದ ದೀರ್ಘಕಾಲದ ಜನಾಗ್ರಹದ ಫಲವಾಗಿ ಈ ರೈಲನ್ನು ಆರಂಭಿಸಿದಾಗ ಅದು ಯಾತ್ರಾಸ್ಥಳವಾದ ಕೊಲ್ಲೂರಿಗೆ ಸುಲಭ ಸಂಪರ್ಕ ಸೌಲಭ್ಯ ಎಂದು ಈ ಪ್ರದೇಶದ ಜನರು ಸಂಭ್ರಮ ಪಟ್ಟಿದ್ದರು. ಆದರೆ ಅದು ತಾತ್ಕಾಲಿಕವಾಯಿತು. ಈ ರೈಲಿಗೆ ಪ್ರಯಾಣಿಕರ ಬೆಂಬಲ ದೊರೆಯದಿರುವುದಕ್ಕೆ ಎರಡು ಕಾರಣಗಳಿವೆ. ಅದು ಮಂಗಳೂರು ಸೆಂಟ್ರಲ್ ಸ್ಪರ್ಷಿಸದೆ ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವಂತೆ ಮಾಡಿರುವುದು ಮೊದಲ ಮತ್ತು ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಮತ್ತೆಮತ್ತೆ ಮಾಡಿಕೊಂಡ ಮನವಿಗಳು ವ್ಯರ್ಥವಾಗಿದ್ದುವು. ಈಗಲಾದರೂ ಆ ರೈಲನ್ನು ಸಾಂಪ್ರದಾಯಿಕ ರೈಲು ಬದಲಿಗೆ ಡೆಮು ಆಗಿ ಮೇಲ್ದರ್ಜೆಗೇರಿಸಿದರೆ ಅದು ಮಂಗಳೂರು ಸೆಂಟ್ರಲ್ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿಸರದ ಹಸಿರು ಕ್ಷೀಣಿಸಿ ಜನರ ಬದುಕಿನ ಮೇಲೆ ಆಗುತ್ತಿರುವ ದುಷ್ಪರಿಣಾಮ ತಡೆಯಲು ಪರಿಸರ ಪ್ರೇಮಿಗಳು ನಡೆಸುತ್ತ ಬಂದಿರುವ ವಿವಿಧ ಅಭಿಯಾನಗಳ ಸಾಲಿಗೆ ಇದೀಗ ಬೀಜಗಣಪ ಸೇರ್ಪಡೆ ಆಗಲಿದೆ. ಸದ್ಯ ಮರವಂತೆ ಕೇಂದ್ರಿತವಾಗಿ ನಡೆಯುವ ಈ ಅಭಿಯಾನದ ಆರಂಭಕ್ಕೆ ಜನಪ್ರಿಯ ಹಬ್ಬವಾದ ಗಣೇಶ ಚತುರ್ಥಿಯ ಮುಹೂರ್ತ ನಿಗದಿಯಾಗಿದೆ. ಗಣೇಶ ವಿಗ್ರಹಗಳನ್ನು ನಿರ್ಮಿಸುವ ಅಲ್ಲಿನ ಕಲಾವಿದ ಸತೀಶ ಮಧ್ಯಸ್ಥ ಅದಕ್ಕಾಗಿ ಬೀಜಗಣಪತಿಯ ಮೂರ್ತಿಗಳನ್ನು ಸಿದ್ಧಪಡಿಸುವುದರಲ್ಲಿ ನಿರತರಾಗಿದ್ದಾರೆ. ಇಂತಹ ಕೆಲಸ ಆರಂಭವಾಗಿರುವ ಸುದ್ದಿ ತಿಳಿದು ಮಧ್ಯಸ್ಥರ ಮನೆಗೆ ಹೋದ ’ಪ್ರಜಾವಾಣಿ’ಗೆ ಅವರು ಬಿಡುವು ಮಾಡಿಕೊಂಡು ಅಭಿಯಾನದ ವಿವರ ನೀಡಿದರು. ಸಾಸ್ತಾನದ ವಿನಯಚಂದ್ರ ಈಗಾಗಲೆ ಹಲವೆಡೆ ಬೀಜದುಂಡೆಗಳ ಅಭಿಯಾನ ನಡೆಸಿ ಸುದ್ದಿ ಮಾಡಿದ್ದಾರೆ. ಒಂದೆರಡು ಕಡೆ ಸತೀಶ ಮಧ್ಯಸ್ಥ ಅವರ ಜತೆಯಾಗಿದ್ದರು. ಆಗ ಅವರಿಗೆ ಬೀಜಗಣಪ ಅಥವಾ ಜೀವಗಣಪ ಯೋಜನೆ ಹೊಳೆಯಿತು. ಅವರ ’ಮಿಶನ್ ಅರ್ಥ್’ ಸಂಸ್ಥೆಯ ಗೆಳೆಯರು ಈಗ ಅದರ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಬೀಜ ಗಣಪ ತಯಾರಿ ಹೇಗೆ?…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಐದು ದಿನಗಳ ಹಿಂದೆ ಸ್ಕೂಟರ್ ಹಾಗೂ ಲಾರಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ಹೆಮ್ಮಾಡಿಯಲ್ಲಿ ವರದಿಯಾಗಿದೆ. ಹೆಮ್ಮಾಡಿ ನಿವಾಸಿ ಸದಾನಂದ ಪೈ ಹಾಗೂ ವಿಜಯಲಕ್ಷ್ಮೀ ಪೈಯವರ ಏಕೈಕ ಪುತ್ರ ವಾಸುದೇವ ಪೈ(25) ಸಾವನ್ನಪ್ಪಿದ ದುರ್ದೈವಿ. ಮಣಿಪಾಲದ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಾಸುದೇವ ಪೈ ಶುಕ್ರವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುತ್ತಿರುವಾಗ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ಲಾರಿ ಢಿಕ್ಕಿಯಾಗಿತ್ತು. ಅಪಘಾತದ ತೀವ್ರತೆಗೆ ವಾಸುದೇವ್ ಅವರ ಕಾಲಿಗೆ ತೀವ್ರವಾದ ಗಾಯಗಳಾಗಿದ್ದರಿಂದ ಅವರನ್ನು ಕುಂದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಐದು ದಿನಗಳ ಕಾಲ ಸಾವು-ಬದುಕಿನ ಹೋರಾಟ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿದ ಬಳಿಕ ಕೋಮಾಕ್ಕೆ ಜಾರಿದ್ದರು. ಐದು ದಿನಗಳ ಕಾಲ ಸಾವು-ಬದುಕಿನ ಹೋರಾಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾದಕ ವ್ಯಸನಕ್ಕೆ ಒಳಗಾಗಿರುವ ವ್ಯಕ್ತಿಗಳು ಸಮಾಜಕ್ಕೆ ಮಾರಕ. ಹಾಗಾಗಿ ಮಾದಕದ್ರವ್ಯದ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಮತ್ತು ಮಾದಕ ದ್ರವ್ಯಗಳ ಬಳಕೆಯ ಬಗ್ಗೆ ಪೊಲೀಸರ ಗಮನಕ್ಕೆ ತಂದು ಅದರ ನಿರ್ನಾಮಕ್ಕೆ ಸಹಕರಿಸುವುದು ಅಗತ್ಯ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಹೇಳಿದರು. ಅವರು ಉಡುಪಿ ಜಿಲ್ಲಾ ಪೊಲೀಸ್, ಕುಂದಾಪುರ ಪೊಲೀಸ್ ಠಾಣೆ ಹಾಗೂ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಶ್ರಯದಲ್ಲಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡ ’ವಾಕಾಥಾನ್’ಗೆ ಚಾಲನೆ ನೀಡಿ ಮಾತನಾಡಿದರು. ಕುಂದಾಪುರ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್, ಲಯನ್ಸ್ ಕ್ಲಬ್‌ನ ಡಾ. ಶಿವಕುಮಾರ್, ನವಿನ್‌ಕುಮಾರ್ ಶೆಟ್ಟಿ, ಕುಂದಾಪುರ ಎಸೈ ಹರೀಶ್ ಆರ್, ಕಂಡ್ಲೂರು ಎಸೈ ಶ್ರೀಧರ್, ಬೈಂದೂರು ಎಸೈ ತಿಮ್ಮೇಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ತಾಲೂಕು ಅಧ್ಯಕ್ಷ ಶಶಿಧರ ಹೆಮ್ಮಾಡಿ, ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ,…
