ಕೋಟೇಶ್ವರ: ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ಶಿಷ್ಯರೊಂದಿಗೆ ಸಂಗೀತ ಕಲಿಕೆ ಕಾರ್ಯಾಗಾರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಸಂಗೀತ ಅವಿನಾಶಿ ಪ್ರತಿಷ್ಠಾನದ ಆಶ್ರಯದಲ್ಲಿ ಕೋಟೇಶ್ವರ ಅಂಕದಕಟ್ಟೆಯ ಚಂದ್ರಮೋಹನ ಧನ್ಯರ ಮನೆ ’ಸಂಸ್ಥಾನಂ’ನಲ್ಲಿ ಸಂಗೀತ ಗುರುಗಳಾದ ವಿದ್ವಾನ್ ಸತೀಶ ಭಟ್ ಮಾಳಕೊಪ್ಪ-ಪ್ರತಿಮಾ ಭಟ್ ದಂಪತಿಯ ಶಿಷ್ಯವೃಂದದೊಂದಿಗೆ ಸೆ.೧೫ರಂದು ನಡೆಸಿದ ಸಂಗೀತ ಕಲಿಕೆ ಕಾರ್ಯಾಗಾರ ನಡೆಯಿತು.

Call us

Click Here

ಖ್ಯಾತ ಹಿಂದುಸ್ಥಾನಿ ಗಾಯಕ ಪಂಡಿತ್ ಬಾಲಚಂದ್ರ ನಾಕೋಡ ಮಾತನಾಡಿ ಸಂಗೀತ ಕಲಿಕೆ ಅನ್ಯ ವಿದ್ಯೆಯ ಕಲಿಕೆಯಂತಲ್ಲ. ಅದರಲ್ಲಿ ಪುಸ್ತಕದ ಓದು, ಅಧ್ಯಯನಕ್ಕೆ ಆದ್ಯತೆ ಇಲ್ಲ. ಬದಲಾಗಿ ಗುರುವಿನ ಮಾರ್ಗದರ್ಶನದಲ್ಲಿ ಗಮನ ಕೇಂದ್ರೀಕರಿಸಿ ನಡೆಸುವ ಮನನ ಮತ್ತು ನಿರಂತರ ಅಭ್ಯಾಸದಿಂದ ಮಾತ್ರ ಅದರ ಮೇಲೆ ಹಿಡಿತ ಸಾಧಿಸಬಹುದು ಎಂದು ಹೇಳಿದರು.

ಸಂಗೀತ ಅಭ್ಯಾಸದ ವಿಧಾನವನ್ನು ವಿವರಿಸಿದ ಅವರು ರಾಗದ ಆರೋಹ, ಅವರೋಹದ ವೇಳೆ ಗಮನ ಕೇಂದ್ರೀಕರಣದ ಅಗತ್ಯವನ್ನು ತಿಳಿಸಿದರು. ಸ್ವರಶುದ್ಧಿಯ ಮಹತ್ವವನ್ನು ಮನದಟ್ಟು ಮಾಡಿದರು. ಹಿಂದುಸ್ಥಾನಿ ಸಂಗೀತದಲ್ಲಿ ದಿನದ ಬೇರೆಬೇರೆ ಪ್ರಹರಗಳಲ್ಲಿ ವ್ಯಕ್ತವಾಗುವ ಪ್ರಕೃತಿಯ ಸ್ಥಿತಿಗತಿಗೆ ಹೊಂದಿಕೆಯಾಗುವಂತೆ ಹಾಡಬೇಕಾದ ರಾಗಗಳನ್ನು ನಿಗದಿಗೊಳಿಸಲಾಗಿದೆ. ಅವುಗಳನ್ನು ಉಲ್ಲಂಘಿಸಿದರೆ ರಸಾಭಾಸ ಆಗುವುದರ ಜತೆಗೆ ಶ್ರೋತೃಗಳ ಮೇಲೆ ಉದ್ದೇಶಿತ ಪ್ರಭಾವ ಉಂಟಾಗುವುದಿಲ್ಲ. ವಿವಿಧ ರಾಗಗಳನ್ನು ಪ್ರಸ್ತುತಪಡಿಸುವಾಗ ಭಾವಪ್ರಸ್ತುತಿಗೂ ಮಹತ್ವ ನೀಡಬೇಕು. ಲಯದ ನಿಖರತೆಯನ್ನು ಮನಸ್ಸಿನಲ್ಲೇ ಧ್ಯಾನಿಸುತ್ತಿರಬೇಕು ಎಂದು ಹೇಳಿ ವಿವಿಧ ರಾಗಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಸಂಗೀತಗಾರರಿಗೆ ಸ್ವರವೇ ಸಂಪತ್ತು ಆಗಿರುವುದರಿಂದ ಅದರ ರಕ್ಷಣೆಗೆ ಗರಿಷ್ಠ ಕಾಳಜಿ ವಹಿಸಬೇಕು. ಅದಕ್ಕೆ ಮಾರಕವಾಗುವ ಆಹಾರ, ವಿಹಾರಗಳನ್ನು ವರ್ಜಿಸಬೇಕು ಎಂದರು. ವಿದ್ಯಾರ್ಥಿಗಳಿಂದಲೂ ರಾಗಗಳನ್ನು ಹಾಡಿಸಿ, ಮಾಡಿಕೊಳ್ಳಬೇಕಾದ ಮಾರ್ಪಾಡುಗಳ ಕುರಿತು ಮಾರ್ಗದರ್ಶನ ನೀಡಿದರು.

ಗುರು ದಂಪತಿ ಸತೀಶ್ ಭಟ್ ಮತ್ತು ಪ್ರತಿಮಾ ಭಟ್ ಸಹಕರಿಸಿದರು. ವಿದ್ಯಾರ್ಥಿಗಳಾದ ವೀಣಾ ನಾಯಕ್, ನಾಗರಾಜ ಭಟ್, ನೇಹಾ ಹೊಳ್ಳ, ಕೇದಾರ, ಚಿಂತನಾ ಧನ್ಯ, ಚಿನ್ಮಯಿ ಧನ್ಯ, ಸಂಕಲ್ಪ, ನಮೃತಾ, ಪ್ರೀತಮ್ ಭಟ್, ಈಶ್ವರಿ, ಅದಿತಿ ಕುಲಕರ್ಣಿ, ಅದಿತಿ ಭಂಡಾರ್ಕಾರ್, ಮಲ್ಲಿಕಾ, ಸಂಚನಾ, ಸಂಜನಾ, ಯಶ್, ಯಷ್ಣಾ, ಪ್ರಣವ್ ಭಟ್ ಭಾಗವಹಿಸಿದ್ದರು. ಆತಿಥೇಯರಾದ ಚಂದ್ರಮೋಹನ ಧನ್ಯ-ಚಂದ್ರಿಕಾ ಧನ್ಯ ಅಗತ್ಯ ವ್ಯವಸ್ಥೆ ಕಲ್ಪಿಸಿದರು.

 

Click here

Click here

Click here

Click Here

Call us

Call us

Leave a Reply