ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ದಿನಾಚರಣೆ ಮತ್ತು ವೆಬ್ ಮೀಡಿಯಾ ಡಿಸೈನ್ ಕುರಿತು ಕಾರ್ಯಾಗಾರ ನಡೆಯಿತು. ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಅಮರ್ ಸಿಕ್ವೆರಾ ಅವರು ವೆಬ್ ಮೀಡಿಯಾ ಡಿಸೈನ್ ಕುರಿತು ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೆಬ್ ಮೀಡಿಯಾದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಲು ಮತ್ತು ತಮ್ಮ ಪತ್ರಿಕೋದ್ಯಮದ ಪ್ರತಿಭೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲು ಹಲವು ಅವಕಾಶಗಳಿವೆ. ಸಾಕಷ್ಟು ಉಚಿತವಾಗಿ ದೊರಕುವ ವೆಬ್ ಸಾಪ್ಟವೇರ್‌ಗಳು ಲಭ್ಯವಿದೆ. ಅದರ ಕುರಿತು ಮಾಹಿತಿಯ ಜೊತೆಗೆ ಉಪಯೋಗಿಸುವುದನ್ನು ತಿಳಿದುಕೊಳ್ಳಬೇಕು. ಆಗ ನಿಮ್ಮ ಉತ್ತಮ ಪ್ರತಿಭೆಗೆ ವೇದಿಕೆ ಸಿಕ್ಕಂತಾಗುತ್ತದೆ ಎಂದು ಹೇಳಿದರು. ಅಲ್ಲದೇ ಕಾರ್ಯಾಗಾರದಲ್ಲಿ ವೆಬ್ ಮೀಡಿಯಾ ಡಿಸೈನ್ ಮಾಡುವಲ್ಲಿನ ಸುಲಭದ ಅವಕಾಶಗಳು ಮತ್ತು ಹೇಗೆ ಮಾಡಬಹುದು ಎಂಬುದನ್ನು ಕಾರ್ಯಾಗಾರದ ಮೂಲಕ ತಿಳಿಸಿಕೊಟ್ಟರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕಿ ವಿದ್ಯಾರ್ಥಿನಿ ಪ್ರಿಯಾ ಎಂ.ಡಿ ಕಾರ್ಯಾಗಾರದ ಕುರಿತು ಅಭಿಪ್ರಾಯ ತಿಳಿಸಿದರು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಕ್ರಮ ಗೋಸಾಗಾಟದ ಅಪರಾಧಿಗಳಿಗೆ ಸಿಂಹಸ್ವಪ್ನವಾಗಬೇಕಿದ್ದ ಪೊಲೀಸರೇ ಮಾಹಿತಿದಾರರಾಗಿರುವ ಕಳವಳಕಾರಿ ಅಂಶ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂಧಿಗಳನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರಿಗಾಗಿ ಬಲೆ ಬೀಸಲಾಗಿದೆ. ಮಲ್ಪೆ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆಯ ಸಿಬ್ಬಂದಿ ವಿನೋದ್ ಗೌಡ ಬಂಧಿತರು. ಘಟನೆಯ ಹಿನ್ನೆಲೆ: ಜು12 ರಂದು ಬೆಳಗ್ಗಿನ ಜಾವ ಉತ್ತರ ಕರ್ನಾಟಕ ಭಾಗದಿಂದ ಕಾಸರಗೋಡು ಕಸಾಯಿಖಾನೆಗೆ ಲೈಲ್ಯಾಂಡ್ ಲಾರಿಯಲ್ಲಿ ೧೩ ಕೋಣ ಹಾಗೂ 7 ಎಮ್ಮೆ ಸೇರಿ ಒಟ್ಟು 20 ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಸಾಸ್ತಾನ ಟೋಲ್‌ಗೇಟ್ ಬಳಿ ಕಾರ್ಯಾಚರಣೆ ನಡೆಸಿದ್ದ ಕೋಟ ಠಾಣಾ ಪಿಎಸ್‌ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂಧಿಗಳು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಲಾರಿ ಚಾಲಕ ಸೈನುದ್ದಿನ್ ಹಾಗೂ ಜೊತೆಗಿದ್ದ ಹಮೀದ್, ಗಣೇಶನ್, ಸಮೀರ್ ಮತ್ತು ಕಾರಿನ ಚಾಲಕ ಶಿವಾನಂದ್, ಮಾರುತಿ ನಾರಾಯಣ ನಾಯ್ಕ್ ಎಂಬುವವರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ವಿಚಾರಣೆ ನಡೆಸುವಾಗ ಜಾನುವಾರುಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ೨೦೧೯-೨೦ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಯುವಸ್ಪಂದನ ಮತ್ತು ರೋಟರಿ ಕ್ಲಬ್ ಕುಂದಾಪುರ ಇವರ ಸಹಯೋಗದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ ಮಾತನಾಡಿ ರಾಷ್ಟೀಯ ಸೇವಾ ಯೋಜನೆ ಧ್ಯೇಯ ಉದ್ದೇಶ ಹಾಗೂ ಸರ್ವತೋಮುಖ ಬೆಳವಣಿಗೆಯಲ್ಲಿ ಇದರ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ರೋಟರಿ ಕ್ಲಬ್ ಅಧ್ಯಕ್ಷರಾದ ಡಾ.ರಾಜಾರಾಮ ಶೆಟ್ಟಿ ಅವರು ಹಲ್ಲುಗಳ ಆರೋಗ್ಯದ ಕುರಿತು ಮಾಹಿತಿನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ರಾಮಚಂದ್ರ ಯುವಸ್ಪಂದನ ಸಂಸ್ಥೆಯ ಅಧ್ಯಕ್ಷರಾದ ನರಸಿಂಹ ಗಾಣಿಗ , ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ರಾಮಚಂದ್ರ ಆಚಾರ‍್ಯ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉದ್ಯಮದಲ್ಲಿ ಪ್ರತಿದಿನವೂ ಹೊಸ ಸವಾಲುಗಳು ಎದುರಾಗುತ್ತಿರುತ್ತವೆ. ಸವಾಲು ಹಾಗೂ ಗೆಲುವನ್ನು ಸಮಚಿತ್ತದಿಂದ ನಿಭಾಯಿಸಿ ಮುಂದುವರಿದವರು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮುತ್ತಾರೆ ಎಂದು ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಭಾನುವಾರ ಯಡ್ತರೆ ರಾಹುತನಕಟ್ಟೆ ಶ್ರೀ ಗುರುರಾಘವೇಂದ್ರ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡ ದುರ್ಗಾಂಬಾ ಪ್ರಿಂಟರ‍್ಸ್‌ನ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ ದಿನಗಳದಂತೆ ವ್ಯವಹಾರದ ಸ್ವರೂಪ ಬದಲಾಗುತ್ತಿದ್ದು, ನವ ತಂತ್ರಜ್ಞಾನ ಹಾಗೂ ವೇಗಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಿಂಟಿಂಗ್ ಪ್ರೆಸ್ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಉದ್ಯಮವನ್ನು ಲಾಭದ ದೃಷ್ಟಿಯಿಂದ ಕಂಡವರು ಹಣವನ್ನಷ್ಟೇ ಗಳಿಸುತ್ತಾರೆ. ಲಾಭದ ಜೊತೆಗೆ ಜನರ ವಿಶ್ವಾಸ ಗಳಿಸಿದವರು ಸ್ವರ್ಧೆಯ ನಡುವೆಯೂ ಬಹುಕಾಲ ಚಲಾವಣೆಯಲ್ಲಿರುತ್ತಾರೆ. ೨೨ ವರ್ಷಗಳ ಹಿಂದೆ ಮುದ್ರಣ ಕ್ಷೇತ್ರದಲ್ಲಿ ಸ್ವರ್ಧೆ ಇದ್ದ ಸಂದರ್ಭದಲ್ಲಿಯೂ ತಿಮ್ಮಪ್ಪ ಪೂಜಾರಿ ಅವರು ಆರಂಭಿಸಿದ ದುರ್ಗಾಂಬ ಪ್ರಿಂಟರ‍್ಸ್ ಇಂದು ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮಾಡುತ್ತಿರುವುದರ ಹಿಂದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುವೈತ್/ಕುಂದಾಪುರ: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೆಡೆದ 44ನೆಯ ವಾರ್ಷಿಕ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ ಅವರಿಗೆ ಈ ಸಾಲಿನ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಸುರೇಶ್ ಅವರು ಕಳೆದ 17 ವರ್ಷಗಳಿಂದ ಕುವೈತ್ ನಲ್ಲಿ ಹಲವಾರು ಸಂಘ-ಸಂಸ್ಥೆಗಳ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಕುವೈತ್‌ನಲ್ಲಿ ಕನ್ನಡ ಚಲನಚಿತ್ರ ವಿತರಕರಾಗಿ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ವಿಶೇಷವಾಗಿ ಸಾಮಾಜಿಕ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿರುವುದಕ್ಕಾಗಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ ದಾಸ್, ಡಾ|ಮಹೇಶ್ ಜೋಷಿ, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್. ಎ. ಚನ್ನೇಗೌಡ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಸ್ಥಾಪಕಾಧ್ಯಕ್ಷ ಡಾ|ಎಚ್.ಎಲ್.ಎನ್. ರಾವ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕುಂದಾಪುರಿಗರ ಸಂಖ್ಯೆ ಬಹಳ ದೊಡ್ಡದಿದೆ. ತಮ್ಮ ವಿಶಿಷ್ಟ ಶೈಲಿಯ ಕನ್ನಡ ಮಾತಿನಿಂದಲೇ ಗಮನ ಸೆಳೆಯುವ ಇವರ ‘ಆಡು ನುಡಿ’ ಕೇಳೋಂದೆ ಚೆಂದ. ಕುಂದಾಪುರದ ಕನ್ನಡ ಅಂತಲೇ ಖ್ಯಾತಿ ಗಳಿಸಿರುವ ಈ ಭಾಗದ ಜನರ ಪ್ರೀತಿಯೂ ದೊಡ್ಡದು. ಹೊಟೇಲ್, ಬೇಕರಿ, ಬ್ಯಾಂಕಿಂಗ್ ಉದ್ಯೋಗ, ಪತ್ರಿಕೋದ್ಯಮ, ಸಿನೆಮಾ ಹೀಗೆ ಇವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಹೀಗೆ ಉದರ ನಿಮಿತ್ಯಂ ಉದ್ಯೋಗ ಅನ್ನೋ ಹಾಗೆ ಬೆಂಗಳೂರು ಸೇರಿರೋ ಕುಂದಾಪುರದ ಕೆಲ ಯುವ ಮನಸ್ಸುಗಳು ಇದೀಗ ತಮ್ಮದೇ ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡಿವೆ. ‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಎಂಬ ಚೆಂದದ ಹೆಸರಿಟ್ಟುಕೊಂಡಿರೋ ಈ ಯುವ ಸಂಘಟನೆ ಲೋಕಾರ್ಪಣೆಗೊಂಡಿತು. ನಾಗರಬಾವಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಂಡದ ಲೋಗೋ ಹಾಗೂ ಟೀ ಶರ್ಟ್ ಅನಾವರಣಗೊಳಿಸಲಾಯ್ತು. ಕೆಜಿಎಫ್ ಖ್ಯಾತಿಯ ಹೆಸರಾಂತ ಸಂಗೀತ ನಿರ್ದೇಶಕ, ಕುಂದಾಪುರದವರೇ ಆದ ರವಿ ಬಸ್ರೂರು, ತಂಡದ ಲೋಗೋವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ತಂಡದ ಸದಸ್ಯರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಡಾ| ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್(ರಿ.)ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಕುಂದಗನ್ನಡ ಕಟ್ಟುವಲ್ಲಿ ಪ್ರಧಾನ ಭೂಮಿಕೆ ವಹಿಸಿದ ದಿ. ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಪುರಸ್ಕಾರಕ್ಕೆ ಕುಂದಕನ್ನಡಕ್ಕೆ ಹೊಸ ಭಾಷ್ಯ ಬರೆದ, ಕರ್ನಾಟಕದ ಮೂಲೆ ಮೂಲೆಗೂ ಕುಂದಕನ್ನಡ ಕಂಪನ್ನು ಪಸರಿಸಿದ, ಮಾತಿನಮೋಡಿಯ ಮೂಲಕ ಎಲ್ಲರನ್ನು ನಗುವಿನ ಲೋಕಕ್ಕೆ ಕರೆದೊಯ್ಯಬಲ್ಲ, ಕುಂದಕನ್ನಡ ಸಾಂಸ್ಕೃತಿಕ ರಾಯಭಾರಿ ಮನು ಹಂದಾಡಿ ಅವರು ಆಯ್ಕೆಯಾಗಿದ್ದಾರೆ. ಕಾರಂತ ಥೀಮ್ ಪಾರ್ಕ್‌ನಲ್ಲಿ ಜುಲೈ ೧೪ರಂದು ರಂದು ಅಪರಾಹ್ನ ೨ ಗಂಟೆಗೆ ನಡೆಯುವ ತಿಂಗಳ ಸಡಗರ -ತಿಂಗಳ ಪುರಸ್ಕಾರ ತೊಳ್ಸಂಬಟ್ಟೆ-೨೦೧೯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಮನು ಹಂದಾಡಿ ಅವರ ವಿಶೇಷ ಉಪನ್ಯಾಸ ಹಾಗೂ ಅಮೃತ ಉಪಾಧ್ಯ ಅವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಘು ತಿಂಗಳಾಯ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಟಿ-ರಂಗಕರ್ಮಿ ಶ್ರೀಮತಿ ಪೂರ್ಣಿಮ ಸುರೇಶ್ ಅವರನ್ನು ಡಾ|| ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ|| ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಲಾಯಿತು. ಅಮೋಘ (ರಿ) ಹಿರಿಯಡ್ಕ ಇವರಿಂದ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆದ ಸತ್ಯನಾಪುರದ ಸಿರಿ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಗೌರವಿಸಲಾಯಿತು. ಏಕವ್ಯಕ್ತಿ ನಾಟಕದಲ್ಲಿ ಸಿರಿ ಪಾತ್ರವನ್ನು ತುಂಬಾ ಸುಂದರವಾಗಿ ನಿರ್ವಹಿಸಿದರು ಈ ಸಂದರ್ಭದಲ್ಲಿ ಕ.ಸ.ಪ ಜಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ,ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್, ಯಕ್ಷಗಾನ ಕಲಾವಿದ ಸುಜಯೀಂದ್ರ ಹಂದೆ, ಸಾಂಸ್ಕೃತಿಕ ಪಾರ್ವತಿ ಜಿ. ಐತಾಳ್, ಕಸಾಪದ ನಾರಾಯಣ ಮಡಿ ಹಾಗೂ ಅಮೋಘ ತಂಡದ ಸದಸ್ಯರು ಉಪಸ್ಥಿತರಿದ್ದರು. ಕಾರಂತ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಅಪಘಾತಗಳು ಹೆಚ್ಚುತ್ತಿದ್ದು, ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು. ಅಪಘಾತ ವಲಯ ಹಾಗೂ ಜನನಿಭೀಡ ಸ್ಥಳಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ಇಂತಹ ರಸ್ತೆ ಸುರಕ್ಷತಾ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ಸಕ್ರೀಯವಾಗಿ ತೊಡಗಿಸಿಕೊಂಡು ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಯಾಣಿಕರಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಮಾಹಿತಿ ನೀಡಿ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಹೇಳಿದರು. ಅವರು ಹೊಸಾಡು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಭಾನುವಾರ ಜರಗಿದ ಬ್ಯಾರಿಕೇಡ್ ಹಸ್ತಾಂತರ ಸಮಾರಂಭದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊಬೆಷನರಿ ಎಸ್‌ಐ ಸುದರ್ಶನ್, ಹೊಸಾಡು ಗ್ರಾಪಂ ಸದಸ್ಯರಾದ ರಮೇಶ್ ಆಚಾರ್, ಸೀತಾರಾಮ ಶೆಟ್ಟಿ, ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಕಿಶೋರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: 2018 ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರನ್ನಾಗಿ ಕುಂದಾಪುರದ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ಮಾಪಕ ಮತ್ತು ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ಯವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2017 ನೇ ಸಾಲಿನಲ್ಲಿ ಕನ್ನಡಕ್ಕೆ ತಮ್ಮ ಗುಲ್ವಾಡಿ ಟಾಕೀಸ್ ನಿರ್ಮಾಣದ ” ರಿಸರ್ವೇಶನ್ ” ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ( ರಜತ ಕಮಲ) ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ( ಬಿಫ್ಸ್ 2018) ನ್ನು ತಂದು ಕೊಟ್ಟಿರುವ ಗುಲ್ವಾಡಿ ಪ್ರಸ್ತುತ ಕನ್ನಡದ ಹಿರಿಯ ಲೇಖಕಿ ನಾಡೋಜ ಡಾ. ಸಾ. ರಾ. ಅಬುಬಕ್ಕರ್ ಅವರ ಕಥೆಯನ್ನಾಧರಿಸಿ ಮೊದಲ ಬಾರಿಗೆ ತನ್ನದೆ ಚಿತ್ರಕಥೆ ಮತ್ತು ನಿರ್ದೇಶನದ ಇನ್ನು ಹೆಸರಿಡದ ಬ್ಯಾರಿ ಮತ್ತು ಕನ್ನಡ ಭಾಷೆಯ ಚಿತ್ರದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದ್ದಾರೆ. ಬ್ಯಾರಿ ಭಾಷೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಚಿತ್ರವನ್ನು…
