ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಷ್ಟ್ರದ ಕುರಿತಾದ ಅಭಿಮಾನ, ವಿವಿಧತೆಯಲ್ಲಿ ಏಕತೆಯನ್ನು ಕಾಪಾಡುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಂವಿಧಾನ ತಿಳಿಸಿರುವ ಮೂಲಭೂತ ಕರ್ತವ್ಯವನ್ನು ಯುವಜನತೆ ನ್ಯಾಯಯುತವಾಗಿ ಪಾಲಿಸಿದರೆ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಬಿ.ಬಿ.ಹೆಗ್ಡೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ ಹೇಳಿದರು. ಕುಂದಾಪುರ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆಯಲ್ಲಿ ಮಾತನಾಡಿ ವೈಯಕ್ತಿಕ ನೆಲೆಯಲ್ಲಿ ರಾಷ್ಟ್ರದ ಕುರಿತಾದ ಸಕರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಬದುಕನ್ನು ರಾಷ್ಟ್ರಕ್ಕೆ ಸಮರ್ಪಿಸಬೇಕು ಎಂದರು. ಕಾಲೇಜು ನಿರ್ದೇಶಕ ಪ್ರೊ. ದೋಮ ಚಂದ್ರಶೇಖರ್, ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ಕಾಲೇಜು ಎನ್.ಎಸ್.ಎಸ್. ಯೋಜನಾಧಿಕಾರಿ ಸತೀಶ್ ಶೆಟ್ಟಿ ಹೆಸ್ಕತ್ತೂರು ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಕೇವಲ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಷ್ಟೇ ಪ್ರಮುಖವಲ್ಲ ಆದರೆ ಪ್ರತೀ ವಿದ್ಯಾರ್ಥಿಯು ನಮ್ಮ ದೇಶದ ಸಂಸ್ಕೃತಿ ಮತ್ತು ಸನಾತನತೆಯನ್ನು ಕಾಪಾಡುವ ಮುಂದಿನ ಭಾವೀ ಪ್ರಜೆಗಳು ಈ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ತುಂಬುವಲ್ಲಿ ಶಿಕ್ಷಣ ಸಂಸ್ಥೆ, ಶಿಕ್ಷಕರು ಹಾಗೂ ಪಾಲಕರು ಶ್ರಮ ವಹಿಸಬೇಕು ಎಂದು ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಅರವಿಂದ ಮರಳಿಯವರು ವಾರ್ಷಿಕ ಪರೀಕ್ಷೆಯನ್ನು ವಿದ್ಯಾರ್ಥಿಗಳು ಹೇಗೆ ಯಶಸ್ವಿಯಾಗಿ ಬರೆಯಬೇಕು ಮತ್ತು ೨೦೧೯-೨೦ನೇ ಶೈಕ್ಷಣಿಕ ವರ್ಷದಲ್ಲಿ ಪರಿಚಯಿಸುವ ಪುಸ್ತಕದ ಬಗ್ಗೆ ಪಾಲಕರಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಂಟಿ. ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಶಿಕ್ಷಕಿಯರಾದ ಸುಮನ್ ಹಾಗೂ ಬಬಿತ ಕ್ರಮವಾಗಿ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸೇರಿದಂತೆ ಡಿಎಆರ್ನ ಇಬ್ಬರು ಪೊಲೀಸ್ ಪೇದೆಗಳನ್ನ ಬಂಧಿಸಲಾಗಿದೆ. ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಪೇದೆಗಳಾದ ಪವನ್ ಅಮೀನ್, ವೀರೇಂದ್ರ ಆಚಾರ್ಯ ಬಂಧಿತರು. ಕಳೆದ ತಿಂಗಳ ಜನವರಿ 27 ರಂದು ಕೋಟದಲ್ಲಿ ಭರತ್ ಹಾಗೂ ಯತೀಶ್ ಎಂಬುವವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಆರೋಪಿಗಳ ಜೊತೆ ಪೇದೆಗಳು ನಿಕಟ ಸಂಪರ್ಕ ಹೊಂದಿದ್ದರು ಹಾಗೂ ಹೆಬ್ರಿಯ ಕುಚ್ಚೂರಿನಲ್ಲಿರುವ ಪವನ್ ಅಮೀನ್ ಮನೆಯಲ್ಲೇ ಆರೋಪಿಗಳು ತಂಗಿದ್ದರು. ಇನ್ನು ಆರೋಪಿಗಳಿಗೆ ಮೊಬೈಲ್ ಹಾಗೂ ಹೊಸ ಸಿಮ್ ಕಾರ್ಡ್ ಕೊಡಿಸಿದ್ದೂ ಅಲ್ಲದೇ ಕಾನ್ಸ್ಟೇಬಲ್ ವೀರೇಂದ್ರ ಜೊತೆ ಸೇರಿ ಕಾರಿನ ವ್ಯವಸ್ಥೆಯನ್ನು ಪವನ್ ಮಾಡಿಕೊಟ್ಟು, ಆಗುಂಬೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಕುಮ್ಮಕ್ಕಿನಂತೆ ಕೊಲೆ ನಡೆದಿತ್ತು. ಇದನ್ನೂ ಓದಿ: ► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 . ► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್‌ನ ಮಾಜಿ ನಿರ್ದೇಶಕ ಸಿದ್ಧರಾಜು ಅವರು ಶ್ರಿರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನ ಪ್ರಧಾನ ಕಛೇರಿಗೆ ಭೇಟಿ ನೀಡಿ ಸಹಕಾರಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಸಹಕಾರಿ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರನ್ನು ಗೌರವಿಸಿದರು. ನಿರ್ದೇಶಕ ಶಿವರಾಮ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಿ. ಯಡ್ತರೆ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಜೆಸಿಐ ಶಿರೂರು ಘಟಕದ ವತಿಯಿಂದ ಅರಮನೆಹಕ್ಲು ಸನ್ನಿ ಕ್ರಿಕೆಟರ್ಸ್ ತಂಡಕ್ಕೆ ಕ್ರೀಡೋಪಕರಣ ವಿತರಣೆ ಮಾಡಲಾಯಿತು. ಈ ಸಂದರ್ಭ ಶಿರೂರು ಜೆಸಿಐ ಅಧ್ಯಕ್ಷರಾದ ನಾಗೇಶ್ ಕೆ., ಕಾರ್ಯದರ್ಶಿ ನಾಗೇಂದ್ರ ಪ್ರಭು, ಗಿರಿಶ್ ಮೇಸ್ತ, ವಿನೋದ್ ಮೇಸ್ತ ಶಿರೂರು ಮೊದಲಾದವರು ಹಾಜರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಜೆಸಿಐ ಶಿರೂರು ಘಟಕದ ವತಿಯಿಂದ ಶಿರೂರು ಪರಿಸರದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಶಿರೂರು ಜೆಸಿಐ ಅಧ್ಯಕ್ಷರಾದ ನಾಗೇಶ್ ಕೆ., ಕಾರ್ಯದರ್ಶಿ ನಾಗೇಂದ್ರ ಪ್ರಭು, ಗಿರಿಶ್ ಮೇಸ್ತ, ವಿನೋದ್ ಮೇಸ್ತ ಶಿರೂರು ಮೊದಲಾದವರು ಹಾಜರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ ಮತ್ತು ಲೇಖಕಿ ಡಾ. ಪಾರ್ವತಿ ಜಿ.ಐತಾಳ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೊಡಮಾಡುವ 2018ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳ ಮತ್ತು ತುಳು-ಹೀಗೆ ಐದು ಭಾಷೆಗಳಲ್ಲಿ ಬರೆಯುವ ಪಾರ್ವತಿ ಐತಾಳ್ ಈ ಭಾಷೆಗಳ ನಡುವೆ ಪ್ರಸಿದ್ಧ ಲೇಖಕರ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರಲ್ಲದೆ, ಸ್ವತಂತ್ರವಾಗಿಯೂ ಸಣ್ಣಕಥೆ, ಕಾದಂಬರಿ, ವಿಮರ್ಶೆ, ನಾಟಕ ಮತ್ತು ವೈಚಾರಿಕ ಪ್ರಬಂಧ ಕೃತಿಗಳನ್ನು ಪ್ರಕಟಿಸಿದ್ದಾರೆ. ಇದುವರೆಗೆ 40 ಅನುವಾದಿತ ಕೃತಿಗಳು, 23 ಸ್ವತಂತ್ರ ಕೃತಿಗಳು, ನಾಲ್ಕು ಸಂಪಾದಿತ ಮತ್ತು ಸಹಲೇಖಕರಾಗಿ ೯ಕೃತಿಗಳನ್ನು ಪ್ರಕಟಿಸಿದ್ದಾರೆ. ೮ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾರ್ಚ್ 3 ರಂದು ಜರಗಲಿರುವ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಇವರು ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇತ್ತೀಚೆಗೆ ಗುಜ್ಜಾಡಿಯ ಶ್ರೀ ಬ್ರಹ್ಮ ಬಂಟರ ಮತ್ತು ಕೋಟಿ ಚೆನ್ನಯ್ಯ ದೈವಗಳ ಗರಡಿಯಲ್ಲಿ ನಡೆದ ಯಕ್ಷಗಾನದ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ ಕುಮಾರ್ ಕಟೀಲು ಇವರನ್ನು ಗರಡಿಯ ಆಡಳಿತಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಢಳಿತ ಮಂಡಳಿಯ ಅಧ್ಯಕ್ಷ ಶಿವ ನಾಯ್ಕ್, ಕಾರ‍್ಯದರ್ಶಿ ಜಿ.ಸುಕ್ರ ಪೂಜಾರಿ, ದೈವ ಪಾತ್ರಿ ರಾಘವೇಂದ್ರ ಪೂಜಾರಿ. ಅರ್ಚಕರಾದ ಸುಬ್ಬ ಪೂಜಾರಿ, ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಆನಂದ ಪೂಜಾರಿ , ರಾಜು ಶ್ರೀಯಾನ್ , ಸುರೇಂದ್ರ ಕೊಠಾರಿ, ಉಪನ್ಯಾಸಕ ಕೃಷ್ಣ ಗುಜ್ಜಾಡಿ ಮತ್ತು ಕೋಟಿ ಚೆನ್ನಯ್ಯ ಯುವಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದಲ್ಲಿಯೇ ಮೊದಲ ಭಾರಿಗೆ ತೆರಿಗೆ ಇಲಾಖೆ ಮಂಗಳೂರು ವಿಭಾಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಬ್ಯಾಂಕಿಂಗ್ ವ್ಯವಹಾರ ಹಾಗೂ ಲಾಭದ ಮೇಲೆ ತೆರಿಗೆ ವಿಧಿಸಿರುವ ಕ್ರಮ ಕಾನೂನಿಗೂ ವಿರುದ್ಧವಾಗಿದ್ದು, ಕೃಷಿಕರ ನೆರವಿಗಾಗಿರುವ ಸಂಸ್ಥೆಗಳ ಮೇಲಿನ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಹಾರದ ಬಗೆಗೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿ, ಅವರು ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಶನಿವಾರ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾಭವನದಲ್ಲಿ ಜರುಗಿದ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಜರುಗಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 2006ರ ಹಣಕಾಸು ಕಾಯಿದೆ 80ಪಿ ತಿದ್ದುಪಡಿಯಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ ಹಾಗೂ ಪ್ರಾಥಮಿಕ ಸಹಕಾರಿ ಕೃಷಿ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಲತಃ ಕುಂದಾಪುರದ ನಾಗೂರಿನ ನಿವಾಸಿ ಯಾಗಿದ್ದು, ಕನ್ನಡ ಹಾಗೂ ಇನ್ನಿತರ ಭಾಷೆಯ ಚಲನ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ಬೈಕ್ ಕಾರುಗಳನ್ನು ವಿಶಿಷ್ಠ ರೀತಿಯಲ್ಲಿ ಸಜ್ಜು ಗೊಳಿಸುತಲಿದ್ದ ದಿಲೀಪ್ ರಾಜ್(48) ಅವರು ಬೆಂಗಳೂರಿನ ತನ್ನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಅವರಿಗೆ ಅವರ ಮನೆಯಲ್ಲಿದ್ದಾಗ ಹೃದಯಾಘಾತವಾಗಿದೆ. ಮನೆಯಿಂದ ಜಯದೇವ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ನಾಯಕ ನಟರೊಂದಿಗೆ, ನಿರ್ದೇಶಕ ನಿರ್ಮಾಪಕರೊಂದಿಗೆ ಒಡನಾಟಹೊಂದಿದ್ದ ಅವರು. ಕಿರಿಕ್ ಪಾರ್ಟಿ, ರಾಜರಥ, ಅಣ್ಣಾ ಬಾಂಡ್, ಉಪ್ಪಿ-೨ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಿಗಾಗಿ ತನ್ನದೇ ವರ್ಕ ಶಾಪ್ ನಲ್ಲಿ ವಿಶಿಷ್ಟ ಶೈಲಿಯ ಬೈಕ್ ಕಾರುಗಳನ್ನು ಸಿದ್ಧಪಡಿಸಿ ಜನಪ್ರಿಯರಾಗಿದ್ದರು. ಸಿನೆಮಾಗಳಿಗಾಗಿಯೇ ಅವರು ಸಿದ್ಧಪಡಿಸಿದ ವಾಹನಗಳು ಆಕರ್ಷಣೆ ಪಡೆದುಕೊಂಡಿದ್ದವು. ಸೋಮಕ್ಷತ್ರೀಯ ಗಾಣಿಗ ಸಮಾಜದಲ್ಲಿ ಅತ್ಯಂತ ಚಟುವಟಿಕೆಯಿಂದಿದ್ದ ದಿಲೀಪ್ ರಾಜ್ ಇತ್ತೀಚಿಗೆ ನಡೆದ ಸಮಾಜದ ಕಾರ್ಯಕ್ರಮ ಪ್ರತಿಭಾ ಸಂಭ್ರಮದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಲವಲವಿಕೆಯಿಂದ…
