Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ವಕ್ವಾಡಿಯ ನಾಗರಾಜ್ ಶೆಟ್ಟಿ ಇವರಿಗೆ ಜೇಸಿಐ ಕುಂದಾಪುರ ಸಿಟಿ ವತಿಯಿಂದ ಧನಸಹಾಯ ಮಾಡಲಾಯಿತು. ಅಧ್ಯಕ್ಷ ಪ್ರಶಾಂತ್ ಹವಾಲ್ದಾರ್ ಪೂರ್ವಾಧ್ಯಕ್ಷ ಶ್ರೀಧರ್ ಸುವರ್ಣ ಹಾಗೂ ಕಾರ್ಯದರ್ಶಿ ಮಹೇಶ್ ಶೇಟ್ ಧನಸಹಾಯವನ್ನು ಅವರ ಪತ್ನಿ ಶಾಂತಾ ಇವರ ಬಳಿ ನೀಡಲಾಯಿತು ಈ ಸಂದರ್ಭದಲ್ಲಿ ಮನೆಯವರಾದ ಸುಜಾತಾ, ಗಣೇಶ್ ಇವರು ಉಪಸ್ಥಿತರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಿಚಾರಣೆ ಬಯಸುವ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಬಹುದು. ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಹಾಗೂ ಗಂಭೀರವಲ್ಲದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ದೃಷ್ಠಿಯಿಂದ ದೂರು ಅರ್ಜಿಗಳನ್ನು ಏಪ್ರಿಲ್ 27 ರಂದು ಬೆಳಿಗ್ಗೆ 11 ಗಂಟೆಯಿಂದ 12:30ರವರೆಗೆ ಬೈಂದೂರು ಪ್ರವಾಸಿ ಮಂದಿರ, 29 ರಂದು ಬೆಳಿಗ್ಗೆ 11 ಗಂಟೆಯಿಂದ 12:30 ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಹಾಗೂ 30ರಂದು 11 ಗಂಟೆಯಿಂದ 12:30 ರವರೆಗೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ದೂರು ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಕರ್ನಾಟಕ ಲೋಕಾಯುಕ್ತ ಉಡುಪಿ ಪೊಲೀಸ್ ಉಪಾಧೀಕ್ಷಕರು ದೂ.ಸಂಖ್ಯೆ:0820-2527770, ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ ದೂ.ಸಂಖ್ಯೆ: 0820-2536661 ಸಂಪರ್ಕಿಸಬಹುದು ಎಂದು ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಉಡುಪಿ ಇವರ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೈವಸ್ಥಾನಗಳು ಸ್ವಾಭಿಮಾನ ಹಾಗೂ ಪ್ರತಿಭಟನೆಯ ಕೇಂದ್ರಗಳಾಗಿ ಸ್ಥಾಪಿತವಾದವುಗಳು. ಅವು ನಿಜವಾಗಿ ನಮ್ಮ ಸಮುದಾಯದ ಮೂಲವಾಗಿದ್ದು ಸರಳವಾದ ಆಚರಣೆ, ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಮತ್ತು ಮನುಷ್ಯ ಕೇಂದ್ರವಾಗಿ ಯೋಚನೆ ಮಾಡುವ ಕ್ರಮವೇ ಇಲ್ಲಿ ಪ್ರಧಾನವಾದುದು ಎಂದು ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರದೀಪಕುಮಾರ್ ಶೆಟ್ಟಿ ಕೆಂಚನೂರು ಹೇಳಿದರು. ಇಲ್ಲಿನ ಯಡ್ತರೆ ಶ್ರೀ ಪಾಣ್ತಿಗರಡಿ ಹಾಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಪುನರ್‌ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡಿ ಒಳ್ಳೆಯದನ್ನು ಹಾಗೂ ಉಪಕಾರ ಮಾಡುವವರನ್ನು ದೇವರಂತೆ ಭಾವಿಸುವುದು ಮನುಷ್ಯಸಹಜ ಗುಣವಾಗಿದ್ದು, ಕರಾವಳಿಯ ಬಹುಪಾಲು ದೈವಗಳು ಇಂತಹ ಗುಣಗಳಿಂದಲೇ ದೈವತ್ವದ ಸ್ಥಾನ ಪಡೆದು ಇಂದಿಗೂ ಪೂಜಿಸಲ್ಪಡುತ್ತಿದೆ. ಇಲ್ಲಿ ಮೇಲು ಕೀಳು ಎಂಬ ಭೇದಭಾವವಿಲ್ಲದೇ, ಹತ್ತಿರದಿಂದ ದೇವರನ್ನು ಕಾಣುವ ಕ್ರಮ ರೂಡಿಯಲ್ಲಿದೆ. ದೈವಸ್ಥಾನದ ಆಚರಣೆಗಳು ಸಮುದಾಯದ ರೂಪಕವಾಗಿದ್ದು ಮುಂದಿನ ತಲೆಮಾರು ಚೈತನ್ಯಶೀಲರಾಗಿ ಪುನಃ ಬೇರನ್ನು ಕಂಡುಕೊಂಡು, ಸಹಬಾಳ್ವೆಯ ಸಮಾಜವನ್ನು ಕಂಡುಕೊಳ್ಳುವಂತಾಗಬೇಕು ಎಂದು ಆಶಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕಿನ ಉಳ್ಳೂರು ಗ್ರಾಮದ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಶ್ರೀ ಗಣಪತಿ, ಶಾಸ್ತಾ, ನಾಗ ದೇವರ ನೂತನ ಪ್ರತಿಷ್ಠೆ ಹಾಗೂ ನೂತನ ಸುತ್ತು ಪೌಳಿ, ತೀರ್ಥಬಾವಿ, ರಾಜಗೋಪುರಗಳ ಅರ್ಪಣಾ ಮಹೋತ್ಸವವು ಎ.29ರಿಂದ ಮೇ.02ರ ವರೆಗೆ ನಡೆಯಲಿದೆ. ಎ.29ರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ssಸ್ವಸ್ತಿಪುಣ್ಯಾಹ ವಾಚನ ಮತ್ತು ನಾಂದಿ, ಎ.30ರ ಬೆಳಿಗ್ಗೆ ಶ್ರೀ ಗಣಪತಿ ದೇವರಿಗೆ ಬ್ರಹ್ಮ ಬ್ರಹ್ಮಕಲಶ ಸ್ಥಾಪನೆ, ಸಂಜೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸಹಸ್ರ ಕುಂಭ ಸ್ಥಾಪನೆ,ರ ಬೆಳಿಗ್ಗೆ ಸ್ವಸ್ತಿಪುಣ್ಯಾಹ ವಾಚನ, ಮಧುಪರ್ಕ ಪೂಜೆ, ಕೌತುಕ ಬಂಧನ, ಋತ್ವಿಗ್ವರಣೆ, ಗಣಹೋಮ, ನವಗ್ರಹ ಹೋಮ, ಬಿಂಬಶುದ್ಧಿ, ಕಳಶ ಸ್ಥಾಪನೆ, ಬಿಂಬಶುದ್ಧಿ ಹೋಮ, ಬಿಂಬ ಜಲಾಧಿವಾಸ, ಬಿಂಬಶುದ್ಧಿ ಕಲಶಾಭಿಷೇಕ, ನೇತ್ರೋನ್ಮೀಲನ, ಶಯ್ಯಾಕಲ್ಪನ, ಅನ್ನ ಸಂತರ್ಪಣೆ ನಡೆಯುವುದು. ಸಂಜೆ ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ, ವಾಸ್ತು ಹೋಮ, ಮಂಟಪ ಸಂಸ್ಕಾರ, ಅಧಿವಾಸ…

Read More

ಶಿವಮೊಗ್ಗ ಲೋಕಸಭಾ ಚುನಾವಣೆ: ಶೇ. 73.59 ಮತದಾನ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 75.29 ಮತ ಚಲಾವಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿವಮೊಗ್ಗ ಲೋಕಸಭಾ ಚುನಾವಣೆಗೆ ಬೈಂದೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಂತೆ ನಡೆದ ಮತದಾನ ಪೂರ್ಣಗೊಂಡಿದ್ದು, ಅಲ್ಲಲ್ಲಿ ಸಣ್ಣಪುಟ್ಟ ಅಡಚಣೆಗಳ ಹೊರತಾಗಿ ಬಹುಪಾಲು ಯಶಸ್ವಿಯಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ. 73.59ರಷ್ಟು ಮತದಾನವಾಗಿದ್ದರೇ, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 75.29ರಷ್ಟು ಮತದಾನವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೂರು ಗ್ರಾಮ ಗರಡಿಬೆಟ್ಟು ಮತದಾರರ ಮತದಾನ ಬಹಿಷ್ಕಾರ ಮುಂದಾಗಿದ್ದರಿಂದ ಮತದಾನದ ಪ್ರಮಾಣ ಕುಸಿಯಿತು. ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮತದಾರ ಮಹೇಶ್ ನಾಯ್ಕ್ ಎಂಬುವರ ಹೆಸರು ಚುನಾವಣಾ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾನದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.  ಹೆಮ್ಮಾಡಿ, ವಂಡ್ಸೆ, ಹಕ್ಲಾಡಿ, ನೆಂಪು ಬೂತ್‌ಗಳಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಮತದಾನ ಕೊಂಚ ನಿಧಾನವಾಯಿತು. ಹೆಮ್ಮಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ತಲ್ಲೂರು ಸರ್ಕಾರಿ ಪ್ರಾಥಮಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಬಿಜೂರು ಗ್ರಾಮದ ಗರಡಿಬೆಟ್ಟು ಪರಿಸರದ ಮತದಾರರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಬಿಜೂರಿನಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ಹಾಕಿದ್ದನ್ನು ಅಧಿಕಾರಿಗಳು ಮನ ಒಲಿಸಿ ತೆರವು ಮಾಡಿದರು. ಆದರೆ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಚುನಾವಣೆ ಬಹಿಷ್ಕರಿಸಿದ್ದರೆ. ಕಳೆದ ೨೦ ವರ್ಷದಿಂದ ನೀರಿನ ಸಮಸ್ಯೆ ಪರಿಹಾರ ಮಾಡುವಂತೆ ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಸಂಜೆಯ ವೇಳೆಗೆ ಆ ಬೂತ್‌ನಲ್ಲಿ ಶೇ.50ರಷ್ಟು ಮತದಾನವಷ್ಟೇ ಆಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ವಂಡ್ಸೆಯ ಬೆಳ್ಳಾಲದ ಮೂಡಮುಂದ ಶಾಲೆಯಲ್ಲಿ ಮತ ಚಲಾಯಿಸಿದರು. ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕನ್ಯಾನ ಶಾಲೆಯಲ್ಲಿ ಮತದಾನ ಮಾಡಿದರು. ಕುಟುಂಬಿಕರ ಜೊತೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹುಟ್ಟೂರು ಕೆರಾಡಿಯಲ್ಲಿ ಮತದಾನ ಮಾಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರಾಡಿಯಲ್ಲಿ ಸರತಿಸಾಲಿನಲ್ಲಿ ನಿಂತು ಮತದಾನ ಮಾಡಿದ ನಟ ರಿಷಬ್ ಶೆಟ್ಟಿ ಬಳಿಕ ಎಲ್ಲೂರು ತಪ್ಪದೇ ಮತದಾನ ಮಾಡುವಂತೆ ಕೇಳಿಕೊಂಡರು. https://publish.twitter.com/oembed? url=https://twitter.com/kundapra/status/1120719281149239298

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ೨೩ರಂದು ನಡೆಯಬೇಕಾದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆಯನ್ನು ನಿರ್ವಹಿಸಬೇಕಾದ ಎಲ್ಲ ಸಿಬ್ಬಂದಿ ಸೋಮವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ಥಾಪಿಸಿರುವ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಿ ತಮ್ಮತಮ್ಮ ಕೇಂದ್ರಗಳಿಗೆ ಅಗತ್ಯವಿರುವ ಮತದಾನ ಯಂತ್ರ ಮತ್ತು ಅನ್ಯ ಪರಿಕರಗಳನ್ನು ಸ್ವೀಕರಿಸಿ, ತಮಗೆ ನಿಗದಿಗೊಳಿಸಿದ ವಾಹನಗಳಲ್ಲಿ ತೆರಳಿದರು. ಸಿಬ್ಬಂದಿ ಹಾಜರಾತಿ ದಾಖಲಿಸಲು ಮತ್ತು ಪರಿಕರಗಳನ್ನು ವಿತರಿಸಲು ಸೆಕ್ಟರ್ ಅಧಿಕಾರಿಗಳ ನೇತೃತ್ವದ ೨೦ ವಿಭಾಗಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಸಂಬಂಧಿಸಿದ ವಿವರಗಳ ಫಲಕಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗಿತ್ತು. ಬೆಳಗ್ಗಿನಿಂದ ಬಂದ ಸಿಬ್ಬಂದಿ ಫಲಾಹಾರ ಪೂರೈಸಿ, ತಮ್ಮ ವಿಭಾಗದಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡು, ಪರಿಕರಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿದರು. ಮಧ್ಯಾಹ್ನದ ಊಟದ ಬಳಿಕ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದ ಮತಯಂತ್ರಗಳನ್ನು ಪಡೆದು, ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಂಡರು. ಆ ಬಳಿಕ ತಮಗೆ ನಿಗದಿಯಾಗಿದ್ದ ವಾಹನಗಳ ಮೂಲಕ ಮತಗಟ್ಟೆಗಳತ್ತ ಮುಖ ಮಾಡಿದರು. ಅತ್ತ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸುವ ಕಾರ್ಯ ಕಾಲೇಜಿನ…

Read More

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲೂ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ಸರ್ಕಸ್ ಬೈಂದೂರು: ರಾಜ್ಯದಲ್ಲಿ 23ರಂದು ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡ ಸಿದ್ಧಗೊಂಡಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಕ್ಕೆ ಸೇರಿರುವ ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕ ಮತಗಳನ್ನು ಗಳಿಸಿ ಮೇಲುಗೈ ಸಾಧಿಸಲು ಹಾಲಿ ಸಂಸದ ಬಿಜೆಪಿಯ ಬಿ. ವೈ. ರಾಘವೇಂದ್ರ ಮತ್ತು ಅವರ ಪ್ರತಿಸ್ಪರ್ಧಿ ಮೈತ್ರಿಕೂಟದ ಭಾಗವಾದ ಜೆಡಿಎಸ್ನ ಮಧು ಬಂಗಾರಪ್ಪ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಕಾರಣ ತೆರವಾದ ಸ್ಥಾನಕ್ಕೆ ಕಳೆದ ವರ್ಷ ನವೆಂಬರ್ 3ರಂದು ಉಪ ಚುನಾವಣೆ ನಡೆದಿತ್ತು. ಅದರಲ್ಲಿ ಅವರ ಪುತ್ರ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರೇ ಎದುರಾಳಿಗಳಾಗಿದ್ದು, ರಾಘವೇಂದ್ರ ವಿಜಯಿಯಾಗಿದ್ದರು. ಇದೀಗ ಐದು ತಿಂಗಳು, ಇಪ್ಪತ್ತು ದಿನಗಳ ಬಳಿಕ ಇದೇ 23ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಉಪ ಚುನಾವಣೆಯಲ್ಲಿ…

Read More