ಕುಂದಾಪುರ: ಪುರಸಭೆ ಕುಂದಾಪುರ, ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ, ಶಿಶು ಅಭಿವೃದ್ಧಿ ಯೋಜನೆ, ರಾಮಕ್ಷತ್ರಿಯ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘ ಆಶ್ರಯದಲ್ಲಿ ಕುಂದಾಪುರ ರಾಮಮಂದಿರದಲ್ಲಿ ಪುರಸಭೆ ವ್ಯಾಪ್ತಿಯ ಅಂಗನಾವಡಿ ಮಕ್ಕಳ ದಿನಾಚರಣೆ ನಡೆಯಿತು. ಕುಂದಾಪುರ ಮಹಿಳಾ ಮತ್ತು ಮಕ್ಕಳ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷೆ ಗುಣರತ್ನಾ ಉದ್ಘಾಟಿಸಿದರು. ಕುಂದಾಪುರ ಪುರಸಭೆ ಅದ್ಯಕ್ಷೆ ಕಲಾವತಿ ಯು.ಎಸ್.ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರಸಭೆ ಸದಸ್ಯರಾದ ರಾಜೇಶ್ ಕಾವೇರಿ, ರವಿರಾಜ್ ಖಾರ್ವಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್.ಗುನ್ಸಾಲ್ವಿಸ್, ಸಿಡಿಪಿಓ ಸದಾನಂದ ನಾಯ್ಕ್ ಇದ್ದರು. ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಸಂಘ ಅಧ್ಯಕ್ಷೆ ಉಷಾ ಕೆ.ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾಗೀರಥಿ ಹೆಬ್ಬಾರ್ ಸ್ವಾಗತಿಸಿದರು. ಹರ್ಷವರ್ಧನ್ ಖಾರ್ವಿ ನಿರೂಸಿದರು. ಪ್ರೇಮಾ ವಂದಿಸಿದರು.
Author: ನ್ಯೂಸ್ ಬ್ಯೂರೋ
ನರೇಂದ್ರ ಎಸ್. ಗಂಗೊಳ್ಳಿ. ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರಬಿದ್ದಿರುವುದು ಎಲ್ಲಾ ಚಾನೆಲ್ ಗಳಲ್ಲಿ ಬಿಸಿಬಿಸಿ ಸುದ್ದಿಯಾಗಿ ಓಡಾಡುತ್ತಿದೆ. ಅದ್ಯಾವುದೋ ದೇಶ ಮುಳುಗಿ ಹೋಯಿತು ಅನ್ನೋ ಹಾಗೆ ಅವರ ಅಭಿಮಾನಿಗಳೆನ್ನಿಸಿಕೊಂಡವರು ಪ್ರತಿಕ್ರಿಯಿಸುವ ರೀತಿಯನ್ನು ಮತ್ತು ನಮ್ಮ ಚಾನೆಲ್ಗಳ ವಿಪರೀತ ಅನ್ನುವಂತಹ ಆಸಕ್ತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಹುಚ್ಚ ವೆಂಕಟ್ ಅವರೋ ಇವರೋ ಅನ್ನೋ ಸಂದೇಹ ಮೂಡತೊಡಗಿದೆ. ವೆಂಕಟ್, ರೆಹಮಾನ್. ರವಿ ಹಾಗೂ ಇನ್ನಿತರರು ಮಾಡಿದ್ದು ಸರಿಯೋ ತಪ್ಪೋ ಅನ್ನೋ ವಿಚಾರಕ್ಕಿಂತ ನಮ್ಮಲ್ಲಿನ ಹುಚ್ಚುತನವೇ ಇಲ್ಲಿ ಎದ್ದು ಕಾಣುತ್ತಿದೆ. ನಿಜ ಬಿಗ್ ಬಾಸ್ ಎಲ್ಲಾ ರಿಯಾಲಿಟಿ ಶೋಗಳ ಹಾಗೆ ಒಂದು ತರ್ಕ ಹೀನ ರಿಯಾಲಿಟ ಶೋ. ಹೀಗೆ ಕರೆಯಲೂ ಒಂದು ಕಾರಣವಿದೆ. ಇಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗಾಳುಗಳ ನಿರ್ವಹಣೆಯನ್ನು ಪರಿಶೀಲಿಸಿ(?) ಅಂಕಗಳನ್ನು ಕೊಡಲು ಒಂದಷ್ಟು ಗಣ್ಯರೆನ್ನಿಸಿಕೊಂಡ ತೀರ್ಪುಗಾರರಿರುತ್ತಾರೆ. ಆದರೆ ಪ್ರತೀ ಕಾರ್ಯಕ್ರಮದಲ್ಲೂ ಇವರಿಗೆ ವೋಟ್ ಮಾಡಲು ವೀಕ್ಷಕರನ್ನು ಕೇಳಿಕೊಳ್ಳಲಾಗುತ್ತದೆ. ಮತ್ತೆ ನಮ್ಮ ಮೂರ್ಖ ಜನತೆ ಅದಕ್ಕೆ ವೋಟು ಮಾಡುತ್ತಾರೆ ಮತ್ತು ಹಾಗೆ ವೋಟು…
ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂದಾಪುರ ಯೋಜನಾ ವ್ಯಾಪ್ತಿಯ ಸಿಬ್ಬಂದಿಗಳ ೨೦೧೫-೧೬ನೇ ಸಾಲಿನ ಸ್ನೇಹಕೂಟ ಇತ್ತೀಚೆಗೆ ಕುಂದಾಪುರದ ವ್ಯಾಸರಾಜ ಕಲ್ಯಾಣ ಮಂಟಪದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಪ್ರಾದೇಶಿಕ ಕಛೇರಿಯ ನಿರ್ದೇಶಕರಾದ ಮಹಾವೀರ ಅಜ್ರಿ, ಜಿಲ್ಲಾ ನಿರ್ದೇಶಕರಾದ ದುಗ್ಗೇಗೌಡ, ತಾಲೂಕು ಯೋಜನಾಧಿಕಾರಿ ಅಮರಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಯೋಜನಾ ಕಛೇರಿ ಸಿಬ್ಬಂದಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದಿದ್ದು, ಬಸ್ರೂರು ವಲಯದವರು ದ್ವಿತೀಯ ಬಹುಮಾನ ಪಡೆದಿದ್ದಾರೆ.
ಕುಂದಾಪುರ: ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನಲ್ಲಿ ಮಕ್ಕಳ ದಿನಾಚರಣೆಯನ್ನು ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಶಸ್ತಿ ವಿಜೇತ ಹೆಮ್ಮಾಡಿ ಜನತಾ ಪ್ರೌಢ ಶಾಲಾ ವಿಶೇಷ ಚೇತನ ವಿದ್ಯಾರ್ಥಿನಿ ಕುಮಾರಿ ರಮ್ಯಾ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು. ಜ್ಞಾನ, ಕೌಶಲ್ಯ, ಏಕಾಗೃತೆಗೆ ಸಂಬಂಧಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಭೆಯಲ್ಲಿ ಮಂಜುನಾಥ.ಕೆ.ಸ್, ಗೀತಾ ಜೋಷಿ, ಗಿರಿಜಾ, ಜೆಸ್ಸಿ ಡಿಸಿಲ್ವ, ಶ್ರೀಲತಾ.ಕೆ ಉಪಸ್ಥಿತರಿದ್ದರು. ಮಂಜುನಾಥ ಚಂದನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹರೀಶ್ ಕಾಂಚನ್ ವಂದಿಸಿದರು. ಸಿವಿಲ್ ಕಂಟ್ರಾಕ್ಟರ್ ಸಟ್ವಾಡಿ ಅನಿಲ್ ಕುಮಾರ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು.
ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸದ ಅಂಗ ವಿಶೇಷ ಧಾರ್ಮಿಕ ಕಾರ್ಯಕ್ರಮವಾಗಿ ಧನ್ವಂತರಿ ಹಾಗೂ ಮಹಾಮೃತುಂಜಯ ಹವನ ನಡೆಯಿತು. ಪೂರ್ಣಾಹುತಿಯು ಕಾಶೀ ಮಠ ಕಿರಿಯ ಯತಿಗಳಾದ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರಿಂದ ಜರಗಿತು. ಈ ಸಂದರ್ಭದಲ್ಲಿ ಸೇವಾದಾರರಾದ ದಿನೇಶ ಗೋವಿಂದ್ರಾಯ ಕಾಮತ ಮತ್ತು ಕುಟುಂಬದವರು ಉಪಸ್ಥಿತರಿದ್ದರು.
ಕುಂದಾಪುರ: ಇಲ್ಲಿನ ಹರ್ಕುಲಸ್ ಜಿಮ್ ಆಯೋಜಿಸಿದ ಕರ್ನಾಟಕ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಾಸ್ಟರ್ಸ್-2 ವಿಭಾಗದಲ್ಲಿ ಭಾಗವಹಿಸಿದ ಜಿ.ವಿ.ಅಶೋಕ್ ಅವರು 500 ಕೆಜಿ ಭಾರ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಪ್ರಸ್ತುತ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ ಉದ್ಯೋಗಿಯಾಗಿದ್ದು, ಸಾಲಿಗ್ರಾಮ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದಾರೆ.
ಬೈಂದೂರು: ಕಾಲ್ತೋಡು ಗ್ರಾಪಂ ವ್ಯಾಪ್ತಿಯ ನೀರ್ಕುಳಿಯ ಬಡಕುಟುಂಬದ ಪದ್ಮಾವತಿ ಶೆಟ್ಟಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ರೂ. ೨೦ ಸಾವಿರ ಸಹಾಯಧನ ನೀಡುವ ಮೂಲಕ ಆರ್ಥಿಕ ಸಹಾಯ ಮಾಡಿದರು. ಯುವ ಬಂಟರ ಸಂಘದ ಅಧ್ಯಕ್ಷ ಸುಕೇಶ್ ಶೆಟ್ಟಿ ಹೊಸಮಠ, ಕಾರ್ಯದರ್ಶಿ ಅವಿನಾಶ್ ರೈ, ಪದಾಧಿಕಾರಿಗಳಾದ ಹರ್ಷವರ್ಧನ ಶೆಟ್ಟಿ ಕಟ್ಕೆರೆ, ಗಣೇಶ್ ಶೆಟ್ಟಿ ಅಲ್ಸಾಡಿ, ನಿತಿನ್ ಶೆಟ್ಟಿ ಹುಂಚನಿ, ಸುನಿಲ್ ಶೆಟ್ಟಿ ಹೇರಿಕುದ್ರು, ರವಿಶಂಕರ್ ಹೆಗ್ಡೆ ದಬ್ಬಾಡಿ, ಧನಂಜಯ ಶೆಟ್ಟಿ ಹರ್ಕೂರು, ಅರ್ಜುನ ಶೆಟ್ಟಿ ಕುಂದಾಪುರ, ಸಚಿನ್ ಶೆಟ್ಟಿ ಹುಂಚನಿ ಉಪಸ್ಥಿತರಿದ್ದರು.
ಗಂಗೊಳ್ಳಿ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ನಿಯಮಾನುಸಾರ ಜೀವನ ನಡೆಸಿದರೆ ಜೀವನದಲ್ಲಿ ಎಂದೂ ಸೋಲು ಬರುವುದಿಲ್ಲ. ಸ್ಕೌಟ್ ಮತ್ತು ಗೈಡ್ಸ್ನಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ನಮ್ಮಲ್ಲಿ ಶಿಸ್ತು ಹಾಗೂ ನಾಯಕತ್ವ ಗುಣಗಳು ರೂಪುಗೊಳ್ಳುತ್ತದೆ. ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡು ವಿದ್ಯಾರ್ಥಿ ಜೀವನವನ್ನು ಇನ್ನಷ್ಟು ಉಜ್ವಲಗೊಳಿಸಿಕೊಳ್ಳಬೇಕು ಎಂದು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಹೇಳಿದರು. ಅವರು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರ ಮತ್ತು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಕುಂದಾಪುರ ವಲಯ ಮಟ್ಟದ ಪಟಾಲಾಯಂ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ಜಿಎಸ್ವಿಎಸ್ ಅಸೋಸಿಯೇಶನ್ನ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಸ್ಕೌಟ್ ಮತ್ತು ಗೈಡ್ಸ್ನ ಕುಂದಾಪುರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ…
ಕುಂದಾಪುರ: ಡಿ.ಎನ್.ಎ. ರಕ್ತ ಪರೀಕ್ಷೆಯು ಜೀವನಾಂಶ ಪ್ರಕರಣವೊಂದರಲ್ಲಿ ಪುರುಷನಿಗೆ ಪ್ರಯೋಜನಕಾರಿಯಾದ ಪ್ರಕರಣವು ಕುಂದಾಪುರ ನ್ಯಾಯಾಲಯದಲ್ಲಿ ನಡೆದಿದೆ. ಹಳ್ಳಿಹೊಳೆ ಗ್ರಾಮದ ಸುರೇಶ ಅಸಾಹಯಕ ಪರಿಸ್ಥಿತಿಯಲ್ಲಿದ್ದ ತನ್ನ ಮೇಲೆ ಅತ್ಯಾಚಾರಮಾಡಿ ಗರ್ಭಿಣಿಯನ್ನಾಗಿಸಿದ್ದಾನೆಂದು ಯುವತಿಯೋರ್ವಳು ಆರೋಪಿಸಿದ್ದಳು. ಅನಂತರ ಆತನಿಂದ ತಾನು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಲಾಲನೆ , ಪೋಷಣೆ, ವಿದ್ಯಾಭ್ಯಾಸದ ಬಗ್ಗೆ ಮಾಸಿಕ ಜೀವನಾಂಶ ಅರ್ಜಿಯನ್ನು ದಾಖಲಿಸಿದ್ದಳು. ನ್ಯಾಯಾಲಯಕ್ಕೆ ಹಾಜರಾದ ಸುರೇಶ್ ಯುವತಿಯನ್ನು ತಾನು ಅತ್ಯಾಚಾರ ಮಾಡಿಲ್ಲವೆಂದು ಹಾಗೂ ಆಕೆಯ ಮಗುವಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದನು. ನ್ಯಾಯಾಲಯದ ಆದೇಶದಂತೆ ಸುರೇಶ ಯುವತಿ ಹಾಗೂ ಚಿಕ್ಕ ಮಗುವಿನ ರಕ್ತವನ್ನು ಬಹಿರಂಗ ನ್ಯಾಯಾಲಯದಲ್ಲಿ ಸಂಗ್ರಹಿಸಿ ಡಿ.ಎನ್.ಎ. ಪರೀಕ್ಷೆಗೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ವೈಜ್ಞಾನಿಕ ಅಧಿಕಾರಿ ಅಧಿಕಾರಿ ಎಲ್.ಪುರುಷೋತ್ತಮ ಅವರು ವಿವರವಾದ ರಕ್ತ ಪರೀಕ್ಷೆ ಮಾಡಿ ಮಗುವಿನ ತಂದೆ ಸುರೇಶ ಅಲ್ಲವೆಂದು ತಜ್ಞ ವರದಿಯನ್ನು ಕಳುಹಿಸಿದ್ದರು. ಪ್ರತಿಕೂಲ ವರದಿ ಬಂದ ಹಿನ್ನಲೆಯಲ್ಲಿ ಯುವತಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು ನ್ಯಾಯಾಲಯ ಆಕೆ…
ಕುಂದಾಪುರ: ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಹಾಗೂ ಮಡಿಕೇರಿಲ್ಲಿ ನಡೆದ ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಕೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಂದು ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಪ್ರತಿಭಟನಾಕಾರನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜನಪರ ಕಾರ್ಯಗಳನ್ನು ಮಾಡಿ ಜನರ ವಿಶ್ವಾಸ ಗಳಿಸಬೇಕಾಗಿದ್ದ ಸರಕಾರ ಜನವಿರೋಧಿ ನಿಲುವನ್ನು ತಾಳುತ್ತಿರುವುದು ದುರದೃಷ್ಟಕರ. ಇತ್ತಿಚಿಗೆ ರಾಜ್ಯದಲ್ಲಿ ನಡೆದ ಸಾವು-ನೋವುಗಳನ್ನು ಗಮನಿಸಿದರೇ ಸರಕಾರ ಬೇಜವಾಬ್ದಾರಿ ನಡುವಳಿಕೆಯ ದರ್ಶನವಾಗುತ್ತದೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ. ಬಿಜೆಪಿಯ ಸರಕಾರವಿರುವಾಗ ಯಾವುದೇ ಕೋಮು ಸಂಘರ್ಷಗಳಿಗೆ ಅವಕಾಶ ನೀಡದೇ ಜನರು ಅನ್ಯೂನ್ಯತೆಯಿಂದ ಬದುಕುವಂತೆ ಮಾಡಿತ್ತು, ಸಮಾಜದ ಎಲ್ಲಾ ಧರ್ಮದ ಜನರೂ ಒಂದೇ ಎಂಬ ಭಾವನೆಯಿಂದ ಆಡಳಿತ ನಡೆಸಿತ್ತು. ಸಿದ್ದರಾಮಯ್ಯನವರ ಸರಕಾರ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳಿ ಸಮಾಜದ ಸಂಘರ್ಷಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು. ಇತ್ತಿಚಿನ ಘಟನೆಗಳನ್ನು ಅವಲೋಕಿಸಿದಾಗ ರಾಜ್ಯ ಸರಕಾರ ಯಾವುದೋ ಅಜೆಂಡಾಕ್ಕೆ ತಲೆಭಾಗಿ ರಾಜ್ಯದಲ್ಲಿ ಶಾಂತಿ…
