Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ’ತಾನಲ್ಲ ತನ್ನದಲ್ಲ ಆಸೆ ತರವಲ್ಲ ಮುಂದೆ ಬಾಹುದಲ್ಲ, ದಾಸನಾಗು ವಿಶೇಷನಾಗು’ ಎಂಬ ಅಂತರಂಗ ಶುದ್ಧಿಗೊಳಿಸುವ ಅರ್ಥಗರ್ಭಿತ ದಾಸರ ಸಾಲುಗಳು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಅಚ್ಚೊತ್ತಿದಂತಿತ್ತು. ಈ ಸಾಲುಗಳಿಗೆ ತಬಲ, ಕೀಬೋರ್ಡ್‌ನ ಸಾಥ್ ಸಿಕ್ಕರೆ ವಾಹ್… ಭಕ್ತಿಯ ಕಡಲಲ್ಲಿ ಮಿಂದೇಳಲು ಇನ್ನೇನು ಬೇಕು? ಹೀಗೆ ಪ್ರೇಕ್ಷಕರನ್ನು ಭಾವಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದವರು ಬೆಂಗಳೂರಿನ ಎಂ.ಎಸ್. ಗಿರಿಧರ್ ಮತ್ತು ಬಳಗದ ’ದಾಸ ಸಿಂಚನ’ ತಂಡ. ಮೂಡಬಿದ್ರೆಯ ಆಳ್ವಾಸ್ ಜಾಂಬೂರಿಯ ಕೃಷಿಸಿರಿ ವೇದಿಕೆ ಇಂತಹದೊಂದು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು. ’ಮುಸುರೆ ತೊಳೆಯಬೇಕು ಮನಸಿನ ಮುಸುರೆ ತೊಳೆಯಬೇಕು’ ಎಂಬ ಪುರಂದರದಾಸರ ಕೀರ್ತನೆಯನ್ನು ರಾಗದೊಂದಿಗೆ ಅನುಭವಿಸುವುದೇ ಚೆಂದ. ಪ್ರೇಕ್ಷಕರು ಒಕ್ಕೊರಲಿನಿಂದ ಹಾಡುಗಾರರ ಭಕ್ತಿ ಸುಧೆಯಲ್ಲಿ ಮಿಂದು ’ರಾಮ ಕೃಷ್ಣ ಗೋವಿಂದ ನಾರಾಯಣ’ ಎಂದಾಗ ಭಗವಂತನೇ ಇಲ್ಲಿ ನೆಲೆಸಿ ಹಾಡಿಸುತ್ತಿದ್ದಾನೆ ಎಂದು ಭಾಸವಾಗುತ್ತಿತ್ತು. ತಳ ಹಿಡಿದ ಪಾತ್ರೆಗಳನ್ನು ಹಸಿರ ಹುಲ್ಲಿನಿಂದ ಸ್ವಚ್ಛಗೊಳಿಸುವಂತೆ ಮನಸಿನ ಕಲ್ಮಶಗಳನ್ನು ಕಿತ್ತೊಗೆಯಲು ದೇವರ ನಾಮ ಸ್ಮರಣೆಯೊಂದೇ ದಾರಿ ಎಂಬ ಅರ್ಥಗರ್ಭಿತ ಮಾತುಗಳನ್ನು ದಾಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾಗಿರಿ ಆವರಣದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಮೂರನೇ ದಿನ ಶುಕ್ರವಾರ ನುಡಿಸಿರಿ ವೇದಿಕೆಯಲ್ಲಿ ’ಕೊಳಲು ವಾದನ ಜುಗಲ್‌ಬಂದಿ’ ಕಾರ್ಯಕ್ರಮ ನಡೆಯಿತು. ಬೆಂಗಳೂರಿದ ದೀಪಕ್ ಹೆಬ್ಬಾರ್ ಮತ್ತು ಸುನೀಲ್ ಕುಮಾರ್ ಕೊಳಲಿನ ನಾದಸ್ವರದ ಮೂಲಕ ಕೇಳುಗರ ಮನಸೂರೆಗೊಳಿಸಿದರು. ಕಾರ್ಯಕ್ರಮವನ್ನು ಕರ್ನಾಟಿಕ್ ಸಂಗೀತ ಪ್ರಕಾರದ ಹಂಸಧ್ವನಿ ರಾಗದಲ್ಲಿ ’ವಾತಾಪಿ ಗಣಪತಿ’ ಗೀತೆಯನ್ನು ಆದಿತಾಳದಲ್ಲಿ ಕೊಳಲಿನ ಮೂಲಕ ಪ್ರಸ್ತುತಪಡಿಸಿ ಆರಂಭಿಸಿದರು. ನಂತರ ಆದಿತಾಳದಲ್ಲಿ ’ವಾಚಿಸ್ಪತಿ’ ಹಾಗೂ ಕೊನೆಯಲ್ಲಿ ಮಧ್ಯಮವತಿ ತಾಳದಲ್ಲಿ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಗೀತೆಗಳು ಕೊಳಲ ನಾದದಲ್ಲಿ ಇಂಪಾಗಿ ಮೂಡಿಬಂದವು. ಮೃದಂಗದಲ್ಲಿ ನಾಗೇಂದ್ರ ಪ್ರಸಾದ್ ಮತ್ತು ತಬಲದಲ್ಲಿ ಸುದತ್ತ ಶ್ರೀಪಾದರವರ ತನಿಯಾ ವರ್ತನ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು. ಒಂದೂವರೆ ಗಂಟೆಗಳ ಕಾಲ ನಡೆದ ಕೊಳಲು ವಾದನ ಜುಗುಲ್‌ಬಂದಿ ನೆರೆದಿದ್ದವರನ್ನು ತನ್ನಡೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜೊತೆಗೆ ಕೊಳಲಿಗೆ ಸಾಥ್ ನೀಡಿದ ತಬಲಾ ಹಾಗೂ ಮೃದಂಗ ಕಾರ್ಯಕ್ರಮದ ಮೆರುಗು ಹೆಚ್ಚುವಂತೆ ಮಾಡಿತ್ತು. ವರದಿ: ಪ್ರೀತಿ ಹಡಪದ, ದ್ವಿತೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರೋವರ್‍ಸ್ ಮತ್ತು ರೇಂಜರ್‍ಸ್ ಎನ್ನುವುದು ಹೊರಾಂಗಣ ಕೌಶಲ್ಯ ಆಧಾರಿತ ಮತ್ತು ಸಾಹಸ ಚಟುವಟಿಕೆಗಳ ಆಧಾರಿತ ಘಟಕವಾಗಿದ್ದು, ಕಾನೂನು ಪಾಲಿಸುವ ನಾಗರೀಕರಾಗಲು, ಪ್ರಕೃತಿಯ ರಕ್ಷಣೆ, ಮಾನವೀಯತೆಯ ಸೇವೆ ಮೈಗೂಡಿಸಿಕೊಳ್ಳಲು ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದಿಂದ ಸಾದ್ಯವಿದೆ ಎಂದು ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಸಹಾಯಕ ಪ್ರಾದ್ಯಾಪಕಿ ಜ್ಯೋತಿ ಆಚಾರ್ಯ ಹೇಳಿದರು. ಅವರು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ, ಕೋವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ರಾಷ್ಟೀಯ ಶಿಕ್ಷಣ ನೀತಿಯಲ್ಲಿ ರೋವರ್‍ಸ್ ಮತ್ತು ರೇಂಜರ್‍ಸ್ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಿ ಎಂದರು. ರೋವರ್‍ಸ್ ಲೀಡರ್ ಸತೀಶ್ ಶೆಟ್ಟಿ ಹೆಸ್ಕುತ್ತೂರು ಪ್ರಸ್ತಾವಿಸಿದರು. ರೇಂಜರ್‍ಸ್ ಲೀಡರ್ ಶ್ರೀಮತಿ ಅರ್ಪಣಾ ಶೆಟ್ಟಿ ಸ್ವಾಗತಿಸಿದರು, ಸ್ವಯಂ ಸೇವಕಿ ಪ್ರತಿನಿಧಿ ಆದರ್ಶ ನಾಯ್ಕ್ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಕನ್ನಡದ ಮಹತ್ವದ ಕವಿಗಳ ಕಾವ್ಯ ರಾಗಾಲಾಂಕರದೊಂದಿಗೆ ಜೀವಂತಿಕೆ ಪಡೆದಿತ್ತು. ಶಿಶುನಾಳ ಷರೀಫರ ತತ್ವಪದಗಳು ಹಾಡಾಗಿ ಹೊಮ್ಮಿ ಜೀವನಮೌಲ್ಯಗಳ ಸಂದೇಶ ಸಾರಿದವು. ರಾಜರತ್ನಂ ಅವರ ಸರಳಗನ್ನಡ ಮಧುರ ಆಲಾಪದ ಬೆಂಬಲದೊಂದಿಗೆ ಕನ್ನಡದ ಬದುಕನ್ನು ತೆರೆದಿಟ್ಟಿತ್ತು. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್ ಅವರ ಸಂಗೀತ ಶಕ್ತಿ ವಿವಿಧ ಗಾಯಕರ ಧ್ವನಿಯಲ್ಲಿ ನಿರೂಪಿತವಾಗುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿಯ ಮೌಲಿಕ ಗೀತಕಾಣ್ಕೆಗಳೆಲ್ಲವೂ ಒಂದೇ ವೇದಿಕೆಯ ಮೂಲಕ ವಿವಿಧ ಗಾಯನಶೈಲಿಗಳೊಂದಿಗೆ ಮೇಳೈಸಿದ್ದವು. ಈ ದೃಶಕ್ಕೆ ಸಾಕ್ಷಿಯಾಗಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರಿಯ ಸಾಂಸ್ಕೃತಿಕ ಜಾಂಬೂರಿಯ ’ಕನ್ನಡ ಡಿಂಡಿಮ’ ಸಂಗೀತ ಕಾರ್ಯಕ್ರಮ. ಆಳ್ವಾಸ್ ಸಂಸ್ಥೆಯ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬೆಂಗಳೂರಿನ ಶಂಕರ ಶಾನುಭೋಗ್ ಮತ್ತು ಬಳಗದ ಕಲಾವಿದರು ?ಕನ್ನಡ ಡಿಂಡಿಮ? ಕನ್ನಡದ ಶ್ರೇಷ್ಠ ಕವಿಗಳು ಮತ್ತು ಸಂಗೀತ ನಿರ್ದೇಶಕರ ಹಾಡುಗಳನ್ನು ಪ್ರಸ್ತುತಪಡಿಸಿ ಕನ್ನಡ ಮತ್ತು ಸಂಸ್ಕೃತಿಯ ವಿಶೇಷತೆಯನ್ನು ವಿನೂತನ ರೀತಿಯಲ್ಲಿ ಅನಾವರಣಗೊಳಿಸಿದರು. ಖ್ಯಾತ ಗಾಯಕರಾದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಸ್ವರ್ಣ ಪಲ್ಲಕಿ ನಿರ್ಮಾಣಕ್ಕೆ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಚಾಲನೆ ನೀಡಿದರು. ಕುಂದಾಪುರದ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಭರಣ ಜ್ಯುವೆಲ್ಲರ್‍ಸ್‌ನ ಮಹೇಶ್ ಕಾಮತ್ ಅವರಿಗೆ ಪ್ರಸಾದ ನೀಡಿ ಜವಾಬ್ದಾರಿ ಒಪ್ಪಿಸುವ ಮೂಲಕ ಸ್ವಾಮೀಜಿಯವರು ಚಾಲನೆ ನೀಡಿದರು. ದೇವಾಲಯದ ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ಜತೆ ಮೊಕ್ತೇಸರರಾದ ಜನಾರ್ಧನ ಮಲ್ಯ, ತ್ರಿವಿಕ್ರಮ ಪೈ ಹಾಗೂ ಅಕ್ಷಯ ಶೆಣೈ, ಕೆ. ಪದ್ಮನಾಭ ಶೆಣೈ, ಯು. ಅರ್ಜುನ್ ಶೆಣೈ, ವಿನಾಯಕ ಪೈ, ರಮೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಮತ್ತು ಛಲ ಇರಬೇಕು. ನಿದ್ರೆ ಬಿಟ್ಟು ಕನಸು ಕಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಕೇವಲ ವಿದ್ಯೆ ಇದ್ದರೆ ಮಾತ್ರ ಸಾಲದು. ಸಾಧನೆಗೆ ಪರಿಶ್ರಮ ಮುಖ್ಯ. ಇಂದಿನ ದಿನಗಳಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವ, ಪ್ರಾಶಸ್ತ್ಯ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಕಳೆದ ೫೦ ವರ್ಷಗಳಿಂದ ಉತ್ತಮ ಚಟುವಟಿಕೆ ಮೂಲಕ ಶಾಲೆಯ ಅಭಿವೃದ್ಧಿಗೆ ದುಡಿಯುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಪ್ರಶಂಸನೀಯ ಎಂದು ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಶಾಂತೇರಿ ಬಾ ರಂಗ ಮಂಟಪದಲ್ಲಿ ಭಾನುವಾರ ಜರಗಿದ ಗಂಗೊಳ್ಳಿಯ ಎಸ್.ವಿ. ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗಂಗೊಳ್ಳಿ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶಾರದಾ ರಾಮಕೃಷ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಅಚ್ಚಳಿಯದಂತೆ ಹೆಜ್ಜೆ ಗುರುತಗಳನ್ನು ಬಿಟ್ಟು ಹೋದ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೆ ನೆನೆಯಲು ಮೂಡಬಿದ್ರೆ ಆಳ್ವಾಸ್ ಕಾಲೇಜು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಸಂಯೋಜನೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿಯ ಕೃಷಿಸಿರಿ ವೇದಿಕೆ ಸಾಕ್ಷಿಯಾಯಿತು. ಹಚ್ಚ ಹಸಿರು ತೋಟದ ನಡುವೆ ಇಳಿ ಸಂಜೆಯಲ್ಲಿ ಪ್ರಾರಂಭವಾದ ಜೈನ್ ಬೀಟ್ಸ್ ಶ್ರವಣಬೆಳಗೋಳ ತಂಡದ ಪುನೀತ್ ನಮನ ಕಾರ್ಯಕ್ರಮ ಮೈ ನವಿರೇಳಿಸುವಂತೆ ಮಾಡಿದ್ದಂತೂ ಸತ್ಯ. ಸರ್ವೇಶ್ ಜೈನ್ ಮತ್ತು ತಂಡದಿಂದ ಕರುನಾಡ ರತ್ನನ ರಸಸಂಜೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಹಾಡುಗಳು ಅನುರಣಿಸುತ್ತಿದ್ದವು. ಗಣಪತಿಯ ಹಾಡಿನಿಂದ ಪ್ರಾರಂಭವಾಗಿ, ನಂತರ ಗುರುಗಳಿಗೆ ವಂದಿಸಿ, ಕನ್ನಡ ನಾಡು ನುಡಿಯನ್ನು ಅದರ ಪರಿಸರ ಸಂಸ್ಕೃತಿಯನ್ನು ಗಂಧದ ಗುಡಿ ಎಂದು ಕರೆದ ಗಂಧದ ಗುಡಿ ಚಿತ್ರದ ‘ನಾವಾಡುವ ನುಡಿಯೇ ಕನ್ನಡ ನುಡಿ’ ಎಂಬ ಹಾಡನ್ನು ಕನ್ನಡಾಂಬೆಯ ಪಾದಚರಣಗಳಿಗೆ ಅರ್ಪಿಸುತ್ತಾ ಸರ್ವೇಶ್ ಜೈನ್, ಸೌಮ್ಯಾ ಜೈನ್, ಸಮರಾಗ ಜೈನ್, ಮತ್ತು ಮಾಸ್ಟರ್ ಅಪರಾಜಿತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ವೃತ್ತಿಯಲ್ಲಿ ಭಿನ್ನತೆ ಇದ್ದರೂ ಪ್ರವೃತ್ತಿಯಲ್ಲಿ ಕಲಾವಿದರಾಗಿ ಬಣ್ಣಹಚ್ಚಿ ಸಾಂಸ್ಕೃತಿಕ ಹಿರಿಮೆಯನ್ನು ಸಾರಿದರು ಜಾಂಬೂರಿ ಮೆರವಣಿಗೆಯ ಕಲಾವಿದರು. ಕರ್ನಾಟಕ, ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸಿದ ಕಲಾವಿದರ ವೃತ್ತಿ ಜೀವನದ ಬಗ್ಗೆ ಕುತೂಹಲವಿದೆಯೆ? ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳದ ‘ಹರಿಶ್ರೀ ಕಲಾಸಮಿತಿ’ಯ ತಂಡದ ಕಲಾವಿದನಿಗೆ ಸುಬ್ರಹ್ಮಣ್ಯ ದೇವರ ವೇಷ ಧರಿಸುವುದೆಂದರೆ ವಿಶೇಷ ಆಸಕ್ತಿ. ಸುಬ್ರಹ್ಮಣ್ಯ ದೇವರ ವೇಷಧಾರಣೆಯ ಮೂಲಕ ಅವರದ್ದು ಅನನ್ಯ ಭಕ್ತಿಯ ಸಮರ್ಪಣೆ. ವೃತ್ತಿ ರಂಗದಲ್ಲಿರುವವರು ಮಾತ್ರವಲ್ಲದೆ ಪ್ರತಿಷ್ಟಿತ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೂ ಸ್ವ-ಇಚ್ಛೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ‘ಪಾಣೆ ಮಂಗಳೂರು ಶಾರದಾ ಚೆಂಡೆ’ಯ ತಂಡದಲ್ಲಿಯೂ ಯುವ ಪ್ರತಿಭಾನಿತ್ವರಿದ್ದು ವಿದ್ಯಾರ್ಥಿಗಳು ತಂಡದ ಸದಸ್ಯರಾಗಿದ್ದುದದು ವಿಶೇಷವಾಗಿತ್ತು. ಆಟೋ ಚಾಲಕ, ಪೇಂಟರ್ ಹೀಗೆ ವಿಭಿನ್ನ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೀವನ ನಡೆಸುತ್ತಿದ್ದವರು ಯಾವುದೇ ವಯಸ್ಸಿನ ಹಂಗಿಲ್ಲದೆ ವಿದ್ಯಾರ್ಥಿಗಳಿಂದ ಹಿಡಿದು, ವಯಸ್ಕರೂ ಸೇರಿದಂತೆ ಕರಗ, ಗೊಂಬೆ ವೇಷ, ಪುರವಂತಿಕೆ, ಕತಕ್ಕಳಿ, ದೇವ ನೃತ್ಯ, ನವಿಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದರೆ: ಹಲಸಿನ ಹಣ್ಣು ಸiಗ್ರ ಪೋಷಕಾಂಶ ಒಳಗೊಂಡ ಮತ್ತು ಎಲ್ಲರೂ ಇಷ್ಟಪಡುವ ಹಣ್ಣು. ಆದರೆ ಸರ್ವ ಋತುಮಾನಗಳಲ್ಲಿ ಈ ಹಣ್ಣು ಸಿಗದು ಎಂಬುದು ಎಲ್ಲರ ಅಳಲು. ಅದಕ್ಕೆ ಉತ್ತರವೆಂಬಂತೆ ವರ್ಷದ ಹೆಚ್ಚಿನ ದಿನಗಳಲ್ಲಿ ಫಲಕೊಡುವ ‘ಅದ್ಭುತ ಹಲಸು’ ಎಂಬ ಹೆಸರಿನ ಒಂದು ಹಲಸಿನ ಹಣ್ಣಿನ ಗಿಡಗಳ ಮಳಿಗೆ ಜಾಂಬೂರಿಯ ಕೃಷಿಸಿರಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಪುತ್ತೂರು ಬಳಿಯ ಅಳಕೆಮಜಲಿನ ನಿವಾಸಿಯಾಗಿರುವ ಅನಿಲ್ ಅವರು ಜ್ಯಾಕ್ ಅನಿಲ್ ಎಂದೇ ಪ್ರಸಿದ್ದರಾದವರು. ಕಳೆದೆರಡು ದಶಕಗಳಿಂದ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಹಲಸಿನ ತಳಿಯ ವಿಚಾರದಲ್ಲಿ ಇವರು ವಿಶೇಷ ಜ್ಞಾನವನ್ನು ಹೊಂದಿದ್ದಾರೆ. ಇದಲ್ಲದೆ ಆಯಾಯ ಪ್ರದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಸಿ ಕಟ್ಟುವುದರಲ್ಲಿ ಕೂಡ ಬಹಳ ಪರಿಣತಿ ಪಡೆದಿದ್ದಾರೆ. ಅನಿಲ್ ಅವರ ಈ ಮಳಿಗೆಯಲ್ಲಿ ಒಂದೂವರೆ ವರ್ಷದಲ್ಲಿ ಫಲ ಕೊಡುವ ‘ನೆನ್ನಿತ್ತಾಯಿ’ ಎಂಬ ಹಲಸಿನ ಗಿಡಕ್ಕೆ ತುಂಬಾ ಬೇಡಿಕೆಯಿದೆ. ಈ ಹಣ್ಣಿನ ಗಿಡಗಳು ಇತರ ಹಲಸಿನ ಹಣ್ಣಿನ ಮರಗಳ ರೀತಿಯಲ್ಲಿ ಬೃಹದಾಕಾರದಲ್ಲಿ ಬೆಳೆಯದೆ, ಗಿಡ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡಬಿದರೆ: ಅಲ್ಲಿ ಕುರುಕ್ಷೇತ್ರದ ಪ್ರಸಂಗ, ವಾಲಿ ಸುಗ್ರೀವರ ಕಾಳಗ, ಕಿತ್ತೂರಿನ ವೀರ ರಾಣಿ ಚೆನ್ನಮ್ಮ ತನ್ನ ಸೈನಿಕರಿಗೆ ಹುರಿದುಂಬಿಸುವ ಹಾಡು, ರೇಣುಕಾ ಮಹಾತ್ಮೆ ಹಾಗೂ ವೀರ ಅಭಿಮನ್ಯು ಮುಂತಾದ ಪ್ರಸಂಗವನ್ನು ದೊಡ್ಡಾಟದ ಹಾಡುಗಳ ಮೂಲಕ ತೋರಿಸುವ ಅದ್ಭುತ ಸನ್ನಿವೇಶಕ್ಕೆ ಆಳ್ವಾಸ್‌ನ ಕೃಷಿ ಸಿರಿ ವೇದಿಕೆ ಸಾಕ್ಷಿಯಾಗಿತ್ತು. ಹೌದು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿ-೨೦೨೨ ಇದರ ಆಶ್ರಯದಲ್ಲಿ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೃಷಿ ಸಿರಿ ವೇದಿಕೆಯಲ್ಲಿ ಹಾವೇರಿಯ ಶಿಗ್ಗಾಂವ್‌ನ ಸವರಾಜ ಶಿಗ್ಗಾಂವ್ ಮತ್ತು ತಂಡದಿಂದ ‘ದೊಡ್ಡಾಟದ ಹಾಡುಗಳು’ ಎಂಬ ಕಾರ್ಯಕ್ರಮ ಮೂಡಿಬಂದಿತು. ದೊಡ್ಡಾಟದ ಗಣೇಶನ ಸ್ತುತಿಯೊಂದಿಗೆ ದೊಡ್ಡಾಟದ ಹಾಡುಗಳ ಕಾರ್ಯಕ್ರಮವು ಪ್ರಾರಂಭವಾಯಿತು. ಅನಂತರದಲ್ಲಿ ಕುರುಕ್ಷೇತ್ರದ ದೊಡ್ಡಾಟದ ಪ್ರಸಂಗದ ಹಾಡು, ರೇಣುಕಾ ದೇವಿಯ ಭಕ್ಕಿಯಲ್ಲಿ ಸುಗಿಸುವ ನಯನ ಮನೋಹರ ಪದ, ವೀರ ಅಭಿಮನ್ಯು ಪ್ರಸಂಗದಲ್ಲಿ ಅಭಿಮನ್ಯು ಯುದ್ದಕ್ಕೆ ಹೊರಡುವ ಸಂದರ್ಭದಲ್ಲಿ ಆತನ ತಾಯಿ ಸುಭದ್ರೆ ಪೋಗಬೇಡವೋ ಬಾಲ ಎನ್ನುವ ಪದ, ರಾಮಾಯಣದಲ್ಲಿ ಬರುವ…

Read More