Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು:  ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು, ಉಪ್ಪುಂದ ವಲಯದ ವತಿಯಿಂದ ಶ್ರೀ ರಾಮ ನವಮಿ ಆಚರಣೆಯನ್ನು ಮಹಿಳಾ ವೇದಿಕೆಯಿಂದ ಲಲಿತ ಸಹಸ್ರನಾಮ ಪಠಣ, ಪ್ರವಚನ, ಭಜನೆ ಸಹಿತ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಷ್ಣುವಿನ ಅವತಾರವಾದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಸಾಮಾನ್ಯ ಮನುಷ್ಯನಂತೆ ಬದುಕಿನ ಕಷ್ಟಕಾರ್ಪಣ್ಯಗಳನ್ನು ಎದುರಿಸಿ, ಜೀವನ ಮೌಲ್ಯಗಳ ಆದರ್ಶ ಪರಂಪರೆಯನ್ನು ಸ್ಥಾಪಿಸಿ ಜಗದ್ವಂದ್ಯನಾಗಿದ್ದಾನೆ. ಪ್ರಭು ಶ್ರೀ ರಾಮಚಂದ್ರನ ಪಿತೃವಾಕ್ಯ ಪರಿಪಾಲನೆ, ರಾಜಧರ್ಮ ಪಾಲನೆ,ಪ್ರಜಾ ವಾತ್ಸಲ್ಯ,ಸತ್ಯ ನಿಷ್ಠತೆಯೇ ಮೊದಲಾದ ಅನುಕರಣೀಯ ನಡೆ-ನುಡಿಗಳು ಯುಗ-ಯುಗಗಳವರೆಗೆ ಮನುಕುಲಕ್ಕೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಿರುತ್ತದೆ ಎಂದು ಧಾರ್ಮಿಕ ಪ್ರವಚನ ಮಾಡಿದ ಭಟ್ಕಳದ ಶ್ರೀ ಸುಬ್ರಹ್ಮಣ್ಯ ಭಟ್ಟರು ನುಡಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ನಿರ್ವಹಿಸಿದ ವೇದಮೂರ್ತಿ ಶ್ರೀ ಕೃಷ್ಣಮೂರ್ತಿ ನಾವಡ ದಂಪತಿಗಳನ್ನು ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಶಾಂತಿ ಮಂತ್ರ ಪಠಣ, ಮಂಗಳಾರತಿ ಮತ್ತು ಲಘು ಉಪಹಾರದೊಂದಿಗೆ ಸಮಾಪ್ತಗೊಂಡ ಸಮಾರಂಭ ವಲಯಾಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅನಿಷ್ಟ ಪದ್ದತಿಯನ್ನು ಮೌನ ಹಾಗೂ ರಕ್ತ ರಹಿತಿ ಕ್ರಾಂತಿ ಮೂಲಕ ತೊಡದು ಹಾಕಿದ ಹಿರಿಮೆ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಮೇಲು, ಕೇಳು, ಜಾತಿ ವ್ಯವಸ್ಥೆ ತೊಡೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನೋದು ಅಂಬೇಡ್ಕರ್ ನಂಬಿಕೆಯಾಗಿದ್ದು, ಅದಕ್ಕಾಗಿ ಸಂಘಟನೆ ಮೂಲಕ ಸಂಘರ್ಷವಿಲ್ಲದೆ ಸಾಧಿಸಬೇಕಾಗಿದೆ ಎಂದು ಕುಂದಾಪುರ ಸಹಾಯಕ ಆಯುಕ್ತ ಡಾ. ಎಸ್. ಎಸ್. ಮಧುಕೇಶ್ವರ್ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ, ಕುಂದಾಪುರ ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆಗಳ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ಡಾ.ಆಂಬೇಡ್ಕರ್ ಪಡೆದಷ್ಟು ಪದವಿ, ಪಿಹೆಚ್‌ಡಿ ಬೇರಾರು ಪಡೆದಿಲ್ಲ ಎಂದ ಅವರು, ಬ್ರಿಟಿಷ್ ಸರ್ಕಾರದ ವಿರೋಧ ಕಟ್ಟಿಕೊಳ್ಳದೆ ಅವರೊಟ್ಟಿಗೆ ಇದ್ದು ಸಮಾಜಿಕ ನ್ಯಾಯ ಕೊಡಿಸುವಲ್ಲಿ ಅಂಬೇಡ್ಕರ್ ಸಫಲರಾದರು. ಸಮಾಜದ ದೀನ,ದಲಿತರ ಏಳಿಗೆಯ…

Read More

ಸುನಿಲ್ ಹೆಚ್. ಜಿ., ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ,ಎ.13: ತಹರೇವಾರಿ ಹಾಡು, ಡೈಲಾಗ್‌ಗಳಿಗೆ ಲಿಪ್‌ಸಿಂಕ್ ಮಾಡಿ, ನಟನಾ ಕೌಶಲ್ಯ ಪ್ರದರ್ಶಿಸುವ ವಿಡಿಯೋ ಹಂಚಿಕೊಳ್ಳಲೆಂದೇ ಇರುವ ಟಿಕ್‌ಟೊಕ್ ಸದ್ಯ ಯುವಕ ಯುವತಿಯರ ನೆಚ್ಚಿನ ಆ್ಯಪ್‌ಗಳಲ್ಲೊಂದು. ಇದೇ ಆ್ಯಪ್‌ ಮೂಲಕ ಕುಂದಾಪುರದ ಯುವತಿಯೋರ್ವಳು ಕುಂದಗನ್ನಡ ಹಾಡಿಗೆ ಮಾಡಿದ ವಿಡಿಯೋವೊಂದು ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸುದ್ದಿಯಲ್ಲಿದ್ದಾಳೆ. ಕುಂದಾಪುರ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ಕವನ ಎನ್ನುವ ಯುವತಿ ಕುಂದಾಪುರದ ಕ್ರಶ್ ಎಂದೆನಿಸಿಕೊಂಡಿದ್ದು, ಆಕೆಯ ವಿಡಿಯೋಗಳು ನಿನ್ನೆಯಿಂದ ಫೇಸ್ಬುಕ್ ಹಾಗೂ ವಾಟ್ಸ್‌ಪ್ ಸ್ಟೇಟಸ್‌ಗಳಾಗುತ್ತಿರುವುದಲ್ಲದೇ, ಭರ್ಜರಿ ಶೇರ್ ಆಗುತ್ತಿದೆ. ಕವನ ಜಾಗ್ವಾರ್ ಎಂಬ ಪ್ರೊಪೈಲ್ ಮೂಲಕ ಅವರು ಟಿಕ್‌ಟೊಕ್ ವಿಡಿಯೋ ಮಾಡಿದ್ದಾರೆ.  ಕುಂದಾಪ್ರ ಡಾಟ್ ಕಾಂ ವರದಿ. ಇತ್ತಿಚಿಗೆ ಕುಂದಾಪುರದ ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಅವರು ನಿರ್ದೇಶಿಸಿದ್ದ ಕುಂದಾಪುರ ಕನ್ನಡದ ’ಹ್ವಾಯ್ ಬನಿಯೆ ಉಂಬುಕ್ ಹ್ವಾಪ’ ಆಲ್ಬಂ ಸಾಂಗ್ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕವನ ಅವರು ಅದರ ಸಾಹಿತ್ಯದ ತುಣುಕಿಗೆ ಟಿಕ್‌ಟೊಕ್‌ನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಸ್ಪರ ಪ್ರೀತಿಸುತ್ತಿದ್ದ ಕೋಟೇಶ್ವರ ಮಾರ್ಕೋಡು ರಾಮ ಪೂಜಾರಿ ಪುತ್ರ ಶ್ರೀಕಾಂತ ಪೂಜಾರಿ ಹಾಗೂ ಗಂಗೊಳ್ಳಿ ನರಸಿಂಹ ಖಾರ್ವಿ ಪುತ್ರಿ ಶಾಲಿನಿ ಖಾರ್ವಿ ವಿವಾಹ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಮಂಗಳವಾರ ಪೋಷಕಲರ ಸಮ್ಮುಖದಲ್ಲಿ ಮದುವೆ ನಡೆಯಿತು. ಹಲವು ಸಮಯಗಳಿಂದ ಪ್ರೀತಿಸುತ್ತಿದ್ದ ಜೋಡಿ ಮನೆಯವರ ವಿರೋಧದ ಹಿನ್ನೆಲೆ ಕುಂದಾಪುರ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರಾಧಾದಾಸ್ ಬಳಿ ವಿವಾಹ ಮಾಡಿಸುವಂತೆ ಮನವಿ ನೀಡಿದ್ದರು. ಅದರಂತೆಯೇ ರಾಧಾದಾಸ್ ಎರಡು ಮನೆಯವರ ಬಳಿ ಮಾತುಕತೆ ನಡೆಸಿ ಮದುವೆ ಮಾಡಿಸಿದ್ದಾರೆ. ಯುವತಿ ತಂದೆ, ಸಹೋದರ ಹಾಗೂ ಬಂಧುಗಳು, ಯುವಕನ ತಾಯಿ ಹಾಗೂ ಬಂಧುಗಳು, ಮಾರ್ಕೋಡು ಸುಬ್ಬಣ್ಣ ಶೆಟ್ಟಿ, ಮಹಿಳಾ ಸಾಂತ್ವಾನ ಕೇಂದ್ರದ ಸಿಬ್ಬಂದಿಗಳು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸಮಿಶ್ರ ಸರಕಾರಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹಾಗಾಗಿ ದೇಶದಲ್ಲಿ ಸುಭದ್ರವಾದ ಒಂದು ಪಕ್ಷದ ಸರಕಾರ ರಾಜ್ಯ ಹಾಗೂ ದೇಶದಲ್ಲಿ ಬರಬೇಕಿದೆ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ಹೇಳಿದರು. ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಈ ಚುನಾವಣೆ ಮುಂದಿನ ಐದು ವರ್ಷಕ್ಕಷ್ಟೇ ಅಲ್ಲ. ಬದಲಿಗೆ ಮುಂದಿನ ತಲೆಮಾರಿಗೆ ಎಂದು ಭಾವಿಸಬೇಕಿದೆ. ಎರಡು ತಲೆಮಾರುಗಳ ಮಾಡಿಕೊಂಡಿರುವ ನಷ್ಟವನ್ನು ತುಂಬಿಕೊಡಬೇಕಿದ್ದರೆ ಮತ್ತೆ ಬಿಜೆಪಿ ಪಕ್ಷವನ್ನೇ ಬೆಂಬಲಿಸಬೇದೆ. ಬಿಜೆಪಿಯನ್ನು ಹೊರಗಿಡಬೇಕು ಎಂಬ ಏಕೈಕ ದುರುದ್ದೇಶದಿಂದ ಸಂಮಿಶ್ರ ಸರಕಾರಗಳು ಜನರ ಹಿತಾಸಕ್ತಿಯನ್ನು ಮರೆತು ಕೆಲಸ ಮಾಡುತ್ತಿವೆ. ರಾಜ್ಯದಲ್ಲಿ ಮೂರು ಎಂಪಿ ಸ್ಥಾನಗಳನ್ನು ಪಡೆದುಕೊಂಡ ಪಕ್ಷ ಇಂದು ಕರಾವಳಿ ಭಾಗದಲ್ಲಿ ಸ್ವರ್ಧಿಸುತ್ತಿರುವುದು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲು ಮಾತ್ರ. ಶಿವಮೊಗ್ಗ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮದ ಆಧಾರದಲ್ಲಿ ಲೆಕ್ಕಾಚಾರ ಮಾಡಿಕೊಂಡು ಮೈತ್ರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು, ವಾಟ್ಸಪ್ ಫೇಸ್ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಮತಯಾಚನೆ ಮಾಡುವುದು ಮಾದರಿ ನೀತಿ ಸಂಹಿತೆಯಂತೆ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಎದುರಿಸಬೇಕಾದ್ದರಿಂದ ಈ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ ಎಂದು ಕುಂದಾಪುರ ಡಿವೈಎಸ್ಪಿ ಬಿ. ಪಿ. ದಿನೇಶ್‌ಕುಮಾರ್ ಹೇಳಿದರು. ಅವರು ಗುರುವಾರ ಚುನಾವಣೆಗೆ ಪೂರ್ವಭಾವಿಯಾಗಿ ಬೈಂದೂರು ಪೊಲೀಸ್ ಠಾಣೆಯಿಂದ ಆಯೋಜಿಸಲಾದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೀಗೆ ಹೇಳಿದರು. ಚುನಾವಣೆಯ ಅಕ್ರಮಗಳನ್ನು ತಡೆಯಲು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿರೂರು, ದಳಿ ಹಾಗೂ ಹೊಸಂಗಡಿ ಭಾಗದಲ್ಲಿ ಮೂರು ಚೆಕ್‌ಪೋಸ್ಟ್‌ಗಳಿದ್ದು ವಾಹನಗಳನ್ನು ತಪಾಸಣೆ ನಡೆಸುತ್ತಾರೆ. ಪ್ರೈಯಿಂಗ್ ಸ್ವಾಡ್, ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಮ್ ದಿನದ ಎಲ್ಲಾ ಹೊತ್ತಿನಲ್ಲಿ ಕಾರ್ಯನಿರ್ವಹಿಸುತ್ತದೆ. ಚುನಾವಣೆಗೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ವಾಹನಗಳಿಗೆ ಅಂಟಿಸುವಂತಿಲ್ಲ. ಮತದಾನದ ದಿನ ಪೋಲಿಂಗ್ ಸ್ಟೇಷನ್‌ನ ಇನ್ನೂರು ಮೀಟರ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡುವಂತಿಲ್ಲ ಈ ಮೊದಲಾದ ಮಾಹಿತಿಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೋಮುವಾದಿ ಪಕ್ಷಗಳನ್ನು ದೂರವಿಡಬೇಕು ನೆಲೆಯಲ್ಲಿ ಜಾತ್ಯಾತೀತ ತತ್ವದಡಿ ಇರುವ ಎಲ್ಲರೂ ಒಂದಾಗಬೇಕು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದೆ. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಇರಬೇಕು ಎಂಬ ಕಾರಣಕ್ಕೆ ದೇಶದ ಎಲ್ಲಾ ಭಾಗಗಳಲ್ಲಿಯೂ ಜಾತ್ಯಾತೀತರು ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಮೀನುಗಾರಿಕಾ ಸಚಿವ ವೆಂಕಟಗಿರಿ ನಾಡಗೌಡ ಹೇಳಿದರು. ಅವರು ಗುರುವಾರ ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಕರಾವಳಿಯಲ್ಲಿ ಮೀನುಗಾರರ ಅಭ್ಯುದಯಕ್ಕೆ ರಾಜ್ಯ ಸರಕಾರ ವಿವಿಧ ಹಂತದಲ್ಲಿ ನೆರವಾಗುತ್ತಿದೆ. ೧೪೭ ಕೋಟಿ ರೂ. ಡಿಸೇಲ್ ಸಬ್ಸಿಡಿ ನೀಡಲಾಗುತ್ತಿದೆ. ಕೇಂದ್ರ ಸರಕಾರ ಸೀಮೆಎಣ್ಣೆ ಕಡಿತಗೊಳಿಸಿದ ಬಳಿಕ ರಾಜ್ಯ ಸರಕಾರವೇ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿರಿಸಿ ಸುಮಾರು ೨೦ ಕೋಟಿಯ ತನಕ ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿ ಮೀನುಗಾರಿಕಾ ಬೋಟಿಗೆ ಪ್ರತಿ ವರ್ಷ ೮-೯ ಕೋಟಿ ರೂ. ಒಟ್ಟು ಸಬ್ಸಿಡಿ ನೀಡಲಾಗುತ್ತಿದೆ. ಮೀನುಗಾರಿಕಾ ಬೋಟುಗಳ ಟ್ರ್ಯಾಕ್ ಮಾಡಲು ಇಸ್ರೋದಿಂದ ತಯಾರಿಸಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ‘ದೇಶದಲ್ಲಿ ನಡೆಯುತ್ತಿರುವ ವ್ಯಾಪಾರಿ ಪ್ರವೃತ್ತಿಯ ರಾಜಕಾರಣಿಗಳ ಆಡಳಿತದಿಂದ ಪ್ರಜಾತಂತ್ರ ವ್ಯವಸ್ಥೆ ಅರ್ಥ ಕಳೆದುಕೊಂಡಿದೆ. ಅದರ ಸ್ಥಾನದಲ್ಲಿ ಪ್ರಜೆಗಳ ಆಡಳಿತ ಅಥವಾ ಪ್ರಜಾಕೀಯ ನೆಲೆಗೊಳಿಸಬೇಕು ಎನ್ನುವುದು ಚಿತ್ರನಟ ಉಪೇಂದ್ರ ಸಾರಥ್ಯದ ‘ಉತ್ತಮ ಪ್ರಜಾಕೀಯ ಪಕ್ಷ’ದ ಉದ್ದೇಶ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ  ಪಕ್ಷದ ಅಭ್ಯರ್ಥಿ ವೆಂಕಟೇಶ ಆರ್. ಹೇಳಿದರು. ಬುಧವಾರ ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದಿನ ಚುನಾವಣೆ ಮತ್ತು ರಾಜಕೀಯದಲ್ಲಿ ಹಣ ಮತ್ತು ತೋಳ್ಬಲ ಮೇಲುಗೈ ಸಾಧಿಸುತ್ತಿವೆ. ಅಭ್ಯರ್ಥಿ ಚುನಾವಣೆ ಗೆಲ್ಲಲು ಹಣ ಹೂಡಿದಾಗ ಗೆದ್ದ ಬಳಿಕ ಲಾಭಸಹಿತ ಹಿಂಪಡೆಯುವ ಅನಿವಾರ್ಯತೆ ಇದ್ದೇ ಇರುತ್ತದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಮಾಡುವ ದುಷ್ಪರಿಣಾಮವನ್ನು ಕಾಣುತ್ತಿದ್ದೇವೆ. ಭ್ರಷ್ಟಾಚಾರದ ಸಾಂಸ್ಥೀಕರಣ ಆಗಿಬಿಟ್ಟಿದೆ. ಪ್ರಜಾಕೀಯ ಇದಕ್ಕೆ ಪರ್ಯಾಯ ಎನಿಸಿದೆ. ಅದು ಜನರ ಆಶೋತ್ತರಗಳನ್ನು, ಬೇಡಿಕೆಗಳನ್ನು ಈಡೇರಿಸುವ ಆಡಳಿತ ನೀಡಲು ಬದ್ಧವಾಗಿದೆ. ಅದು ಯಾವುದೇ ಪ್ರಣಾಳಿಕೆಯನ್ನು ಹೊಂದಿಲ್ಲ. ಪ್ರಚಾರಕ್ಕೆ ವೆಚ್ಚ ಮಾಡುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ಅದರ ಗುರಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಯಡ್ತರೆ ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಸ್ಥಾನದಲ್ಲಿ ಎಪ್ರಿಲ್ 16ರಿಂದ 19ರ ತನಕ ಶ್ರೀ ಪಾಣ್ತಿಗರಡಿ ಹೈಗುಳಿ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಶಾಭಿಷೇಕ ಮಹೋತ್ಸವ ಜರುಗಲಿದೆ. ವೇ. ಮೂ. ಜ್ಯೋತಿಷಿ ಭಟ್ಕಳ ರಮೇಶ ಭಟ್ಟರ ಆದ್ವರ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ದಿನಾಂಕ ಎ.16ರ ಮಂಗಳವಾರ ಬೆಳಿಗ್ಗೆ ಸಾಮೂಹಿಕ ದೈವ ದೇವರ ಪ್ರಾರ್ಥನೆ, ಮಹಾಸಂಕಲ್ಪ, ಧ್ವಜಾರೋಹಣ, ಗಣಹೋಮ ಮೊದಲಾದ ಧಾರ್ಮಿಕ ಕಾರ್ಯಗಳು, ಸಂಜೆ ವಿವಿಧ ಹೋಮ ಹವನಾದಿಗಳು ಇರಲಿವೆ. ಎ.17ರ ಬುಧವಾರ ಬೆಳಿಗ್ಗೆ ಶ್ರೀ ನಾಗ ದೇವರ ಬಿಂಬ ಪ್ರತಿಷ್ಠೆ, ವಿವಿಧ ಪೂಜೆ ಹಾಗೂ ಹೋಮಗಳು ನಡೆಯಲಿದೆ. ಎ.18ರ ಗುರುವಾರ ಬೆಳಿಗ್ಗೆ ಬಿಂಬ ಶುದ್ಧಿ ಹೋಮ, ಕಲಶ ಸ್ಥಾಪನೆ, ಸಂಜೆ ಶ್ರೀ ದೈವಗಳ ಬಿಂಬ ಪ್ರತಿಷ್ಠಾ ಸಹಿತ ಜೀವ ಕುಂಭಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದೆ. ಮೂರು ದಿನಗಳ ಕಾಲ ಅನ್ನಸಂತರ್ಪಣೆ ನಡೆಯಲಿದೆ. ದಿನಾಂಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿದ್ಯಾರ್ಥಿ, ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಾಲಾ ಮುಖ್ಯೋಪಧ್ಯಾಯ ಜನಾರ್ದನ್ ಇದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು ಮೊದಲಾದವರು ವೇದಿಕೆಯಲ್ಲಿದ್ದರು. ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.

Read More