ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಯ 30 ಅಧಿಸೂಚಿತ ಸಂಸ್ಥೆಗಳಿಗೆ ಮರು ಪ್ರಕಟಣೆ ಹಾಗೂ ಹೊಸದಾಗಿ ಬಿ ಪ್ರವರ್ಗ 1 ಮತ್ತು ಸಿ ಪ್ರವರ್ಗದ 21 ಅಧಿಸೂಚಿತ ಸಂಸ್ಥೆಗಳು/ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಟ 25 ವರ್ಷ ವಯಸ್ಸಿನ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ / ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನವೆಂಬರ್ 29 ರ ಒಳಗೆ , ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಬಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಖೋ-ಖೋ ಕ್ರೀಡೆ ಎಲ್ಲಾ ಕ್ರೀಡೆಗಳಿಗೆ ತಾಯಿಯಿದ್ದಂತೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಎಲ್ಲಾ ಕ್ರೀಡೆಗಳಲ್ಲೂ ಯಶಸ್ಸನ್ನ ಕಾಣಬುಹುದು ಎಂದು ಸ್ಪೋಟ್ಸ್ ಆಥಾರಿಟಿ ಆಫ್ ಕರ್ನಾಟಕದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್‌ನ ಅಧ್ಯಕ್ಷ ಕೆ ಪಿ ಪುರುಷೋತ್ತಮ ನುಡಿದರು ಅವರು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಹಾಗೂ ದಕ್ಷಿಣ ಕನ್ನಡ ಖೋ-ಖೋ ಅಸೋಸಿಯೇಶನ್‌ನ ಜಂಟಿ ಆಶ್ರಯದಲ್ಲಿ, ಕಾಲೇಜಿನ ಕುವೆಂಪು ಸಭಾಭವನದಲ್ಲಿ ಜರುಗಿದ ಎರಡು ದಿನಗಳ ‘ಖೋ-ಖೋ ಕ್ರೀಡಾ ತರಬೇತುದಾರರ ಕಾರ್ಯಾಗಾರ’ ಹಾಗೂ ‘ರಾಜ್ಯ ಮಟ್ಟದ ಕ್ರೀಡಾ ತೀರ್ಪುಗಾರರ ಪರೀಕ್ಷೆ’ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಖೋ-ಖೋ ಕ್ರೀಡೆ ಸ್ಪರ್ಧಾಳುಗಳಲ್ಲಿ ಚಿತ್ತಾವಧಾನದ ಜತೆಗೆ ಬಹುಮಟ್ಟದ ಚಾಕಚಕ್ಯತೆ, ಸಾಮಾರ್ಥ್ಯ ಹಾಗೂ ಚುರುಕುತನವನ್ನು ಹೊಂದಲು ಸಹಕಾರಿ. ಈ ಕ್ರೀಡೆಯತ್ತಾ ಹೆಚ್ಚಿನ ಜನರು ಆಕರ್ಷಿತರಾಗುವಂತೆ ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್ ಗೌರವಾಧ್ಯಕ್ಷ ಲೋಕೇಶ್ವರ ಮಾತನಾಡಿ, ಖೋ-ಖೋ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಲಾಭಕೋರ ಹಣಕಾಸು ಬಂಡವಾಳ ಮತ್ತು ಬಂಡವಾಳಶಾಹಿಯ ವಿರುದ್ಧದ ಸಮರವನ್ನು ಇನ್ನೂ ತೀವ್ರಗೊಳಿಸಲು ಆ ಮುಖಾಂತರ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗಾಗಿ ಮತ್ತಷ್ಟು ತನ್ನನ್ನು ಹೇಗೆ ಸಮಪಿ೯ಸಿಕೊಳ್ಳಬೇಕೆಂದೂ ಅದಕ್ಕೆ ಬೇಕಾಗಿರುವ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಈ ಸಮ್ಮೇಳನವು ಚಚಿ೯ಸಬೇಕು ಎಂದು ಸಿಪಿಐ(ಎಂ)ಪಕ್ಷದ ರಾಜ್ಯ ಮುಖಂಡ ಕೆ.ಶಂಕರ್ ಕರೆ ನೀಡಿದರು. ಕುಂದಾಪುರ ಹೆಂಚು ಕಾಮಿ೯ಕ ಭವನದ ಸಭಾಂಗಣದಲ್ಲಿ ಜರಗಿದ ಸಿಪಿಐ(ಎಂ)ಕುಂದಾಪುರ ವಲಯದ ಮೂರನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪಕ್ಷದ ಹಿರಿಯ ಮುಖಂಡ ಯು.ದಾಸಭಂಡಾರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಜರಗಿದ ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿ ಕಾಯ೯ದಶಿ೯ ಎಚ್.ನರಸಿಂಹ ಚಟುವಟಿಕೆ ವರದಿ ಮಂಡಿಸಿದರು. ವರದಿಯ ಮೇಲೆ ಚಚೆ೯ ನಡೆದು ಅಂಗೀಕರಿಸಲಾಯಿತು. ಕೇಂದ್ರ,ರಾಜ್ಯ ಸರಕಾರದ ರೈತ, ಕಾಮಿ೯ಕ ವಿರೋಧಿ ನೀತಿ ವಿರುದ್ಧ, ಬೆಲೆ ಏರಿಕೆ ವಿರುದ್ದ, ಕರಾವಳಿ ನಿಯಂತ್ರಣ ವಲಯ ಕಠಿಣ ನಿಯಯಮಾವಳಿ ಸಡಿಲಗೊಳಿಸಲು, ಕುಂದಾಪುರ ಬೊಬ್ಬಯ೯ನ ಕಟ್ಟೆ ಬಳಿ ಹೆದ್ದಾರಿ ರಸ್ತೆ ದಾಟಲವಕಾಶಕ್ಕೆ ಒತ್ತಾಯಿಸಿ, ಪುರಸಭೆ ವ್ಯಾಪ್ತಿ ರಸ್ತೆ ದುರಸ್ತಿ, ರಿಂಗ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಸಾಮಾನ್ಯ ಸಭೆ ಶುಕ್ರವಾರ ಮಧ್ಯಾಹ್ನ ನಡೆಯಿತು. ಕೋವಿಡ್ ಕಾರಣದಿಂದ ಬಾಡಿಗೆ ಕಟ್ಟದ ಅಂಗಡಿ ಮುಂಗಟ್ಟುಗಳ ವ್ಯವಹಾರವಿಲ್ಲದೆ ದಿಕ್ಕೆಟ್ಟಿದ್ದಾರೆ. ವ್ಯಾಪಾರಸ್ಥರು ತೆರಿಗೆ ವಿನಾಯಿತಿಗೆ ಮನವಿ ಮಾಡಿದ್ದು, ಮಾನವೀಯ ನೆಲೆಯಲ್ಲಿ ಸಾಧ್ಯವಾದಷ್ಟು ವಿನಾಯಿತಿ ನೀಡಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು. ಮೀನು ಮಾರುಕಟ್ಟೆ ಕರೋನಾ ಹಿನ್ನೆಲೆಯಲ್ಲಿ ಬಂದಾಗಿದ್ದು, ಏಲಂ ಪಡೆದವರಿಗೆ ನಷ್ಟವಾಗಿದ್ದು, ಬಾಕಿ ಹಣಕಟ್ಟುವ ಸ್ಥಿತಿಯಿಲ್ಲ. ಏಲಂ ಪಡೆದವರಿಗೂ ವಿನಾಯತಿ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಆಡಳಿತ ಸದಸ್ಯ ರಾಘವೇಂದ್ರ ಖಾರ್ವಿ ಮಾತನಾಡಿ, ಮೀನು ಮಾರುಕಟ್ಟೆ ವ್ಯಾಪಾರಸ್ಥರ ಸಂಕಷ್ಟಕ್ಕೆ ಪುರಸಭೆ ನೆರವಿಗೆ ಬರುವಂತೆ ಒತ್ತಾಯಿಸಿದ್ದು, ಚಂದ್ರಶೇಖರ ಖಾರ್ವಿ, ಪ್ರಭಾಕರ ವಿ, ಶ್ರೀಧರ ಶೇರಿಗಾರ್, ಹಿರಿಯ ಸದಸ್ಯ ಮೋಹನದಾಸ ಶೆಣೈ ಪೂರಕವಾಗಿ ಮಾತನಾಡಿದರು. ಕರೋನಾ ಸಂಕಷ್ಟದ ಸಮಯದಲ್ಲಿ ಪುರಸಭೆ ತೆರಿಗೆ ವಸೂಲಿ ಮಾಡಿಲ್ಲ, ಸರಕಾರಕ್ಕೂ ತೆರಿಗೆ ಸಂಗತಿ ಬಗ್ಗೆ ಗಮನ ಸೆಳೆಯಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಶೇ.90ರಷ್ಟು ತೆರಿಗೆ ಸಂಗ್ರಹಿಸಲಾಗುತ್ತದೆ ಎಂದು ಮುಖ್ಯಾಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ತನ್ನ ಮೊದಲ ಪ್ರಯತ್ನದಲ್ಲೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಆಯ್ಕೆಯಾದ ಸುಗಂಧಿ ಮಕ್ಕಳ ಚಲನಚಿತ್ರ ನಿರ್ಮಿಸಿದ ನೆನಪು ಮೂವೀಸ್ ಕೋಟ ಇದೀಗ ಮಕ್ಕಳ ಕಿರುಚಿತ್ರ ರಾಷ್ಟ್ರೀಯ ಶಿಕ್ಷಣ ಕ್ರಮ ಪ್ರೇರಿತ ‘ಕುದ್ರು’ ಚಿತ್ರಕ್ಕೆ ಚಾಲನೆ ದೊರೆಯಿತು. ಚಾಲನೆ ನೀಡಿ ಮಾತನಾಡಿದ ಯುವವಾಹಿನಿ ರಿ. ಯಡ್ತಾಡಿ ಘಟಕದ ಅಧ್ಯಕ್ಷ ಉದ್ಯಮಿ ರಾಜು ಪೂಜಾರಿ ಅವರು ಸದಾ ಮಕ್ಕಳ ಸಮಸ್ಯೆಗಳ ಕುರಿತು ಚಿಂತಿಸುವ , ಯೋಜನೆಗೆ ಈಡು ಮಾಡುವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವ ಚಿತ್ರ ನಿರ್ಮಿಸುವ ನೆನಪು ಮೂವೀಸ್ ತಂಡದ ಈ ಪ್ರಯತ್ನವೂ ಯಶಸ್ವಿಯಾಗಲಿ ಎಂದು ನುಡಿದರು. ಮಾತಿಲ್ಲದೇ ಮಾತಾನಾಡುವ ಈ ಕಿರುಚಿತ್ರದ ಕಥೆ-ಚಿತ್ರಕಥೆ -ನಿರ್ದೇಶನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರದ್ದು. ಸಂಗೀತ ರವಿ ಕಾರಂತ್, ಡಿ.ಓ.ಪಿ. ಎ.ಕೆ ಐತಾಳ್, ಸಹನಿರ್ದೇಶಕರಾಗಿ ಸತೀಶ್ ವಡ್ಡರ್ಸೆ, ಕಲೆ ಗಿರೀಶ್ ಆಚಾರ್ಯ, ಕುಮಾರ, ಗೀತೆ ರಾಘವೇಂದ್ರ ರಾಜ್, ಮಾರ್ಗದರ್ಶಕರಾಗಿ ಪ್ರಕಾಶ್ ಪೂಜಾರಿ, ಶಿವರಾಮ ಕೊಠಾರಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷರಾದ ಜೇಸಿ ವೈ. ಮಂಗೇಶ್ ಶಾನ್‌ಭಾಗ್ ಅವರು ಜೆಸಿಐನಿಂದ ಕೊಡಮಾಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರಿಗೆ ಜೆಸಿಐ ವಲಯ 15ರ ವತಿಯಿಂದ ನವೆಂಬರ್ 7ರಂದು ಜೆಸಿಐ ಕುಂದಾಪುರ ಸಿಟಿ ಸಹಯೋಗದಲ್ಲಿ ಸಹನಾ ಕನ್ವೆನ್ಸನ್ ಸೆಂಟರಿನಲ್ಲಿ ನಡೆಯುವ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ರೋಟರಿ ಕ್ಲಬ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಆಸುಪಾಸಿನ ಆಯ್ದ ಪ್ರೌಢಶಾಲೆಯ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸವಿ ಪ್ರತಿಭಾ ಶೋಧ ಎನ್ನುವ ಶೈಕ್ಷಣಿಕ ಸ್ಪರ್ಧೆಯನ್ನು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಸಲಾಯಿತು. ಗಂಗೊಳ್ಳಿಯ ಜಿ.ಎಸ್. ವಿ.ಎಸ್ ಅಸೋಸಿಯೇಷನ್ ರಿ. ಕಾರ್ಯದರ್ಶಿ ಎಚ್ ಗಣೇಶ್ ಕಾಮತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಭಿನ್ನ ರೀತಿಯ ಪ್ರತಿಭೆಗಳು ಅಡಗಿರುತ್ತದೆ ಅದನ್ನು ಶೋಧಿಸಲು ಇಂತಹ ಶೈಕ್ಷಣಿಕ ಸ್ಪರ್ಧೆಗಳು ಅನುಕೂಲ ಮಾಡಿಕೊಡುತ್ತವೆ. ಶೈಕ್ಷಣಿಕ ಸಂಸ್ಥೆಗಳ ನಡುವೆ ಸಹಕಾರಯುತ ಸೌಹಾರ್ದ ಮನೋಭಾವನೆಯನ್ನು ಬೆಳೆಸಲು ಕೂಡ ನೆರವಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ವಹಿಸಿದ್ದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಸ್ವಾಗತಿಸಿದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್. ಕೆ ಪ್ರಾಸ್ತಾವಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಯೊಂದು ಭಾಷೆಗೆ ಅದರದ್ದೆ ಆದ ಅಸ್ತಿತ್ವ ಹಾಗೂ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಆ ನೆಲೆಯಲ್ಲಿ ಕನ್ನಡ ಭಾಷಿಕರಾದ ನಾವು ಪುಣ್ಯವಂತರು. ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ನಾವು ಉಳಿಸಿ ಬೆಳೆಸಬೇಕು. ಜೊತೆಗೆ ದೇಶಾಭಿಮಾನ, ದೇಶ ಭಕ್ತಿ, ಸೈನ್ಯದ ಕುರಿತಾದ ಅಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಹಾಗೂ ಸಾಹಿತಿಗಳಾದ ಬೈಂದೂರು ಚಂದ್ರಶೇಖರ ನಾವಡ ಹೇಳಿದರು. ಅವರು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ‘ಕನ್ನಡಕ್ಕಾಗಿ ನಾವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸುಕುಮಾರ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು, ಉಪನ್ಯಾಸಕರಾದ ಅಮೃತಾ ಅತಿಥಿಗಳನ್ನು ಪರಿಚಯಿಸಿ, ಪ್ರವೀಣಾ ಮಹಾಬಲ ಪೂಜಾರಿ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ರೋಟರಿ ಕ್ಲಬ್ ವತಿಯಿಂದ ವಕ್ವಾಡಿ ಸರಕಾರಿ ಪ್ರೌಢಶಾಲೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾ ಸೇತು ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತ ಹೊಳ್ಳ,ರೋಟರಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್ ಬಿ ಕುಂಭಾಶಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಅವಳಿ ಕೊಲೆ ಪ್ರಕರಣದ ಆರೋಪಿ, ಜಿಪಂ ಮಾಜಿ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಜಾಮೀನು ಅರ್ಜಿಗೆ ತಿರಸ್ಕೃತಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆದೇಶ ನೀಡಿದೆ. 2019ರ ಜ.26ರಂದು ಗೆಳೆಯರಾದ ಯತೀಶ್ ಕಾಂಚನ್ ಹಾಗೂ ಭರತ್ ರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರಿಕೆರೆ ರಾಘವೇಂದ್ರ ಕಾಂಚನ್ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದರು. ಆರೋಪಿಗಳ ಪೈಕಿ ರಾಘವೇಂದ್ರ ಕಾಂಚನ್‌ಗೆ ಹೈಕೋರ್ಟ್ 2019ರಲ್ಲಿ ಜಾಮೀನು ನೀಡಿತ್ತು. ಆದರೆ ಭರತ್ ತಾಯಿ ಪಾರ್ವತಿ, ಈ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2020ರ ಜ.20ರಂದು ರಾಘವೇಂದ್ರ ಕಾಂಚನ್ನ ಜಾಮೀನು ವಜಾಗೊಳಿಸಿ ಆದೇಶ ನೀಡಿತ್ತು. ಇದೀಗ ಎರಡನೇ ಬಾರಿಗೆ ರಾಘವೇಂದ್ರ ಕಾಂಚನ್ ಜಾಮೀನಿಗಾಗಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯನ್ನು…
