Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬದುಕಿನಲ್ಲಿ ಪರರ ಹಸಿವು ಹಾಗೂ ನೋವಿಗೆ ಸ್ಪಂದಿಸುವುದು ಅಗತ್ಯ. ಭ್ರಾತೃತ್ವ ಹಾಗೂ ಸಹೋದರತೆಯ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಅವರು ಕಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಭಾನುವಾರ ಕುಂದಾಪುರ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಬದುಕು ಯಾಂತ್ರಿಕತೆಯತ್ತ ಸಾಗುತ್ತಿದೆ. ಮಾನವೀಯತೆ ಇಲ್ಲದ ಪ್ರಪಂಚದಲ್ಲಿ ಬದುಕಿತ್ತಿದ್ದೇವೆ ಎಂದು ಭಾಸವಾಗುತ್ತಿದೆ. ಇವನ್ನೆಲ್ಲಾ ಮೀರಿ ಏಕತೆಯ ಮಂತ್ರವನ್ನು ಪಠಿಸುವುದು ಅಗತ್ಯವಾಗಿದೆ ಎಂದರು. ಉಡುಪಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ಕ್ರಿಸ್ಮಸ್ ಸಂದೇಶ ನೀಡಿ, ಪ್ರೀತಿ ಮತ್ತು ಶಾಂತಿ ದೇವರು ಕಲಿಸಿದ ಭಾಷೆ. ಭಾರತದಲ್ಲಿ ಬೇರೆ ಬೇರೆ ಧರ್ಮಗಳಿದ್ದರೂ ಎಲ್ಲದರ ಗುರಿಯೂ ದೇವರೊಂದಿಗೆ ಇರುವುದೇ ಆಗಿದೆ. ಎಲ್ಲಾ ಧರ್ಮಗಳೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬಂಟರ ಯಾನೆ ನಾಡವರ ಸಂಘದ ವತಿಯಿಂದ ನಿರ್ಮಾಣಗೊಂಡ ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಂಡಾಡಿ ಜಗನ್ನಾಥ ಶೆಟ್ಟಿ ಸಭಾಂಗಣ, ಯಡ್ತರೆ ಮಂಜಯ್ಯ ಶೆಟ್ಟಿ ಅವರ ೧೦೫ನೇ ಜನ್ಮ ಜಯಂತಿ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಂಪತ್ತು ಗಳಿಕೆ ಜೀವನದ ಒಂದು ಭಾಗವೇ ಹೊರತು ಸಂಪತ್ತೇ ಜೀವನವಲ್ಲ. ಹಣದ ಹಿಂದೆ ಓಡುವುದಕ್ಕಿಂತ ಸಾಮಾಜಿಕವಾಗಿ ತೊಡಗಿಸಿಕೊಳ್ಳಬೇಕು. ನಿಸ್ವಾರ್ಥ ಸೇವೆ ಭಗವಂತನಿಗೂ ಪ್ರಿಯವಾಗಿದ್ದು, ಸಂಘಟಿತರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತವಾಗಿರುತ್ತದೆ ಎಂದು ಹೇಳಿದರು. ನಮ್ಮ ಬೆಳವಣೆಗೆಯಲ್ಲಿ ಸಮಾಜದ ಕೊಡುಗೆ ತುಂಬಾಯಿದ್ದು ಪ್ರತಿಯೊಬ್ಬರು ಅದನ್ನು ಮರೆಯಬಾರದು, ನಾವು ನಮ್ಮ ಸಮಾಜದೊಂದಿಗೆ ಬೇರೆ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋದಾಗ ಅವರ ಪ್ರೀತಿ, ವಿಶ್ವಾಸವನ್ನು ಗಳಿಸಬಹುದು. ಕರಾವಳಿ ಜಿಲ್ಲೆಯ ಬಂಟ ಸಮುದಾಯದ ಕೊಡುಗೆಯೂ ಅಪಾರವಾಗಿದ್ದು, ಸಮಾಜದಲ್ಲಿ ಇನ್ನೊಬ್ಬರ ಕಾಲೆಳೆಯುವುದಕ್ಕಿಂತ ಕೈಹಿಡಿದು ಮುನ್ನೆಡೆಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ. ಪ್ರತಿಯೊಬ್ಬರೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ದಲಿತ ಸಂಘರ್ಷ ಸಮಿತಿ ಬೈಂದೂರು ವತಿಯಿಂದ ಡಾ ಬಿ.ಆರ್.ಅಂಬೇಡ್ಕರ್ ಅವರ ೬೨ನೇ ಮಹಾ ಪರಿನಿರ್ಮಾಣ ದಿನದವನ್ನು ಬೈಂದೂರಿನ ಸರಕಾರಿ ಪರಿಶಿಷ್ಟ ವರ್ಗದ ಆಶ್ರಯ ಶಾಲೆಯಲ್ಲಿ ಆಚರಿಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ಅವರ ೬೨ನೇ ಮಹಾ ಪರಿನಿರ್ಮಾಣ ದಿನವನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಉದ್ಘಾಟಿಸಿ, ಸಾಕಷ್ಟು ಅವಮಾನ ಮತ್ತು ತಾರತಮ್ಯ ಅನುಭವಿಸಿದರೂ ದೇಶದ ಬಗ್ಗೆ ತಿರಸ್ಕಾರ ಭಾವನೆ ಹೊಂದದೇ ಸಮಾಜ ತಿದ್ದುವ, ಸದೃಢ ಭಾರತ ನಿರ್ಮಾಣದತ್ತ ತಮ್ಮ ಚಿತ್ತ ಹರಿಸಿದ ಅಂಬೇಡ್ಕರ್ ಒಬ್ಬ ಮಹಾನ್ ಮಾನವತಾದಿ. ಅಸ್ಪಶ್ಯರು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಇಡೀ ಜೀವನನ್ನೇ ಮುಡುಪಾಗಿರಿಸಿದ್ದ ಅಂಬೇಡ್ಕರ್ ಅವರು ನಮ್ಮನ್ನಗಲಿ ೬೨ ವರ್ಷಗಳು ಸಂದಿದ್ದರೂ ಅವರ ವಿಚಾರಧಾರೆಗಳು ಜನಮಾನಸದಲ್ಲಿ ಇಂದಿಗೂ ಆಳವಾಗಿ ಬೇರೂರಿವೆ. ಅಸಮತೋಲನ ಮುಕ್ತ ಭಾರತ ಹಾಗೂ ಅರ್ಥಿಕ ಪ್ರಗತಿಯನ್ನು ಕಂಡಿದ್ದ ಅವರ ಕನಸಗಳನ್ನು ನನಸಾಗಿಸಲು ನಾವಿಂದು ಅವರ ಆಲೋಚನಾ ಸರಣಿಯ ಮಾರ್ಗದಲ್ಲಿ ಮುನ್ನಡೆಯಬೇಕಿದೆ ಎಂದರು. ಬೈಂದೂರು ಸರಕಾರಿ ಪರಿಶಿಷ್ಟ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜನರಿಂದ ಆಯ್ಕೆಯಾದ ಪ್ರತಿನಿಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಅಭಿವೃದ್ದಿ ಸಾಧ್ಯವಾಗುತ್ತದೆ. ಸರಕಾರದ ಯೋಜನೆಗಳು ಸಮಪರ್ಕವಾಗಿ ಜನರಿಗೆ ತಲುಪಬೇಕಾದರೆ ಅಧಿಕಾರಿಗಳ ಸ್ಪಂದನೆ ಮುಖ್ಯವಾಗಿರುತ್ತದೆ. ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಸಾಕಷ್ಟು ಅನುಭವ ಇರುವ ಸಂಸದರು ಜನಸ್ಪಂದನೆಯ ಮೂಲಕ ಇನ್ನಷ್ಟು ಸೇವೆ ನೀಡಲು ಅವಕಾಶ ದೊರೆತಂತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಅವರ ನೂತನ ಕಛೇರಿ ಹಾಗೂ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಬೈಂದೂರು ವ್ಯಾಪ್ತಿಯಲ್ಲಿ ಕುಡಿಯುವ ನೀರು, ಕಡಲ್ಕೊರೆತ, ಮರಳು ಸಮಸ್ಯೆ, ಡೀಮ್ಡ್ ಪಾರೆಸ್ಟ್ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹಕ್ಕುಪತ್ರ ದೊರಕದಿರುವುದು ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂಧಿಸಿದಾಗ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಪಕ್ಷಾತೀತವಾಗಿ ಜನರ ಸಮಸ್ಯೆ ಅರಿಯಲು ಇಲ್ಲಿ ಕಛೇರಿ ತೆರೆಯಲಾಗಿದ್ದು, ಇದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಭಿನ್ನ ಐಡಿಯಾಸ್, ಕಾರ್ಟೂನು ಕುಂದಾಪ್ರ ಬಳಗದ ಆಶ್ರಯದಲ್ಲಿ ಇಲ್ಲಿನ ಕಲಾ ಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಕಾರ್ಟೂನು ಹಬ್ಬ 2018ಉದ್ಘಾಟನೆಗೊಂಡಿತು. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಕಾರ್ಟೂನು ಹಬ್ಬ ಉದ್ಘಾಟಿಸಿ ಮಾತನಾಡುತ್ತಿದ್ದರು. ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಪೊಟೋ ಪತ್ರಕರ್ತ ಯಜ್ಞ ಮಂಗಳೂರು, ಪತ್ರಕರ್ತರಾದ ದಯಾಸಾಗರ್ ಚೌಟ, ಯು.ಕೆ.ಕುಮಾರನಾಥ್ ಮಾತನಾಡಿದರು. ಕ್ರೀಡಾ ಪೊಟೋ ಪತ್ರಕರ್ತ ಸುರೇಶ್ ಕೆ. ಕರ್ಕೇರ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಪ್ರಕಾಶ್ ಶೇಟ್, ಜಯಂತ ಕಾಯ್ಕಿಣಿ ಅವರಿಗೆ ಸಂಗೀತ ನಮನ ಸಲ್ಲಿಸಿದರು. ಗಿರಿಧರ ಕಾರ್ಕಳ, ಅವಿನಾಶ್ ಕಾಮತ್, ಸೋಮಶೇಖರ ಪಡುಕೆರೆ, ಶೇಖರ ಅಜೆಕಾರು, ಧನಂಜಯ ಗುರುಪುರ, ಕೇಶವ ಸಸಿಹಿತ್ಲು, ಸತೀಶ್ ಆಚಾರ್ಯಾ ಹಾಗೂ ಇನ್ನಿತರ ಕಲಾವಿದರ ಜತೆ ಅನೌಪಚಾರಿಕ ಸಮ್ಮಿಲನ ನಡೆಯಿತು. ಕಾರ್ಟೂನು ಹಬ್ಬ ಆಯೋಜಕ ಸತೀಶ್ ಆಚಾರ್ಯ ಸ್ವಾಗತಿಸಿದರು. ಗಿರಿಧರ ಕಾರ್ಕಳ ಅತಿಥಿಗಳ ಪರಿಚಯಿಸಿದರು. ರಾಮಕೃಷ್ಣ ಹೇರ್ಳೆ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ವರದಿ ಡಿ.೦6ರಂದು ಕುಂದಾಪುರದ ಅಧಿದೇವರಾದ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ದೀಪೋತ್ಸವ ಹಾಗೂ ರಥೋತ್ಸವದ ಸಂಭ್ರಮ. ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಈ ದೀಪಾರಾಧನೆಯನ್ನು ಊರಿನ ಜನ ಸಂಭ್ರಮದಿಂದ ಇದಿರು ನೋಡುತ್ತಿರುತ್ತಾರೆ. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವ. ಈ ಹಬ್ಬಕ್ಕೆ ಒಂದು ವಾರವಿರುವಾಗಲೇ ನಗರದ ಬೀದಿಗಳ ಬದಿಯಲ್ಲಿ ಸಂಚಾರೀ ಅಂಗಡಿಗಳವರು ಸಾಲುಗಟ್ಟಿ ಬೀಡು ಬಿಡುತ್ತಾರೆ. ದೇವಾಲಯದಲ್ಲಿ ದೀಪಾಲಂಕಾರ ಮತ್ತಿತರ ಸಿದ್ಧತೆಗಳು ಆರಂಭವಾಗುತ್ತವೆ. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ. ಈ ಸಂದರ್ಭದಲ್ಲಿ ರಥೋತ್ಸವದ ಮಾದರಿಯಲ್ಲೇ ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಣೆ. ಕೊನೆಯ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಒಂದೇ ನೋಟಕ್ಕೆ ಮನತುಂಬಿದ ನಗು, ಒಮ್ಮೊಮ್ಮೆ ಸೆಡವು, ಬಾಗುವ ರೇಖೆಗೆ ತಕ್ಕಂತೆ ಬದಲಾಗುವ ಭಾವಲಹರಿ. ಕಾರ್ಟೂನ್ ಎಂದರೆ ಹಾಗೆ. ಆಳುವವರಿ ಗೊಂದು ಚಾಟಿ. ಜನಸಾಮಾನ್ಯರಿಗೆ ನಗುವಿನ ಚಟಾಕಿ. ವಾಸ್ತವದ ಅನಾವರಣ. ಕಾರ್ಟೂನಿಷ್ಠರಲ್ಲಿ ಕಲಾವಿದ, ಪತ್ರಕರ್ತ ಏಕಕಾಲದಲ್ಲಿ ಜಾಗೃತನಾಗಿರುತ್ತಾನೆ. ನೂರು ಪದಗಳಲ್ಲಿ ಹೇಳಬಹುದಾದದ್ದನ್ನು ಒಂದು ರೇಖೆಯಲ್ಲಿ ಹೇಳಿ ಮುಗಿಸುವ ಛಾತಿ ಕಾರ್ಟೂನಿಷ್ಠರದ್ದು. ಇಂತಹ ಕಾರ್ಟೂನಿಷ್ಠ ರನ್ನು ಕಾರ್ಟೂನಿಷ್ಠರ ತವರು, ಕುಂದಾಪುರದಲ್ಲಿ ಒಗ್ಗೂಡಿಸಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸುತ್ತಿರುವ ಕಾರ್ಟೂನು ಹಬ್ಬ, ಐದನೇ ವರ್ಷವೂ ಸಜ್ಜುಗೊಂಡಿದೆ. ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರದ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ತಂಡದ ಕಾರ್ಟೂನಿಷ್ಠರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಟೂನು ಹಬ್ಬ ಹತ್ತಾರು ವಿಶೇಷತೆಗಳೊಂದಿಗೆ ರಂಗು ರಂಗಾಗಿ ನಡೆಯುತ್ತಿದ್ದು ಈ ಭಾರಿಯೂ ನಾಲ್ಕು ದಿನಗಳ ಕಾಲ ಕುಂದಾಪುರದ ಕಲಾಮಂದಿರದಲ್ಲಿ ಜರುಗಲಿದೆ. ಹಬ್ಬದಲ್ಲಿ ಕಾರ್ಟೂನು ಪ್ರದರ್ಶನ, ಸ್ಕೂಲ್ ಟೂನ್ ಚಾಂಪಿಯನ್‌ಶಿಪ್ ಕಾರ್ಟೂನು ಸ್ವರ್ಧೆ,…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು: ಶತಮಾನದ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯಿತು. ಹಲವು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು. ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು.ಕಂಬಳ ಗದ್ದೆಯನ್ನು ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗಿತ್ತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸಿದ ಬಳಿಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು. ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ನೂರಾರು ಜೊತೆ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ವರ್ಧೆಯಲ್ಲಿ ಪಾಲ್ಗೊಂಡವು. ಕಂಠದಮನೆ ಕುಟುಂಬದ ನಾರಾಯಣ ಹೆಗ್ಡೆಯವರ ಸಾರಥ್ಯದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ ಸಂಭ್ರಮಿಸಿದರು. ವಿಶಾಲ ಗದ್ದೆಯ ಅಂಚುಗಳಲ್ಲಿ ನಿಂತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ನೃತ್ಯ ವಸಂತ ನಾಟ್ಯಾಲಯದ ನಿರ್ದೇಶಕಿ, ವಿದುಷಿ ಪ್ರವಿತಾ ಅಶೋಕ್ ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ನೃತ್ಯ ವಸಂತ ನಾಟ್ಯಾಲಯವನ್ನು ಹುಟ್ಟುಹಾಕಿ ಕಳೆದ 14 ವರ್ಷಗಳಿಂದ ನೂರಾರು ನೃತ್ಯಾಸಕ್ತರಿಗೆ ತರಬೇತಿ ನೀಡುತ್ತಿರುವ ಅವರು ಶಾಸ್ತ್ರೀಯ ನೃತ್ಯ ಮಾರ್ಗದರ್ಶಕಿಯಾಗಿ ಲಘು ಶಾಸ್ತ್ರೀಯ ನೃತ್ಯ ಸಂಯೋಜಿಸಿ ಅನೇಕರಿಗೆ ತರಬೇತಿ ನೀಡಿದ್ದಾರೆ. ಅವರಿಗೆ ಈವರೆಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದೆ. p

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ೧೯೮೪ರಲ್ಲಿ ಯಕ್ಷಗಾನ ವೃತ್ತಿಪರ ಮೇಳದಲ್ಲಿ ಕಲಾವಿದರಾಗಿ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡ ಹೆರಂಜಾಲು ಗೋಪಾಲ ಗಾಣಿಗರು ಖ್ಯಾತ ಯಕ್ಷಗಾನ ಕಲಾವಿದ ದಿ. ಹೆರಂಜಾಲು ವೆಂಕಟರಮಣ ಗಾಣಿಗ ಪುತ್ರ. ನಾಲ್ಕನೇ ತರಗತಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡವರು. ಹೆರಂಜಾಲಿನಲ್ಲಿ ಯಕ್ಷಗಾನ ಪ್ರತಿಷ್ಠಾನವನ್ನು ಸ್ಥಾಪಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಭೇತಿ ನೀಡುತ್ತಿದ್ದಾರೆ.

Read More