ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ನೃತ್ಯ ವಸಂತ ನಾಟ್ಯಾಲಯದ ನಿರ್ದೇಶಕಿ, ವಿದುಷಿ ಪ್ರವಿತಾ ಅಶೋಕ್ ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ನೃತ್ಯ ವಸಂತ ನಾಟ್ಯಾಲಯವನ್ನು ಹುಟ್ಟುಹಾಕಿ ಕಳೆದ 14 ವರ್ಷಗಳಿಂದ ನೂರಾರು ನೃತ್ಯಾಸಕ್ತರಿಗೆ ತರಬೇತಿ ನೀಡುತ್ತಿರುವ ಅವರು ಶಾಸ್ತ್ರೀಯ ನೃತ್ಯ ಮಾರ್ಗದರ್ಶಕಿಯಾಗಿ ಲಘು ಶಾಸ್ತ್ರೀಯ ನೃತ್ಯ ಸಂಯೋಜಿಸಿ ಅನೇಕರಿಗೆ ತರಬೇತಿ ನೀಡಿದ್ದಾರೆ. ಅವರಿಗೆ ಈವರೆಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದೆ.
p










