Author: ನ್ಯೂಸ್ ಬ್ಯೂರೋ

ಸಕಲ ಜೀವ ರಾಶಿಗಳಲ್ಲಿ ಮನುಷ್ಯನ ಜನ್ಮ ಶೇಷ್ಠವಾದದ್ದು, ಮನುಷ್ಯನ ಜೀವನದಲ್ಲಿ ಸಂಬಂಧಗಳು ಬೆಸೆದುಕೊಳ್ಳುತ್ತಾ ಹೋಗುತ್ತದೆ. ಅದರಲ್ಲೂ ಗಂಡು ಹೆಣ್ಣಿನ ನಡುವಿನ ಪ್ರೀತಿ-ದಾಂಪತ್ಯ ಎಂಬ ಸಂಬಂಧ ಬಹಳ ಸೂಕ್ಷ್ಮವಾಗಿರುವಂತದ್ದು. ಕೊನೆತನಕ ಮನಷ್ಯನ ಜೀವನದಲ್ಲಿ ಇರುವ ಸಂಬಂಧವೆಂದರೆ ಸಂಗಾತಿ ಸಂಬಂಧ ಜೀವನದ ಪ್ರಯಣದಲ್ಲಿ ಎಳುಬೀಳುಗಳಲ್ಲಿ ಜೊತೆಯಾಗಿ ನಿಲ್ಲುವುದೇ ಸಂಗಾತಿಯ ಸಂಬಂಧ ಕೇವಲ ಕುಟುಂಬದ ಕಡೆಯಿಂದಷ್ಟೆ ಅಲ್ಲ, ಪ್ರೇಮಿಗಳ ನಡುವಿನ ಭಿನ್ನಾಭಿಪ್ರಾಯಗಳು ಸಹ ಸಂಬಂಧ ಮುರಿದು ಹೋಗುವವರೆಗೂ ಮುಂದುವರೆಯಬಹುದು. ಸಮಯ ಸಾಗಿದಂತೆ ಸಂಬಂಧಗಳಿಗೆ ನೀಡುವ ಪ್ರಾಮುಖ್ಯತೆಯು ಬೇರೊಂದು ಸಂಬಂಧಕ್ಕೆ ಬದಲಾಗಬಹುದು. ಆದರೆ ಕೆಲವೊಂದು ಸಲ ಸಂಗಾತಿಯೊಂದಿಗಿನ ಸಂಬಂಧಕ್ಕೆ ಹೆಚ್ಚು ಪ್ರಾಮುಖ್ಯ ಕೊಡದೇ ಮುರಿದು ಹೋಗಬಹುದು. ಪರಸ್ಪರ ಪ್ರೀತಿ, ಗೌರವ ನಂಬಿಕೆ ಇವೇ ಸಂಗಾತಿಯೊಂದಿಗಿನ ಬಂಧ ಚಿರಕಾಲ ಉಳಿಯಲು ಸಹಾಯ ಮಾಡುತ್ತದೆ. ಮನಸ್ಸು ಬಿಚ್ಚಿ ಮಾತನಾಡಿ:ಹೌದು, ನೀವು ನಿಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿದರೆ ನಿಮ್ಮ ಸಂಬಂಧ ಮುರಿದು ಬಿಳುವ ಸಾಧ್ಯತೆಗಳೇ ಇರುವುದಿಲ್ಲ ಯಾಕೆಂದರೆ ಇಂದಿನ ದಿನಗಳಲ್ಲಿ ಮೊಬೈಲ್ ಕೈಯಲ್ಲಿ ಹಿಡಿದುಕೊಂಡರೆ ನಮಗೆ ಸುತ್ತಲಿನ ಜಗತ್ತಿನ ಅರಿವೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿವಿಧ ಬಣ್ಣದ ರಂಗೋಲಿಗಳಿಂದ ರಚಿಸಲಾದ ಭಾರತದ ಭೂಪಟದ ಜತೆಯಲ್ಲಿ ಭಾರತ ಮಾತೆಯ ರಂಗವಲ್ಲಿ ಚಿತ್ರಕ್ಕೆ ಕೋಟೇಶ್ವರ ಪಬ್ಲಿಕ್ ಸ್ಕೂಲ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಣತೆ ಹಚ್ಚಿ ದೀಪ ಬೆಳಗಿಸಿ ಬೀಳ್ಕೋಡುಗೆ ಪಡೆದುಕೊಂಡ ವಿನೂತನ ಕಾರ‍್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಡಾ. ಉಪಾಧ್ಯಾಯ ಮೂಡುಬೆಳ್ಳೆ ಇವರ ನೇತೃತ್ವದಲ್ಲಿ ೮ ಅಡಿ ಎತ್ತರದ ೭ ಅಡಿ ಅಗಲದ ಭಾರತ ದೇಶದ ಭೂಪಟದ ಜತೆ ಮಧ್ಯದಲ್ಲಿ ಭಾರತ ಮಾತೆಯ ಚಿತ್ರಣವನ್ನು ರಚಿಸಲಾಗಿತ್ತು. ಶಾಲೆಯ 2022ನೇ ಸಾಲಿನ 126 ಮಂದಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ವೇದಿಕೆಗೆ ಬಂದು ತಮ್ಮ ಭಾವೈಕ್ಯತೆಯ ಸಂದೇಶದೊಂದಿಗೆ ಸರ್ವಧರ್ಮಗಳ ಮಾನವೀಯತೆಯ ಪ್ರತಿಬಿಂಬವನ್ನು ಸಾರುವ ಹಣತೆಗಳ ಮೂಲಕ ಭಾರತ ಮಾತೆ ಹಾಗೂ ಭಾರತ ಭೂಪಟದ ಸುತ್ತ ಎಲ್ಲಾ ವಿದ್ಯಾರ್ಥಿಗಳು ಸೇರಿಕೊಂಡು ಜಾತಿ ಮತ ಭೇದವೆನ್ನದೆ ಹಣತೆಗಳನ್ನು ಹಚ್ಚಿ ಭಾವೈಕ್ಯತೆಯ ಸಂದೇಶದ ಪ್ರತಿಜ್ಞೆ ಸ್ವೀಕರಿಸಿ ಭಾರತ ಮಾತೆಯ ಆಶೀರ್ವಾದವನ್ನು ಪಡೆದುಕೊಂಡು ಪುಳಕೀತರಾದರು. ಕೆಪಿಎಸ್ ಉಪಪ್ರಾಂಶುಪಾಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ದೇವಾಡಿಗ ಒಕ್ಕೂಟದ ಮಾಜಿ ಅಧ್ಯಕ್ಷ, ನಿವೃತ್ತ ವಿಜಯ ಬ್ಯಾಂಕ್ ಉದ್ಯೋಗಿ ಕೆ.ಜಿ ಸುಬ್ಬಣ್ಣ (೭೪) ಅವರು ಅಲ್ವಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಸುಬ್ಬಣ್ಣ ಅವರಿಗೆ ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮನುಷ್ಯನ ವಿಕಾಸದೊಂದಿಗೆ ಜನಪದ, ಜನಪದ ಪ್ರಕಾರಗಳಿಂದ ನಾಟಕ ಬೆಳೆದುಬಂದಿದೆ. ವಿಶ್ವ ರಂಗಭೂಮಿಯನ್ನು ಪರಿಣಾಮಕಾರಿ ಶಿಕ್ಷಣದ ಪ್ರಾಕಾರವೆಂದು ಒಪ್ಪಿಕೊಳ್ಳಲಾಗಿದೆ ಎಂದು ಹೆಗ್ಗೋಡು ಕೆ. ವಿ. ಸುಬ್ಬಣ್ಣ ರಂಗಸಮೂಹದ ಪ್ರಸನ್ನ ಹುಣಸೆಕೊಪ್ಪ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ 22ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಹಾಗೂ ವಿಶ್ವ ಅರಂಗಭೂಮಿ ದಿನಾಚರಣೆ ಉದ್ದೇಶಿಸಿ ಮಾತನಾಡಿ ಜನಸಾಮಾನ್ಯರಿಗೆ ಹತ್ತಿರವಾಗಲು ರಂಗಭೂಮಿ ಪರಿಣಾಮಕಾರಿ ಮಾಧ್ಯಮವೆಂಬುದನ್ನು ಪ್ರಭುತ್ವವೂ ಅರಿತಿದೆ. ಹಾಗಾಗಿಯೇ ರಂಗಭೂಮಿಯ ವಿವಿಧ ಪ್ರಾಕಾರಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂದರು. ನಟ, ಕಂಠದಾನ ಕಲಾವಿದ ಚಂದ್ರಕಾಂತ ಕೊಡಪಾಡಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಬ್ಯಾಂಕ್ ಅಧಿಕಾರಿ ಟಿ. ಶ್ರೀಧರ ಭಟ್, ಬೈಂದೂರು ರೋಟರಿ ಅದ್ಯಕ್ಷ ಡಾ. ಪ್ರವೀಣ ಶೆಟ್ಟಿ, ಬೈಂದೂರು ಜೆಸಿಐ ಅಧ್ಯಕ್ಷೆ ಸವಿತಾ ದಿನೇಶ್ ಉಪಸ್ಥಿತರಿದ್ದರು. ಸುರಭಿ ಸದಸ್ಯ ರಾಘವೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸತ್ಯ – ಸುಳ್ಳುಗಳ ದರ್ಶನ ಮಾಡಿಸುವ ಆಧುನಿಕ ರಂಗಭೂಮಿ ನಮ್ಮ ವಿವೇಚನೆ, ಸಂವೇದನೆಯನ್ನು ಇನ್ನಷ್ಟು ಹರಿತಗೊಳಿಸುತ್ತಿದೆ. ನಮ್ಮೊಳಗೆ ಸಹಬಾಳ್ವೆಯ ತುಡಿತ ಹೆಚ್ಚಿದಾಗಲೇ ರಂಗಭೂಮಿಯ ನೈಜ ಆಶಯ ಈಡೇರಿದಂತಾಗುವುದು. ಹಾಗಾಗಿ ರಂಗಭೂಮಿಯ ನಂಟು ಮನುಷ್ಯನಿಗೆ ಒಳ್ಳೆಯದು ಎಂದು ಬ್ರಹ್ಮಾವರ ಎಸ್‌ಎಂಎಸ್ ಶಾಲೆಯ ಪ್ರಾಂಶುಪಾಲರಾದ ಅಭಿಲಾಷ ಹಂದೆ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ 22ನೇ ವರ್ಷದ ಸಂಭ್ರಮದೊಂದಿಗೆ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಎರಡನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿ ಜೀವಿಗಳು ವಿಕಾಸವಾದಂತೆ ರಂಗಭೂಮಿಯೂ ಸಾಕಷ್ಟು ಬದಲಾಗುತ್ತಾ ಬೆಳೆಯುತ್ತಾ ಬಂದಿದೆ. ನಾಟಕವು ವಿವಿಧ ರಸಗಳ ಮೂಲಕ ಹೃದಯ ಮಟ್ಟುವುದರಿಂದ ನಮ್ಮೊಳಗಿನ ಭಾವಕ್ಕುಂಟಾಗುವ ಉಲ್ಲಾಸದ ಪರಿಣಾಮವೇ ಬೇರೆ ರೀತಿಯದು. ಯಾವುದೇ ಭೇದವಿಲ್ಲದೇ ಬದುಕುವ ರೀತಿಯನ್ನು ಕಲಿಸುವುದು ರಂಗಭೂಮಿಯಿಂದ ಸಾಧ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಅಧ್ಯಕ್ಷರಾದ ಬಿ. ರಾಮಕೃಷ್ಣ ಶೇರುಗಾರ ಅವರು ಮಾತನಾಡಿ ಬೈಂದೂರಿನಂತಹ ಗ್ರಾಮೀಣ…

Read More

ಸುರಭಿ ಬೈಂದೂರು – ರಾಜ್ಯ ಮಟ್ಟದ ನಾಟಕೋತ್ಸವ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಅರವತ್ನಾಲ್ಕು ವಿದ್ಯೆಗಳಲ್ಲಿ ನಾಟಕವೂ ಒಂದು. ಅದು ನಮ್ಮ ಬದುಕಿನ ಪಾತ್ರಗಳನ್ನೇ ರಂಗದ ಮೇಲೆ ತಂದು ವಿಮರ್ಷಿಸುವ, ಒರೆಗೆ ಹಚ್ಚುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲದು ಎಂದು ನಡೂರು ರತ್ನಶೀಲ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ, ಹಾಸ್ಯ ಕಲಾವಿದ ಮನು ಹಂದಾಡಿ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ’ರಂಗಸುರಭಿ – 2022’ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ ಮೊಬೈಲ್‌ನಲ್ಲಿಯೇ ಮುಳುಗಿ ಹೋಗಿರುವ ಜನರು ಸಾಂಸ್ಕೃತಿಕ ಚಟುವಟಿಕೆಗಳಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಮತ್ತೆ ನೈಜತೆಯತ್ತ ಸೆಳೆಯಲು ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಅನಿವಾರ್ಯವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಗು ಮುಂದೆ ಉತ್ತಮ ಕಾರ್ಯಗಳಲ್ಲಿಯೇ ಮುಂದುವರಿಯುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕಾರ್ಯವಾದಾಗ ಮುಂದಿನ ಪೀಳಿಗೆಗೆ ಉತ್ತಮವಾದುದನ್ನು ಕೊಡಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವ ಶುಕ್ರವಾರ ವೈಭವದಿಂದ ಸಂಪನ್ನಗೊಂಡಿತು. ಶ್ರೀದೇವಿಯ ವಿಜೃಂಭಣೆಯ ಉತ್ಸವಕ್ಕೆ ವಿವಿಧೆಡೆಗಳಿಂದ ತೆರಳಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು. ದೇವಳದಲ್ಲಿ ಮುಹೂರ್ತ ಬಲಿ, ಕ್ಷಿಪ್ರ ಬಲಿ ಹಾಗೂ ರಥ ಬಲಿಯ ಬಳಿಕ ಕೊಲ್ಲೂರಿನ ರಥೋತ್ಸವದ ಪರಂಪರೆಯಂತೆ ಜೋಡಿ (ಎರಡು) ಉತ್ಸವ ಮೂರ್ತಿಗಳನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿ ರಥೋತ್ಸವ ನಡೆಸಲಾಯಿತು. ಬೀದಿ ಗಣಪತಿ ದೇವಸ್ಥಾನದವರೆಗೆ ರಥವನ್ನು ಎಳೆದು ರಥೋತ್ಸವ ನಡೆಸಲಾಯಿತು. ತೇರಿನ ಈ ವೈಭವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಸಂಜೆಯ ಬಳಿಕ ಬ್ರಹ್ಮರಥವನ್ನು ಶಂಕರಾಶ್ರಮದವರೆಗೆ ಕೊಂಡೊಯ್ಯಲಾಗುತ್ತದೆ. ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಡಾ. ಕೆ. ರಾಮಚಂದ್ರ ಅಡಿಗ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡೆದವು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್. ಪಿ. ಬಿ. ಮಹೇಶ್, ಎಇಒ ಗೋವಿಂದ ನಾಯಕ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಸದಸ್ಯರಾದ ಜಯಾನಂದ ಹೋಬಳಿದಾರ್, ಡಾ. ಅತುಲ್ಕುಮಾರ್ ಶೆಟ್ಟಿ, ಗೋಪಾಲಕೃಷ್ಣ ನಾಡ, ಬೆಳ್ವೆ ಗಣೇಶ ಕಿಣಿ, ಕೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಮಾ.25: ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೇನಿಂಗ್ ಅಂಡ್ ಚೆಕ್ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏ.1 ರಿಂದ 16 ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ವೇಳಾಪಟ್ಟಿ:ಏಪ್ರಿಲ್ 1 ರಂದು ಕೆರಾಡಿ ಗ್ರಾಮ ಪಂಚಾಯತ್ನಲ್ಲಿ ಹಳ್ಳಿಹೊಳೆ, ಕೆರಾಡಿ ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಚಿತ್ತೂರು ಗ್ರಾಮ ಪಂಚಾಯತ್ನಲ್ಲಿ ವಂಡ್ಸೆ, ಚಿತ್ತೂರು, ಆಲೂರು, ಇಡೂರು, ಕುಂಜ್ಙಾಡಿ ಹಾಗೂ ಸುತ್ತಮುತ್ತಲಿನವರಿಗೆ, ಏ.3 ರಂದು ತಲ್ಲೂರು ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ತಲ್ಲೂರು ಹಾಗೂ ಸುತ್ತಮುತ್ತಲಿನವರಿಗೆ ಮತ್ತು ಕುಂದಾಪುರ ವಡೇರಹೋಬಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಕುಂದಾಪುರ, ಹಂಗಳೂರು, ಕೋಡಿ, ಕೋಟೇಶ್ವರ, ಕೋಣಿ ಹಾಗೂ ಸುತ್ತಮುತ್ತಲಿನವರಿಗೆ,ಏ.4 ರಂದು ಬೆಳ್ವೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಭವನದಲ್ಲಿ ಬೆಳ್ವೆ, ಅಲ್ಬಾಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ನಮ್ಮ ಪೂರ್ವಜರು ನಮಗಾಗಿ ಕಟ್ಟಿದ ಇತಂಹ ಕೆರೆಗಳ ಸಂರಕ್ಷಣೆ ನಮ್ಮಿಂದಲೇ ಆಗಬೇಕು. ಇತಂಹ ಆನೇಕ ಕೆರೆಗಳಲ್ಲಿ ನೀರು ಸಂಗ್ರಹದ ಸಾಮರ್ಥ್ಯ ಕಳೆದುಕೊಂಡು ವಿನಾಶದ ಅಂಚಿಗೆ ಕೆರೆಗಳು ತಲುಪುತ್ತಿದೆ. ಈಗಾಲಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನದಲ್ಲಿ ನೀರಿಗಾಗಿ ನಾನಾ ರೀತಿಯ ಹೋರಾಟಗಳನ್ನು ನಾವುಗಳು ಎದುರಿಸ ಬೇಕಾಗುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ, ಕನ್ನುಕೆರೆ ಕೆರೆಯ ಅಭಿವೃದ್ಧಿ ಮಂಡಳಿ ಕನ್ನುಕೆರೆ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಗ್ರಾ.ಪಂ., ಕನ್ನುಕೆರೆ ಫ್ರೆಂಡ್ಸ್ ಕನ್ನುಕೆರೆ, ರೋಟರಿ ಕ್ಲಬ್ ತೆಕ್ಕಟ್ಟೆ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನುಕೆರೆ ಇವರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮಕೆರೆ ಅಭಿವೃದ್ಧಿ ಯೋಜನೆ ಅಡಿ ಕನ್ನುಕೆರೆ ಕೆರೆಯ ಪುನಶ್ಚೇತನ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಸಮಾಜ ಸೇವಕ ಮಲ್ಯಾಡಿ ಶಿವರಾಮ್ ಶೆಟ್ಟಿ, ಧ.ಗ್ರಾ ಯೋಜನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯತ್‌ನ 2021-22ನೇ ಸಾಲಿನ ದ್ವೀತಿಯ ಹಂತದ ಗ್ರಾಮಸಭೆ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ಸಭಾಭವನದಲ್ಲಿ ಜರುಗಿತು. ಮೀನುಗಾರಿಕಾ ಸಹಾಯಕ ನಿರ್ದೇಶಕಿ ಸುಮಲತ ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಗ್ರಾಮಸಭೆ ನಡೆಸಿದರು. ಕೋಟೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ಕಂದಾಯ ಇಲಾಖೆ ವಿಎ ಆನಂದ, ಗೋಪಾಡಿ ಮೆಸ್ಕಾಂ ಇಲಾಖೆ ಮಂಜುನಾಥ್, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ, ಶಿಕ್ಷಣ ಇಲಾಖೆಯ ಹೊಸ ಬಡಾಕೆರೆ ಶಾಲಾ ಮುಖ್ಯೋಪಾಧ್ಯಾಯ ಪದ್ಮಾವತಿ ಕೆ, ಕೋಟೇಶ್ವರ ಕೆಪಿಎಸ್ ಮುಖ್ಯ ಶಿಕ್ಷಕ ಯೋಗಿ ನಾಯ್ಕ್ ಇಲಾಖಾವರೂ ಮಾಹಿತಿ ನೀಡಿದರು. ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಗೊಲ್ಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಸದಸ್ಯರಾದ ಜಯಲಕ್ಷ್ಮೀ, ಲೋಲಾಕ್ಷಿ ಎನ್ ಕೋತ್ವಾಲ್, ಲೋಕೇಶ್, ಚಂದ್ರಮೋಹನ್, ಪುಟ್ಟಿ, ನೇತ್ರಾವತಿ, ರಾಜಶೇಖರ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿಗಾರ್, ಸುರೇಶ್ ದೇವಾಡಿಗ, ರೊಯ್ಸಿನ್ ಡಿ ಮೆಲ್ಲೋ, ಲತಾ ಶೇಖರ ಮೊಗವೀರ, ಶೋಭಾ ಶೆಟ್ಟಿ, ರಾಘವೇಂದ್ರ ಪೂಜಾರಿ, ನಾಗರಾಜ…

Read More