ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣವನ್ನು ಕೋಡಿಯ ಕೌನ್ಸಿಲರ್ ಪ್ರಭಾಕರ್ ಶೇರೆಗಾರ್ ರವರು ನೆರವೇರಿಸಿ, ’ಸ್ವರ್ಧೆಗಳಲ್ಲಿ ಸೋಲು ಗೆಲುವು ಸಹಜ ಗೆಲುವಿಗಾಗಿ ನಿರಂತರ ಶ್ರಮಿಸುವುದೇ ವಿದ್ಯಾರ್ಥಿಗಳ ಗುರಿಯಾಗಬೇಕೆಂದರು’. ಕ್ರೀಡಾಜ್ಯೋತಿಯನ್ನು ಉದ್ಘಾಟಿಸಿದ ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಸ್ಮಾರಕ ಅನುದಾನಿತ ಪ್ರೌಢ ಶಾಲೆಯ ಕಾರ್ಯದರ್ಶಿಯಾದಂತಹ ಅಬ್ದುಲ್ಲಾರವರು -’ಕ್ರೀಡೆ ಆಧುನಿಕ ಜಗತ್ತಿನಲ್ಲಿ ಬಹು ಪ್ರಾಮುಖ್ಯತೆಯನ್ನು ಹೊಂದುತ್ತಿದೆ. ಕ್ರೀಡೆಯು ನಮ್ಮ ಜೀವನೋಪಾಯಕ್ಕು ಅಗತ್ಯವಾದಂತೆ ಆರೋಗ್ಯದ ಸುಸ್ಥಿತಿಗೂ ಅತೀ ಮುಖ್ಯವಾಗಿದೆ ಎಂದರು’. ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತೌಸಿಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸರ್ವರಿಗೂ ಶುಭಕೋರಿದರು. ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಪ್ರೊ. ಚಂದ್ರಶೇಖರ್ ದೋಮ ಪ್ರಾಸ್ತಾವಿಕ ಮಾತನ್ನಾಡಿ ಸರ್ವರನ್ನು ಸ್ವಾಗತಿಸಿದರು. ಡಾ. ಕೃಷ್ಣರಾಜ ಕರಬ ಕಾರ್ಯಕ್ರಮ ನಿರ್ವಹಿಸಿ, ದೈಹಿಕ ಶಿಕ್ಷಕರಾದ ಶ್ರೀ ಇಲಿಯಾಸ್ ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪುರ: ಕುಂಭಾಶಿ ದೇವಸ್ಥಾನದ ಮುಖಮಂಟಪದ ಬಳಿ ರಾ.ಹೆ.66ರಲ್ಲಿ ಇಂದು ಸಂಜೆ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಬೀಜಾಡಿ ಗ್ರಾ.ಪಂ ಮಾಜಿ ಸದಸ್ಯ ವಾಸು (55) ಅವರ ಅಳಿಯ ಸಂದೇಶ್(25) ಗಾಯಾಳು ಕೊರವಡಿ ಕ್ರಾಸ್ ನಿಂದ ತೆಕ್ಕಟ್ಟೆ ಕಡೆಗೆ ತೆರಳುವವರಿದ್ದರು. ಡಿವೈಡರ್ ಬಳಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಬೈಕ್ ಸವಾರರಿಗೆ ಗುದ್ದಿತ್ತು. ಅಪಘಾತದ ರಭಸಕ್ಕೆ ಬೈಕ್ ಸವಾರರ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿ ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದ ಇಪ್ಪತ್ತು ಕ್ಷೇತ್ರಗಳಲ್ಲಿನ 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುಪಾಲು ಹೊರಬಿದ್ದಿದ್ದು ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರತಾಪಚಂದ್ರ ಶೆಟ್ಟಿ ಜಯಗಳಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿದ್ದ ಜಯಪ್ರಕಾಶ್ ಹೆಗ್ಡೆ ಪರಾಭವಗೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು 8 ಮಂದಿ ಸ್ವರ್ಧಿಸಿದ್ದರು. ಚಲಾವಣೆಯಾದ ಒಟ್ಟು 6354 ಮತಗಳ 231 ಮತಗಳು ಅಸಿಂಧುವಾಗಿದ್ದರೇ, 2 ನೋಟಾ ಬಿದ್ದಿದೆ. ಸಿಂಧುವಾದ 6301 ಮತಗಳ ಪೈಕಿ ಕೋಟ ಶ್ರೀನಿವಾಸ ಪೂಜಾರಿ 2977 ಮತಗಳನ್ನು ಪಡೆದ್ದು ಜಯಭೇರಿ ಗಳಿಸಿದ್ದರೇ, ಪ್ರತಾಪಚಂದ್ರ ಶೆಟ್ಟಿ 2237 ಮತಗಳನ್ನು ಪಡೆದು ವಿಜಯದ ನಗೆ ಬೀರಿದ್ದಾರೆ. ಉಳಿದಂತೆ ಕಾಂಗ್ರೆಸ್ ಭಂಡಾಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರಿಗೆ 872 ಮತಗಳು, ಹರಿಕೃಷ್ಣ ಬಂಟ್ವಾಳ್ ಗೆ 127 ಮತಗಳು ದೊರೆತಿದ್ದರೇ, ಉಳಿದವರಿಗೆ ಒಟ್ಟು 88 ಮತಗಳು ದೊರೆತಿವೆ. (ಕುಂದಾಪ್ರ ಡಾಟ್ ಕಾಂ) ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತಲ್ಲೂರು ಪ್ರೌಢಶಾಲೆಯ ಎದುರಿನ ಮೈದಾನದಲ್ಲಿ ಸಮೀಪ ಕಾರ್ಯಕ್ರಮವೊಂದರ ಸಲುವಾಗಿ ಬಂಟಿಂಗ್ಸ್ ಕಟ್ಟುತ್ತಿದ್ದ ವೇಳೆ ಹೈಟೆನ್ಷನ್ ತಂತಿ ತಗಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಮನೋಜ್ ದೇವಾಡಿಗ (31) ಸುನಿಲ್ ಮೊಗವೀರ (24) ಮೃತರು ದುರ್ದೈವಿಗಳು. ಜನವರಿ 3ರಂದು ನಡೆಯಲಿರುವ ಕಾರ್ಯಕ್ರಮದ ಸಲುವಾಗಿ ಸಿದ್ಧತೆಗಳು ನಡೆಯುತ್ತಿದ್ದು, ಮಧ್ಯರಾತ್ರಿ ವೇಳೆಗೆ ಯುವಕರ ತಂಡ ಬ್ಯಾನರ್, ಬಂಟಿಂಗ್ಸ್ ಕಟ್ಟುವುದರಲ್ಲಿ ನಿರತವಾಗಿತ್ತು. ಒಬ್ಬ ಯುವಕರು ಮೇಲೇರಿ ಬಂಟಿಂಗ್ ಕಟ್ಟಲು ಅದನ್ನು ಮೇಲ್ಮುಖವಾಗಿ ಎಸೆದು ತಂತಿಯನ್ನು ಪಾಸ್ ಮಾಡುತ್ತಿದ್ದ ವೇಳೆ ಅದು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಕಿದೆ. ಅದರ ಇನ್ನೊಂದು ಬದಿಯನ್ನು ಯುವಕ ಕೈಯಲ್ಲಿ ಹಿಡಿದಾಗ ವಿದ್ಯುತ್ ಶಾಕ್ ತಗಲಿದೆ ಎನ್ನಲಾಗಿದೆ. ಆತನನ್ನು ರಕ್ಷಿಸಲು ಹೋದ ಮತ್ತೊಬ್ಬನಿಗೂ ಶಾಕ್ ತಗಲಿ ಇಬ್ಬರೂ ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹೇಶ ಎಂಬುವವನಿಗೆ ಗಂಭೀರ ಗಾಯಗಳಾಗಿದ್ದರೇ, ಉಳಿದವರು ದೂರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ. (ಕುಂದಾಪ್ರ ಡಾಟ್ ಕಾಂ) ಕೋಡಿಯ ತಂಪು ಪಾನೀಯ…
ತನ್ನ ಮಾತು ಹಾಗೂ ವಿಭಿನ್ನವಾದ ಹಾವ-ಭಾವಗಳಿಂದಲೇ ನಾಡಿನಾದ್ಯಂತ ನೂರಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಹುಚ್ಚ ವೆಂಕಟ್ ಕೆಲ ತಿಂಗಳುಗಳಿಂದಿಚೆಗೆ ಕರ್ನಾಟಕದಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಎಲ್ಲೆಲ್ಲೂ ಆತನದ್ದೇ ಮಾತು. ಆತನ ಸ್ಟೈಲ್ ಅನುಕರಣೆ. ವೆಂಕಟರ ಪ್ರಭಾವ ಎಷ್ಟಿದೆಯೆಂದರೇ ಅದು ಕರಾವಳಿಯ ಯಕ್ಷಗಾನವನ್ನು ಬಿಟ್ಟಿಲ್ಲ ನೋಡಿ. ಪೆರ್ಡೂರು ಮೇಳದ ಕಲಾವಿದ ರವೀಂದ್ರ ದೇವಾಡಿಗ ಇತ್ತಿಚಿಗೆ ನಡೆದ ಯಕ್ಷಗಾನ ಪ್ರದರ್ಶನವೊಂದರಲ್ಲಿ ಹುಚ್ಚಾ ವೆಂಕಟ್ ಅವರ ಡೈಲಾಗ್ ಹೇಳುವ ಮೂಲಕ ಯಕ್ಷ ಪ್ರಿಯರಲ್ಲೂ ಒಂದು ಬಗೆಯ ಕ್ರೇಜ್ ಹುಟ್ಟಿಸಿದ್ದಾರೆ. ಅಂದು ಹಾಗೆ ಈ ವಿಡಿಯೋ ಶೇರ್ ಮಾಡುತ್ತಿದ್ದಂತೆ ಯಕ್ಷಗಾನವನ್ನು ಬೀದಿಗೆ ತರಬೇಡಿ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಈ ವೀಡಿಯೋ ಒಮ್ಮೆ ನೋಡಿ…
ಕುಂದಾಪುರ: ಕೋಟೇಶ್ವರದ ಏ ಒನ್ಸ್ ಸ್ಪೋಟ್ಸ್ ಆಂಡ್ ಕಲ್ಚರಲ್ ಕ್ಲಬ್ ವತಿಯಿಂದ ಜರುಗಿದ ಅಂತರ್ ಜಿಲ್ಲಾ ಚೆಸ್ ಪಂದ್ಯಾಟದಲ್ಲಿ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನೀಶ್ ಶೇರೆಗಾರ್ ಅಗ್ರಪ್ರಶಸ್ತಿ ಪಡೆದುಕೊಂಡಿದ್ದಾರೆ. 8 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಶಮಂತ್ ಜಿ.ಭಟ್ ಮಂಗಳೂರು, ದ್ವಿತೀಯ-ಮಿಲಿಂಡ್ ಶೆಟ್ಟಿ ಲಿಟ್ಲ್‌ರಾಕ್ ಬ್ರಹ್ಮಾವರ, ತೃತೀಯ-ಸಾರ್ಥಕ್ ಎ.ದೇವಾಡಿಗ ಉಡುಪಿ. ಬಾಲಕಿಯರ ವಿಭಾಗ: ಪ್ರಥಮ-ಜೆತ್ರಾಮಯ್ಯ ಬ್ರಹ್ಮಾವರ, ದ್ವಿತೀಯ-ಮಿಥಾಲಿ ಶೆಟ್ಟಿ ಬ್ರಹ್ಮಾವರ, ತೃತೀಯ-ಗೌತಮ್ ಕಾಮತ್ ಬ್ರಹ್ಮಾವರ. 12 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಅಶುತೋಷ್ ಎಸ್.ಶರ್ಮ ಮಂಗಳೂರು, ದ್ವಿತೀಯ-ಜಾಗೃತ್ ಎ.ದೇವಾಡಿಗ ಉಡುಪಿ, ತೃತೀಯ-ಚಿನ್ಮಯ್ ಮಣಿಪಾಲ. ಬಾಲಕಿಯರ ವಿಭಾಗ: ಪ್ರಥಮ-ಸ್ವಸ್ತಿ ಭಟ್ ಮಂಗಳೂರು, ದ್ವಿತೀಯ-ಸಿರಿ ಎಂ ಭಟ್ ಮಂಗಳೂರು, ತೃತೀಯ-ಅಪರ್ಣಾ ಪ್ರಭು ಮಂಗಳೂರು. 15 ವರ್ಷದೊಳಗಿನ ಬಾಲಕರ ವಿಭಾಗ: ಪ್ರಥಮ-ಮನೀಶ್ ಜಿ.ಶಿರಿಯಾನ್ ಕುಂದಾಪುರ, ದ್ವಿತೀಯ-ಪೂರ್ಣೇಶ್ ಸಿ.ಮೊಗವೀರ ಕುಂದಾಪುರ, ತೃತೀಯ-ಶತ್ರುಘ್ನ ಧೀರು ಮಂಗಳೂರು. ಬಾಲಕಿಯರ ವಿಭಾಗ: ಪ್ರಥಮ-ಆಶ್ವಿಜಾ ಭರಣ್ಯ ಮಂಗಳೂರು, ದ್ವಿತೀಯ-ಹನೀಹ ಜೈನಾಬ್ ಮಂಗಳೂರು, ತೃತೀಯ- ಅಶ್ವಿನಿ ಕೆ.ಕುಂದಾಪುರ. ಮುಕ್ತ ವಿಭಾಗ: ಪ್ರಥಮ-ಮನೀಶ್ ಶೇರೆಗಾರ್ ಸಂತೆಕಟ್ಟೆ, ದ್ವಿತೀಯ-ಎಸ್.ಚಂದನ್ ಶರ್ಮ…
ಕುಂದಾಪುರ: ವಂಡ್ಸೆ ಗ್ರಾಮದ ಆತ್ರಾಡಿಯಲ್ಲಿ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಡಿ.25ರಂದು ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ರಾಜೀವ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ವಿಜಯ ಬ್ಯಾಂಕ್‌ನ ನಿವೃತ್ತ ಡಿಜಿಎಂ ನಾರಾಯಣ ಶೆಟ್ಟಿ, ಭಾರತ ಸರ್ಕಾರದ ಅಂಕೆಸಂಖ್ಯೆ ವಿಭಾಗದ ನಿವೃತ್ತ ನಿರ್ದೇಶಕ ಬಿ.ಎನ್.ಶೆಟ್ಟಿ, ಅಂಕೆಸಂಖ್ಯೆ ವಿಭಾಗದ ನಿವೃತ್ತ ಜಂಡಿ ನಿರ್ದೇಶಕ ಬಿ.ಸುಭಾಶ್ಚಂದ್ರ ಶೆಟ್ಟಿ, ಇಂಜಿನಿಯರ್ ಬಾಲಕೃಷ್ಣ ಶೆಟ್ಟಿ ಆತ್ರಾಡಿ, ಎನ್.ಸೀತಾರಾಮ ಶೆಟ್ಟಿ ನೆಂಪು, ಹುಬ್ಬಳ್ಳಿಯ ಇಂಜಿನಿಯರ್ ಬಿ.ಪ್ರೇಮಾನಂದ ಶೆಟ್ಟಿ ಬಗ್ವಾಡಿ, ಹಕ್ಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ.ಕಿಶೋರ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಹೆಗ್ಗುಂಜೆ, ಸತೀಶಚಂದ್ರ ಪ್ರಕಾಶ್ ಶೆಟ್ಟಿ ಆತ್ರಾಡಿ, ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ, ಸಿವಿಎಲ್ ಗುತ್ತಿಗೆದಾರ ರುದ್ರಯ್ಯ ಆಚಾರ್ಯ, ವಸಂತಿ ರಾಜ್‌ಗೋಪಾಲ ಶೆಟ್ಟಿ, ಶಾಲೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್, ಪೋಷಕ ಸಂಘದ ಅಧ್ಯಕ್ಷೆ ಅನಿತಾ ಆರ್.ಹೆಬ್ಬಾರ್, ಉಪಾಧ್ಯಕ್ಷೆ ದೀಪಾ, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ,…
ಕುಂದಾಪುರ: ಜ್ಞಾನ ವಿಕಾಸ ಯೋಗ ಕೇಂದ್ರ ಬ್ರಹ್ಮಾವರ ಮತ್ತು ವಿದ್ಯಾರಂಗ ಮಿತ್ರ ಮಂಡಳಿ ಖಾರ್ವಿಕೇರಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ತರಬೇತಿ ಕಾರ್ಯಕ್ರಮದ ಕುಟುಂಬೋತ್ಸವ ಕಾರ್ಯಕ್ರಮ ಡಿ.೨೦ರಂದು ಕುಂದಾಪುರದ ವಡೇರಹೋಬಳಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಿ.ಎಸ್. ಹೆಗಡೆ ಅವರು, ಇಂದಿನ ದಿನಗಳಲ್ಲಿ ಜನರ ಮನಸ್ಸನ್ನು ಹಾಳು ಮಾಡುವ ಆಧುನಿಕ ಮಾಧ್ಯಮಗಳಿಂದ ರಕ್ಷಿಸಿಕೊಳ್ಳಲು ಎಲ್ಲರೂ ಯೋಗ ವಿದ್ಯೆಯನ್ನು ಪಡೆಯಬೇಕು ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಆದ ಮೋಹನದಾಸ ಶೆಣೈ ನೆರವೇರಿಸಿದರು. ಶಾಸಕರ ಮಾದರಿ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ ಶೆಟ್ಟಿ, ಮಹೇಶ ಪಟೇಲ್ ಉಪಸ್ಥಿತರಿದ್ದರು. ಮುಖ್ಯ ಯೋಗ ತರಬೇತುದಾರಾದ ಮುಕ್ತಾ ಮಾತಾಜೀ ಆಶೀರ್ವಚನ ನೀಡಿದರು. ಹಿರಿಯ ಯೋಗ ತರಬೇತುದಾರರಾದ ನಿರುಪಮಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ ಶೆಟ್ಟಿ ಸ್ವಾಗತಿಸಿದರು. ನಿಶಾ ವಂದಿಸಿದರು. ಮುಲ್ಕಿ ವಿಜಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ…
ಗಂಗೊಳ್ಳಿ: ಇತ್ತೀಚಿಗೆ ಹಾಂಗ್‌ಕಾಂಗ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಸಹಿತ ಅನೇಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ವಿಜೇತ ಪವರ್ ಲಿಫ್ಟರ್, ಗಂಗೊಳ್ಳಿ ಕೆನರಾ ಬ್ಯಾಂಕಿನ ಉದ್ಯೋಗಿ ಜಿ.ವಿ. ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲೆಯ ಬೈಲೂರು ರಾಮರಾವ್ ಶ್ಯಾನುಭಾಗ್ ರಂಗಮಂಟಪದಲ್ಲಿ ಇತ್ತೀಚಿಗೆ ಜರಗಿದ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ೪೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕುಂದಾಪುರದ ಪ್ರಸಿದ್ಧ ವಕೀಲ ರವಿಕಿರಣ್ ಮುರ್ಡೇಶ್ವರ ಅವರು ಸನ್ಮಾನಿಸಿ ಗೌರವಿಸಿದರು. ಕಲರ್ಸ್ ಕನ್ನಡವಾಹಿನಿಯ ಕಿರುತೆರೆ ನಟಿ ನೀತಾ ಅಶೋಕ್, ಸಂಘದ ಹಿರಿಯ ಸದಸ್ಯ ಎಚ್.ಗಣೇಶ ಕಾಮತ್, ಸ.ವಿ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮನಾ ಎಂ.ಪಡಿಯಾರ್, ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಕಾರ್ಯದರ್ಶಿ ನಾಗರಾಜ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ದೂರದೃಷ್ಟಿಯಿಂದ ಹುಟ್ಟಿಕೊಂಡ ಈ ವಿದ್ಯಾ ಸಂಸ್ಥೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿ: ಸಚಿವ ವಿನಯ ಕುಮಾರ್ ಸೊರಕೆ ಕುಂದಾಪುರ: ಇಲ್ಲಿನ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ 110 ನೇ ವಾರ್ಷಿಕಾಚರಣೆಯ ಪೂರ್ವಭಾವಿಯಾಗಿ ‘ಲಾಂಛನ’ ಅನಾವರಣ ಕಾರ್ಯಕ್ರಮ ಸಂಸ್ಥೆಯ ಆವರಣದಲ್ಲಿ ಜರುಗಿತು. ಲಾಂಛನ ಅನಾವರಣಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ ದೂರದೃಷ್ಟಿತ್ವದಿಂದ ಹುಟ್ಟಿಕೊಂಡ ಈ ವಿದ್ಯಾಸಂಸ್ಥೆಯು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಲಿ. ಇಡೀ ಸಮುದಾಯದ ಕಾರ್ಯತತ್ಪರತೆಯನ್ನು ಗುರುತಿಸುವ ಕಾರ್ಯಕ್ರಮವಾಗಿದೆ ಎಂದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ಸೈಯದ್ ಬ್ಯಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 1906 ರಿಂದ ಆರಂಭಗೊಂಡು 2016 ನೇ ವರ್ಷದಲ್ಲಿ 110 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಸಮುದಾಯದ, ಸಮಾಜದ, ವಿವಿಧ ಕಾಳಜಿಗಳನ್ನು ಅಭಿವ್ಯಕ್ತಗೊಳಿಸುವ ಕಾರ್ಯಕ್ರಮಗಳನ್ನು ವರ್ಷವಿಡೀ ತಿಂಗಳಿಗೊಂದರಂತೆ ಹಮ್ಮಿಕೊಳ್ಳಲಾಗಿದೆ ಎಂದರು ಮಾಜಿ ಶಾಸಕರಾದ ಯು. ಆರ್. ಸಭಾಪತಿ, ಟ್ರಸ್ಟನ ಸದಸ್ಯ ಅಬ್ದುಲ್ ರೆಹಮಾನ್ ಬ್ಯಾರಿ, ಅಶ್ರಫ್ ಬ್ಯಾರಿ, ಮಝರ್ ಬ್ಯಾರಿ, ಹಿರಿಯರಾದ ಶೇಖ್…
