ಕುಂದಾಪುರ: ಜ್ಞಾನ ವಿಕಾಸ ಯೋಗ ಕೇಂದ್ರ ಬ್ರಹ್ಮಾವರ ಮತ್ತು ವಿದ್ಯಾರಂಗ ಮಿತ್ರ ಮಂಡಳಿ ಖಾರ್ವಿಕೇರಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಯೋಗ ತರಬೇತಿ ಕಾರ್ಯಕ್ರಮದ ಕುಟುಂಬೋತ್ಸವ ಕಾರ್ಯಕ್ರಮ ಡಿ.೨೦ರಂದು ಕುಂದಾಪುರದ ವಡೇರಹೋಬಳಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾಸ್ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಜಿ.ಎಸ್. ಹೆಗಡೆ ಅವರು, ಇಂದಿನ ದಿನಗಳಲ್ಲಿ ಜನರ ಮನಸ್ಸನ್ನು ಹಾಳು ಮಾಡುವ ಆಧುನಿಕ ಮಾಧ್ಯಮಗಳಿಂದ ರಕ್ಷಿಸಿಕೊಳ್ಳಲು ಎಲ್ಲರೂ ಯೋಗ ವಿದ್ಯೆಯನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಆದ ಮೋಹನದಾಸ ಶೆಣೈ ನೆರವೇರಿಸಿದರು. ಶಾಸಕರ ಮಾದರಿ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ ಶೆಟ್ಟಿ, ಮಹೇಶ ಪಟೇಲ್ ಉಪಸ್ಥಿತರಿದ್ದರು. ಮುಖ್ಯ ಯೋಗ ತರಬೇತುದಾರಾದ ಮುಕ್ತಾ ಮಾತಾಜೀ ಆಶೀರ್ವಚನ ನೀಡಿದರು. ಹಿರಿಯ ಯೋಗ ತರಬೇತುದಾರರಾದ ನಿರುಪಮಾ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ ಶೆಟ್ಟಿ ಸ್ವಾಗತಿಸಿದರು. ನಿಶಾ ವಂದಿಸಿದರು. ಮುಲ್ಕಿ ವಿಜಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಎಂ.ಚೆನ್ನ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.