Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಜೆ.ಎಲ್.ಬಿ ರಸ್ತೆ, ಭಂಡಾರ್‌ಕಾರ‍್ಸ್ ಕಾಲೇಜ್ ಹತ್ತಿರ ಸದ್ಗುರು ಟವರ‍್ಸ್‌ನಲ್ಲಿ ಕಾರ‍್ಯ ನಿರ್ವಹಿಸುತ್ತಿರುವ ಸಪ್ತಗಿರಿ ಸೂಪರ್ ಮಾರ್ಕೆಟ್ ವರ್ಷಾಚರಣೆ ನಿಮಿತ್ತ ಗ್ರಾಹಕರಿಗೆ ಲಕ್ಕಿ ಕೂಪನ್ ಯೋಜನೆಗೆ ಬುಧವಾರ ವಿದ್ಯುಕ್ತ ಚಾಲನೆ ನೀಡಲಾಯಿತು. ಕಳೆದ ಒಂದು ವರ್ಷದಿಂದ ಪರಿಸರದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದ ಸೂಪರ್ ಮಾರ್ಕೆಟ್ ಗುಣಮಟ್ಟದ ಆಹಾರ ಪದಾರ್ಥ, ಕಾಸ್ಮಟಿಕ್, ಗೃಹಪಯೋಗಿ ವಸ್ತುಗಳ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ನೀಡುತ್ತಾ ಬಂದಿದೆ. ಸಾರ್ವಜನಿಕರ ಸಹಕಾರದಿಂದ ಉತ್ತೇಜಿತರಾದ ಮಾರ್ಕೆಟಿಂಗ್ ಪಾಲುದಾರ ಚಂದ್ರಶೇಖರ ಇವರಿಗೆ ಗ್ರಾಹಕರಿಗೆ ಏನಾದರೂ ಹೊಸತನ್ನು ಕೊಡಬೇಕು ಎಂಬ ಚಿಂಥನೆಯೇ ಲಕ್ಕಿಕೂಪನ್ ಯೋಜನೆ. ಮಾರ್ಕೆಟ್‌ನಲ್ಲಿ ೨ ಸಾವಿರ ರೂ. ಸಾಮಗ್ರಿ ವಿಕ್ರಯಿಸಿದವರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ಈ ವ್ಯವಸ್ಥೆ ಗಣರಾಜ್ಯೋತ್ಸವ ತನಕ ಇದ್ದು, ಗಣರಾಜ್ಯೊತ್ಸ್ಸವದಂದೇ ಲಕ್ಕಿ ಕೂಪನ್ ಡ್ರಾ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ವಿಜೇತರ ಹೆಸರನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಸೂಪರ್ ಬಂಪರ್ ಬಹುಮಾನ ಸ್ಕೂಟರ್, ಪ್ರಥಮ ೩೨ ಇಂಚು ಟಿವಿ, ದ್ವಿತೀಯ ಪ್ರಿಜ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ನೂತನ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮದ ಶುಕ್ರವಾರ ದೇವಳದ ವಠಾರದಲ್ಲಿ ಜರುಗಿತು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ದೇವಳದ ವೆಬ್‌ಸೈಟ್ www.vatthinakattemahasathi.com ಲೊಕಾರ್ಪಣೆಗೊಳಿಸಿ ಮಾತನಾಡಿ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನವು ಕಾರಣಿಕ ಸ್ಥಳವಾಗಿದ್ದು, ಸಾವಿರಾರು ಭಕ್ತರು ನಂಬಿ ಬಂದಿದ್ದಾರೆ. ದೇವಸ್ಥಾನದ ಐತಿಹ್ಯ, ಕಾರ್ಯಕ್ರಮಗಳ ಮಾಹಿತಿಗಳನ್ನೊಳಗೊಂಡ ವೆಬ್‌ಸೈಟ್ ಆರಂಭಿಸಿರುವುದು ಭಕ್ತರಿಗೆ ಅನುಕೂಲವಾಗಿದೆ ಎಂದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ಶಾಸಕರನ್ನು ಗೌರವಿಸಲಾಯಿತು. ಈ ಸಂದರ್ಭ ಬಿ. ಮಾಧವ ರಾವ್, ನಾರಾಯಣ ದೇವಾಡಿಗ, ಶ್ರೀನಿವಾಸ್, ರವೀಂದ್ರ ಶಾನುಭೋಗ್, ದೀಪಕ್‌ಕುಮಾರ್ ಶೆಟ್ಟಿ, ಸೇವಾ ಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಸದಸ್ಯರಾದ ಶಂಕರ ಮೊಗವೀರ, ಸತ್ಯಪ್ರಸನ್ನ, ವೆಬ್‌ಸೈಟ್ ರೂಪಿಸಿದ ಸಮಷ್ಠಿ ಮೀಡಿಯಾ ವೆಂಚರ‍್ಸ್ ಸಂಸ್ಥೆಯ ಸುನಿಲ್ ಹೆಚ್. ಜಿ. ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಮೂಕಾಂಬಿಕಾ ರೈಲ್ವೆ ನಿಲ್ದಾಣದ ಎದುರಿನ ಪ್ರಸಿದ್ಧ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್‌ನಲ್ಲಿ ನೂತನವಾಗಿ ಆರಂಭಗೊಂಡ ನಿತ್ಯ ಸಾಗರ ವೆಜ್ ರೆಸ್ಟೊರೆಂಟ್ ಹಾಗೂ ಕೋಸ್ಟಲ್ ಕರಿ ನಾನ್ ವೆಜ್ ಬಾರ್ ಮತ್ತು ರೆಸ್ಟೊರೆಂಟ್‌ಗಳಿಗೆ ಶುಕ್ರವಾರ ವಿವಿಧ ದೇವತಾ ಕಾರ್ಯದ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ಹೋಟೆಲ್ ಅಂಬಿಕಾ ಇಂಟರ್‌ನ್ಯಾಷನಲ್‌ನ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್, ಮೂಕಾಂಬಿಕಾ ಜಯಾನಂದ ಹೋಬಳಿದಾರ್, ನಿತ್ಯಾ ಫುಡ್ ಮ್ಯಾನೆಜ್‌ಮೆಂಟ್ ಸರ್ವಿಸನ್ ಸಂಸ್ಥೆಯ ನಿತೀಶ್ ಶೆಟ್ಟಿ, ರವಿ ಅಂಚನ್, ನಾಗರಾಜ ಶೆಟ್ಟಿ, ಸುರೇಂದ್ರ ಶೆಟ್ಟಿ, ಟೆಂಪೋ, ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ಬಟವಾಡಿ, ಸದಸ್ಯರಾದ ಅಣ್ಣಪ್ಪ ಪೂಜಾರಿ, ರಾಮ ದೇವಾಡಿಗ, ವಿಹಿಂಪ ಉಪ್ಪಂದ ಘಟಕದ ಅಧ್ಯಕ್ಷ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. Also Read: ಸರ್ವ ಸುಸಜ್ಜಿತ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕವಿ ಹೃದಯ, ಸಾಹಿತಿ ಕೆ. ಪುಂಡಲೀಕ ನಾಯಕ್ ಅವರ ಚೊಚ್ಚಲ ಕೃತಿ ‘ಕಿರುಗೆಜ್ಜೆ’ ಕವನ ಸಂಕಲನ ಅನಾವರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಅಕ್ಟೋಬರ್ 21ರ ರವಿವಾರ ಬೆಳಿಗ್ಗೆ 9:30ಕ್ಕೆ ಉಪ್ಪುಂದ ‘ರೈತಸಿರಿ’ ಸಭಾಭವನದಲ್ಲಿ ಜರುಗಲಿದೆ. ಹಿರಿಯ ಕವಿ ಎಂ.ಜೆ. ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಯು.ಚಂದ್ರಶೇಖರ್ ಹೊಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಕೃತಿ ಅನಾವರಣ ಮಾಡಲಿದ್ದಾರೆ. ವಾಗ್ಮಿ ಎಂ.ಗೋವಿಂದ ನಾಯ್ಕನಕಟ್ಟೆ ಪುಸ್ತಕ ಪರಿಚಯ ಮಾಡಲಿದ್ದಾರೆ. ಹಲವು ಅತಿಥಿ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 1:30ರಿಂದ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದ್ದು ಸುಮಾರು 24 ಕವಿಗಳು ಭಾಗವಹಿಸಲಿದ್ದಾರೆ. ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಉಪನ್ಯಾಸಕಕ ರಮೇಶ್ ಕಡಮೆ ಸೇರಿದಂತೆ ಹಲವು ಅತಿಥಿ ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

Read More

ಕೋಟ ಶ್ರೀನಿವಾಸ ಪೂಜಾರಿ | ಕುಂದಾಪ್ರ ಡಾಟ್ ಕಾಂ ಲೇಖನ. ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ನಮ್ಮೂರ ಶಿವರಾಮ ಕಾರಂತ ಬಹುಮುಖಿ ವ್ಯಕ್ತಿತ್ವದ ಒಂದು ವಿಸ್ಮಯ ವ್ಯಕ್ತಿ ಅಲ್ಲ, ವಿಸ್ಮಯ ಶಕ್ತಿಯಾಗಿದ್ದವರು. ಸಾಹಿತ್ಯ, ಕಲೆ, ಸಂಸ್ಕೃತಿ ರಚನಾತ್ಮಕ ಕಾರ್ಯಕ್ರಮಕ್ಕಾಗಿ ಅಹರ್ನಿಶಿ ದುಡಿ, ಸಮಾಜದಲ್ಲಿ ಅನ್ಯಾಯ, ಅಕ್ರಮ, ಅಸ್ಪ್ರಶ್ಯತೆ, ಭ್ರಷ್ಟಾಚಾರ ಇವುಗಳೆಲ್ಲ ನಡೆದಾಗ ಕಾರಂತರು ಸಡ್ಡು ಹೊಡೆದು ಪ್ರತಿರೋಧ ಮಾಡಿದ್ದರು. ಕಾರಂತರ ಬದುಕಿನ ದಿನಗಳಲ್ಲಿ ಕೋರ್ಟು, ಕಛೇರಿ, ನ್ಯಾಯಾಲಯಗಳೆಲ್ಲ ನ್ಯಾಯ ನಿರಾಕರಣೆ ಮಾಡಿದರೆ, ಸಮನಾಂತರ ಸರಕಾರದಂತಿದ್ದ ಕಾರಂತರು ನೊಂದವರ ಧನಿಯಾಗಿ ಆರ್ಭಟಿಸಿ ನ್ಯಾಯ ಕೊಡುತ್ತಿದ್ದರು. ಕಾರಂತರ ಅಪಾರ ಜ್ಞಾನವನ್ನು ಅರ್ಥಮಾಡಿಕೊಂಡವರು ಶಿವರಾಮ ಕಾರಂತರೇ ಒಂದು ವಿಶ್ವವಿದ್ಯಾಲಯ ಎನ್ನುತ್ತಿದ್ದರು. ಕಾರಂತರ ಆತ್ಮಚರಿತ್ರೆ, ಹುಚ್ಚು ಮನಸ್ಸಿನ ಹತ್ತುಮುಖಗಳನ್ನು ಓದಿದವರಷ್ಟೇ ಅವರ ಆಸಕ್ತ ಕ್ಷೇತ್ರದ ಸರ್ವವ್ಯಾಪಿ, ಸರ್ವಸ್ಪರ್ಶಿ ಅನುಭವ ಅರ್ಥಮಾಡಿಕೊಳ್ಳಬಲ್ಲರು. ಕಾರಂತರ ವ್ಯಕ್ತಿತ್ವವೇ ವಿಮರ್ಶಾತೀತ. ತನ್ನೆಳೆಯ ದಿನಗಳಲ್ಲಿಯೇ ಮಡಿವಂತಿಕೆ ಮೀರಿ ಅಂತರ್ಜಾತಿ ವಿವಾಹವಾದರು. ಅಸ್ಪ್ರಶ್ಯತೆಯನ್ನು ಸೆಟೆದು ವಿರೋಧಿಸಿದರು. ಕೈಗಾ ಅಣು ಸ್ಥಾವರದ ವಿವಾದ ಭುಗಿಲೆದ್ದಾಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಾಲಯ ಅಮಾವಾಸ್ಯೆಯಂದು ಸಮುದ್ರ ಸ್ನಾನಕ್ಕೆಂದು ತೆರಳಿದ್ದ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಅಲ್ಲಿಯೇ ಬಿದ್ದ ಘಟನೆ ವರದಿಯಾಗಿದೆ. ಬೆಂಬಲಿಗರೊಂದಿಗೆ ಸಮುದ್ರ ಸ್ನಾನಕ್ಕೆ ತೆರಳಿದ್ದ ಶಾಸಕರು, ಸಮುದ್ರದಲ್ಲಿ ಮುಂದೆ ಹೋಗಬೇಡಿ ಎಂದರೂ ಕೇಳಿಸಿಕೊಳ್ಳದೇ, ಸಮುದ್ರದಲ್ಲಿ ಮುಂದೆ ಸಾಗಿದ್ದರು. ಒಮ್ಮೆ ಮುಳುಗೆದ್ದು ಮತ್ತೆ ಮುಳುಗಬೇಕು ಎಂಬಷ್ಟರಲ್ಲಿ ಬಂದ ಬೃಹತ್ ಅಲೆಯಿಂದಾಗಿ ಅವರು ಆಯತಪ್ಪಿ ಅಲ್ಲಿಯೇ ಬಿದ್ದರು. ಅವರು ಜೊತೆಗಿದ್ದ ಬೆಂಬಲಿಗರು ಅವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದರಾದರೂ ಕ್ಷಣಕಾಲ ಬೃಹತ್ ಅಲೆಯಿಂದಾಗಿ ಎತ್ತಲಾಗಲಿಲ್ಲ. ಬಳಿಕ ಎತ್ತಲೂ ಸೇರಿ ಶಾಸಕರನ್ನು ಮೇಲಕ್ಕೆತ್ತಿದರು. ಶಾಸಕರು ಸಮುದ್ರ ಸ್ನಾನಕ್ಕೆ ತೆರಳುವ ವೀಡಿಯೋ ಮಾಡಲು ಹೊರಟಿದ್ದ ಅವರ ಬೆಂಬಲಿಗನೊಬ್ಬ ಅವರು ಸಮುದ್ರದಲ್ಲಿ ಬಿದ್ದು ಹೊರಳಾಡಿದ ವೀಡಿಯೋವನ್ನೂ ಚಿತ್ರೀಕರಿಸಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  Watch Video

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ಕೃಷ್ಟ ಸೇವೆಯ ಮೂಲಕ ಕುಂದಾಪುರದಲ್ಲಿ ಯಶಸ್ವೀ 6ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಇಲ್ಲಿನ ಪ್ರಸಿದ್ಧ ಮೊಬೈಲ್ ಮಾರಾಟ ಮಳಿಗೆ ’ಮೊಬೈಲ್ ಎಕ್ಸ್’ ಕುಂದಾಪುರದ ಮುಖ್ಯರಸ್ತೆಯ ರಾಮಕೃಷ್ಣ ಕಾಂಪ್ಲೆಕ್ಸ್ನಲ್ಲಿ ಇನ್ನೊಂದು ಮಳಿಗೆ ’ಮೊಬೈಲ್ ಎಕ್ಸ್‌ಪ್ರೆಸ್’ ಆರಂಭಿಸಿದ್ದು, ಇಂದು ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಒಪ್ಪೊ ಡಿಸ್ಟ್ರಿಬ್ಯೂಟರ್ ಕೆ.ಪಿ ಕಾಮತ್, ಸ್ಯಾಮಸಂಗ್ ಡಿಸ್ಟ್ರಿಬ್ಯೂಟರ್ ಶ್ರೀಕಾಂತ್, ವಿವೋ ಜನರಲ್ ಮ್ಯಾನೆಜರ್ ಪೃಥ್ವಿ, ಕಟ್ಟಡದ ಮಾಲಿಕ ರಾಜೇಶ್ ಶೇಟ್ ಮಾನಸ ಜ್ಯೋತಿ ಟ್ರಸ್ಟಿನ ಶೋಭಾ, ಅಕಿಲೇಶ್ ಮೊದಲಾದವರು ಇದ್ದರು. ಮೊಬೈಲ್ ಎಕ್ಸ್ ಸಮೂಹ ಸಂಸ್ಥೆಗಳ ಪ್ರವರ್ತಕ ಮುಸ್ತಾಫಾ ಅತಿಥಿಗಳನ್ನು ಸ್ವಾಗತಿಸಿದರು. ಕೋಣಿ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ದೇಣಿಗೆ ನೀಡಲಾಯಿತು. ಮೊಬೈಲ್ ಎಕ್ಸ್ಪ್ರೆಸ್ನಲ್ಲಿ ಹೋಲ್ ಸೆಲ್ ಹಾಗು ರಿಟೇಲ್ ಕಂಪ್ಯೂಟರ್ ಅಕ್ಸೆಸರೀಸ್, ಮೊಬೈಲ್ಸ್ ಸೇಲ್ ಹಾಗು ಸರ್ವಿಸ್ ಲಭ್ಯವಿರಲಿದೆ. ನೂತನ ಮಳಿಗೆಯ ಆರಂಭದ ಕೊಡುಗೆಯಾಗಿ ಅರ್ಧ ದರದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಅಕ್ಸೆಸರೀಸ್ಗಳನ್ನು ಮಾರಾಟಮಾಡಲಾಗುತ್ತಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ ಕಲಾಕ್ಷೇತ್ರದಲ್ಲಿ ತಮ್ಮದೇ ಪರಂಪರೆಯನ್ನು ಹುಟ್ಟುಹಾಕಿ ಇತಿಹಾಸ ನಿರ್ಮಿಸಿದ ಕಲಾವಿದರ ಕುರಿತಾದ ಸಾಮಗ್ರಿ ಸಿಗುತ್ತಿಲ್ಲ. ಅದರಿಂದಾಗಿ ಅವರ ಬಗೆಗೆ ಪುಸ್ತಕ ಪ್ರಕಟಿಸುವುದು ಕಷ್ಟವಾಗಿದೆ’ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳಿದರು. ಕಿರಿಮಂಜೇಶ್ವರದ ಧಾರೇಶ್ವರ ಯಕ್ಷ ಬಳಗ ಚಾರಿಟಬಲ್ ಟ್ರಸ್ಟ್ ನಾಗೂರಿನ ಕುಂಜಾಲು ಶ್ರೀ ಶೇಷಗಿರಿ ಕಿಣಿ ಭಾಗವತ ಸ್ಮರಣ ವೇದಿಕೆಯಲ್ಲಿ ಪ್ರಸ್ತುತ ಪಡಿಸುತ್ತಿರುವ ೬ನೆ ವರ್ಷದ ಯಕ್ಷಗಾನ ಜ್ಞಾನಯಜ್ಞ ತಾಳಮದ್ದಲೆ ಸಪ್ತಾಹವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ’ಕುಂಜಾಲು ಶೇಷಗಿರಿ ಕಿಣಿ, ತೆಕ್ಕಟ್ಟೆ ಆನಂದ ಮಾಸ್ತರ್ ಅವರು ಅಂತಹ ಪರಂಪರೆ ಸೃಷ್ಟಿಸಿದವರು. ಅವರ ಬಳಿಕದ ತಲೆಮಾರಿನ ಜನ ಅವರು ಶ್ರೇಷ್ಠ ಕಲಾವಿದರಾಗಿದ್ದರು ಎಂದಷ್ಟೆ ಹೇಳುತ್ತಾರೆ. ಅದಕ್ಕಿಂತ ಹೆಚ್ಚಿನ ವಿವರ ಅವರಿಗೆ ತಿಳಿದಿಲ್ಲ. ಹಾಗಿದ್ದರೂ ಯಾರಾದರೂ ಅಂತಹ ಕಲಾವಿದರ ಕುರಿತು ಸಂಶೋಧನೆ ನಡೆಸಿ ಪುಸ್ತಕ ಪ್ರಕಟಿಸುವುದಾದರೆ ಅಕಾಡೆಮಿ ಅವರಿಗೆ ನೆರವು ನೀಡಲಿದೆ’ ಎಂದು ಹೆಗಡೆ ಹೇಳಿದರು. ಟ್ರಸ್ಟ್ ಪ್ರವರ್ತಕ ಭಾಗವತ ಸುಬ್ರಹ್ಮಣ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉತ್ಕೃಷ್ಟ ಸೇವೆಯ ಮೂಲಕ ಕುಂದಾಪುರದಲ್ಲಿ ಯಶಸ್ವೀ 6ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಇಲ್ಲಿನ ಪ್ರಸಿದ್ಧ ಮೊಬೈಲ್ ಮಾರಾಟ ಮಳಿಗೆ ’ಮೊಬೈಲ್ ಎಕ್ಸ್’ ಕುಂದಾಪುರದ ಮುಖ್ಯರಸ್ತೆಯಲ್ಲಿ ಇನ್ನೊಂದು ಮಳಿಗೆ ’ಮೊಬೈಲ್ ಎಕ್ಸ್‌ಪ್ರೆಸ್’ ಆರಂಬಿಸುತ್ತಿದೆ. ಅಕ್ಟೋಬರ್ 7ರ ಭಾನುವಾರ ಮಾನಸಜ್ಯೋತಿ ವಿಶೇಷ ಮಕ್ಕಳು ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮೊಬೈಲ್ ಎಕ್ಸ್‌ಪ್ರೆಸ್‌ನಲ್ಲಿ ಹೋಲ್ ಸೆಲ್ ಹಾಗು ರಿಟೇಲ್ ಕಂಪ್ಯೂಟರ್ ಅಕ್ಸೆಸರೀಸ್, ಮೊಬೈಲ್ಸ್ ಸೇಲ್ ಹಾಗು ಸರ್ವಿಸ್ ಲಭ್ಯವಿರಲಿದೆ. ನೂತನ ಮಳಿಗೆಯ ಆರಂಭದ ಕೊಡುಗೆಯಾಗಿ ಅರ್ಧ ದರದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಅಕ್ಸೆಸರೀಸ್‌ಗಳನ್ನು ಮಾರಾಟಮಾಡಲಾಗುತ್ತಿದೆ. ಜೊತೆಗೆ 13ರಂದು ಲಕ್ಕಿ ಗ್ರಾಹಕರನ್ನು ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಕ್ಕಿ ಗ್ರಾಹಕರಿಗೆ ಪ್ರಥಮ ಬಹುಮಾನವಾಗಿ ಎಲ್ ಈ ಡಿ ಟಿವಿ, ಎರಡನೇ ಬಹುಮಾನವಾಗಿ ’ಟವರ್ ಸಬ್‌ವೂಫರ್’, ಮೂರನೇ ಬಹುಮಾನವಾಗಿ ’ಸ್ಮಾರ್ಟ್ ಪೋನ್’ ಲಭ್ಯವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮುಸ್ತಫಾ ಅವರು ತಿಳಿಸಿದ್ದಾರೆ. ಸ್ಥಳ: ರಾಮಕೃಷ್ಣ ಕಾಂಪ್ಲೆಕ್ಸ್ ಸಾಯಿ ಸೆಂಟರ್ ಎದುರು ಮುಖ್ಯರಸ್ತೆ ಕುಂದಾಪುರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರು ನೀಡಿದ ನಾಲ್ಕು ನಿಮಿಷಗಳ ಉಪನ್ಯಾಸದಿಂದಾಗಿ ವಿಶ್ವಕ್ಕೆ ಭಾರತದ ಬಗೆಗಿನ ಅಭಿಪ್ರಾಯ ಹಾಗೂ ದೃಷ್ಟಿಕೋನ ಬದಲಾಗುವಂತಾಯಿತು. ಭಾರತದ ಪ್ರತಿ ಯುವಕನಲ್ಲಿಯೂ ಆತ್ಮವಿಶ್ವಾಸ ವೃದ್ಧಿಯಾಯಿತು. ಇದು ಸ್ವಾತಂತ್ರ್ಯ ಚಳುವಳಿಗೂ ಪ್ರೇರಣೆಯಾಗಿತ್ತು. ತನ್ನ ಮಾತಿನ ಮೂಲಕ ಅಂತಹ ಪ್ರಭಾವವನ್ನು ಬೀರಿದ್ದ ಸ್ವಾಮಿ ವಿವೇಕಾನಂದರ ಭಾಷಣವನ್ನು ಮತ್ತೊಮ್ಮೆ ಸ್ಮರಿಸುವ ಮೂಲಕ ಯುವಕರನ್ನು ಜಾಗೃತಿಗೊಳಿಸುವ ಕೆಲಸವಾಗುತ್ತಿದೆ ಎಂದು ಮಂಂಂಗಳೂರು ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಧರ್ಮವೃತ್ತಾನಂದ ಸ್ವಾಮೀಜಿ ಹೇಳಿದರು. ಬೈಂದೂರು ಶಾರದಾ ವೇದಿಕೆಯಲ್ಲಿ ಯುವ ಬ್ರಿಗೇಡ್, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಬೈಂದೂರು ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ೧೨೫ವರ್ಷ ಸಂದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿವೇಕಾನಂದರು ಒಂದು ಧರ್ಮ, ದೇಶಕ್ಕೆ ಸೀಮಿತವಾದವರಲ್ಲ. ಅವರು ವಿಶ್ವ ಮಾನವರಾಗಿದ್ದವರು. ವಿವೇಕಾನಂದರ ಭಾಷಣದಿಂದಾಗಿ ವಿವಿಧ ಧರ್ಮಶಾಸ್ತ್ರಜ್ಞರಲ್ಲಿ ಹಿಂದೂ ಧರ್ಮ ಶ್ರೇಷ್ಠ ಧರ್ಮ ಎಂಬ ಭಾವನೆ ಮೊಳಕೆಯೊಡೆಯುವಂತಾಯಿತು. ಸ್ವಾಮೀಜಿಯವರ ಜೀವನತತ್ವವನ್ನು…

Read More