ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಆಳ್ವಾಸ್ನ ಆವರಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಜಾಂಬೂರಿಯ ಕೃಷಿಸಿರಿ ವೇದಿಕೆಯು ಕರಾವಳಿ ಸಾಂಸ್ಕೃತಿಕ ಸೊಗಡಿನ ಸ್ಪರ್ಶದೊಂದಿಗಿನ ತುಳು ಹಾಸ್ಯ ಲಹರಿಗೆ ಸಾಕ್ಷಿಯಾಯಿತು. ದೇಶದ ವಿವಿಧ ಪ್ರದೇಶಗಳ ಸಾಂಸ್ಕೃತಿಕ ಭಿನ್ನತೆಗಳ ಮೇಲೆ ಬೆಳಕು ಚೆಲ್ಲುವುದರೊಂದಿಗೆ ತುಳುನಾಡಿನ ವೈಶಿಷ್ಟ್ಯತೆಯನ್ನೂ ಕಾಣಿಸುವಲ್ಲಿ ಯಶಸ್ವಿಯಾಯಿತು. ಭಾರತದ ಕೃಷಿ ಪರಂಪರೆಯ ಮೂಲವಾದ ಗೋ ಸಂಪತ್ತಿನ ಪ್ರಾಮುಖ್ಯತೆ, ಗ್ರಾಮೀಣ ಪ್ರದೇಶದ ಕೊಡುಗೆಯ ಮಹತ್ವ, ಗ್ರಾಮೀಣ ಪರಂಪರೆಯ ವೈಶಿಷ್ಟ್ಯತೆಯನ್ನು ಈ ಹಾಸ್ಯ ಕಾರ್ಯಕ್ರಮ ಚಿತ್ರಿಸಿತು. ಜೊತೆಗೆ ಮೌಲಿಕ ಬದುಕಿನ ಕುರಿತ ಸಂದೇಶವನ್ನೂ ಅಭಿವ್ಯಕ್ತಿಸಿತು. ಕೇವಲ ಜ್ಯೋತಿಷ್ಯವನ್ನು ಮಾತ್ರ ನಂಬಿ ಕೂತರೆ ಸಾಲದು. ಜೊತೆಗೆ ಸ್ವ-ಪ್ರಯತ್ನವೂ ಬೇಕು ಎಂಬ ಉತ್ತಮ ಸಂದೇಶವನ್ನೊಳಗೊಂಡ ಹಾಸ್ಯವು ನೆರೆದಿದ್ದ ಜನರನ್ನು ನಗೆಕಡಲಲ್ಲಿ ತೇಲುವಂತೆ ಮಾಡಿತು. ರಂಗ್ದ ರಾಜೆ ಎಂದೇ ಪ್ರಸಿದ್ದರಾದ ಸುಂದರ್ ರೈ ಮಂದಾರ, ಕುಸಲ್ದ ಮುತ್ತು, ಅರುಣ್ ಚಂದ್ರ ಬಿ.ಸಿ.ರೋಡು ಮತ್ತು ತಂಡ ಹಾಗೂ ಕುಡ್ಲ ಕುಸಲ್ ತಂಡದ ಕಲಾವಿದರು ‘ತುಳು ಹಾಸ್ಯ ಲಹರಿ’…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಹೊಸಪೀಳಿಗೆಗೆ ಇಷ್ಟವಾಗುವ ಟ್ಯಾಟೋ ದೀರ್ಘಾವಧಿಯವರೆಗೆ ಇರುತ್ತದೆ. ಒಂದೇ ದಿನಕ್ಕೆ ಕಾಣಿಸಿಕೊಂಡು ಅಳಿಸಬಹುದಾದಂತಹ, ಟ್ಯಾಟೋವನ್ನೇ ಹೋಲುವಂಥ ಕಲಾಕೌಶಲ್ಯದ ಸ್ಪಾಟ್ ‘ಆರ್ಟ್’ನ ಪ್ರಯೋಜನದ ಅವಕಾಶ ಮೂಡಬಿದಿರೆಯ ಆಳ್ವಾಸ್ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಲಾಮೇಳದಲ್ಲಿ ಲಭಿಸುತ್ತಿದೆ. ಉಡುಪಿಯ ದೃಶ್ಯಕಲಾ ಮಂದಿರದ ವಿದ್ಯಾರ್ಥಿಗಳು ಮೂಡಿಸುತ್ತಿರುವ ಈ ಆರ್ಟ್ ಒಂದೇ ದಿನದಲ್ಲಿ ಅಳಿಸಿಹೋಗುತ್ತದೆ. ಇವರು ತಮ್ಮ ಕೈಚಳಕದಿಂದ ವಿಶೇಷ ಗಮನ ಸೆಳೆಯುತ್ತಿದ್ದಾರೆ. ಸ್ಥಳದಲ್ಲೇ ವಿಭಿನ್ನ ರೀತಿಯ ಆರ್ಟ್ಗಳನ್ನು ಕೈಮೇಲೆ ಬಿಡಿಸುತಿದ್ದಾರೆ. ಕೇವಲ ೨೦ ರುಪಾಯಿಗೆ ಕೈ ಮೇಲೆ ಇಷ್ಟದ ಚಿತ್ರಗಳನ್ನು ರೇಖಿಸುತ್ತಿದ್ದಾರೆ. ವಿದ್ಯಾರ್ಥಿಗಳು ಚಿತ್ರಕಲೆಗಳನ್ನು ಪ್ರದರ್ಶಿಸಲು ಮೇಳಕ್ಕೆ ಬಂದಿದ್ದು, ಇದೇ ಸಮಯದಲ್ಲಿ ತಮಗೆ ಗೊತ್ತಿರುವ ಕಲೆಯನ್ನು ಬಳಸಿಕೊಳ್ಳೋ ಉದ್ದೇಶದಿಂದ ಸ್ಪಾಟ್ ಆರ್ಟ್ ಬಿಡಿಸುತ್ತಿದ್ದಾರೆ. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಇದಕ್ಕೆ ಮಾರುಹೋಗಿ ತಮ್ಮ ಕೈಮೇಲೆ ವಿವಿಧ ಆರ್ಟ್ಗಳ ಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ. ವಿವಿಧ ರೀತಿಯ ಚಿತ್ರಗಳು ಸಹ ಎಲ್ಲರ ಮನಸ್ಸನ್ನು ಗೆಲ್ಲುತ್ತಿವೆ. ಯಕ್ಷಗಾನ. ಪ್ರಕೃತಿಯ…
ಕಾರ್ತಿಕ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಸಾಂಸ್ಕೃತಿಕ ಜಾಂಬೂರಿಯಲ್ಲಿ ಮಳಿಗೆಯೊಂದರಲ್ಲಿ ಪ್ರಾಚ್ಯ ವಸ್ತುಸಂಗ್ರಾಹಕರಾದ ಹಳ್ಳಿಮನೆ ಹೈದರಾಲಿಯ ಈ ಪ್ರಾಚ್ಯ ವಸ್ತು ಸಂಗ್ರಹಾಲಯ ಗಮನಸೆಳೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ಬಳಕೆಯಾಗುತ್ತಿದ್ದ ವಸ್ತುಗಳು ಇಲ್ಲಿವೆ. ರಾಜರುಗಳ ಆಡಳಿತದಲ್ಲಿ ಪ್ರಾಮುಖ್ಯ ಪಡೆದಿದ್ದ ಆಡಳಿತಾತ್ಮಕ ಚಿಹ್ನೆಗಳು ಗಮನ ಸೆಳೆಯುತ್ತಿವೆ. ಜನರು ಬಳಸುತ್ತಿದ್ದ ನಾಣ್ಯಗಳಿವೆ. ಟಿಪ್ಪು ಸುಲ್ತಾನ ಕಾಲದ ನಾಣ್ಯಗಳು, ದೇಶೀಯ ಮತ್ತು ವಿದೇಶಿ ನೋಟ್ಗಳಿವೆ. ಈ ನಾಣ್ಯಗಳು ಆಯಾ ಕಾಲದ ಬದುಕಿನ ಚಿತ್ರಣವನ್ನೂ ಕಟ್ಟಿಕೊಡುತ್ತಿವೆ. ಅಲ್ಲದೆ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ತಾಮ್ರ, ಹಿತ್ತಾಳೆ, ಮರದಿಂದ ಸಿದ್ಧಪಡಿಸಲಾದ ಉಪಕರಣಗಳು ಮತ್ತು ಅವುಗಳು ಬಳಕೆಯಾಗುತ್ತಿದ್ದ ರೀತಿಯ ಪ್ರಾತ್ಯಕ್ಷಿಕೆ ಇಲ್ಲಿದೆ. ವಿದ್ಯುತ್ ಬಳಸದೆಯೇ ಕಾರ್ಯನಿರ್ವಹಿಸುವಂಥ ಉಪಕರಣಗಳು ಕೈ ಮೂಲಕ ತಿರುಗಿಸುವ ಜೆರಾಕ್ಸ್ ಯಂತ್ರೋಪಕರಣಗಳನ್ನು ಕಾಣಬಹುದಾಗಿದೆ. ಬಂಗಾರ ತೂಗುವ ತಕ್ಕಡಿ, ಅಕ್ಕಿ ಅಳೆಯುವ ಶೇರು, ರಾಜರ ಕಾಲದಲ್ಲಿನ ಕತ್ತಿ, ಉಪ್ಪು ಹಾಕಿಡುವ ಮರಾಯಿ, ಚನ್ನೆಮಣೆ, ಶಾವಿಗೆ ಮಣಿ, ೧೦೦ ವರ್ಷಕ್ಕಿಂತ ಹಳೆಯ ಸೆಂಟ್ ಬಾಟಲ್ಗಳನ್ನ ಕಾಣಬಹುದು. ಟೆಲಿಫೋನ್ ಬಂದಾಗಿನಿಂದಲೂ ಇಲ್ಲಿನವರೆಗಿನ ಎಲ್ಲರೀತಿಯ…
ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಂಬೂರಿಯ ಕಲಾಮೇಳದ ಭಾಗವಹಿಸಿರುವ ವಿವಿಧ ಮಳಿಗೆಗಳು ಜನರ ಪ್ರಮುಖ ಆಕರ್ಷಣೆಯಾಗಿವೆ. ಅವುಗಳಲ್ಲಿ ಮಣ್ಣಿನಿಂದ ಸಿದ್ಧಪಡಿಸಿದ ವಿವಿಧ ಬಗೆಯ ಮಡಿಕೆಗಳು, ದೇವರ ಮೂರ್ತಿಗಳು, ವಿಶೇಷ ಶೈಲಿಯ ಪೂಜಾ ಸಾಮಗ್ರಿಗಳು ಗಮನಸೆಳೆಯುತ್ತಿದೆ. ಈ ಎಲ್ಲಾ ಮಣ್ಣಿನ ಸಾಮಗ್ರಿಗಳು ಕಾಣುವ ಕಣ್ಣಿಗೆ ಎಷ್ಟು ಅಂದವೋ ಜೊತೆಗೆ ಪರಿಸರ ಸ್ನೇಹಿ ಮೌಲ್ಯವನ್ನು ಎತ್ತಿ ಹಿಡಿಯುವ ಕಲಾಕುಸುರಿಯಾಗಿದೆ. ಫೈಬರ್, ಸ್ಟೀಲ್ ಪಿಂಗಾಣಿ ಹೀಗೇ ಅದೆಷ್ಟೋ ಟ್ರೆಂಡ್ಗೆ ತಕ್ಕಂತಹ ಪಾತ್ರೆಗಳು ಬಂದರೂ ಇವತ್ತಿಗೂ ಅನೇಕರು ಮಣ್ಣಿನಿಂದ ಸಿದ್ಧವಾದ ಪಾತ್ರೆಗಳನ್ನೇ ಇಷ್ಟಪಡುತ್ತಾರೆ.ಇಂತಹದ್ದೇ ಪುಟ್ಟ ಪುಟ್ಟ ಟೆರ್ರಕೋಟ ಸಾಮಗ್ರಿಗಳು ಜಾಂಬೂರಿ ಅಂಗಳದಲ್ಲಿ ಕಣ್ಮನಸೆಳೆಯುತ್ತಿವೆ. ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸಣ್ಣ ಹಳ್ಳಿಯವರಾದ ರೇಣುಕಾ ಕುಂಬಾರ್ ಅವರು ಸ್ವತಃ ತಾವೇ ಸುಮಾರು ಹದಿನೈದು ವರ್ಷಗಳಿಂದ ಕುಂಬಾರಿಕೆ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ವಿವಿಧ ಆಕಾರದ ಮಣ್ಣಿನ ವಸ್ತುಗಳನ್ನು ತಯಾರಿಸುವುದೇ ಇವರ ಮುಖ್ಯ ಉದ್ಯೋಗವಾಗಿದೆ. ಭಾರತದಲ್ಲಿಯೇ ಮಣ್ಣಿನ ವಸ್ತುಗಳನ್ನು ಸಿದ್ಧಪಡಿಸಲು ದೊರಕುವ ಶ್ರೇಷ್ಠ…
ಸಿಂಧು ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ವಿದ್ಯಾಗಿರಿ: ಅಲ್ಲಿ ವಿದ್ಯಾರ್ಥಿಗಳು ಆಕಾಶಕ್ಕೆ ಏಣಿಹಾಕಿ ಮೇಲೇರುತ್ತಿದ್ದರು. ಹಗ್ಗದ ಮೇಲೆ ಸೈಕಲ್ ಓಡಿಸಿ ಹುಬ್ಬೇರಿಸುವಂತೆ ಸವಾಲುಗಳನ್ನು ಎದುರಿಸುತ್ತಿದ್ದರು. ಎದೆ ಝಲ್ ಎನ್ನಿಸುವ ಸರ್ಕಸ್ಗಳನ್ನು ಸಲೀಸಾಗಿ ಸಂಪೂರ್ಣಗೊಳಿಸಿ ವಿಶೇಷ ಬ್ಯಾಡ್ಜ್ ಪಡೆಯುವುದಕ್ಕಾಗಿ ಸಾಲುಗಟ್ಟಿದ್ದರು. ವಿದ್ಯಾರ್ಥಿಗಳಿಗೆ ಇಂಥದ್ದೊಂದು ಅವಕಾಶ ಒದಗಿಸಿದ್ದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಚಾಲೆಂಜ್ ವ್ಯಾಲಿ. ನಾನಾ ಬಗೆಯ ಸಾಹಸ ಕ್ರೀಡೆಗಳಿಗೆ ಚಾಲೆಂಜ್ ಹಾಕಿ ಕೈಬೀಸಿ ಕರೆಯುತ್ತಿದೆ ಜಾಂಬೂರಿಯ ಈ ಚಾಲೆಂಜ್ ವ್ಯಾಲಿ. ಒಟ್ಟು 35 ವಿಧದ ಕಸರತ್ತುಗಳಿರುವ ಈ ಕ್ರೀಡಾ ಲೋಕದಲ್ಲಿ ಪ್ರತಿನಿತ್ಯ 8ರಿಂದ ಇಂದ 10 ಸಾವಿರ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು ಡಿಸೆಂಬರ್ 26ರಿಂದ ಸಾರ್ವಜನಿಕರಿಗೂ ಮುಕ್ತ ಅವಕಾಶ ಒದಗಿಸಲಾಗುತ್ತದೆ. ಪ್ರತಿಯಂದು ಸಾಹಸಗಳು ನುರಿತರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ಅಂತರಾಷ್ಟ್ರೀಯ ಸ್ಕೌಟ್ಸ್ ಸಹಾಯಕ ಆಯುಕ್ತ ಮಧುಸೂದನ, ರಾಷ್ಟ್ರೀಯ ನಿರ್ದೇಶಕ ಕೃಷ್ಣ ಸ್ವಾಮಿ, ಜಿಮ್ಮಿ ಸಿಕ್ವೇರ್ ಸೇರಿದಂತೆ ಹಲವರು ಸಾಹಸ ಕ್ರೀಡೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟೈರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಸಹಕಾರ ಮಹಾಮಂಡಳದವರು ಜಿಲ್ಲೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ‘ಸಮೃದ್ದ ಭಾರತ ನಿರ್ಮಾಣದಲ್ಲಿ ಸಹಕಾರ ಚಳುವಳಿ ಮಾತ್ರವೇ ಪ್ರಧಾನ ಪಾತ್ರವನ್ನು ವಹಿಸಬಲ್ಲುದು’ ಎಂಬ ವಿಷಯದ ಕುರಿತು ನಡೆದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪಥಮ ಪಿ.ಯು.ಸಿ ವಿದ್ಯಾರ್ಥಿನಿ ವರ್ಷಾ ರವಿಶಂಕರ್ ಪ್ರಥಮ ಸ್ಥಾನ ಪಡೆದು ಕರ್ನಾಟಕ ಸಹಕಾರಮಹಾಮಂಡಳ ನಡೆಸುವ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಭಾರತಿ ಹೆಗಡೆ | ಕುಂದಾಪ್ರ ಡಾಟ್ ಕಾಂ ವರದಿ.ಮೂಡುಬಿದಿರೆ: ಆಧುನಿಕರಣದ ಭರಾಟೆಯಲ್ಲಿ ಹಲವು ಕುಂಚ ಕಲಾ ಪ್ರಕಾರಗಳು ಮಾಸಿಹೋಗುತ್ತಿವೆ. ಮಧುಬಾನಿ, ಗೊಂಡಾ, ವಾರ್ಲಿ, ಕಲಂಕಾರಿ ಹೀಗೆ ಅದೆಷ್ಟೊ ಚಿತ್ರಕಲಾ ಪ್ರಕಾರಗಳು ಕಾಣಸಿಗದಂತಾಗಿದೆ. ಇವತ್ತಿಗೂ ಕೂಡ ಇಂತಹ ಚಿತ್ರಕಲೆಯನ್ನೇ ಜೀವನೋಪಾಯವಾಗಿಸಿಕೊಂಡ ಕಲಾವಿದರು ಅಲ್ಲಲ್ಲಿ ಇದ್ದು, ಕಲಾಮೇಳದಲ್ಲಿ ಪಾರಂಪರಿಕ ಕಲಾಪ್ರಕಾರಗಳು ಅನಾವರಣಗೊಳ್ಳುತ್ತವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ಹಲವಾರು ಚಿತ್ರಕಲಾ ಪ್ರಕಾರಗಳಲ್ಲಿ ಪುರಾತನ ಕಾಲದ ವೈವಿಧ್ಯಮಯ ಚಿತ್ರಗಳೇ ಗಮನ ಸೆಳೆಯುತ್ತಿವೆ. ಅಂತಹವುಗಳಲ್ಲಿ ಬಿಹಾರಿ ಮೂಲದ ವಿಶಿಷ್ಟ ಕಲಾಪ್ರಕಾರದಲ್ಲಿ ಮಧುಬಾನಿಯೂ ಒಂದು. ಸೂಕ್ಷ್ಮ ಕುಸುರಿ ಚಿತ್ರಣ, ಪುರಾತನ ಶೈಲಿಯ ಸೊಗಡಿನಲ್ಲಿ ಮೂಡಿಬರುವ ನವಯುಗದ ಚಿತ್ರಣಗಳು ನಿಜಕ್ಕೂ ಮನಮೋಹಕ. ಸುಮಾರು ಹದಿನೈದು ವರ್ಷದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಮಧುಬಾನಿ ಚಿತ್ರಕಲೆಯನ್ನು ಉಳಿಸಿ ಬೆಳೆಸುವಲ್ಲಿ ಬಿಹಾರದ ’ಸಂತೋಷ ಮಿಥಿಲಾ ಬೋಧನಾ ಕಲಾಕೇಂದ್ರ’ ಪ್ರಮುಖ ಪಾತ್ರವಹಿಸಿದೆ. ಸಂಪೂರ್ಣವಾಗಿ ಆರ್ಗಾನಿಕ್ ಮಾದರಿಯಲ್ಲಿ ಸಿದ್ಧವಾಗುವ ಈ ಮಧುಬಾನಿ ಚಿತ್ರಕಲಾ ಪ್ರಕಾರದಲ್ಲಿ ಮುಖ್ಯವಾಗಿ ಚಿತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಕನ್ನಡ ಸೇರಿದಂತೆ ಭಾರತದ ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀವು ಹರಿಕಥೆಯ ಸೊಗಡಿಗೆ ಸಾಕ್ಷಿಯಾಗಿರಬಹುದು. ಆದರೆ ಇಂಗ್ಲಿಷ್ನಲ್ಲಿ ಹರಿಕಥೆ ನಿರೂಪಿತವಾದರೆ ಹೇಗಿರುತ್ತದೆ? ಪರಭಾಷೆಯಲ್ಲಿ ನಮ್ಮದೇ ದೇಶದ ಪೌರಾಣಿಕ ಕಥೆಯ ಅಭಿವ್ಯಕ್ತಿ ಹೊಸ ಅನುಭವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿನ ಪ್ರೇಕ್ಷಕರಿಗೆ ದಾಟಿಕೊಂಡಿತು. ಬೆಂಗಳೂರಿನ ಶಾರ್ವರಿ ಅವರ ಧ್ವನಿಯಲ್ಲಿ ಅಭಿವ್ಯಕ್ತವಾದ ’ಪ್ರಹ್ಲಾದ ಚರಿತೆ’ ಹರಿಕಥೆಯು ಪ್ರಹ್ಲಾದನ ಭಕ್ತಿ ಮತ್ತು ಅವರ ತಂದೆಯ ನಡುವಿನ ಸಂಘರ್ಷದ ಕಥನವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಹಿಡಿದಿಟ್ಟಿತು. ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಪ್ರಹ್ಲಾದ ಮತ್ತು ಅವರ ತಂದೆ ಹಿರಣ್ಯಕಶ್ಯಪು ನಡುವಿನ ಸಂಘರ್ಷದ ವಿವಿಧ ಆಯಾಮಗಳನ್ನು ಶಾರ್ವರಿ ಪರಿಚಯಿಸಿದರು. ನಂತರ ಇಂಗ್ಲಿಷ್ ಭಾಷೆಯ ಮೂಲಕ ಪ್ರಹ್ಲಾದನ ಕಥನವನ್ನು ಸಂಕ್ಷಿಪ್ತವಾಗಿ ಅನಾವರಣಗೊಳಿಸಿದರು. ತಾಯಿಯ ಮೂಲಕ ಪ್ರಹ್ಲಾದನಿಗೆ ವಿಷ ನೀಡಿಸುವ ಪ್ರಸಂಗ ಮತ್ತು ವಿಷ್ಣು ಉಗ್ರನರಸಿಂಹಾವತಾರ ತಳೆದ ಸಂದರ್ಭವನ್ನು ಇಂಗ್ಲಿಷ್ ಭಾಷೆಯ ಮನೋಜ್ಞ ಶೈಲಿಯಲ್ಲಿ ನಿರೂಪಿಸಿದರು. ಕನ್ನಡದ ಭಾಷೆಯಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಇಲ್ಲಿನ ನುಡಿಸಿರಿ ವೇದಿಕೆಯಲ್ಲಿ ವಿದುಷಿ ಸುಪರ್ಣ ವೆಂಕಟೇಶ್ ತಂಡದ ಕಲಾವಿದರ ’ನಾಟ್ಯ ವೈವಿಧ್ಯ’ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಪ್ರೇಕ್ಷಕರನ್ನು ರಂಜಿಸಿತು. ಶುಭಾಶಯ ನಿವೇದನಾ ಪ್ರಾರ್ಥನೆಯ ’ಪುಷ್ಟಮಂಜರಿ’ ನೃತ್ಯದ ಮೂಲಕ ಕಲಾವಿದರು ಅಷ್ಟದಿಕ್ಪಾಲಕರನ್ನು ಪೂಜಿಸುವ ಆರಾಧನಾ ಭಂಗಿಗಳನ್ನು ಪ್ರದರ್ಶಿಸಿದರು. ಜರ್ಜರದೊಂದಿಗೆ ಪ್ರದರ್ಶಿತವಾದ ನೃತ್ಯವು ದೈವೀಪ್ರಾರ್ಥನೆಯ ಸಂಕಲ್ಪ ಮತ್ತು ಶ್ರದ್ಧಾಪೂರ್ವಕ ಸಮರ್ಪಣಾ ಭಾವವನ್ನು ಚಿತ್ರಿಸುವಲ್ಲಿ ಯಶಸ್ವಿಯಾಯಿತು. ‘ದುರ್ಗಾ ಕೌತ್ವಂ’ ನೃತ್ಯವು ಮಹಿಮಾನ್ವಿತ ದುರ್ಗೆಯ ಶಕ್ತಿ ಮತ್ತು ರೌದ್ರಾವತಾರವನ್ನು ಅನಾವರಣಗೊಳಿಸಿತು. ರಾಕ್ಷಸ ಸಂಹಾರಕ್ಕೂ ಮುನ್ನ ನಡೆಯುವ ಸಂಘರ್ಷದ ವೇಳೆ ದೇವಿ ತಾಳುವ ರೌದ್ರಾವತಾರದ ವಿರಾಟ್ ರೂಪ ಕಲಾವಿದರ ನಾಟ್ಯಕೌಶಲ್ಯದ ಮೂಲಕ ಮನವರಿಕೆಯಾಯಿತು. ವಿಷ್ಣುವಿನ ದಶಾವತಾರದ ಪರಿಕಲ್ಪನೆ ಆಧಾರಿತ ನೃತ್ಯರೂಪಕವು ಪ್ರೇಕ್ಷಕರನ್ನು ಪ್ರಭಾವಿಸಿತು. ವಿಷ್ಣುವಿನ ಒಂದೊಂದು ರೂಪವನ್ನು ಕಾಣಿಸುವಲ್ಲಿ ಕಲಾವಿದರು ಯಶಸ್ವಿಯಾದರು. ನಂತರ ಭರತನಾಟ್ಯದ ತಿಲ್ಲಾನ ನೃತ್ಯವು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿತು. ಬೆಂಗಳೂರಿನ ಸಾಯಿ ಡ್ಯಾನ್ಸ್ ಇಂಟರ್ ನ್ಯಾಷನಲ್ ನೃತ್ಯ ಕಲಾವಿದರಾದ ಆದಿತಿ ವಿ ರಾವ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ವಿದ್ಯಾಗಿರಿ: ಜಾತ್ರೆ, ಗದ್ದಲ, ಜನಜಂಗುಳಿ ಇವೆಲ್ಲದರ ನಡುವೆ ಕಿವಿಗೆ ಇಂಪಾದ ಮತ್ತು ಹುಮ್ಮಸ್ಸು ತುಂಬುವ ರಂಗಗೀತೆಗಳನ್ನು ಕೇಳುವ ಅವಕಾಶ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಳ್ವಾಸ್ ಸಾಂಸ್ಕೃತಿಕ ಜಾಂಬೂರಿಯಲ್ಲಿ ಕಲಾಪ್ರೇಕ್ಷಕರಿಗೆ ಲಭಿಸಿತ್ತು. ಮೂಡಬಿದರೆಯ ಆಳ್ವಾಸ್ ಆವರಣದ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ’ರಂಗಗೀತೆಗಳು’ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಹೆಗ್ಗೊಟ್ಟಾರ್ ಮತ್ತು ಬಳಗದ ಪ್ರದರ್ಶನ ನೆರೆದಿದ್ದವರನ್ನು ರಂಜಿಸಿತು. ಮೊದಲಿಗೆ ಹಯವದನ ನಾಟಕದ ಬಿ.ವಿ ಕಾರಂತರ ಸಂಯೋಜನೆಯ ’ಗಜವದನ ಹೇ ರಂಭಾ’ ಹಾಡಿನ ಮೂಲಕ ’ಪ್ರೇಕ್ಷಕರೇ ನಾಟಕದ ಮಾಲೀಕ’ ಎಂಬ ಸಂದೇಶವನ್ನು ಗೀತೆಯ ಮೂಲಕ ಜನರ ಮನಮುಟ್ಟಿಸಿದರು. ಹಾರ್ಮೋನಿಯಂ, ಖಂಜೀರಾ, ತಬಲ, ಡೋಲಕ್, ಗೆಜ್ಜೆ, ತಾಳ ಹೀಗೆ ಹಲವಾರು ವಾದನಗಳ ಮಿಳಿತ ನೆರೆದಿದ್ದ ಪ್ರೇಕ್ಷಕರ ಗಮನವನ್ನು ವೇದಿಕೆಯ ಮೇಲಿರುವವರ ಮೇಲೆ ಸೆಳೆಯುವಂತೆ ಮಾಡಿದರು. ಜಾನಪದ ಗೀತೆಗಳಿಗೆ ಭದ್ರ ಬುನಾದಿಯಾಗಿರುವ ರಂಗಭೂಮಿಯಲ್ಲಿ ಇನ್ನೂ ಹಲವಾರು ಜಾನಪದ ಗೀತೆಗಳು ಅನುರಣಿಸುತ್ತಿದೆ, ಅಂತಹದ್ದೇ ಒಂದು ರಂಗಗೀತೆಯಾದ ’ಗೋವಿಂದ ಮುರಹರ ಗೋವಿಂದ’ ಗೀತೆ ಪ್ರೇಕ್ಷಕರನ್ನು ಭಕ್ತಿವರವಶರನ್ನಾಗಿಸಿತು.…
