Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿಯಲ್ಲಿ ಸಾಕಷ್ಟು ಹಾನಿಯಾಗಿದ್ದು ನೆರೆಯಿಂದ ನೀರು ನುಗ್ಗಿದ ಮನೆಗಳಿಗೆ 10 ಸಾವಿರ, ಭಾಗಶಃ ಹಾನಿಯಾದ ಮನೆಗಳಿಗೆ 1 ಲಕ್ಷ ರೂ. ಪೂರ್ಣ ಹಾನಿಯಾದ ಮನೆಗಳಿಗೆ ಮೊದಲ ಕಂತಿನಲ್ಲಿ 1 ಲಕ್ಷ ರೂ. ತಕ್ಷಣ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ಅವರು ಮರವಂತೆ ಹೊರಬಂದರು ಸಮೀಪ ಕಡಲ್ಕೊರೆತದಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ ಮರವಂತೆಯಲ್ಲಿ ಸಮುದ್ರದಲೆಯ ಅಬ್ಬರಕ್ಕೆ ಸಾಕಷ್ಟು ಹಾನಿಯಾಗಿದೆ. ಹೊಸತಾಗಿ ನಿರ್ಮಿಸಿದ ರಸ್ತೆ ಸಾಕಷ್ಟು ಹಾನಿಯಾಗಿದೆ. ಬೈಂದೂರು ತಾಲೂಕಿನಲ್ಲಿ 106ಕ್ಕೂ ಹೆಚ್ಚು ಮನೆಗಳು, ಸಾರ್ವಜನಿಕ ಕಟ್ಟಡ, ರಸ್ತೆ, ಬೆಳೆ ಹಾನಿಯಾಗಿದೆ. ಹಾನಿಗೊಳಗಾದ ಮನೆ ಹಾಗೂ ಇನ್ನಿತರ ಪ್ರದೇಶಗಳ ವರದಿಯನ್ನು ತಕ್ಷಣ ನೀಡುವಂತೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಿಪತ್ತು ಪರಿಹಾರ ನಿಧಿಯ ಹಣವನ್ನು ಬಳಸಿಕೊಂಡು ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು. ಇದನ್ನೂ ಓದಿ► ಮರವಂತೆಯಲ್ಲಿ ಸ್ಥಳೀಯರ ಅಹವಾಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಹೊರಬಂದರು ಸಮೀಪ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿದ ಕಂದಾಯ ಸಚಿವ ಆರ್. ಅಶೋಕ್ ಅವರು ಸ್ಥಳೀಯ ಮೀನುಗಾರರ ಅಹವಾಲು ಕೇಳದೆ ತೆರಳಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹಾನಿಗೀಡಾದ ಪ್ರದೇಶದ ವೀಕ್ಷಣೆಗೆ ಬರುವ ಸಚಿವರು ಘಟನೆಯ ವಾಸ್ತವಾಂಶ ಅರಿಯುವ ಬದಲಿಗೆ ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ. ತೌಕ್ತೆ ಚಂಡಮಾರುತದಿಂದ ಉಂಟಾದ ಕಡಲ್ಕೊರೆತ ಬೈಂದೂರು ಕ್ಷೇತ್ರದ ಮರವಂತೆಯಲ್ಲಿ ಅತಿ ಹೆಚ್ಚಿನ ಹಾನಿ ಉಂಟುಮಾಡಿದೆ. ಮನೆ, ಶೆಡ್, ರಸ್ತೆ‌ ಎಲ್ಲವೂ ಹಾನಿಯಾಗಿದೆ. ಭೂಪ್ರದೇಶಗಳನ್ನು ಕಳೆದುಕೊಂಡಿದ್ದಾರೆ. ಯಾರಿಗೂ ಸ್ಥಳೀಯರೊಂದಿಗೆ ಮಾತನಾಡುವ, ಸಮಸ್ಯೆ ಕೇಳುವ ಸೌಜನ್ಯವಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮೀನುಗಾರಿಕಾ ಮುಖಂಡರಾದ ಮೋಹನ್ ಖಾರ್ವಿ, ಶಂಕರ ಖಾರ್ವಿ, ನಾಗ ಖಾರ್ವಿ ಲೋಕೇಶ್ ಖಾರ್ವಿ ಮೊದಲಾದವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ► ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರ ನೀಡಲು ಸೂಚನೆ: ಸಚಿವ ಆರ್. ಅಶೋಕ್ – https://kundapraa.com/?p=48384 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್‌ನಿಂದ ಬೈಂದೂರು ವೃತ್ತ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್‌ನ್ನು ಮಂಗಳವಾರ ವಿತರಿಸಲಾಯಿತು. ಶ್ರೀ ರಾಮ ಸೌಹಾರ್ದ ಕೋ- ಆಪರೇಟಿವ್‌ನ ಅಧ್ಯಕ್ಷ ಎಸ್. ರಾಜು ಪೂಜಾರಿ ಬೈಂದೂರು ವೃತ್ತ ನೀರಿಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಉಪಾಧ್ಯಕ್ಷ ವಿನಾಯಕ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಟ್ಟಣ್ಣ ರೈ, ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಿವರಾಮ ಪೂಜಾರಿ, ಸಂತೋಷ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತಿಚೆಗೆ ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಬೆಂಗಾವಲು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಂಕರ ಪೂಜಾರಿ ಕಾಡಿನತಾರು ಅವರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಕಾರಂತ ಥೀಮ್ ಪಾರ್ಕ್‌ನಲ್ಲಿ ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಸಮೀಪ ಕಳುವಿನ ಬಾಗಿಲು ಬಳಿ ಹೊಳೆ ನೀರು ಉಕ್ಕಿ ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ಹಾಗೂ ಪರಿಸರದ ನಿವಾಸಿಗಳಿಗೆ ಅಪಾಯಕಾರಿಯಾಗಿ ಆತಂಕ ನಿಮಾ೯ಣವಾಗಿದೆ. ಉಪ್ಪುಂದ ಹೊಳೆಯ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಪೂವ೯ ದಿಕ್ಕಿನಲ್ಲಿರುವ ಕಳುವಿನ ಬಾಗಿಲು ಬಳಿ ಹೊಳೆಯ ಕಿನಾರೆಗೆ ಶಿಲೆ ಕಲ್ಲಿನ ರಿವೀಟ್ ಮೆಂಟ್ ಅಭಿವೃದ್ಧಿ ಕಾಮಗಾರಿ ಮಾಡುವುದರ ಮೂಲಕ ಸ್ಥಳೀಯ ನಿವಾಸಿಗಳ ಮನೆಗಳಿಗೆ ಮಳೆಗಾಲದ ನೆರೆ ಹಾವಳಿಯಿಂದಾಗಿ ಎದುರಾಗುವ ಅಪಾಯವನ್ನು ತಪ್ಪಿಸಲು ಕ್ರಮವಹಿಸ ಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘ(ಎಐಎಡಬ್ಲೂಯು)ದ ಜಿಲ್ಲಾ ಪ್ರಧಾನ ಕಾಯ೯ದಶಿ೯ ಕೋಣಿ ವೆಂಕಟೇಶ್ ನಾಯಕ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಹಾಗೂ ಲಿಶಿಯಸ್ ಸಂಸ್ಥೆಯ ಸಹಯೋಗದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಮೂಲಕ ಕೊರೋನ ಸಂಕಷ್ಟಗಳಿಗೆ ಸ್ಪಂದಿಸುವ ಆಶಯದೊಂದಿಗೆ ಕರ್ನಾಟಕ ರಾಜ್ಯದ ಕೊಂಕಣಿ ಖಾರ್ವಿ ಸಮಾಜದ ಅರ್ಹ ಬಡ ಕುಟುಂಬಗಳಿಗೆ ಕೊಡಮಾಡಿದ ಅಕ್ಕಿಯ ಮೂಟೆಗಳನ್ನು ಗಂಗೊಳ್ಳಿ ವಲಯದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಖಾರ್ವಿ ಸಮಾಜದ ಹಿರಿಯ ಮುಖಂಡರಾದ ಜಿ.ಪುರುಷೋತ್ತಮ ಆರ್ಕಾಟಿ, ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಸುರೇಂದ್ರ ಖಾರ್ವಿ, ಕಾರ್ಯದರ್ಶಿ ಜಿ. ಎನ್. ಸತೀಶ್ ಖಾರ್ವಿ ಉಪಸ್ಥಿತರಿದ್ದರು. ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಲಿಮಿಟೆಡ್ನ ಉಪಾಧ್ಯಕ್ಷರಾದ ಎನ್. ವಿಶ್ವನಾಥ್ ಆಚಾರ್ಯ ಮತ್ತು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ಫಲಾನುಭವಿಗಳಿಗೆ ದಾನ್ಯ ತುಂಬಿದ ಚೀಲಗಳನ್ನು ವಿತರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಮೀನುಗಾರಿಕಾ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿಯುತ ಬೆಳವಣಿಗೆಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯನ್ನು ರೂಪಿಸಿದ್ದು, ಪ್ರಸ್ತುತ ಸಾಲಿನಲ್ಲಿ ಈ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಾದ ಮೀನು ಕೃಷಿ ಕೊಳಗಳ ನಿರ್ಮಾಣ, ಬೈಯೋಫ್ಲಾಕ್ ಮತ್ತು ಆರ್.ಎ.ಎಸ್ ಘಟಕ ನಿರ್ಮಾಣ, ಮೀನು ಮರಿ ಪಾಲನೆಗೆ ಉತ್ತೇಜನ, ಅಲಂಕಾರಿಕ ಮೀನು ಉತ್ಪಾದನೆ, ಶೈತೀಕರಿಸಿದ ಶಾಖ ನಿರೋಧಕ ವಾಹನ ಖರೀದಿ, ಶೈತ್ಯಾಗಾರ, ಮಂಜುಗಡ್ಡೆ ಸ್ಥಾವರ ನಿರ್ಮಾಣ ಮತ್ತು ನವೀಕರಣ, ಆಳ ಸಮುದ್ರ ಬೋಟ್ ನಿರ್ಮಾಣ, ಹಿನ್ನೀರು ಕೃಷಿ, ಪಂಜರ ಕೃಷಿ, ಮೀನಿನ ಆಹಾರ ಉತ್ಪಾದನಾ ಘಟಕ, ಮೀನು ಮಾರುಕಟ್ಟೆ ಮಳಿಗೆ ನಿರ್ಮಾಣ, ಮೀನುಗಾರಿಕೆ ಬೋಟುಗಳ ಉನ್ನತೀಕರಣ, ಬೋಟಿನಲ್ಲಿ ಬಯೋ ಟಾಯ್ಲೆಟ್ ನಿರ್ಮಾಣ, ಬೋಟಿನಲ್ಲಿ ಸಂಪರ್ಕ ಸಾಧನ ಅಳವಡಿಕೆ, ನಾಡ ದೋಣಿಗಳಿಗೆ ಸೇಫ್ಟಿ ಕಿಟ್ ಖರೀದಿ, ಆಹಾರ ಸುರಕ್ಷತಾ ಯೋಜನೆ ಹಾಗೂ ಇನ್ನಿತರ ಯೋಜನೆಗಳಿಗೆ ರೈತರು, ಮೀನುಗಾರರು ಮತ್ತು ಸಾರ್ವಜನಿಕರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 10 ರ ವರೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಸರ್ಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಗಳನ್ನು ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ನೇಮಿಸಲಾಗಿದ್ದು, ಬೈಂದೂರು ಹೋಬಳಿಯ ಕೊಲ್ಲೂರು, ಹಳ್ಳಿಹೊಳೆ, ಕಾಲ್ತೂಡು, ಎಳಜಿತ್, ಜಡ್ಕಲ್, ಮುದೂರು, ಗೋಳಿಹೊಳೆ ವ್ಯಾಪ್ತಿಗೆ ಕೊಲ್ಲೂರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯಕ್ ಮೊ.ನಂ: 9482134461 ಇವರನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ. ಮೇಲ್ಕಂಡ ನಿಯೋಜಿತ ಅಧಿಕಾರಿಗಳು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ತರಹದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005 ರಡಿ ಹಾಗೂ ಎಪಿಡೆಮಿಕ್ ಡಿಸೀಸಸ್ ರೆಗ್ಯುಲೇಷನ್ ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಕೊರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಬೈಂದೂರು ಪೊಲೀಸ್ ವೃತ್ತದ ಠಾಣೆಗಳಿಗೆ ಸೋಮವಾರ ಕೊರೋನಾ ರಕ್ಷಣಾ ಕಿಟ್ ವಿತರಿಸಲಾಯಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ್ ಎ. ಕಾಯ್ಕಿಣಿ ಅವರಿಗೆ ಕಿಟ್ ಹಸ್ತಾಂತರಿಸಿದರು. ಈ ಸಂದರ್ಭ ಪ್ರೊಬೇಷನರಿ ಪಿ.ಎಸ್.ಐ ಸುಹಾಸ್, ಸಂಘದ ನಿರ್ದೇಶಕರಾದ ಈಶ್ವರ ಹಕ್ಲತೋಡು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಪೈ, ಮ್ಯಾನೇಜರ್ ಚಂದ್ರಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ► ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದಿಂದ ವೈದ್ಯಕೀಯ ಕಿಟ್ ದೇಣಿಗೆ  – https://kundapraa.com/?p=48148 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೋಮವಾರ 897 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 5 ಮಂದಿ ಕೋವಿಡ್ ಸೊಂಕಿನಿಂದ ಮೃತಪಟ್ಟಿದ್ದಾರೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 388, ಕುಂದಾಪುರ, ಬೈಂದೂರು ತಾಲೂಕಿನ 271, ಕಾರ್ಕಳ, ಹೆಬ್ರಿ ತಾಲೂಕಿನ 231 ಮಂದಿಗೆ ಹಾಗೂ ಹೊರ ಜಿಲ್ಲೆಯ 7 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 897 ಪ್ರಕರಣಗಳಲ್ಲಿ 18 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 879 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು ಉಡುಪಿಯ 80 ವರ್ಷದ ವೃದ್ಧ, 65 ವರ್ಷದ ವೃದ್ಧ, 62 ವರ್ಷದ ವೃದ್ಧ, ಕುಂದಾಪುರದ 54 ವರ್ಷದ ಪುರುಷ, 58 ವರ್ಷದ ಪುರುಷ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 837 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 6860 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 1520 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದು…

Read More