Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ನೂತನವಾಗಿ ಆರ್‌ಟಿಸಿ ವಿತರಣಾ ಸೇವೆ ಆರಂಭಿಸಲಾಯಿತು. ಈ ಸೇವೆಗೆ ಚಾಲನೆ ನೀಡಿದ ಕುಂದಾಪುರ ಉಪವಿಭಾಗಾಧಿಕಾರಿ ಟಿ.ಭೂಬಾಲನ್ ಮಾತನಾಡಿ ಪಹಣಿ ಪತ್ರದ ಗಣೀಕರಣ ವ್ಯವಸ್ಥೆಯಲ್ಲಿ ನಮ್ಮ ಇತರ ರಾಜ್ಯಗಳಿಗೆ ರೋಲ್ ಮಾಡೆಲ್ ಆಗಿದೆ. ಆರ್‌ಟಿಸಿ ವ್ಯವಸ್ಥೆಯ ಬಗ್ಗೆ ರಾಜ್ಯ ಸರಕಾರ ಹೆಚ್ಚು ಗಮನಹರಿಸಿ ಗಣೀಕರಣಗೊಳಿಸಿರುವುದರಿಂದ ಸಾರ್ವಜನಿಕರು ಸುಲಭವಾಗಿ ಆರ್‌ಟಿಸಿಯನ್ನು ಪಡೆಯಲು ಸಾಧ್ಯವಾಗುತ್ತಿದೆ. ವಿಕೇಂದ್ರಿಕರಣ ವ್ಯವಸ್ಥೆಯಿಂದ ಪಹಣಿ ಪತ್ರವನ್ನು ಆನ್‌ಲೈನ್‌ನಲ್ಲಿ ದೊರೆಯುವ ವ್ಯವಸ್ಥೆ ಮಾಡಿರುವುದರಿಂದ ಸಾರ್ವಜನಿಕರು ತಾಲೂಕು, ನಾಡ ಕಛೇರಿಗಳಿಗೆ ಪ್ರತಿದಿನ ಅಲೆಯುವುದು ತಪ್ಪಿದೆ. ಈ ವ್ಯವಸ್ಥೆಯಿಂದ ಕಂದಾಯ ಇಲಾಖೆ ಮೇಲೆ ಒತ್ತಡ ಕೂಡ ಕಡಿಮೆಯಾಗಿದೆ ಎಂದು ಹೇಳಿದರು. 98 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯಲ್ಲಿ ಸಾರ್ವಜನಿಕರ ಹಾಗೂ ರೈತರ ಅನುಕೂಲತೆ ಕಲ್ಪಿಸುವ ಉದ್ದೇಶದಿಂದ ಆರ್‌ಟಿಸಿ ವಿತರಣೆ ಸೇವೆಯನ್ನು ಪ್ರಾರಂಭಿಸಿರುವು ಶ್ಲಾಘನೀಯ. ಪ್ರಸಕ್ತ ವರ್ಷದಲ್ಲಿ ಒಂದು ಕೋಟಿ ರೂ. ಲಾಭ ಗಳಿಸಿರುವ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ:  ಉಡುಪಿ ಜಿಲ್ಲಾ ಕಾಂಗ್ರೆಸ್‌ ನ ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷರಾಗಿ ಸತೀಶ್ ಪೂಜಾರಿ ಕಲತ್ರಪಾದೆ ಇವರು ನೇಮಕಗೊಂಡಿದ್ದಾರೆ. ಇವರು ಈ ಹಿಂದೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷರಾಗಿ ಹಾಗೂ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಕೋಮುವಾದವನ್ನು ಬಲವಾಗಿ ವಿರೋದಿಸಿ ತಮ್ಮ ನೇರ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಸತೀಶ್ ಪೂಜಾರಿ ಇವರನ್ನು ರಾಜ್ಯ ಕಾಂಗ್ರೆಸ್ ಐ.ಟಿ.ಸೆಲ್ ಅಧ್ಯಕ್ಷ ನಿರಂಜನ್ ರಾವ್ ಅವರು ಉಡುಪಿ ಜಿಲ್ಲೆಯ ಕಾಂಗ್ರೆಸ್ ಐ.ಟಿ. ಸೆಲ್ ನ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿದ ಪತ್ರವನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಪ್ರದಾನ ಕಾರ್ಯದರ್ಶಿ ರವಿಶಂಕರ್ ಶೇರಿಗಾರ್, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸದಾಶಿವ ದೇವಾಡಿಗ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನಾಡ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಡಾಕೆರೆ, ಚಿಕ್ಕಳ್ಳಿ ಮತ್ತು ಪಡುಕೋಣೆ ಭಾಗದಲ್ಲಿ ಮಳೆಯಿಂದ ಭತ್ತದ ಕೃಷಿಯ ಗದ್ದೆ ಪ್ರದೇಶಗಳು ಸಂಪೂರ್ಣ ಜಲಾವೃತ ಗೊಂಡಿದ್ದು, ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಭೇಟಿ ನೀಡಿದರು. ಬಂಟ್ವಾಡಿ ಡ್ಯಾಂ ಹಾಗೂ ಮೊವಾಡಿ ಸೇತುವೆಗಳ ಅಪೂರ್ಣ ಕಾಮಗಾರಿಗಳಿಂದಾಗಿ ಈ ಅನಾಹುತ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದು, ಕೂಡಲೇ ಸಣ್ಣ ನೀರಾವರಿ ಎಂಜಿನಿಯರ್‌ ಹಾಗೂ ಪಿಡಬ್ಲ್ಯುಡಿ ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಸಿದ ಶಾಸಕರು ಜನಸಾಮಾನ್ಯರಿಗೆ ತೊಂದರೆ ಯಾಗದಂತೆ, ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪಂಚಾಯತ್‌ ಸದಸ್ಯರಾದ ಶ್ರೀಧರ್‌ ದೇವಾಡಿಗ, ದಿನೇಶ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಗೋಪಾಲಕೃಷ್ಣ ನಾಡ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿಯಲ್ಲಿ ವಿದ್ಯಾರ್ಥಿ ಸಂಸತ್ತಿನ ಪದಾಗ್ರಹಣ ಸಮಾರಂಭ ಜರುಗಿತು. ಪದಾಗ್ರಹಣ ಸಮಾರಂಭವನ್ನು ಉದ್ಘಾಟಿಸಿದ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ ಇದರ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ನಾಯಕತ್ವ ಗುಣ ಅತೀ ಅವಶ್ಯಕ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಮುಂದಿನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ವಿಶಿಷ್ಠವಾಗಿ ಬದುಕಲು ಉತ್ತಮ ನಾಯಕತ್ವ ಅನಿವಾರ್ಯ. ಶಾಲೆಯಲ್ಲಿ ಕಲಿಯುವ ಎಲ್ಲಾ ವಿಷಯಗಳು ಹಾಗೂ ಮೌಲ್ಯಗಳು ಮುಂದಿನ ಅವರ ಜೀವನಕ್ಕೆ ತರಬೇತಿಯಾಗಲಿದೆ. ಅಲ್ಲದೇ, ಸಮಗ್ರ ಭಾರತ ದೇಶವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳ ನಾಯಕತ್ವ ಗುಣಗಳ ಪಾತ್ರ ಗುರುತರವಾಗಿದೆ ಎಂದು ಅಲ್ಲದೇ, ಶಾಲಾ ಚುನಾವಣೆಯ ಮೂಲಕ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಉತ್ತಮ ನಾಯಕ ಎಂದರೆ ಯಾರು? ಹಾಗೂ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಲು ಬೇಕಾಗುವ ವಿಶಿಷ್ಠ ಗುಣಗಳನ್ನು ತಿಳಿಸಿದರು. ಡಾ.ಎನ್.ಪಿ.ನಾರಾಯಣ ಶೆಟ್ಟಿಯವರು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಶಸ್ತಿ ಪತ್ರಗಳನ್ನು ಹಾಗೂ ಸಾಂಕೇತಿಕವಾಗಿ ಬ್ಯಾಚಸ್‌ಗಳನ್ನು ನೀಡಿದರು. ಈ ಕಾರ್ಯಕ್ರಮದ…

Read More

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಅದು ಮನೆಯನ್ನು ಹೋಲುವ ಗೂಡು. ಬಿಸಿಲು ಮಳೆಯ ರಕ್ಷಣೆಗೆ ಹರಿದ ಪ್ಲಾಸ್ಟಿಕ್ ಟಾರ್ಪಲ್ಲಿನ ಆಸರೆ. ಬಡತನದ ದಾರಿದ್ರ್ಯಕ್ಕೆ ಬೇಸತ್ತು ಅದರಲ್ಲಿಯೇ ನಾಲ್ಕು ಜೀವಗಳು ಬದುಕುತ್ತಿವೆ. ಇದು ಕೋವಿನಗುಡ್ಡೆ ಎಂಬಲ್ಲಿ ಬದುಕುತ್ತಿರುವ ಸಾಂತುಬಾಯಿ ಎಂಬ ವೃದ್ಧೆಯ ಕುಟುಂಬದ ದಯಾನೀಯ ಸ್ಥಿತಿ. ಶಂಕರನಾರಾಯಣದ ಕುಳ್ಳುಂಜೆ ಗ್ರಾಮದ ಕೋವಿನಗುಡ್ಡೆ ಎಂಬಲ್ಲಿ ವಾಸವಾಗಿರುವ ಕುಡುಬಿ ಸಮುದಾಯಕ್ಕೆ ಸೇರಿದ ಸಾಂತುಬಾಯಿ ಹಲವು ವರ್ಷಗಳಿಂದ ತಮ್ಮ ಇಬ್ಬರು ಮಕ್ಕಳು ಹಾಗೂ ಓರ್ವ ಮೊಮ್ಮೊಗಳೊಂದಿಗೆ ವಾಸವಾಗಿದ್ದಾರೆ. ವಿದ್ಯುತ್ ನೋಡಿರದ ಕುಟುಂಬ ಸಂಜೆಯಾಗುತ್ತಲೇ ಅನಿವಾರ್ಯವಾಗಿ ಮಲಗಿಬಿಡುತ್ತಾರೆ. ಮುರುಕಲು ಗುಡಿಸಲಿಗೆ ಅದೇ ಗುಡಿಸಲಿನಲ್ಲಿ ಅವರ ಪ್ರೀತಿಯ ದನಕರುಗಳನ್ನು ಸಾಕಿಕೊಂಡಿದ್ದಾರೆ. ಮಳೆಗಾಲದಲ್ಲಿ ಅವರ ಸ್ಥಿತಿ ದೇವರಿಗೆ ಪ್ರೀತಿ. 2015-16 ರಲ್ಲಿ ಸಾಂತುಬಾಯಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ ಒಂದುವರೆ ಲಕ್ಷ ರೂಪಾಯಿ ಹಣ ಮನೆ ಕಟ್ಟಲು ಮಂಜೂರಾತಿ ಆಗಿತ್ತು. ಆದರೆ ದಿನದ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕುಟುಂಬಕ್ಕೆ ಅದಕ್ಕೆ ಸರಿಯಾದ ದಾಖಲಾತಿ ಒದಗಿಸುವುದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ವೇದಮೂರ್ತಿ ಕಟ್ಟೆ ಶಂಕರ ಭಟ್ ಹಾಗೂ ಕುಲ ಪುರೋಹಿತ ಸುಬ್ರಹ್ಮಣ್ಯ ಭಟ್ ಬಾಡ ಇವರ ನೇತೃತ್ವದಲ್ಲಿ ನಡೆಯಿತು. ರಾಮಕ್ಷತ್ರಿಯ ಸಮಾಜದ 13ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ವಿವಾಹ ಹಾಗೂ ಜೀವನ ಆದರ್ಶಮಯವಾಗಿದ್ದು, ಇತರರಿಗೆ ಅನುಕರಣೀಯವಾಗಿದೆ. ಪತಿ-ಪತ್ನಿಯರ ಪರಸ್ಪರ ನಿಷ್ಠೆ ಮತ್ತು ಅನ್ಯೊನತೆ ಸುಖಮಯ ಜೀವನದ ಮೊದಲ ಸೂತ್ರ ಎಂದು ಹೇಳಿದರು. ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇದೊಂದು ಪುಣ್ಯದ ಕಾರ್ಯವಾಗಿದ್ದರಿಂದ ಮಂಗಳಕಾರ್ಯ, ಶುಭವಿವಾಹವೆಂದು ಸಂಭೋಧಿಸುತ್ತಾರೆ. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮುದ್ರಾಡಿಯ ನಾಟ್ಕದೂರು ನಮ ತುಳುವೆರ್ ಕಲಾ ಸಂಘಟನೆಯು ಸಿಜಿಕೆ ಬೀದಿರಂಗ ದಿನದ ನೆನಪಿನಲ್ಲಿ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಸ್ಥಳೀಯ ನಟ, ನಿರ್ದೇಶಕ ಯೋಗೀಶ ಬಂಕೇಶ್ವರ ಅವರಿಗೆ ಪುರಸ್ಕಾರ ಪ್ರದಾನ ಕಾರ್ಯಕ್ರಮ ಜರುಗಿತು. ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಿದ ಹಿರಿಯ ರಂಗನಿರ್ದೇಶಕ ಗುರುರಾಜ ಮಾರ್ಪಳ್ಳಿ ಮಾತನಾಡಿ ರಂಗಭೂಮಿಯು ಎಲ್ಲ ಕಲೆಗಳ ತವರು. ಅದರಲ್ಲೂ ನವ್ಯ ರಂಗಭೂಮಿ ಹೊಸರೀತಿಯ ಚಿಂತನೆಗೆ, ಸೃಜನಶೀಲ ಕ್ರಿಯೆಗೆ ಸೂಕ್ತ ವೇದಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ರಂಗಭೂಮಿಗೆ ಸಾಕಷ್ಟು ಬೇಡಿಕೆಯಿದ್ದು, ಇದು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ ಎಂದು ಹೇಳಿದರು. ರಂಗಭೂಮಿ ಮನುಷ್ಯ ಜೀವನದ ಅರ್ಥ, ಗುರಿ ಏನು ಎನ್ನುವುದನ್ನು ಶೋಧಿಸಿ, ಪ್ರಚುರಪಡಿಸುವ ಕೆಲಸ ಮಾಡುತ್ತದೆ. ಅದರಲ್ಲಿ ತೊಡಗಲು ಮನಸ್ಸು ಇರುವವರಿಗೆಲ್ಲ ಇಂದು ವಿಪುಲ ಅವಕಾಶಗಳಿವೆ. ಆಸಕ್ತ ವಿದ್ಯಾರ್ಥಿಗಳು ಅದರತ್ತ ಗಮನ ಹರಿಸಬೇಕು ಎಂದ ಅವರು ಯೋಗೀಶ ಬಂಕೇಶ್ವರ ಒಬ್ಬ ಪ್ರತಿಭಾವಂತ ಮತ್ತು ಕ್ರಿಯಾಶೀಲ ರಂಗಕರ್ಮಿ ಆಗಿರುವುದರಿಂದ ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ವೇದಮೂರ್ತಿ ಕಟ್ಟೆ ಶಂಕರ ಭಟ್ ಹಾಗೂ ಕುಲ ಪುರೋಹಿತ ಸುಬ್ರಹ್ಮಣ್ಯ ಭಟ್ ಬಾಡ ಇವರ ನೇತೃತ್ವದಲ್ಲಿ ನಡೆಯಿತು. ಭಾಗೀರಥಿ ಮತ್ತು ಹೆಚ್.ಆರ್.ಶಶಿಧರ್ ನಾಯ್ಕ್ ಚನ್ನಗಿರಿ ಹಾಗೂ ಮೀನಾಕ್ಷಿ ಮತ್ತು ಕೊರಗ ಹೋಬಳಿದಾರ್ ಅವರ ಪರವಾಗಿ ನಿರ್ಮಲ ನಾಗರಾಜ ಹೋಬಳಿದಾರ್ ಮತ್ತು ಮಕ್ಕಳು ಪಡುವರಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಸೇವಾಕರ್ತರಾಗಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಬಂದರು ಪ್ರದೇಶದ ಸಮೀಪ ನಿರ್ಮಿಸಲಾಗಿರುವ ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರ ನಿರ್ಮಾಣ ಕಾಮಗಾರಿಯ ತನಿಖೆ ಮತ್ತು ಅವ್ಯವಹಾರದ ತನಿಖೆ ನಡೆಸುವಂತೆ ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಬುಧವಾರ ಮನವಿ ಸಲ್ಲಿಸಿದೆ. ಗಂಗೊಳ್ಳಿಯಲ್ಲಿ ಘನ ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಕಾರ್ಯಕ್ರಮ ನಡೆಸಲು ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದ ಸಮೀಪದಲ್ಲಿ ರೋಟರಿ ಸಂಸ್ಥೆಯವರು ನಿರ್ಮಿಸಿದ ಶೌಚಾಲಯ ಪ್ರದೇಶದಲ್ಲಿ ಸುಮಾರು 7.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಘನ ದ್ರವ ತ್ಯಾಜ್ಯ ವಿಂಗಡಣ ಕೇಂದ್ರ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿ ಕೂಡ ಕಳಪೆಯಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎಸ್.ಚಿಕ್ಕಯ್ಯ ಪೂಜಾರಿ ಅವರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಅವರಿಗೆ ಗ್ರಾಮ ಪಂಚಾಯತ್ ಕಛೇರಿಯಲ್ಲಿ  ಮನವಿ ಸಲ್ಲಿಸಿದ್ದಾರೆ. ಶೌಚಾಲಯದ ಪ್ರಥಮ ಅಂತಸ್ತಿನಲ್ಲಿರುವ ಸ್ನಾನಗೃಹದ ಎಲ್ಲಾ ಜೋಡಣೆಗಳನ್ನು ತೆಗೆದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಹಳೆ ವಿದ್ಯಾರ್ಥಿ ಶಿಕ್ಷಣ ಪ್ರೇಮಿ ಬಳಗ ಮೇಲ್‌ಗಂಗೊಳ್ಳಿ ಇವರ ವತಿಯಿಂದ ದಾನಿಗಳ ಮತ್ತು ಸಂಸ್ಥೆಗಳ ನೆರವಿನಿಂದ ಮೇಲ್‌ಗಂಗೊಳ್ಳಿ ಅಂಗನವಾಡಿ ಕೇಂದ್ರಕ್ಕೆ ನೀಡಲಾದ ಕೊಡುಗೆ ಹಸ್ತಾಂತರ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕರ್ಣಾಟಕ ಬ್ಯಾಂಕಿನ ಹೊನ್ನಾವರ ಶಾಖೆಯ ಪ್ರಬಂಧಕ ಮಹಾಬಲ ಕೆ. ಮಾತನಾಡಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಸಂಘ ಸಂಸ್ಥೆಗಳ, ದಾನಿಗಳ ಸಹಕಾರ ಅಗತ್ಯ. ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಿಗೆ ನೀಡುವ ಕೊಡುಗೆಗಳು ಮಹತ್ವವೆನಿಸುತ್ತದೆ. ಶಿಕ್ಷಣಕ್ಕೆ ದಾನ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಎಳವೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಕ್ಲಸ್ಟರ್‌ನ ಸಿಆರ್‌ಪಿ ತಿಲೋತ್ತಮ ನಾಯಕ್, ನಿವೃತ್ತ ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು, ಶಾಲೆಯ ಮುಖ್ಯಶಿಕ್ಷಕ ರಮೇಶ ಮಹಾಲೆ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಪ್ರಭಾವತಿ ಶೆಡ್ತಿ, ಸಹಶಿಕ್ಷಕಿ ಲಲಿತಾ ಶುಭ ಹಾರೈಸಿದರು. ನಾಗರಾಜ ಜಿ.ಎಂ., ಗಂಗೊಳ್ಳಿ ಫ್ರೆಂಡ್ಸ್…

Read More