ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಉಪ್ಪುಂದ ಇದರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ಆ.30ರಂದು ಸಂಘದ ಆಡಳಿತ ಕಛೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ಸಹಕಾರಿ ಧುರೀಣ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಹಾಗೂ ಟಿಎಪಿಸಿಎಮ್ಎಸ್ ಸಂಸ್ಥೆಯ ನಿರ್ದೇಶಕರಾದ ಮೋಹನ್ ಪೂಜಾರಿ ಉಪ್ಪುಂದ ಹಾಗೂ ಉಪಾಧ್ಯಕ್ಷರಾಗಿ ಯುವ ಉದ್ಯಮಿ ತಿಮ್ಮಪ್ಪ ಪೂಜಾರಿ ಯಡ್ತರೆ ಇವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆ ವೇಳೆ ನೂತನ ನಿರ್ದೇಶಕರುಗಳಾದ ಸಂಘದ ಸ್ಥಾಪಕಾಧ್ಯಕ್ಷ ಹೆಚ್. ನರಸಿಂಹ ಪೂಜಾರಿ, ಬಿ. ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಸಂತೋಷ್, ಸುರೇಶ್ ಪೂಜಾರಿ, ಶೇಷು ಪೂಜಾರಿ ಹಳಗೇರಿ, ಲಕ್ಷ್ಮೀ, ಶಾರದಾ ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕ ಮಹೇಶ್ ಹೆಚ್. ಉಪಸ್ಥಿತರಿದ್ದರು. ಸಹಕಾರಿ ಸಂಘಗಳ ಹಿರಿಯ ನಿರೀಕ್ಷಕ ಸುನಿಲ್ ಕುಮಾರ್ ಸಿ.ಎಮ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. mohan poojari uppunda as new president and Timmappa Poojari…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ನ ಪ್ರಧಾನ ಕಛೇರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ಅಧ್ಯಕ್ಷ ಬಿ. ಹೆಚ್. ಕೃಷ್ಣಾರೆಡ್ಡಿ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಸ್ಥೆಗಳು ಆರ್ಥಿಕ ವ್ಯವಹಾರವನ್ನು ಯಶಸ್ವಿಯಾಗಿ ನಡೆಸುತ್ತಿದ್ದು ಸಮಾಜದ ಆರ್ಥಿಕ ವ್ಯವಸ್ಥೆ ಬಲಗೊಳಿಸಲು ತನ್ನದೇ ಆದ ಕೊಡುಗೆ ನೀಡುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ನ ಅಧ್ಯಕ್ಷ ಎಸ್. ರಾಜು ಪೂಜಾರಿ ಅವರು ಬಿ. ಹೆಚ್. ಕೃಷ್ಣಾರೆಡ್ಡಿಯವರನ್ನು ಗೌರವಿಸಿದರು. ಈ ಸಂದರ್ಭ ಸೌಹಾರ್ದ ಸಹಕಾರಿಗಳ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್, ಜಿಲ್ಲಾ ಒಕ್ಕೂಟದ ಮುಖ್ಯಾಧಿಕಾರಿ ಭುವನೇಶ್, ಸಂಘದ ನಿರ್ದೇಶಕ ಶಿವರಾಮ ಪೂಜಾರಿ ಹಾಗೂ ಸಿಬ್ಬಂಧಿ ಮಣಿಕಂಠ ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರ ಸ್ಥಳೀಯ ಸಂಸ್ಥೆ ಚುನಾವಣೆ-2018ಕ್ಕೆ ಸಂಬಂದಪಟ್ಟಂತೆ ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಕುಂದಾಪುರ ಪುರಸಭೆಯಲ್ಲಿ 68% ಮತದಾನವಾಗಿದೆ. ಫೆರಿ ರಸ್ತೆ ವಾರ್ಡ್ 71.74, ಮದ್ದುಗುಡ್ಡೆ ವಾರ್ಡ್ 80.56, ಈಸ್ಟ್ ಬ್ಲಾಕ್ ವಾರ್ಡ್ 74.79, ಖಾರ್ವಿಕೇರಿ ವಾರ್ಡ್ 82.37, ಬಹದ್ದೂರ್ ಶಾ ವಾರ್ಡ್ 74.11, ಚಿಕ್ಕನಸಾಲು ಎಡಬದಿ ವಾರ್ಡ್ 73.09, ಮೀನು ಮಾರ್ಕೆಟ್ ವಾರ್ಡ್ 73.04, ಚಿಕ್ಕನಸಾಲು ಬಲಬದಿ ವಾರ್ಡ್ 76.33, ಸರಕಾರಿ ಆಸ್ಪತ್ರೆ ವಾರ್ಡ್ 70.81, ಚರ್ಚ್ ರೋಡ್ ವಾರ್ಡ್ 67.35, ಸೆಂಟ್ರಲ್ ವಾರ್ಡ್ 73.72, ವೆಸ್ಟ್ ಬ್ಲಾಕ್ ವಾರ್ಡ್ 71.26, ಮಂಗಳೂರು ಟೈಲ್ಸ್ ವಾರ್ಡ್ 76.03, ಕೋಡಿ ದಕ್ಷಿಣ ವಾರ್ಡ್ 73.73, ಕೋಡಿ ಮಧ್ಯ ವಾರ್ಡ್ 69.70, ಕೋಡಿ ಉತ್ತರ ವಾರ್ಡ್ 77.90, ಟಿ.ಟಿ.ರೋಡ್ ವಾರ್ಡ್ 77.85, ನಾನಾ ಸಾಹೇಬ್ ವಾರ್ಡ್ 68.73, ಜೆ.ಎಲ್.ಬಿ ವಾರ್ಡ್ 66.18, ಕುಂದೇಶ್ವರ ವಾರ್ಡ್ 71.02, ಹುಂಚಾರ ಬೆಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಬೈಂದೂರು 2017-18ನೇ ಸಾಲಿನಲ್ಲಿ 141.17 ಕೋಟಿಯಷ್ಟು ವ್ಯವಹಾರ ನಡೆಸಿ 75.01 ಲಕ್ಷ ರೂ. ಲಾಭಗಳಿಸಿದ್ದು, ಸಂಸ್ಥೆಯ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಶುಕ್ರವಾರ ಬೈಂದೂರಿನ ಪ್ರಧಾನ ಕಛೇರಿಯಲ್ಲಿ ಜರುಗಿದ 16ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 63.23 ಕೊಟಿ ರೂ. ಠೇವಣಿ ಸಂಗ್ರಹಿಸಿ, 25.24 ಕೋಟಿ ರೂ. ಸಾಲ ನೀಡಿ ಒಟ್ಟು 141.17 ಕೋಟಿ ರೂ. ವಹಿವಾಟು ನಡೆಸಿದೆ ಎಂದ ಅವರು ಪ್ರಧಾನ ಕಛೇರಿ ಹಾಗೂ ಐದು ಶಾಖೆಗಳನ್ನು ಹೊಂದಿ ಉತ್ತಮ ವ್ಯವಹಾರ ನಡೆಸುತ್ತಿದೆ. ಪ್ರತಿವರ್ಷ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಕೆ. ಶಂಕರ ಪೂಜಾರಿ, ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲ್ಲೂಕು ರಚನೆಯ ಹಿನ್ನೆಲೆಯಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದ ಕಾರ್ಯನಿರತ ಪತ್ರಕರ್ತರ ಸಂಘವನ್ನು ರೋಟರಿ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪತ್ರಕರ್ತರು ತಮ್ಮ ವ್ಯಾಪ್ತಿಯ ಕುಂದು ಕೊರತೆಗಳ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ವರದಿಗಳ ಮೂಲಕ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಪ್ರಜಾತಂತ್ರದ ನಾಲ್ಕನೆಯ ಸ್ತಂಭ ಎಂದು ಪರಿಗಣಿಸಲಾಗುವ ಮಾಧ್ಯಮಗಳು ಅವುಗಳಿಗೆ ಸಂಬಂಧಿಸಿದ ವಿಶ್ವಮಾನ್ಯ ಧರ್ಮಕ್ಕೆ ಬದ್ಧವಾಗಿ ಕೆಲಸ ಮಾಡಿದರೆ ಉಳಿದ ಮೂರು ಸ್ತಂಭಗಳಿಗಿಂತ ಹೆಚ್ಚು ಶಕ್ತಿಯುತವೂ, ಪರಿಣಾಮಕಾರಿಯೂ ಆಗುತ್ತವೆ. ಇಂದು ಪತ್ರಿಕೆಗಳ್ನು ಓದುವವರ ಮತ್ತು ಅನ್ಯ ಸಮೂಹ ಮಾಧ್ಯಮಗಳನ್ನು ಅವಲಂಬಿಸುವವರ ಸಂಖ್ಯೆ ಅಗಾಧವಾಗಿ ಹೆಚ್ಚಿದೆ. ಅವರು ಅವುಗಳಿಂದ ನಿಷ್ಪಕ್ಷಪಾತ ನಿರ್ವಹಣೆಯನ್ನು ಅಪೇಕ್ಷಿಸುತ್ತಾರೆ ಎಂದು ಅವರು ನುಡಿದರು. ಅತಿಥಿಯಾಗಿದ್ದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಂಘ ರಚಿಸಿಕೊಂಡು ಸುಸಂಘಟಿತರಾಗಿರುವ ತಾಲ್ಲೂಕಿನ ಪತ್ರಕರ್ತರು ತಾಲ್ಲೂಕಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕನ್ನಡದ ಪ್ರಸಿದ್ಧ ಶೋ ಮಜಾ ವೀಕೆಂಡ್ನಲ್ಲಿ ಕುಂದಾಪುರದ ಮೂರು ಮುತ್ತು ಖ್ಯಾತಿಯ ರೂಪಕಲಾ ತಂಡದ ಭಾಗವಹಿಸಿದ್ದು ಕಾರ್ಯಕ್ರಮವು ಸೆ.1ರ ಶನಿವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ಕುಂದಾಪುರದ ಫೇವರಿಟ್ ನಾಟಕ ತಂಡದ ಮೂವರು ಕಲಾವಿದರು ಭಾಗವಹಿಸಿರುವುದನ್ನು ನೋಡಲು ಕುತೂಹಲಿಗರಾಗಿದ್ದಾರೆ. ರೂಪಕಲಾ ತಂಡದ ಸತೀಶ್ ಪೈ, ಸಂತೋಷ್ ಪೈ, ಅಶೋಕ್ ಹಾಗೂ ಟೀವ್ ಶೋನಲ್ಲಿ ಭಾಗವಹಿಸಿದ್ದು ಕಾಮಿಡಿ ಕಿಂಗ್ ಸೃಜನ್ ಲೋಕೇಶ್ ಅವರೊಂದಿಗೆ ರೂಪಕಲಾ ತಂಡ ಹೇಗೆ ತರ್ಲೆ ಮಾಡಿದ ಅಂತ ನೋಡಿ ಎಂಜಾಯ್ ಮಾಡಬಹುದು. ಇದನ್ನೂ ಓದಿ: * ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ನಲ್ಲಿ ಕುಂದಾಪುರದ ಮೂರು ಮುತ್ತುಗಳು! – http://kundapraa.com/?p=10686 * ರೂಪಕಲಾ ಕುಂದಾಪುರ – ಕಲಾಪ್ರಿಯರಿಗೆ ಹಾಸ್ಯದ ರಸದೌತಣ ಬಡಿಸಿದ ನಾಟಕ ಸಂಸ್ಥೆ – http://kundapraa.com/?p=2225
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅ.31ರಿಂದ ಸೆ.2ರ ತನಕ ಅಮೇರಿಕಾದ ಟೆಕ್ಸಾನ್ ರಾಜ್ಯದ ಡಲ್ಲಾಸ್ ನಗರದಲ್ಲಿ ನಡೆಯುತ್ತಿರುವ ಅಮೇರಿಕಾ ಕನ್ನಡ ಒಕ್ಕೂಟಗಳ ಆಗರ ‘ಅಕ್ಕ’ ಸಮ್ಮೇಳನದಲ್ಲಿ ಕುಂದಾಪುರದ ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಿಸಿ, ನಿಖಿಲ್ ಮಂಜೂ ನಿರ್ದೇಶಿಸಿರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ‘ರಿಸರ್ವೇಶನ್’ ಪ್ರದರ್ಶನ ಕಾಣಲಿದೆ. ಕುಂದಾಪ್ರ ಕನ್ನಡ ಭಾಷೆಯಲ್ಲಿ ನಿರ್ಮಾಣಗೊಂಡ ರಿಸರ್ವೇಶನ್ ಚಿತ್ರ ಈಗಾಗಲೇ ಅಮೇರಿಕಾದ ಮೆಲ್ಬೋರ್ನ್, ರಷ್ಯಾದ ಕಝಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ, ಭಾರತದ ಕೋಲ್ಕತ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಗೊಂಡು ಪ್ರದರ್ಶನ ಕಂಡಿದ್ದು, ಲಂಡನ್ ಬ್ರಿಸ್ಟೆಲ್ ಕನ್ನಡಿಗರಿಗಾಗಿ ವಿಶೇಷ ಪ್ರದರ್ಶನವನ್ನೂ ಕಂಡಿದೆ. ಹಲವು ಸಂಸ್ಥೆಗಳ ಗೌರವ ಮನ್ನಣೆಗೆ ಪಾತ್ರವಾಗಿರುವ ಚಿತ್ರ ಅಕ್ಕಾ ಸಮ್ಮೇಳನದಲ್ಲಿ ಪ್ರದರ್ಶನಗೊಂಡು ಬಳಿಕ ಸಂವಾದವೂ ನಡೆಯಲಿದೆ. ಬಹುಮುಖ ಪ್ರತಿಭೆಯಾದ ಯಾಕೂಬ್ ಖಾದರ್ ಗುಲ್ವಾಡಿ ಅವರು ಹತ್ತಾರು ದೇಶ ಸುತ್ತಿ, ಪುಸ್ತಕ ಬರೆದು, ಕಲೆ ಸಾಹಿತ್ಯ ಸಾಂಸ್ಕೃತಿಕ ರಂಗದಲ್ಲಿಯೂ ತೊಡಗಿಸಿಕೊಂಡು, ಸಿನೆಮಾ ನಿರ್ಮಾಣದಲ್ಲಿ ತನ್ನ ಛಾಪು ಮೂಡಿಸಿದವರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೂತನವಾಗಿ ಅಸ್ತಿತ್ವಕ್ಕೆ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವನ್ನು ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಉದ್ಘಾಟನೆಗೊಳಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶಪ್ರಸಾದ್ ಪಾಂಡೇಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅತಿಥಿಗಳಾಗಿದ್ದರು. ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ನರಸಿಂಹ ಬಿ. ನಾಯಕ್ ಸ್ವಾಗತಿಸಿದರು. ಸದಸ್ಯ ಸುನಿಲ್ ಹೆಚ್. ಜಿ ಬೈಂದೂರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಸೆನೆಟರ್ ಅರ್ಪಿತ್ ಹಾಥಿಯವರು ಜೆಸಿಐ ಶಿರೂರು ಗ್ರಾಮೀಣ ಘಟಕಕ್ಕೆ ಭೇಟಿ ನೀಡಿ, ಅಳ್ವೆಗದ್ದೆ ಕಡಲ ಕಿನಾರೆಗೆ ಹೋಗುವ ದಾರಿ ಸೂಚನಾ ಫಲಕವನ್ನು ಅನಾವರಣ ಗೊಳಿಸಿದರು ಹಾಗೂ ಜೆಸಿಐ ಶಿರೂರು ಸದಸ್ಯರು ಕೊಡಗು ಸಂತ್ರಸ್ತರಿಗೆ ಕೊಡಮಾಡಿದ ಹಲವು ಪರಿಕರಗಳನ್ನು ಹಸ್ತಾಂತರಿಸಿ, ಶಿರೂರು ಘಟಕವು ಅತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರಶಂಸನಾರ್ಹವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಜರುಗಿ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ದಾರಿ ಸೂಚನಾ ಫಲಕದ ಪ್ರಯೋಜಕರಾದ ಮೋಹನ ರೇವಣ್ಕರ್ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ರಾಕೇಶ ಕುಂಜೂರು, ಜೆಸಿಐ ಶಿರೂರು ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಚಂದ್ರಶೇಖರ್ ನಾಯರ್ ,ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಮೋಹನ ರೇವಣ್ಕರ್, ಅರುಣ್ ಕುಮಾರ, ಪ್ರಕಾಶ ಮಾಕೋಡಿ, ಗಿರೀಶ ಮೇಸ್ತ, ಹರೀಶ ಶೇಟ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ ಟಿ, ನಾರಾಯಣ ಅಳ್ವೆಗದ್ದೆ, ಮಹಾದೇವ ಅಳ್ವೆಗದ್ದೆ ವಲಯಾಧಿಕಾರಿಗಳು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸುರಭಿ ಕಲಾ ಸಂಸ್ಥೆಯ ರಂಗಸುರಭಿಯ 3 ದಿನಗಳ ರಂಗತರಬೇತಿ ಶಿಬಿರಕ್ಕೆ ತೈವಾನ್ ದೇಶದ ನಿವೃತ್ತ ಅಧ್ಯಾಪಕ ಹಾಗೂ ಕಲಾವಿದ ಆದ ಚಿನ್ಲಂಗ್ ಮತ್ತು ಪಿಯಿಯಾ ಸೌಹಾರ್ದಯುತ ಭೇಟಿ ನೀಡಿದರು. ಕೆಲ ಹೊತ್ತು ರಂಗಕಲೆಯನ್ನು ವೀಕ್ಷಿಸಿ ಭಾರತದ ರಂಗಭೂಮಿ ಮತ್ತು ನಾಟಕದ ಬಗ್ಗೆ ಚರ್ಚಿಸಿದರು. ಅಲ್ಲದೆ ಅವರೂ ಮುಟ್ಟಾಳೆಗಳನ್ನು ಧರಿಸಿ ವಾದ್ಯದತಾಳಕ್ಕೆ ಲಯಬದ್ಧವಾಗಿ ನರ್ತಿಸಿ ಸುರಭಿ ತಂಡಕ್ಕೆ ಶುಭ ಹಾರೈಸುತ್ತಾ ತೈವಾನ್ ದೇಶಕ್ಕೆ ಸುರಭಿಯ ಕಲಾವಿದರಿಗೆ ಆಹ್ವಾನಿಸುವುದಾಗಿ ಭರವಸೆ ನೀಡಿದರು. ಸುರಭಿಯ ವ್ಯವಸ್ಥಾಪಕ ಕೃಷ್ಣಮೂರ್ತಿಉಡುಪ ಸ್ವಾಗತಿಸಿದರು. ಕಲಾವಿದೆ ಕೀರ್ತಿ ಭಟ್ ಮಾಲಾರ್ಪಣೆ ಮಾಡಿದರು. ಕಾರ್ಯದರ್ಶಿ ವೈ. ಲಕ್ಷ್ಮಣ್ ಕೊರಗ ವಂದಿಸಿದರು. ನಿರ್ದೇಶಕ ಗಣೇಶ್ ಮುಂಡಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸುಧಾಕರ್ ಪಿ. ಬೈಂದೂರು ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಸತ್ಯನಾಕೋಡೇರಿ ಕೊಳಲು ನುಡಿಸಿ ಯೋಗೇಶ್ ಬಂಕೇಶ್ವರ ಕಂಜರ, ಲಕ್ಷ್ಮಣ್ ಕೊರಗ ಡೋಲಕ್ ಹಾಗೂ ಗಣೇಶ್ ಮುಂಡಾಡಿ ಡ್ರಮ್ಸ್ ನುಡಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸುರಭಿ…
