ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಡೇರ ಹೋಬಳಿ ಪಿಂಕ್ ಮತಗಘಟ್ಟೆಯಲ್ಲಿ ಪ್ರಥಮ ಬಾರಿ ಮತ ಚಲಾಯಿಸಿದ ಕುಂದಾಪುರ ಫಿಲೋನಾ ವಾಝ್, ಸುಶ್ಮಾ ಬೆರೆಟ್ಟೊ ಹಾಗೂ ರೆಬೆರೋ ವಾಝ್ ಪ್ರಥಮ ಮತದಾನದ ನಂತರ ಪಿಂಕ್ ಮತಕೇಂದ್ರ ಸೆಲ್ಫಿ ಪಾಯಿಂಟ್‌ನಲ್ಲಿ ನಿಂತು ವಿಜಯದ ಸಂಕೇತ ಸಿಂಬಲ್ ತೋರಿಸುವ ಮೂಲಕ ಸೆಲ್ಪಿತೆಗೆದುಕೊಂಡು ಸಂಭ್ರಮಿಸಿದರು. ನಾವು ಮತದಾನ ಮಾಡಿದ್ದೇವೆ. ಎಲ್ಲರೂ ಮತದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸ ಮಾಡಬೇಕು. ದೇಶಕ್ಕಾಗಿ ನಮಗೆ ಬೇರೇನನ್ನೂ ಮಾಡಲಾಗದಿದ್ದರೂ ಮತದಾನದ ಮೂಲಕವಾದರೂ ಕಿಂಚಿತ್ ಋಣ ತೀರಿಸಲು ಸಾಧ್ಯ. ದೇಶದ ಅಭಿವೃದ್ಧಿಗೆ ನಾವು ಮೊದಲ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ ಎಂಬ ಹೆಮ್ಮೆ ನಮ್ಮದು. ನಾವು ಇನ್ನು ಮುಂದೆ ಯಾವತ್ತೂ ಮತದಾನದಿಂದ ದೂರ ಉಳಿಯೋದಿಲ್ಲ. ಎಲ್ಲರೂ ಮತದಾನ ಮಾಡುವ ಮೂಲಕ ಸದೃಢ, ಸಂಭೃದ್ಧ ದೇಶ ಕೊಟ್ಟೋಣ ಎಂದು ಮೂವರು ಸ್ನೇಹಿತೆಯರು ತಿಳಿಸಿದ್ದಾರೆ. ಈ ದಿನಕ್ಕಾಗಿ ಕಾದಿದ್ದೆ: ಎಲ್ಲರೂ ಮತದಾನ ಮಾಡುತ್ತಿರುವಾಗ ನಾನು ಮತದಾನ ಮಾಡಬೇಕು ಎನ್ನುವ ಉತ್ಕಟ ಆಸೆ ಪುಟಿದೇಳುತ್ತಿತ್ತು.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಾಲಾಡಿಯಲ್ಲಿ ಮತದಾನ ಮಾಡಿದರು.
ಎ.ಎಸ್.ಎನ್ ಹೆಬ್ಬಾರ್ | ಕುಂದಾಪ್ರ ಡಾಟ್ ಕಾಂ ಅಂಕಣ ಭಾರತದ ಸದನಗಳು ಹಕ್ಕುಬಾಧ್ಯತೆ ಎಂತ ಪ್ರತಿಪಾದಿಸುತ್ತಿರುವುದರ ಮೂಲ ಇಂಗ್ಲಂಡಿನ ಹೌಸ್ ಆಫ್ ಕಾಮನ್ಸ್‌ನ ಸದಸ್ಯರ ಹಕ್ಕುಗಳನ್ನು ಕಂಡು. ಇಂಗ್ಲಂಡಿನ ಸದಸ್ಯರಿಗೆ ಇಷ್ಟೆಲ್ಲ ಹಕ್ಕುಬಾಧ್ಯತೆಗಳಿರುವಾಗ ನಮಗೇಕಿರಬಾರದು ಎನ್ನುವುದು ಒಂದು ವಾದ. ಈ ಹಕ್ಕುಬಾಧ್ಯತೆ ಎಷ್ಟು ಸೂಕ್ಷ್ಮ ಸಂಗತಿ ಎಂದರೆ ಕೆಲವೊಮ್ಮೆ ಅದರ ಶಕ್ತಿ ಭಸ್ಮಾಸುರನಂತೆಯೂ ಇರಬಲ್ಲುದು. ಜೈಲಿನಲ್ಲಿ ಅಶ್ಲೀಲ ಸಾಹಿತ್ಯ 1839ರಲ್ಲಿ ಹನ್ಸಾರ್ಡ್ ಎಂಬಾತ ಇಂಗ್ಲಂಡಿನ ಹೌಸ್ ಆಫ್ ಕಾಮನ್ಸ್‌ನ ಆದೇಶದಂತೆ ಜೈಲುಗಳ ಪರಿವೀಕ್ಷಣೆ (ಇನ್ಸ್‌ಪೆಕ್ಷನ್) ಮಾಡಿ ತನ್ನ ವರದಿ ಸಲ್ಲಿಸಿದ. ಇಲ್ಲಿಗೆ ನಿಂತಿದ್ದರೆ ಏನೂ ಆಗುತ್ತಿರಲಿಲ್ಲ. ಆತ ಅದನ್ನು ಸಾರ್ವಜನಿಕವಾಗಿ ಮುದ್ರಿಸಿ, ಮಾರಿದ. ಈ ವರದಿಯಲ್ಲಿ ಆತ ಬರೆದಿದ್ದ ಒಂದು ಸಂಗತಿ ಸ್ಟಾಕ್ ಡೇಲ್ ಎಂಬ ಪ್ರಕಾಶಕರ ಕೆಂಗಣ್ಣಿಗೆ ಗುರಿಯಾಯಿತು. ವರದಿಯಲ್ಲಿ ಹನ್ಸಾರ್ಡ್, ನ್ಯೂಗೇಟ್ ಎಂಬ ಜೈಲಿನಲ್ಲಿ ಈ ಸ್ಟಾಕ್ ಡೇಲ್ ಪ್ರಕಟಿಸಿದ ಒಂದು ಅಶ್ಲೀಲ ಪುಸ್ತಕ ಸ್ವಚ್ಛಂದವಾಗಿ ಸುತ್ತಾಡುತ್ತಿತ್ತು ಎಂದು ಬರೆದಿದ್ದ. ಸ್ಟಾಕ್ ಡೇಲ್‌ಗೆ ಇದು ಮಾನಹಾನಿಕರ ಎನ್ನಿಸಿತು. ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಅವರು ಅಂಕದಕಟ್ಟೆ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಅವರು ಬೆಳಿಗ್ಗೆ ಮತ ಚಲಾಯಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಕನ್ಯಾನ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಚ್ 12ರಂದು ನಡೆಯಲಿರುವ ಚುನಾವಣೆಗೆ ಸಿದ್ಧರಾಗಿರುವ ಅಧಿಕಾರಿಗಳು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಸ್ಟರಿಂಗ್ ಬಳಿಕ ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿದರು. ಕುಂದಾಪುರ ಚುನಾವಣೆ ಅಧಿಕಾರಿ ಟಿ. ಭೂಬಾಲನ್ ನೇತೃತ್ದಲ್ಲಿ ಕುಂದಾಪುರ ಕ್ಷೇತ್ರದ ಮಸ್ಟರಿಂಗ್ ಆರ್.ಎನ್.ಶೆಟ್ಟಿ ಹಾಲ್ನಲ್ಲಿ ನಡೆದರೆ, ಬೈಂದೂರು ಚುನಾವಣೆ ಅಧಿಕಾರಿ ಶ್ರೀನಿವಾಸ ಅವರ ನೇತೃತ್ವದಲ್ಲಿ ಬೈಂದೂರು ಕ್ಷೇತ್ರದ ಮಸ್ಟರಿಂಗ್ ಕಾಲೇಜಿನ ಮಹಡಿ ಹಾಲ್ನಲ್ಲಿ ನಡೆಯಿತು. ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಯಂತ್ರ ಸಹಿತ ಮತಕೇಂದ್ರಕ್ಕೆ ತೆರಳಿದರು. ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಂದಾಪುರ ಡಿವೈಎಸ್ಪಿ ಬಿ. ಪಿ ದಿನೇಶ್ ಕುಮಾರ್ ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಮಂಜಪ್ಪ, ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯಕ್ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗೆಲ್ಲುವ ಅಭ್ಯರ್ಥಿಗಳ ಗೆಲುವಿನ ಅಂತರ ಕೂಡ ಮತದಾನದ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುತ್ತದೆ. ರಾಜಕೀಯ ಪಕ್ಷಗಳು ಈ ಅಂಕಿ-ಅಂಶಗಳ ಆಧಾರದಲ್ಲಿ ತಮ್ಮ ವ್ಯೂಹ ರೂಪಿಸುತ್ತವೆ. ಗೆಲುವಿನ ಅಂತರದ ಮತ ಗಳಿಕೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಏರಿಳಿಕೆ ಹೆಚ್ಚು ಕಂಡುಬಂದರೆ ಕುಂದಾಪುರ ಕ್ಷೇತ್ರದಲ್ಲಿ ಏರಿಕೆ ಹೆಚ್ಚು ಇಳಿಕೆ ಕಡಿಮೆಯಾಗಿದೆ. ಕುಂದಾಪುರ 1983ರಲ್ಲಿ ಒಟ್ಟು 60,044 ಮತಗಳು ಚಲಾವಣೆ ಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ 32,469, ಜನತಾ ಪಕ್ಷದ ಮಾಣಿಗೋಪಾಲ್ 25,197 ಮತಗಳನ್ನು ಪಡೆದರು. ಗೆಲುವಿನ ಅಂತರ 7,272 ಮತಗಳಾಗಿದ್ದವು. 1985ರಲ್ಲಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ ಅವರಿಗೆ 38,296, ಜನತಾ ಪಕ್ಷದ ಅಪ್ಪಣ್ಣ ಹೆಗ್ಡೆ ಅವರಿಗೆ 29,638 ಮತಗಳು ಸಿಕ್ಕಿ, 8,658 ಅಂತರ ಇತ್ತು. 1989ರಲ್ಲಿ ಒಟ್ಟು 83,354 ಮತಗಳು ಚಲಾವಣೆಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟರಿಗೆ 46,641, ಜನತಾ ದಳದ ಕೆ.ಎನ್. ಗೋವರ್ಧನರಿಗೆ 27,540 ಮತಗಳಾಗಿ 19,101 ಮತಗಳ ಅಂತರವಾಯಿತು. 1994ರಲ್ಲಿ ಒಟ್ಟು 92,235 ಮತ ಚಲಾವಣೆಯಾಗಿ ಕಾಂಗ್ರೆಸ್‌ನ ಪ್ರತಾಪಚಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗೋವಾ : ಮೇ 27ರಂದು ಗೋವಾದ ಬಿಚೋಲಿಯಂನ ಹೀರಾಬಾಯಿ ಸಭಾಂಗಣದಲ್ಲಿ ಜರುಗಲಿರುವ ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನಕ್ಕೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ರವೀಂದ್ರ ತೋಟಿಗೇರ ಮತ್ತು ಪೂನಮ್ ರವೀಂದ್ರ ತೋಟಿಗೇರ ದಂಪತಿಗಳನ್ನು ಬೆಳಗಾವಿಯ ಅವರ ಸ್ವಗೃಹದಲ್ಲಿ ಅಧೀಕೃತವಾಗಿ ಆಹ್ವಾನಿಸಲಾಯಿತು. ಈ ಕುರಿತು ಮಾತನಾಡಿದ ಮಹೇಶಬಾಬು ಸುರ್ವೆಯವರು ಕಳೆದ ಒಂದು ದಶಕದಿಂದಲೂ ಗೋವಾದಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಮತ್ತು ಕನ್ನಡಿಗರ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ದಶಮಾನೋತ್ಸವದ ಕಾರ‍್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಮಾಡುವದಾಗಿ ತಿಳಿಸಿದರು. ಅಧೀಕೃತ ಆಹ್ವಾನ ಹಾಗೂ ಗೌರವವನ್ನು ಸ್ವೀಕರಿಸಿದ ಕನ್ನಡ ನುಡಿ ಸೇವಕ ಶ್ರೀಯುತ ರವೀಂದ್ರ ತೋಟಿಗೇರರವರು ಮಾತನಾಡಿ ಕನ್ನಡ ಭಾಷೆ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜೊತೆಗೆ ಕನ್ನಡ ನಾಡು-ನುಡಿ-ಗಡಿಯ ಸೇವಕರಾಗಿಯೂ ಸಹ ಮುಂಬರುವ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವದಾಗಿ ಹೇಳಿದರಲ್ಲದೇ ಸರ್ವಾಧ್ಯಕ್ಞರಾಗಿ ಕಾರ‍್ಯ ನಿರ್ವಹಿಸುವ ಹೊಣೆಯ ಜೊತೆಗೆ ಅತ್ಯಂತ ಪ್ರಾಮಾಣಿಕವಾಗಿ ತಾಯಿ ಭುವನೇಶ್ವರಿ ಸೇವೆಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸುತ್ತಮುತ್ತಲಿನ ಪರಿಸರದಲ್ಲಿ ಅದ್ದೂರಿ ವೆಚ್ಚದ ಕನ್ನಡ ಸಿನಿಮಾ ಸಿಗ್ನೇಚರ್ ಚಿತ್ರತಂಡ ಬಿರುಸಿನ ಚಿತ್ರೀಕರಣದಲ್ಲಿ ತೊಡಗಿದೆ. ಕುಂದಾಪುರ ಮೂಲದ ಕೊರವಡಿ ಪೂರ್ಣಿಮಾ ಭಾಸ್ಕರ ಪೂಜಾರಿ ನಿರ್ಮಾಣದ, ವಿ. ಮನೋಹರ್ ಸಂಗೀತ ನಿರ್ದೇಶನದ ಎಂಎಂಕೆ ಮೂವೀಸ್‌ನ ವಿರಾಟ್ ಪ್ರೊಡಕ್ಷನ್‌ನ ಬ್ಯಾನರ್‌ನಲ್ಲಿ ಎ. 25ರಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನೆಮಾ ಚಿತ್ರೀಕರಣಕ್ಕೆ ಚಾಲನೆ ದೊರಕಿದೆ. ತಾಲೂಕಿನ ಹಾಲಾಡಿ, ಅಮಾಸೆಬೈಲು, ಕೋಡಿ, ಮರವಂತೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸುಂದರ ಸೊಬಗನ್ನು ಡಿಒಪಿ ಜೀವನ್ ಗೌಡ ಛಾಯಾಗ್ರಹಣದ ಮೂಲಕ ಸೆರೆಹಿಡಿಯಲಿದ್ದಾರೆ. ಕುಂದಾಪುರ ಮೂಲದ ನಟ ರಂಜಿತ್ ಹಾಗೂ ನಟಿ ಮಯೂರಿ ಚಿತ್ರದ ಮುಖ್ಯ ಪಾತ್ರದಲ್ಲಿ ಹಾಗೂ ಸಹ ಕಲಾವಿದರಾಗಿ ಸುನಿಲ್ ಪುರಾಣಿಕ್, ಕಿಶೋರ್, ವಾಣಿಶ್ರೀ, ಬಚ್ಚನ್ (ಖಳನಾಯಕ) ಹಾಗೂ ಬೇಬಿ ಮಾನ್ಯ ಕೊರವಡಿ ನಟಿಸಲಿದ್ದಾಳೆ.
