ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆಯ ಮೀನುಗಾರರ ಸೇವಾ ಸಮಿತಿ ಮತ್ತು ಶ್ರೀರಾಮ ಮಂದಿರ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಯ ಅಧ್ಯಕ್ಷರಾಗಿ ಎಂ. ಮೋಹನ ಖಾರ್ವಿ ಆಯ್ಕೆಯಾಗಿದ್ದಾರೆ. ಮೀನುಗಾರ ಮುಖಂಡರಾಗಿರುವ ಅವರು ಮರವಂತೆ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಆದಿ ಶಂಕರರು ಜ್ಞಾನದ ಪರಾಕಾಷ್ಠೆಯ ಕುರಿತು ವಾದಿಸುತ್ತಲೇ ಆ ಜ್ಞಾನ ಪ್ರಾಪ್ತಿಗೆ ಭಗವತ್ ಕೃಪೆ ಹೊಂದಲು ಭಕ್ತಿರಸ ಭರಿತ ಸ್ತೋತ್ರ ಸಾಹಿತ್ಯದ ಭಂಡಾರವನ್ನೇ ಸೃಷ್ಟಿಸಿದರು. ಭಕ್ತಿ ಮತ್ತು ಜ್ಞಾನ ಊರ್ಧ್ವಮಖಗಮನಕ್ಕೆ ಎರಡು ರೆಕ್ಕೆಗಳಿದ್ದಂತೆ ಎಂದು ತತ್ತ್ವ ಜ್ಞಾನಿಗಳ ದಿನಾಚರಣೆ – ಶಂಕರ ಭಗವತ್ಪಾದಕರ ಜಯಂತಿ ಉತ್ಸವಾಚರಣೆಯ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ತಿಳಿಸಿದರು. ಸಮಾರೋಪ ಭಾಷಣ ಗೈದ ಸುವಿಚಾರ ಬಳಗ ಟ್ರಸ್ಟ್ ರಿ. ನ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ ಮಾತನಾಡುತ್ತ ಆಧ್ಯಾತ್ಮ – ತತ್ತ್ವ ಜ್ಞಾನಿಗಳಲ್ಲಿ ಆಸಕ್ತ ಜನರ ಸಂಖ್ಯೆ ಸೀಮಿತವಾಗಿದ್ದರೂ, ಅಂಧಕಾರದಲ್ಲಿ ದೀಪ ಭೆಳಗುವಂತೆ ಅಂಥವರ ಪ್ರಭಾವ ಅಪಾರವಾಗಿರುತ್ತದೆ. ’ಸಜ್ಜನರ ಸಂಘ ಹೆಜ್ಜೇನು ಸವಿದಂತೆ’ ಎಂಬ ನುಡಿಯಂತೆ ಜೀವನ ಮೌಲ್ಯಗಳನ್ನು ಪಾಲಿಸುತ್ತ ಗುರಿಯತ್ತ ಸಾಗುವುದರಿಂದ ಜನಕಲ್ಯಾಣ ಸಾಧ್ಯ ಎಂದರು. ಶಂಕರ ಜಯಂತಿಯ ಪ್ರಯುಕ್ತ ಶಂಕರ ತತ್ತ್ವ- ಆದರ್ಶಗಳ ಕುರಿತು ಪಡುವರಿ ಪಂಚಲೀಗೇಶ್ವರೀ ದೇವಸ್ಥಾನದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆಯ ಆಸರೆ ಚಾರಿಟಬಲ್ ಟ್ರಸ್ಟ್ ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಗೃಹದಲ್ಲಿ ಒಂದು ವಾರದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಟ್ರಸ್ಟ್‌ನ ಅಧ್ಯಕ್ಷ ಸತೀಶ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶುಭಾಶಂಸನೆ ಮಾಡಿದ ನಿವೃತ್ತ ಶಿಕ್ಷಕ ಎಂ. ಶಂಕರ ಬಿಲ್ಲವ ಬೇಸಿಗೆ ಶಿಬಿರದಲ್ಲಿ ಮಕ್ಕಳ ಬದುಕಿನ ಮೌಲ್ಯ ವೃದ್ಧಿಗೆ ಪೂರಕವಾದ ವಿಚಾರ ಮತ್ತು ಕೌಶಲ್ಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅವರು ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಒಳಿತು ಮಾಡುವಂತಾಗಲಿ ಎಂದರು. ಶಿಬಿರಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರಲ್ಲದೆ ಯೋಗ ಪ್ರದರ್ಶನ ನೀಡಿದರು. ಎಲ್ಲರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಟ್ರಸ್ಟಿ ಕರುಣಾಕರ ಆಚಾರ್ ಸ್ವಾಗತಿಸಿದರು. ರಾಜೇಶ್ ಆಚಾರ್ ವಂದಿಸಿದರು. ಸತೀಶ ಮಧ್ಯಸ್ಥ ನಿರೂಪಿಸಿದರು. ಸಾಧನಾ ಅಧ್ಯಕ್ಷ ಚಂದ್ರಗುಪ್ತ ಖಾರ್ವಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಬಳೆಗಾರ್, ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ, ಯೋಗ ಶಿಕ್ಷಕ ಸುಬ್ಬಯ್ಯ ದೇವಾಡಿಗ, ಶಿಬಿರದ ನಿರ್ದೇಶಕ ಮಹಾಬಲ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಇಲ್ಲಿನ ರಂಗ ಸುರಭಿಯ ಆಶ್ರಯದಲ್ಲಿ ನದೆಯತ್ತಿರುವ 10 ದಿನಗಳ ಚಿಣ್ಣರ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಬೈಂದೂರಿನ ರೋಟರಿ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ನಿವೃತ ವಿಜಯ ಬ್ಯಾಂಕ್ ಅಧಿಕಾರಿ ರೋ. ವಸಂತ ಹೆಗ್ಡೆ ವಹಿಸಿದ್ದು ರಂಗಸುರಭಿಯ ಚಿಣ್ಣರ ರಂಗ ಚಟುವಟಿಕೆಗೆ ಶುಭ ಹಾರೈಸಿದರು. ಸಮಾರೋಪ ನುಡಿಗಳನ್ನಾಡಿದ ರಂಗ ನಿರ್ದೇಶಕ ಡಾ || ಶ್ರೀ ಪಾದ್ ಭಟ್ ರವರು ಪಾಲಕರು ತಮ್ಮ ಮಕ್ಕಳ ಜೀವನವನ್ನು ಮುಮ್ಮುಖವಾನ್ನಾಗಿಸಬೇಕೆ ಹೊರತು ಹಿಮ್ಮುಖವಾಗಿಸಬಾರದು ಎಂದರು. ಮುಖ್ಯ ಅತಿಥಿಯಾಗಿ ರೋಟರಿಯ ಮಾಜಿ ಸಹಾಯಕ ಗವರ್ನರ್ ಜೀವ ವಿಮಾ ಅಧಿಕಾರಿ ರೋ. ಸೋಮನಾಥನ್ ರವರು ಶುಭ ಹಾರೈಸಿದರು. ಶಿಬಿರದ ರಂಗ ನಿರ್ದೇಶಕಿ ಕು || ಅಕ್ಷತಾ ಶಿವಮೊಗ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುರಭಿಯ ಅಧ್ಯಕ್ಷ ಶಿವರಾಮ ಕೊಠಾರಿಯವರು ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ. ವೈ. ಕೊರಗ ವಂದಿಸಿ ಸುರಭಿಯ ನಿದೇರ್ಶಕ ಸುಧಾಕರ . ಪಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗ್ರಾಮಗಳಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಹಲವು ಸೌಕರ್ಯಗಳು ಬೈಂದೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಪ್ರಗತಿಗಾಗಿ ಕಳೆದ ಐದು ವರ್ಷದಲ್ಲಿ ಶ್ರಮಿಸಿದ್ದು, ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಭಾರಿ ಮತ್ತೆ ಗೆಲ್ಲಿಸಲಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಹೇಳಿದರು. ಅವರು ಭಾನುವಾರ ಸಂಜೆ ಬಿಜೂರು, ಕೆರ್ಗಾಲ್, ನಂದನವನ ಮೊದಲಾದೆಡೆ ನಡೆದ ಮತದಾರರ ಭೇಟಿ ಬಳಿಕ ಮಾತನಾಡಿ ಬೈಂದೂರು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯ ಸರಕಾರ ಹಮ್ಮಿಕೊಂಡ ಹತ್ತಾರು ಜನಪ್ರಿಯ ಯೋಜನೆಗಳು, ರೈತರ ಸಾಲಮನ್ನ, ಆಶ್ರಯ ಮನೆ ಸಾಲ ಮನ್ನ ಸೇರಿದಂತೆ ಹಲವು ಸೌಲಭ್ಯಗಳು ಜನಸಾಮಾನ್ಯರಿಗೆ ಹೆಚ್ಚು ತಲುಪಿದೆ ಎಂದರು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ದೇಶದ ರೈತರು ಹಾಗೂ ದಮನಿತರ ಪರವಾಗಿ ಧ್ವನಿಯೆತ್ತಿದ್ದ ಪಕ್ಷ ಕಾಂಗ್ರೆಸ್. ಸರ್ವರೂ ಸಮಾನರೆಂಬ ತತ್ವದಡಿ ಬಡವರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸ್ವಾತಂತ್ರ್ಯ ಬಳಿಕ ಬೈಂದೂರು ವಿಧಾನಸಭಾ ಕ್ಷೇತ್ರ ಕೇವಲ ಶೇ.೧೦ರಷ್ಟು ಅಭಿವೃದ್ಧಿಯನ್ನಷ್ಟೇ ಕಂಡಿದೆ. ಕುಡಿಯುವ ನೀರು, ಆಸ್ಪತ್ರೆಯಂತಹ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಾಲಿ ಶಾಸಕರು ವಿಫಲರಾಗಿದ್ದಾರೆ. ಬೈಂದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಇಂಗಿತವಿದ್ದು, ಈ ಭಾರಿ ಮತದಾರರು ತನ್ನ ಕೈಹಿಡಿಯಲಿದ್ದಾರೆಂಬ ವಿಶ್ವಾಸವಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚುನಾವಣೆ ಸಮೀಸುತ್ತಿದ್ದಂತೆ ಶುಂಕುಸ್ಥಾಪನೆ ಮಾಡುವವರು ಕಳೆದ ಐದು ವರ್ಷಗಳ ಕಾಲ ಎಲ್ಲಿದ್ದರು. ಬೈಂದೂರಿನಲ್ಲಿ ಮೆಡಿಕಲ್ ಕಾಲೇಜು, ವಿಮಾನ ನಿಲ್ದಾಣ, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದರೂ, ಯಾವುದೂ ಕೂಡ ಅಭಿವೃದ್ಧಿಯನ್ನು ಕಂಡಿಲ್ಲ. ಯುವಕರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗಿಲ್ಲ ಎಂದು ಆರೋಪಿಸಿದ ಅವರು ಈ ಭಾರಿ ಬೈಂದೂರು ಕ್ಷೇತ್ರಾದ್ಯಂತ ತಿರುಗಾಟ ಮಾಡಿದ್ದು, ಪಕ್ಷದ ಕಾರ್ಯಕರ್ತರು ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಹುಮ್ಮಸ್ಸಿನಲ್ಲಿದ್ದಾರೆ. ಭಾರಿ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ…
ಕುಂದಾಪ್ರ ಡಾಟ್ ಕಾಂ ಲೇಖನ. ಬೈಂದೂರು: ಅದ್ಬುತವಾದ ಪ್ರವಾಸೋದ್ಯಮ ತಾಣಗಳು ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಸೇರಿದಂತೆ ಹಲವಾರು ವೈಶಿಷ್ಟ್ಯತೆಯಿಂದ ಕೂಡಿರುವ; ಬೈಂದೂರು ತಾಲೂಕಿನ ಮುಕುಟಪ್ರಾಯವೆಂಬಂತೆ ತಾಲೂಕು ಕೇಂದ್ರದ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಬಳಿ ಅತ್ಯಾಧುನಿಕ ಹಾಗೂ ಐಶಾರಾಮಿ ಸೌಕರ್ಯಗಳಿರುವ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ಉದ್ಘಾಟನೆಗೆ ಸಜ್ಜುಗೊಂಡಿದೆ. ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಸರ್ವ ಸುಸಜ್ಜಿತ, ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ಪ್ರವಾಸಿಗರು ಹಾಗೂ ಆಹಾರ ಪ್ರೀಯರಿಗೆ ನೆಚ್ಚಿನ ಕೇಂದ್ರವಾಗಲಿದೆ. ಪ್ರತ್ಯೇಕ ವೆಜ್ ಹಾಗೂ ನಾನ್ ವೆಜ್ ರೆಸ್ಟೊರೆಂಟ್: ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನಲ್ಲಿ ಗ್ರಾಹಕರ ಆಯ್ಕೆಗೆ ತಕ್ಕಂತೆ ವೆಜ್ ರೆಸ್ಟೋರೆಂಟ್, ನಾನ್ ವೆಜ್ ರೆಸ್ಟೊರೆಂಟ್ ಮೂಲಕ ಪ್ರತ್ಯೇಕವಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿವಿಧ ಬಗೆಯ ಖಾದ್ಯಗಳು ಲಭ್ಯವಿರಲಿದೆ. ಕುಟುಂಬಿಕರಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ, ಎರಡೂ ರೆಸ್ಟೋರೆಂಟ್‌ಗಳೂ ಪ್ರತ್ಯೇಕ ಕಿಚಿನ್ ರೂಂ ಹೊಂದಿದೆ. ಕಡಿಮೆ ದರದಲ್ಲಿ ವಿಶಾಲವಾದ ಲಾಡ್ಜಿಂಗ್: ಗ್ರಾಹಕರು ಆರಾಮದಾಯಕವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಮತದಾರರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು. ಶಿರೂರು ಪೇಟೆ ತೊಪ್ಲು, ಬುಕಾರಿ ಕಾಲೋನಿ, ಕಳಿಹಿತ್ಲು, ಮೋಯಿದ್ದೀನ್‌ಪುರ, ಮೇಲ್ಪಂಕ್ತಿ ಮೊದಲಾದೆಡೆ ಅವರು ಮತದಾರರನ್ನು ಭೇಟಿಯಾದರು. ಈ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ತಬ್ರೇಜ್, ಶಿರೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರವಿ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಹೋದರರ ನಡುವೆ ನಡೆದ ಜಗಳ ಓರ್ವ ಸಹೋದರರನ್ನು ಬಲಿ ಪಡೆದ ಘಟನೆ ತಾಲೂಕಿನ ಗೋಳಿಹೊಳೆ ಗ್ರಾಮದ ಕಂಬಳಗದ್ದೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದ್ದು ರಾತ್ರಿ ಬೆಳಗಾಗುವುದರೊಳಗೆ ಶವವನ್ನು ದುರ್ಗಮ ಅರಣ್ಯದಲ್ಲಿ ಸುಟ್ಟಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಮುತ್ತಯ್ಯ ನಾಯ್ಕ (೩೫) ಅನುಮಾನಾಸ್ಪದವಾಗಿ ಸಾವಿಗೀಡಾದಾತ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗೋಳಿಹೊಳೆ ಗ್ರಾಮದ ಕಂಬಳಗದ್ದೆ ನಿವಾಸಿ ಸಾಕು ಎಂಬುವವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಆಕೆಯ ಮೂರನೇ ಮಗನಾದ ಮುತ್ತಯ್ಯ ನಾಯ್ಕ ಅವಿವಾಹಿತನಾಗಿದ್ದು, ಮುಂಬೈ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ತಂದೆ ಸಾವಿಗೀಡಾದ ಸಂದರ್ಭದಲ್ಲಿ ಅಂದರೆ ಆರು ತಿಂಗಳ ಹಿಂದೆ ಊರಿಗೆ ಬಂದವನು ಮತ್ತೆ ಮುಂಬೈಗೆ ವಾಪಾಸ್ಸಾಗಲಿಲ್ಲ, ಊರಿನಲ್ಲಿ ಯಾವುದೇ ಕೆಲಸ ಮಾಡಿಕೊಂಡಿರದ ಆತ, ವಿವಾಹ ಮಾಡುವಂತೆ ಮನೆಯವರನ್ನು ಪೀಡಿಸುತ್ತಿದ್ದನ್ನು ಎನ್ನಲಾಗಿದೆ, ಆತ ವಿಪರೀತ ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಮನೆಯಲ್ಲಿ ನಿತ್ಯವೂ ಜಗಳ ಮಾಮೂಲಿಯಾಗಿತ್ತು. ಅಲ್ಲದೇ ಆತನ ಅನೈತಿಕ ಚಟುವಟಿಕೆಯು ಈ ಘಟನೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಿಸುಮಾರು ಕಳೆದ 40 ವರ್ಷದ ಹಿಂದೆ ಹಳಿಹುಲ್ಲು ಗುಡಿಯಲ್ಲಿ ಕಲ್ಲಿನ ಶಿವಲಿಂಗವಿದ್ದ ಶ್ರೀ ಸಿದ್ದೇಶ್ವರ ಭಜನಾ ಮಂದಿರ ವೈಭದ ಭವ್ಯಮಂದಿರದಲ್ಲಿ ಪುನರ್ ಪ್ರತಿಷ್ಠಾಪನೆಗೊಳ್ಳಲಿದ್ದು, ಎ.28 ರಿಂದ 30ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನೋರಂಜನಾ ಕಾರ‍್ಯಕ್ರಮ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಾದದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಪುನರ್ ಪ್ರತಿಷ್ಠೆ, ನವೀಕೃತ ಮಂದಿರ ಉದ್ಘಾಟನೆಗೊಳ್ಳಲಿದ್ದು, ಸಾಗರ ತಾಳಗುಪ್ಪ ಕೂಡ್ಲಿ ಮಠ ಶ್ರೀ ಸಿದ್ಧವೀರ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಮ್ಮುಖದಲ್ಲಿ ಬ್ರಹ್ಮಕಲಶೋತ್ಸವ, ಪೂರ್ಣಾಹುತಿ ನಡೆಯಲಿದ್ದು, ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಆಶೀರ್ವಚನ ನೀಡಿಲಿದ್ದಾರೆ. ಸಿದ್ಧಲಿಂಗೇಶ್ವರ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ, ಕಲಾತತ್ವ ಹೋಮ, 49 ಕಲಶ ಸ್ಥಾಪನೆ, ರಕ್ಷ ವಿಧಿಯೊಂದಿಗೆ ಮಂಗಳ ಕಾರ‍್ಯಕ್ರಮ ನಡೆಯಲಿದೆ. ಹಿಂದೆ ಮಳಿ ಹುಲ್ಲಿನ ಗುಡಿಸಲ ನಂತರ ಹೆಂಚಿನ ಕಟ್ಟಡಕ್ಕೆ ಸ್ಥಳಾಂತ ಗೊಂಡಿದ್ದು, ಪ್ರಸಕ್ತ 15 ಲಕ್ಷಕ್ಕೂ ಮಿಕ್ಕ ವೆಚ್ಚದಲ್ಲಿ ಭೌವ್ಯಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಶ್ರೀ ಸಿದ್ದೇಶ್ವರ…
