ಕುಂದಾಪ್ರ ಡಾಟ್ ಕಾಂ ಲೇಖನ.
ಬೈಂದೂರು: ಅದ್ಬುತವಾದ ಪ್ರವಾಸೋದ್ಯಮ ತಾಣಗಳು ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಸೇರಿದಂತೆ ಹಲವಾರು ವೈಶಿಷ್ಟ್ಯತೆಯಿಂದ ಕೂಡಿರುವ; ಬೈಂದೂರು ತಾಲೂಕಿನ ಮುಕುಟಪ್ರಾಯವೆಂಬಂತೆ ತಾಲೂಕು ಕೇಂದ್ರದ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದ ಬಳಿ ಅತ್ಯಾಧುನಿಕ ಹಾಗೂ ಐಶಾರಾಮಿ ಸೌಕರ್ಯಗಳಿರುವ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ಉದ್ಘಾಟನೆಗೆ ಸಜ್ಜುಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಭಾರಿಗೆ ಸರ್ವ ಸುಸಜ್ಜಿತ, ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ಪ್ರವಾಸಿಗರು ಹಾಗೂ ಆಹಾರ ಪ್ರೀಯರಿಗೆ ನೆಚ್ಚಿನ ಕೇಂದ್ರವಾಗಲಿದೆ.
ಪ್ರತ್ಯೇಕ ವೆಜ್ ಹಾಗೂ ನಾನ್ ವೆಜ್ ರೆಸ್ಟೊರೆಂಟ್:
ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನಲ್ಲಿ ಗ್ರಾಹಕರ ಆಯ್ಕೆಗೆ ತಕ್ಕಂತೆ ವೆಜ್ ರೆಸ್ಟೋರೆಂಟ್, ನಾನ್ ವೆಜ್ ರೆಸ್ಟೊರೆಂಟ್ ಮೂಲಕ ಪ್ರತ್ಯೇಕವಾಗಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವಿವಿಧ ಬಗೆಯ ಖಾದ್ಯಗಳು ಲಭ್ಯವಿರಲಿದೆ. ಕುಟುಂಬಿಕರಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ, ಎರಡೂ ರೆಸ್ಟೋರೆಂಟ್‌ಗಳೂ ಪ್ರತ್ಯೇಕ ಕಿಚಿನ್ ರೂಂ ಹೊಂದಿದೆ.
ಕಡಿಮೆ ದರದಲ್ಲಿ ವಿಶಾಲವಾದ ಲಾಡ್ಜಿಂಗ್:
ಗ್ರಾಹಕರು ಆರಾಮದಾಯಕವಾಗಿ ತಂಗಲು ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ವಿಶೇಷವಾದ ಲಾಡ್ಜಿಂಗ್ ಸೌಲಭ್ಯ ಕಲ್ಪಿಸಿದೆ. ೩೧ ರೂಂಗಳು ಹಾಗೂ ೩ ಸೂಟ್ ರೂಂಗಳನ್ನು ಒಳಗೊಂಡಿದೆ. ಕಡಿಮೆ ದರದಲ್ಲಿ ಡಬಲ್ ಬೆಡ್‌ರೂಂನಲ್ಲಿ ಡಬಲ್‌ಬೆಡ್ ಹಾಗೂ ಡಬಲ್ ಕಾಟ್ ವ್ಯವಸ್ಥೆ ಇದ್ದು ಕುಟುಂಬಿಕರು ಆರಾಮದಾಯಕವಾಗಿ ತಂಗಬಹುದಾಗಿದೆ. ವೈಫೈ ಸೌಲಭ್ಯ, ಟಿ.ವಿ, ಎಸಿ ಹಾಗೂ ಎಲ್ಲಾ ಸಮಯದಲ್ಲಿ ಬಿಸಿನೀರು ಸೇರಿದಂತೆ ಹಲವು ಅವಶ್ಯ ಸೌಲಭ್ಯಗಳು ಹೋಟೆಲ್‌ನಲ್ಲಿದೆ.
ಬೈಂದೂರಿನಲ್ಲಿ ಪ್ರಥಮ ಎಸಿ ಹಾಲ್:
ಬೈಂದೂರು ತಾಲೂಕಿನಲ್ಲಿಯೇ ಪ್ರಥಮ ಭಾರಿಗೆ ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಹವಾನಿಯಂತ್ರಿತ ಶಾರದಾ ಕನ್ವೆನ್ಯನ್ ಹಾಲ್ ಸಕಲ ಸೌಲಭ್ಯಗಳನ್ನೊಳಗೊಂಡಿದೆ. ಸುಮಾರು ೭೦೦ ಮಂದಿ ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಹಾಲ್, ೨೦೦ ಮಂದಿ ಏಕಕಾಲದಲ್ಲಿ ಊಟ ಮಾಡಬಹುದಾದ ಡೈನಿಂಗ್ ಹಾಲ್ ಕೂಡ ಇದ್ದು ಎಲ್ಲಾ ರೀತಿಯ ಸಮಾರಂಭಗಳಿಗೂ ಅನುಕೂಲವಾಗುವಂತಿದೆ.
ವಿಶಾಲವಾದ ಪಾರ್ಕಿಂಗ್:
ಬೈಂದೂರು ರೈಲ್ವೆ ನಿಲ್ದಾಣ ಹಾಗೂ ಹಾಗೂ ಬಸ್ ನಿಲ್ದಾಣಕ್ಕೆ ಅತೀ ಸನೀಹದಲ್ಲಿರುವ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್ ಪ್ರಯಾಣಿಕರಿಗೆ ಅನುಕೂಲಕರವಾಗಿದೆ. ಹೋಟೆಲ್‌ನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸುತ್ತಲಿನ ಪ್ರವಾಸಿ ತಾಣ ಗಳು ಧಾರ್ಮಿಕ ಕೇಂದ್ರಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ವಾಹನ ವ್ಯವಸ್ಥೆಯನ್ನು ಹೊಂದಿದೆ.
ಎ.30ಕ್ಕೆ ಉದ್ಘಾಟನಾ ಸಮಾರಂಭ:
ಬೈಂದೂರು ರೈಲ್ವೆ ಸ್ಟೇಷನ್ ಎದುರು ನಿರ್ಮಾಣಗೊಂಡಿರುವ ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನಲ್ಲಿ ಎಪ್ರಿಲ್ 29ರ ಆದಿತ್ಯವಾರ ರಾತ್ರಿ ಪ್ರಾರಂಭೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನಡೆದರೇ, 30ಎಪ್ರಿಲ್ 2018ರ ಸೋಮವಾರ ಪೂರ್ವಾಹ್ನ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಬ್ರಿಗೇಡಿಯರ್‌ರಾದ ಐ.ಎನ್ ರೈ ಉದ್ಘಾಟನೆ ನೆರವೇರಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಮಂಜುನಾಥ ಅಡಿಗ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟಿ ಅಂಜು ಅರವಿಂದ್, ವಿಶ್ವ ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಕೆ. ಲಕ್ಷ್ಮೀನಾರಾಯಣ, ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಚೌಗುಲೆ, ಕನ್ಸಲ್ಟಿಂಗ್ ಇಂಜಿನಿಯರ್‌ರಾದ ಗೋಪಾಲ ಭಟ್ ಭಾಗವಹಿಸಿಲಿದ್ದಾರೆ.
ಆ ಬಳಿಕ ಮಂಗಳ ನಿಧಿ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮ ಇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ, ಹೋಟೆಲ್ ಅಂಬಿಕಾ ಇಂಟರ್‌ನ್ಯಾಶನಲ್‌ನ ಪ್ರವರ್ತಕರಾದ ಜಯಾನಂದ ಹೋಬಳಿದಾರ್ ಕೋರಿದ್ದಾರೆ.