ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕಲ್ಮಾಡಿ ಯುವಕ ಮಂಡಲ ರಿ. ಇದರ ವಾರ್ಷಿಕೋತ್ಸವ ಸಮಾರಂಭ ಕೋಟತ್ತಟ್ಟು ಕಾರಂತ ಥೀಂ ಪಾರ್ಕ್ ಸಮೀಪ ಶ್ರೀಧರ ಗಾಣಿಗರ ಮನೆ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಒಗ್ಗಟ್ಟಿನ ಮೂಲಕ ಯುವ ಸಮುದಾಯ ಕಾರ್ಯಪ್ರವೃತ್ತಗಾಗುವುದನ್ನು ನಾವುಗಳು ಇತ್ತೀಚಿಗಿನ ದಿನಗಳಲ್ಲಿ ಕಾಣುತ್ತಿದ್ದೇವೆ ಅದು ಆಯಾ ಊರಿನ ಶ್ರೇಯಾಭಿವೃದ್ಧಿಗೆ ಪೂರಕವಾದ ಯುವಕ ಮಂಡಲಗಳನ್ನು ಸ್ಥಾಪಿಸಿಕೊಂಡು ಸಮಾಜಮುಖಿ ಚಿಂತನೆಗಳನ್ನಿರಿಸಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ. ಇಂಥಹ ಸಂಘಟನೆಗಳು ರಾಜಕೀಯ ರಹಿತವಾಗಿ ಚಟುವಟಿಕೆಯಲ್ಲಿದ್ದಾಗ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಸನ್ಮಾನಗಳು ಎತ್ತೇಚ್ಚವಾಗಿ ಹಲವು ಸಂಘಟನೆಗಳ ಮೂಲಕ ನಡೆಯುತ್ತದೆ.ಆದರೆ ಕಾರಂತರು ಹುಟ್ಟಿದ ಈ ನೆಲದಲ್ಲಿ ಸನ್ಮಾನಿಸುವ ವ್ಯಕ್ತಿಗಳು ಅದಕ್ಕೆ ಅರ್ಹರಾಗಿರುತ್ತಾರೆ ಎಂಬ ನಂಬಿಕೆ ನನ್ನದು ಅಂಥಹ ವ್ಯಕ್ತಿಯನ್ನು ನೀವು ಆರಿಸಿದ್ದೀರಿ. ಸುಕ್ರಿಬೋಮ್ಮೆಗೌಡ ಎನ್ನುವಂಥ ಮಹಿಳೆಗೆ ಗೌರವ ನೀಡುತ್ತಿರುವುದು ನಿಮ್ಮ ಸಂಘಟನೆಗೆ ಹಾಗೂ ಊರಿಗೆ ಗೌರವವನ್ನು ಇಮ್ಮಡಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು. ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಸುಕ್ರಿ ಬೋಮ್ಮೆಗೌಡರಿಗೆ ಕಲ್ಮಾಡಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ ಮೇ.2 ರಿಂದ 8 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮುಹೂರ್ತ ಜರಗಿತು. ಈ ಪ್ರಯುಕ್ತ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂತಪದ್ಮನಾಭ ಐತಾಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಪ್ರಯುಕ್ತ ನಡೆಯಲಿರುವ ಬ್ರಹ್ಮಕಲಶೋತ್ಸವ, ಧ್ವಜ ಪ್ರತಿಷ್ಠಾಪನೆ, ದುರ್ಗಾಪರಮೇಶ್ವರೀ ಬಿಂಬ ಪ್ರತಿಷ್ಠೆ, ಬ್ರಹ್ಮರಥೋತ್ಸವ ಕಾರ್ಯಕ್ರಮ ಸುಗಮವಾಗಿ ಸಾಗಲಿ ಎಂದು ಪುರೋಹಿತ ವೇ|ಮೂ| ಚಂದ್ರಶೇಖರ ಅಡಿಗ ಪ್ರಾರ್ಥನೆ ಸಲ್ಲಿಸಿದರು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಕಾರ್ಯದರ್ಶಿ ರಾಮಕೃಷ್ಣ ಐತಾಳ, ಸಾಲಿಗ್ರಾಮ ಘಟಕದ ಅಧ್ಯಕ್ಷ ಕೆ.ತಾರನಾಥ ಹೊಳ್ಳ, ಚಂದ್ರಶೇಖರ್ ಉಪಾಧ್ಯ, ಚಂದ್ರಶೇಖರ ಹೊಳ್ಳ, ಸದಾರಮ ಹೇರ್ಳೆ, ಶಿವರಾಮ ಉಡುಪ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ಅಂತರ್ರಾಷ್ಟ್ರೀಯ ಜಾದೂಗಾರ ನಟ ಓಂಗಣೇಶ್ ಉಪ್ಪುಂದ ಇವರು ಬರೆದ 35 ಸಣ್ಣ ಸಣ್ಣ ಘಟನೆಯಾಧರಿತ ಜನಮನ ಕಥನಗಳ ಸಂಕಲನ ’ಗಿರಿಗಿಟ್ಲಿ ಹುಡುಗ’ ಕೃತಿಯನ್ನು ಪದ್ಮವಿಭೂಷಣ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ವಿಶ್ವ ಸಂಚಾರದ ಹಿನ್ನೆಲೆಯಿಂದ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಕೃತಿಯಿಂದ ತಮಗೆ ಇನ್ನಷ್ಟು ಶಾರದೆಯ ಅನುಗ್ರಹ ಹಾಗೂ ಮಂಜುನಾಥನ ಅನುಗ್ರಹ ಒದಗುವಂತಾಗಲಿ ಎಂದು ಅಭಿನಂದಿಸಿದ ಹೆಗ್ಗಡೆಯವರು ಶ್ರೀ ಮಂಜುನಾಥನ ಬೆಳ್ಳಿ ಪದಕವನ್ನು ಕೃತಿಕಾರ ಓಂಗಣೇಶರಿಗೆ ನೀಡಿ ಶುಭಹಾರೈಸಿದರು. ಓಂಗಣೇಶ್ ಅವರ ಪ್ರಪ್ರಥಮ ಕೃತಿ ಕೂಡಾ ಈ ಕ್ಷೇತ್ರದಲ್ಲೇ ಲೋಕಾರ್ಪಣೆ ಹೊಂದಿದ್ದು ಬಳಿಕ ದುಬೈ ಬಹರೈನ್ ಮಸ್ಕತ್ಗಳಲ್ಲಿ ಪುನಃ ಬಿಡುಗಡೆಯಾಗಿತ್ತು. ಇದೀಗ ಖ್ಯಾತ ಲೇಖಕಿ ವೈದೇಹಿಯವರ ಮುನ್ನುಡಿ ಹಾಗೂ ಸುಧಾಕರ ದರ್ಬೆಯವರ ಮುಖಪುಟ ಹೊಂದಿದ ಇದು ನನ್ನ 6 ನೇ ಕೃತಿಯಾಗಿದ್ದು ಇಲ್ಲಿಂದು ಬಿಡುಗಡೆ ಕಾಣುತ್ತಿರುವುದು ನನ್ನ ಯೋಗ ಎಂದು ಕೃತಿಕಾರ ತಮ್ಮ ಪುಸ್ತಕದ ಬಗ್ಗೆ ವಿವರಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಗಲಿದ ಗೆಳೆಯರ ಸವಿನೆನಪಿಗಾಗಿ ವಕ್ವಾಡಿ 8ಸ್ಟಾರ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ವಕ್ವಾಡಿ ತೆಂಕಬೆಟ್ಟು ದೇವರಾಡಿ ದೇವಸ್ಥಾನದ ಮೈದಾನದಲ್ಲಿ ತಾಲೂಕು ಮಟ್ಟದ 30 ಗಜಗಳ ಕ್ರಿಕೆಟ್ ಪಂದ್ಯಾಟದ ಅಂತಿಮ ಹಣಾಹಣಿಯಲ್ಲಿ ಈಗಲ್ಸ್ ಕುಂಭಾಶಿ ಪ್ರಥಮ ಸ್ಥಾನ ಪಡೆದು ನೆನಪು ಟ್ರೋಪಿಯನ್ನು ತನ್ನ ಮುಡಿಗೇರಿಸಿಗೊಂಡಿದೆ. 8 ಸ್ಟಾರ್ ಕ್ರಿಕೆಟರ್ಸ್ ವಕ್ವಾಡಿ ದ್ವಿತೀಯ ಸ್ಥಾನ ಪಡೆದುಕೊಂಡರು. ಸಮಾರೋಪ ಸಮಾರಂಭದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಡೆಯಿಂದ ಶರೀರ ಮತ್ತು ಮನಸ್ಸಿನ ಕೊಳೆಯನ್ನು ಹೋಗಲಾಡಿಸಿ ಜ್ಞಾನಾವಸ್ಥೆಯಿಂದ ಮನೋಬಲ ವೃಧ್ದಿಸಿ ಅಂತರಂಗ ಬಹಿರಂಗ ಶುಧ್ಧಿಯಾಗಿ ಶೃಧ್ದೆ, ಭಕ್ತಿ, ನಿಷ್ಥೆಯಿಂದ ನಲಿವು ಮತ್ತು ಗೆಲುವು ಸಾದ್ಯ, ಹೀಗೆ ಕಠಿಣ ಪರಿಶ್ರಮ ಮತ್ತು ಇಚ್ಚಾಶಕ್ತಿಯಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂದರು. ಮುಖ್ಯ ಅತಿಥಿ ನಿವೃತ್ತ ಅಬಕಾರಿ ನಿರೀಕ್ಷಕರಾದ ಜನ್ಸಾಲಿ ಶಿವರಾಮ ಶೆಟ್ಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಉತ್ತಮವಾದ ಮನಸ್ಸನ್ನು ಬೆಳೆಸಿಕೊಂಡು ಸುಸಂಸ್ಕೃತವಾದ ಸಮಾಜ ನಿರ್ಮಿಸುವಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶಾಲೆ ಸಮುದಾಯದ ಅವಿಭಾಜ್ಯ ಅಂಗ. ಶಾಲಾ ಚಟುವಟಿಕೆಗಳು ವೈವಿದ್ಯಪೂರ್ಣವಾದಷ್ಟೂ ಸಮುದಾಯದ ಬೆಂಬಲ ಹೆಚ್ಚುತ್ತಾ ಸಾಗುತ್ತದೆ. ಈ ದಿಸೆಯಲ್ಲಿ ಬಿದ್ಕಲ್ಕಟ್ಟೆ ಶಾಲೆಯಲ್ಲಿ ಪ್ರತಿ ತಿಂಗಳೂ ಅನಾವರಣಗೊಳಿಸುತ್ತಿರುವ ಚಾರಣ ಮಾಸಪತ್ರಿಕೆಯ ಅನಾವರಣ, ತಿಂಗಳ ಕಲಿಕಾ ಪ್ರದರ್ಶನ ಹಾಗೂ ಸರ್ವ ಪೋಷಕರ ಸಭೆ ಒಂದು ಅತ್ಯುತ್ತಮ ಸೃಷ್ಟಿಶೀಲ ಚಟುವಟಿಕೆ. ಸರಕಾರಿ ಶಾಲೆಗಳ ಸಬಲೀಕರಣ ಮತ್ತು ದಾಖಲಾತಿಯ ಹೆಚ್ಚಳಕ್ಕೆ ಶಾಲಾ ಶಿಕ್ಷಕರ ಈ ಬಗೆಯ ಉನ್ನತ ಚಿಂತನೆಯ ವಿನೂತನ ಚಟುವಟಿಕೆಗಳು ಸಹಕಾರಿ.’ ಎಂದು ಕರಾವಳಿ ಬಂಟರ ಬಳಗ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ರವೀಂದ್ರ ಶೆಟ್ಟಿ ಹಟ್ಟಿಯಂಗಡಿ ಅಭಿಪ್ರಾಯ ಪಟ್ಟರು. ಅವರು ಕುಂದಾಪುರ ವಲಯದ ಬಿದ್ಕಲ್ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಾಧ್ಯಮ ವರದಿಗಾರರಾದ ಶ್ರೀ ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ, ಕರಾವಳಿ ಬಂಟರ ಬಳಗ ಮಾಸಪತ್ರಿಕೆ ಮತ್ತು ಅಮ್ಮಾ ಪಬ್ಲಿಕೇಷನ್ಸ್ ಇವರು ಪ್ರಾಯೋಜಿಸಿದ ಚಾರಣ ಮಾಸ ಪತ್ರಿಕೆಯ 14 , 15ನೇ ಸಂಚಿಕೆಗಳನ್ನು ಅನಾವರಣಗೊಳಿಸಿ ಬಳಿಕ ಸರ್ವ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಜನರು ಶಿಕ್ಷಣ ಮತ್ತು ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ ಸದೃಢ ಸಮಾಜ, ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಜನರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಯಾವುದೇ ರೋಗ ಬರುವ ಮೊದಲೇ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಉಡುಪಿ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಶೆಣೈ ಕೆ. ಹೇಳಿದರು. ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಗಂಗಾಮೃತ ಯೋಜನೆಯ ಭಾಗವಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿದ ಉಚಿತ ಸಮಗ್ರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ರೋಗ ಗುಣಪಡಿಸಲು ಸಾಧ್ಯವಾಗುತ್ತದೆ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ನಿರಂತರ ತಪಾಸಣೆ, ಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಜಿಎಸ್ವಿಎಸ್ ಅಸೋಸಿಯೇಶನ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಪ್ರವಾಸ ಹೋಗಲು ಮತ್ತು ಹೋದಲ್ಲಿ ತಂಗಲು ಬಳಸುವ ಕ್ಯಾರವಾನ್ ವಾಹನವನ್ನು ವಿದೇಶದಿಂದ ತರಿಸಿಕೊಂಡು, ಅದನ್ನು ದೋಣಿಯ ಮೇಲಿರಿಸಿ ದೋಣಿಮನೆಯಾಗಿ ಪರಿವರ್ತಿಸುವ ಪ್ರಯತ್ನ ಸಮೀಪದ ಪಡುವರಿಯ ದೊಂಬೆಯಲ್ಲಿರುವ ‘ಸಾಯಿ ವಿಶ್ರಾಮ್’ ಕಡಲತೀರ ಪ್ರವಾಸಿಧಾಮ ಒಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಅದಕ್ಕೆ ಅಗತ್ಯವಿರುವ 48 ಅಡಿ ಉದ್ದದ ಎರಡು ಫೈಬರ್ ದೋಣಿಗಳನ್ನು ಮತ್ತು ಅವುಗಳ ಮೇಲೆ ಮನೆ ಅಳವಡಿಸಲು ಬೇಕಾದ ವೇದಿಕೆ ಅಥವಾ ಪ್ಲ್ಯಾಟ್ಫಾರ್ಮನ್ನು ಶಿರೂರಿನ ಅಳ್ವೆಗದ್ದೆಯ ಮೀನುಗಾರಿಕಾ ಬಂದರಿನ ಸಮೀಪ ರಾಮ ಮೇಸ್ತ ಅವರು ನಡೆಸುತ್ತಿರುವ ಓಂ ದುರ್ಗಾಂಬಿಕಾ ಬೋಟ್ ಬಿಲ್ಡರ್ಸ್ ಸಂಸ್ಥೆ ಸಿದ್ಧಪಡಿಸಿಕೊಟ್ಟಿದೆ. ಈಚೆಗೆ ವಾಹನವನ್ನು ಬಂದರಿಗೆ ತಂದು ಎರಡು ಕ್ರೇನ್ಗಳ ಸಹಾಯದಿಂದ ಬೋಟ್ಗಳ ಮೇಲಿರಿಸುವ ಕೆಲಸ ನಡೆಯಿತು. ಅದನ್ನು ಭದ್ರಪಡಿಸುವ ಕಾರ್ಯ ಸಾಗಿದೆ. ಮನೆಯ ವಾಹನದ ಭಾಗವನ್ನು ಉಳಿಸಿಕೊಂಡಿರುವುದರಿಂದ ಮತ್ತು ಅದನ್ನು ಸಾರಿಗೆ ಇಲಾಖೆಯಲ್ಲಿ ನೋಂದಾಯಿಸಿರುವುದರಿಂದ (ಕೆಎ 51 ಬಿ 9558) ಈ ದೋಣಿಮನೆಯನ್ನು ಅದಕ್ಕೆ ಹೊಂದಿಸಲು ಸಾಧ್ಯವಾಗುವ ಟ್ರಕ್ ಮೂಲಕ ಎಳೆದು…
ಹಳ್ಳಿಯ ಕಾರ್ಯಕ್ರಮಗಳಿಂದ ದೇಶ ವಿಕಾಸ: ಬಿ.ಎ.ಸನದಿ ಉಡುಪಿ: ಭಾಷೆ, ಶಿಕ್ಷಣ, ಸಂಸ್ಕೃತಿಯನ್ನು ಫೋಷಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಹಳ್ಳಿಯಲ್ಲಿ ನಡೆಯ ಬೇಕು, ಅದರಿಂದ ದೇಶದ ವಿಕಾಸ ಸುಲಭವಾಗುತ್ತದೆ ಎಂದು ಮಾನವ್ಯ ಕವಿ ಪಂಪ ಪುರಸ್ಕೃತ ಸಾಹಿತಿ ಬಿ.ಎ ಸನದಿ ಹೇಳಿದರು. ಅವರು ಹಿರಿಯಡ್ಕ ಸಮೀಪದ ಪಂಚನಬೆಟ್ಟುವಿನಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಮತ್ತು ಪ್ರೌಢಶಾಲೆ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಜೊತೆಗೂಡಿ ಆಯೋಜಿಸಿದ್ದ ಪಂಚನಬೆಟ್ಟು ಸಾಂಸ್ಕೃತಿಕ ಉತ್ಸವದಲ್ಲಿ ಸಂಘದ ಅಧ್ಯಕ್ಷ ಬಿ. ಮೋಹನ್ದಾಸ ಶೆಟ್ಟಿ ಅವರ ಸಂಸ್ಮರಣಾ ಗ್ರಂಥ ಸಂಮೋಹನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.ಹಳ್ಳಿಯ ಸುಂದರ ಪರಿಸರದ ಈ ಕಾರ್ಯಕ್ರಮ, ಶೈಕ್ಷಣಿಕ ಸೇವೆ, ಜನರ ಉತ್ಸಾಹ ನನಗೆ ಬಾಲ್ಯದ ನೆನಪನ್ನು ತಂದು ಕೊಟ್ಟಿದೆ. ಎ. ನರಸಿಂಹ ಮತ್ತು ಅಜೆಕಾರು ಅವರ ಒತ್ತಾಸೆಯಿಂದ ಈ ಕಾರ್ಯಕ್ರಮದಲ್ಲಿ ವಯೋಸಹಜ ಆಯಾಸವನ್ನು ಬದಿಗೊತ್ತಿ ಭಾಗವಹಿಸಿದೆ. ಹೊಸ ಹೊರಪು, ಉಲ್ಲಾಸವನ್ನು ಈ ಕಾರ್ಯಕ್ರಮ ನೀಡಿದೆ ಎಂದು ಸನದಿ ಖುಷಿ ಹಂಚಿಕೊಂಡರು. ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಗಂಗೊಳ್ಳಿ ಸ್ಟೆಲ್ಲಾ ಮಾರೀಸ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ, ತ್ರಾಸಿ ಹೊಸಪೇಟೆ ನಿವಾಸಿ ರಿತೇಶ ಖಾರ್ವಿ ಅವರಿಗೆ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯಧನವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ ಅವರು ಸಹಾಯಧನದ ಚೆಕ್ನ್ನು ರಿತೇಶ ಖಾರ್ವಿ ಅವರಿಗೆ ಹಸ್ತಾಂತರಿಸಿದರು. ಮಾಜಿ ಅಧ್ಯಕ್ಷ ಡಿ.ಚಂದ್ರ ಖಾರ್ವಿ, ಉಪಾಧ್ಯಕ್ಷ ಗುರುನಾಥ ಪಟೇಲ್, ಕಾರ್ಯದರ್ಶಿ ಎಸ್.ದೇವದಾಸ ಖಾರ್ವಿ, ಚೌಕಿ ವಿಠಲ ಖಾರ್ವಿ, ನಾಗ ಖಾರ್ವಿ, ದಿನೇಶ ಖಾರ್ವಿ, ನಾಗಪ್ಪಯ್ಯ ಪಟೇಲ್ ಮತ್ತಿತರರು ಉಪಸ್ಥಿತಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಚುನಾವಣಾ ಟಿಕೇಟ್ ದೊರೆಯುತ್ತಿದ್ದಂತೆ, ಕುಂದಾಪುರ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಕಾಣಿಸಿಕೊಂಡಿದ್ದು, ಕಳೆದ ಭಾರಿಯ ಕುಂದಾಪುರ ಬಿಜೆಪಿ ಪರಾಜಿತ ಅಭ್ಯರ್ಥಿ ಬಿ. ಕಿಶೋರ್ ಕುಮಾರ್ ಸೇರಿದಂತೆ 7 ಮಂದಿ ಪಕ್ಷದ ವಿವಿಧ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರ ನಿವಾಸಕ್ಕೆ ತೆರಳಿದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಸತೀಶ್ ಮೇರ್ಡಿ ಮೊದಲಾದವರು, ಪಕ್ಷದ ವಿವಿಧ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿ ಕುಂದಾಪುರ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ನಡೆಸದೇ ದೂರ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಆದರೆ ತಾವು ಎಂದಿಗೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಕುಂದಾಪುರದ ಬದಲಾಗಿ ಇತರೆ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇವೆಂದು ತಿಳಿಸಿದ್ದಾರೆ. ಹಾಲಾಡಿ ಬಿಜೆಪಿ ಪಕ್ಷದಿಂದ ಹೊರನಡೆದಾಗಿನಿಂದಲೂ ಹತ್ತಿಕೊಂಡಿದ್ದ ಭಿನ್ನಮತದ ಕಿಡಿ ಬೇರೆ ಬೇರೆ ಸಂದರ್ಭಗಳಲ್ಲಿ ಉಲ್ಭಣಗೊಂಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ…
