ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಅಗಲಿದ ಗೆಳೆಯರ ಸವಿನೆನಪಿಗಾಗಿ ವಕ್ವಾಡಿ 8ಸ್ಟಾರ್ ಕ್ರಿಕೆಟರ‍್ಸ್ ಇವರ ಆಶ್ರಯದಲ್ಲಿ ವಕ್ವಾಡಿ ತೆಂಕಬೆಟ್ಟು ದೇವರಾಡಿ ದೇವಸ್ಥಾನದ ಮೈದಾನದಲ್ಲಿ ತಾಲೂಕು ಮಟ್ಟದ 30 ಗಜಗಳ ಕ್ರಿಕೆಟ್ ಪಂದ್ಯಾಟದ ಅಂತಿಮ ಹಣಾಹಣಿಯಲ್ಲಿ ಈಗಲ್ಸ್ ಕುಂಭಾಶಿ ಪ್ರಥಮ ಸ್ಥಾನ ಪಡೆದು ನೆನಪು ಟ್ರೋಪಿಯನ್ನು ತನ್ನ ಮುಡಿಗೇರಿಸಿಗೊಂಡಿದೆ. 8 ಸ್ಟಾರ್ ಕ್ರಿಕೆಟರ್ಸ್ ವಕ್ವಾಡಿ ದ್ವಿತೀಯ ಸ್ಥಾನ ಪಡೆದುಕೊಂಡರು.
ಸಮಾರೋಪ ಸಮಾರಂಭದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕ ಸುಧಾಕರ ವಕ್ವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಡೆಯಿಂದ ಶರೀರ ಮತ್ತು ಮನಸ್ಸಿನ ಕೊಳೆಯನ್ನು ಹೋಗಲಾಡಿಸಿ ಜ್ಞಾನಾವಸ್ಥೆಯಿಂದ ಮನೋಬಲ ವೃಧ್ದಿಸಿ ಅಂತರಂಗ ಬಹಿರಂಗ ಶುಧ್ಧಿಯಾಗಿ ಶೃಧ್ದೆ, ಭಕ್ತಿ, ನಿಷ್ಥೆಯಿಂದ ನಲಿವು ಮತ್ತು ಗೆಲುವು ಸಾದ್ಯ, ಹೀಗೆ ಕಠಿಣ ಪರಿಶ್ರಮ ಮತ್ತು ಇಚ್ಚಾಶಕ್ತಿಯಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬಹುದು ಎಂದರು. ಮುಖ್ಯ ಅತಿಥಿ ನಿವೃತ್ತ ಅಬಕಾರಿ ನಿರೀಕ್ಷಕರಾದ ಜನ್ಸಾಲಿ ಶಿವರಾಮ ಶೆಟ್ಟಿ ಮಾತನಾಡಿ, ಸದೃಢವಾದ ದೇಹದಲ್ಲಿ ಉತ್ತಮವಾದ ಮನಸ್ಸನ್ನು ಬೆಳೆಸಿಕೊಂಡು ಸುಸಂಸ್ಕೃತವಾದ ಸಮಾಜ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ತರವಾದುದು ಎಂದರು. 8 ಸ್ಟಾರ್ ಕ್ರಿಕೆಟರ್ಸ್ ಅಧ್ಯಕ್ಷ ವಿಜಯ ಶೆಟ್ಟಿ, ಕೆಪಿಎಸ್ ಕ್ಯಾಟರ‍್ಸ್ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಗಲಿದ ಗೆಳೆಯರಾದ ರಾಜಾ ಶೆಟ್ಟಿ, ವಿಷ್ಣು ಶೆಟ್ಟಿಗಾರ್, ನವೀನ್ ಶೇಟ್ ಇವರನ್ನು ಸ್ಮರಿಸಲಾಯಿತು.
ಪ್ರಕಾಶ್ ಕಳ್ಳಿಗುಡ್ಡೆ ನಿರೂಪಿಸಿದರು. ನವೀನ್ ಶೆಟ್ಟಿ ಸ್ವಾಗತಿಸಿದರು. ಉದಯ ಶೆಟ್ಟಿ ವಂದಿಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಶರತ್ ವಾಚಿಸಿದರು.