ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಆಯೋಜಿಸಿರುವ ಡಾ. ಹೆಚ್. ಶಾಂತರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅ.13ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಆರ್.ಎನ್ ಶೆಟ್ಟಿ ಹಾಲ್ನಲ್ಲಿ ನಡೆಯಲಿದೆ. ಈ ವರ್ಷದ ಡಾ. ಎಚ್. ಶಾಂತರಾಮ್ ಸಾಹಿತ್ಯ ಪ್ರಶಸ್ತಿಯು ಅನುಪಮಾ ಪ್ರಸಾದ್ ಅವರ ಪಕ್ಕಿ ಹಳ್ಳದ ಹಾದಿಗುಂಟ ಕಾದಂಬರಿಗೆ ನೀಡಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥರಾದ ಕೆ. ಶಾಂತರಾಮ ಪ್ರಭು ವಹಿಸಲಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಆಟಿ ಅಮವಾಸ್ಯೆಯ ಪಾರಂಪರಿಕ ರೋಗ ನಿರೋಧಕ ಔಷಧ ಆಟಿ ಕಷಾಯ ವಿತರಣಾ ಕಾರ್ಯಕ್ರಮ ನಡೆಯಿತು. ಮೂಡುಬಿದಿರೆಯ ಶ್ರೀರಾಮ್ ಮೆಡಿಕಲ್ಸ್ನ ಮಾಲಕ ನವೀನ್ ಟಿ. ಎಸ್ ದೀಪ ಬೆಳಗಿಸಿ ಕಷಾಯ ಕುಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು 3,000 ಜನರಿಗೆ ಕಷಾಯ ತಯಾರಿಸಿ ವಿತರಿಸಲಾಯಿತು. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ., ದ್ರವ್ಯಗುಣ ವಿಜ್ಞಾನ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಪದ್ಯಾಣ, ದ್ರವ್ಯಗುಣ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು, ವೈದ್ಯರು, ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೆರ್ಗಾಲ್ ಗ್ರಾಮದ ಮಟ್ನಕಟ್ಟೆಯಲ್ಲಿ ದೇವಾಲಯದ ವರಾಂಡ ಹಾಗೂ ಮುಖ್ಯ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಸ್ನೇಹಿ ಮಟ್ನಕಟ್ಟೆ ವತಿಯಿಂದ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಊರಿನ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ 39 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕುಂಭಾಸಿ, ಕಾರ್ಕಳ, ಉತ್ತರಕನ್ನಡ ಜಿಲ್ಲೆಯ ಭಟ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಸಾರ್ವಜನಿಕ ಆಸ್ಪತ್ರೆ ಕುಂದಾಪುರದಲ್ಲಿ ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಬಿ.ಎಂ.ಚಂದ್ರಶೇಖರ ಅವರನ್ನು ಪತ್ನಿ ಶೀಲಾ ಚಂದ್ರಶೇಖರ ಅವರ ಸಹಿತವಾಗಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಇಲ್ಲಿನ ಸಿಬ್ಬಂದಿಗಳು ಕುಂದಾಪುರ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿದರು. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಅಧ್ಯಕ್ಷತೆ ವಹಿಸಿ, ಪ್ರಾಮಾಣಿಕ ಸೇವೆಗೆ ಹೆಸರಾಗಿದ್ದ ಬಿ. ಎಂ. ಚಂದ್ರಶೇಖರ ಅವರು ಕೆಲಸ ಮಾಡಿದ ಕಡೆಗಳಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದು, ಸದಾ ರೋಗಿಗಳ ಸಹಾಯಕ್ಕೆ ಮಿಡಿಯುತ್ತಿದ್ದರು. ವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸಾರ್ಥಕ ಸೇವೆಯನ್ನು ಆರೋಗ್ಯ ಇಲಾಖೆಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು. ಮುಖ್ಯ ಅತಿಥಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕೋವಿದ್ ನಂತಹ ಸಾಂಕ್ರಾಮಿಕ ರೋಗ ಹರಡಿ ಸಹಸ್ರ ಸಮಸ್ಯೆಗಳ ಸೃಷ್ಟಿಸುತ್ತಿರುವ ನಡುವಿನಲ್ಲಿ ಸರ್ವರಿಗೂ ಸಹಾಯ ಹಸ್ತ ಚಾಚುವ ಸಂಘಟನೆಗಳು ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತವೆ ಆ ನೆಲೆಯಲ್ಲಿ ‘ನೊಂದ ಜೀವಕ್ಕೊಂದು ಆಸರೆ’ ಎನ್ನುವ ಸಂಕಲ್ಪದೊಂದಿಗೆ ಸ್ಥಾಪಿಸುತ್ತಿರುವ ಸಂಘಟನೆ ನೂರುಕಾಲ ಸೇವೆಯಲ್ಲಿ ತೊಡಗಲಿ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳೇ ತುಂಬಿರುವ ಈ ಸಂಘಟನೆ ಮುಂದಿನ ದಿನದಲ್ಲಿ ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಸಹಾಯಹಸ್ತ ಚಾಚುವಂಥ ಆಗಲಿ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ರಘು ನಾಯ್ಕ ಹೇಳಿದರು. ಅವರು, ಕಾಲೇಜಿನ 2013-14 ವರ್ಷದ ಬಿಬಿಎಂ ವಿದ್ಯಾರ್ಥಿಗಳು ಸಂಘಟಿಸಿದ ಬೈಂದೂರು ತಾಲೂಕು ಮಿತ್ರ ಸೇವಾಶ್ರಯ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವ್ಯವಹಾರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿನೋದ್ ನೀಲಪ್ಪ ಬಸುಪಟ್ಟದ ಸಂಘಟನೆಯ ಲೋಗೋವನ್ನು ಬಿಡುಗಡೆಗೊಳಿಸಿ ಭಾಷಣಗೈದರು. ಸಂಘದ ಅಧ್ಯಕ್ಷರಾದ ಹರೀಶ್ ಅಧ್ಯಕ್ಷತೆ ವಹಿಸಿದ್ದರು ಹಾಗೂ ಉಪಾಧ್ಯಕ್ಷರಾದ ಸುಧಾಕರ್ ರವರು ಸ್ವಾಗತಿಸಿದರು. ಭಾಸ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಗ್ಯಾರೇಜು ಮಾಲೀಕರ ಸಂಘಕ್ಕೆ ಸರಕಾರದಿಂದ ಕೊಡಮಾಡಿದ ಆಹಾರ ಕಿಟ್ ವಿರತಣೆ ಹಾಗೂ ಗ್ಯಾರೇಜು ಕಾರ್ಮಿಕರಿಗೆ ಸಂಘಟನೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಇಲ್ಲಿನ ಕೆ.ಎಲ್ ಕೋರ್ಟ್ ಬಳಿ ಜರುಗಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೈಂದೂರು ತಾಲೂಕು ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷರಾದ ಕೃಷ್ಣಯ್ಯ ಮದ್ದೋಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಬಿಜೆಪಿ ಬ್ಲಾಕ್ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ, ಉಡುಪಿ ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷರಾದ ರೋಷನ್ ಕರ್ಕಡ, ಕುಂದಾಪುರ ಗ್ಯಾರೇಜು ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ್ ಆಚಾರ್, ಉಪಾಧ್ಯಕ್ಷ ಸದಾನಂದ ಆಚಾರ್, ಕಾರ್ಯದರ್ಶಿ ಸಂಜೀವ, ಖಜಾಂಚಿ ಅಣ್ಣಪ್ಪಯ್ಯ ಆಚಾರ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಘವೇಂದ್ರ ಸುರಭಿ ಸ್ವಾಗತಿಸಿರು, ಆನಂದ ಮದ್ದೋಡಿ ನಿರೂಪಿಸಿದರು, ನಾಗರಾಜ್ ಆಚಾರ್ ವಂದಿಸಿದರು.
ಆಗಳಿನ್ ಕಾಲವಂಡಾರ್ ಕಂಬ್ಳಖುಷಿಗಿಲ್ಲ ಬರ್ಗಾಲ ಈಗಳಿನ್ ಕಾಲಪುರೆಸುದಿಲ್ಲ ಸಂಬ್ಳಇಲ್ ಇಲ್ಲ ಉಳ್ ಗಾಲ ಕೊಚ್ಚಕ್ಕಿ ಕೂಳ್ಸೌತಿ ಕಾಯ್ ಹೋಳ್ಇಷ್ಟಿದ್ರೆ ಹೊಟ್ಟಿ ಗಟ್ಟಿ ಕಾಂಕ್ರೀಟ್ ಬಿಲ್ಡಿಂಗ್ ಗೋಳ್ಪಿಜ್ಜಾ-ಬರ್ಗರ್ ಹಾಳ್ ಮೂಳ್ಬೇಕಿತ್ತಾ ಈ ಬಾಳ್ ಮಣ್ಣಂಗೆ ಆಡ್ಕಂಡ್ತಣ್ಣೀರ್ ಮಿಂದ್ಕಂಡ್ತೋಡ್ ತೋಡಂಗ್ ಹಾರ್ ತಿತ್ತಲ್ದೆ ಮೊಬೈಲ್ ಮನಿಯಾಯ್ತೀಗಮನ್ಸ್ ಹಾಳಾಯ್ತೀಗಜೀವ್ ಕ್ಕಿಂತ ದುಡ್ಡಿಗ್ ಹಾರ್ವರ್ ಸಾಲ್ ಮಸ್ತ್ ಆಯ್ತ್ ಅಲ್ದೆ ! ಆಗಳಿಕ್ಮನಿ ಚಣ್ ಕಾಯಿದಿತ್ಮನ್ಸ್ ದಡ್ ದಾಯಿದಿತ್ಮನಿ ತುಂಬಾ ಮನ್ಸ್ರೆಲ್ಲ ಮಾತಾಡ್ತಿದ್ರ್ ಈ ಕಾಲ್ ದಂಗೆಮನಿ ಬಂಗ್ಲಿ ಆಯ್ತ್ಮನ್ ಸ್ರ್ ಭೂತ ಆರ್ಮನ್ಸ್ ಮರ್ಕ್ತಾ ಕೂಕಂಬಂಗಾಯ್ತ್ ಭೂಮ್ಯಂಗೆ ಹುಟ್ ದಾಗಳಿಕ್ ಜಾತ್ಕಮಧ್ಯದೆಗ್ ಒಂದಿಷ್ಟ್ ನಾಟ್ಕಸತ್ತಲ್ ನೆಂಟ್ರಿಗ್ ಸೂತ್ಕ ಇದ್ ಬರೀ ಸಾಲ್ ಅಲ್ಲಾಬದ್ಕಿನ್ ಪಾಲ್ ಕಾಣಿಕಲ್ತದ್ದನ್ ಕನ್ಸಂಗೂ ಹಂಬ್ಲ್ ಬಿಡ್ಬೇಡಿ ಊರ್ಮನಿ ನೆರ್ಮನಿ ಎಗಳಿಕೂ ಬೇಕ್ ಮರ್ರೆಭಾಷಿ ಬದ್ಕೆರಡು ಒಂದೇ ಪಾವ್ಲಿ ಕಂಡೆಂಗೆಇದ್ದಷ್ಟ್ ದಿನ ನಾವ್ ಹುಟ್ದೂರಿದ್ ಋಣ ತೀರ್ಸ್ವಾಮತ್ ಮತ್ತೊಂದ್ ಜನ್ಮ ಇದ್ರೆ ಈ ಊರೆಗ್ ಹುಟ್ವಾ. ಚೈತ್ರ ರಾಜೇಶ್ ಕೋಟ | ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ಯುನೈಟೆಡ್ ನೇಶನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ ಹಾಗೂ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್ ಜಂಟಿಯಾಗಿ ಭಾರತದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದು, ಇದರ ಭಾಗವಾಗಿ ಆಕ್ಟ್ ಟು ರಿಸ್ಟೋರ್’ ಎಂಬ ಆರು ತಿಂಗಳ ಪರಿಸರ ಅಭಿಯಾನವನ್ನು ಆಯೋಜಿಸಿವೆ. ಪರಿಸರ ಸಂಬಂಧೀ ಮಾಹಿತಿ- ಶಿಕ್ಷಣ- ಸಂವಹನ ಅಭಿಯಾನ ಇದಾಗಿದ್ದು, ಇದರ ಭಾಗವಾಗಿ ವಿವಿಧ ಪರಿಸರ ವ್ಯವಸ್ಥೆಗಳ ಬಗ್ಗೆ ಪ್ರತೀ ತಿಂಗಳೂ ವೈಜ್ಞಾನಿಕ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಅಭಿಯಾನದ ಜುಲೈ ತಿಂಗಳ ಪೋಸ್ಟರ್ನಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಹರೀಶ್ ಭಟ್ ಪಕ್ಷಿವನಕ್ಕೆ ಸ್ಥಾನ ಸಿಕ್ಕಿದೆ. ಯುನೈಟೆಡ್ ನೇಶನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಮ್ ಹಾಗೂ ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜ್ಯುಕೇಶನ್ ಪರಿಸರದ ಕುರಿತು ವಾರ್ಷಿಕ ಹಾಗೂ ದಶಕದ ಅವಧಿಯ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಪ್ರತಿಬಾರಿಯೂ ವಿವಿಧ ಮುಖ್ಯ ಪರಿಸರ ವಿ?ಯಗಳ ಕುರಿತು ಜಾಗೃತಿ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಈ ಬಾರಿಯ ಥೀಮ್ ‘ಇಕೋಸಿಸ್ಟಮ್ ರಿಸ್ಟೋರೇಶನ್’ ಆಗಿದೆ. ಕೃಷಿ ಪರಿಸರ, ಹುಲ್ಲುಗಾವಲುಗಳು, ಪರ್ವತಗಳು,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗ್ರಾಮದ ಮೇಲ್ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ಕೆನರಾ ಬ್ಯಾಂಕಿನ ನಿವೃತ್ತ ಅಧಿಕಾರಿ ಜಿ.ಪ್ರಮೋದ ಗಾಣಿಗ ಶನಿವಾರ ವಿತರಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಮಹಾಲೆ, ಸಹಶಿಕ್ಷಕಿ ಲಲಿತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಈಶ್ವರ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷೆ ರೇಖಾ, ಎಸ್ಡಿಎಂಸಿ ಸದಸ್ಯರು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮದಲ್ಲಿ ಪ್ರಸಕ್ತ ಸಾಲಿನ ಸ್ವಯಂ ಉದ್ಯೋಗ ನೇರಸಾಲ, ಉದ್ಯಮಶೀಲತಾ ಅಭಿವೃದಿ, ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಖರೀದಿ, ಮೈಕ್ರೋ ಕ್ರೆಡಿಟ್ ಪ್ರೇರಣಾ, ಒಡೆತನ ಯೋಜನೆಗಳಿಗೆ ಸಂಬಂಧಿಸಿದಂತೆ, ಅರ್ಹ ಸಫಾಯಿ ಕರ್ಮಚಾರಿ/ ಮ್ಯಾನುವಲ್ ಸ್ಕಾವೆಂರವರಿಂದ ಹಾಗೂ ಅವಲಂಬಿತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳವರು ನಿಗಮದ ವೆಬ್ಸೈಟ್ https://www.ksskdc.kar.nic.in/ ಆನ್ಲೈನ್ ಮೂಲಕ ಅಥವಾ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಂಡು ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 20 ರೊಳಗೆ ಜಿಲ್ಲಾ ಕಛೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ದೂರವಾಣಿ ಸಂಖ್ಯೆ:0820-2574884 ಸಂಪರ್ಕಿಸಬಹುದೆಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
