Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಕ್ರಮವಾಗಿ ಚಿರತೆ ಚರ್ಮವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಚರ್ಮ ಸಹಿತ ಹತ್ತು ಜನ ಆರೋಪಿಗಳು ಸಿಕ್ಕಿ ಬಿದ್ದ ಘಟನೆ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಸಿಐಡಿ ಅರಣ್ಯ ಘಟಕ ಬೆಂಗಳೂರು ಇವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಾರದೊಳಗೆ ನಡೆದ ಮೂರನೇ ಪ್ರಕರಣ ಇದಾಗಿದೆ. ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಆರೋಪಿಗಳನ್ನು ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕಿನ ಹಿಂದೂರ್ ಈಸ್ಟ್ ನಿವಾಸಿ ಶಾಮ್ಯುಯೆಲ್ ಎಂಬಾತನ ಪುತ್ರ ಸೂರಜ್(೩೪), ಭಟ್ಕಳ ಸಾಗರ ರಸ್ತೆಯ ಕಡುವಿನಕಟ್ಟೆ ನಿವಾಸಿ ರಘು, ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಮಯ್ಯಾಡಿ ಶ್ರೀಧರ ಎಂಬಾತನ ಪುತ್ರ ನಾಗರಾಜ್, ಭಟ್ಕಳದ ಅಡವಳ್ಳಿ ನಿವಾಸಿ ವೆಂಕಟೇಶ್ ನಾಯಕ್ ಎಂಬಾತನ ಪುತ್ರ ನಾಗರಾಜ್, ಬೇಂಗ್ರೆ ಚಿಂಗಾರಮಕ್ಕಿ ನಿವಾಸಿ ದಿ. ರಾಮ ಎಂಬಾತನ ಪುತ್ರ ಪ್ರವೀಣ್ ರಾಮ್ ದೇವಾಡಿಗ, ವೆಂಕಟಪುರ ಗ್ರಾಮದ ರಂಗಿನಕಟ್ಟೆ ಗಣಪತಿ ಎಂಬಾಥನ ಪುತ್ರ ಮೋಹನ ಜಿ. ನಾಯ್ಕ(24), ಬೈಂದೂರು ತೆಗ್ಗರ್ಸೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೈಲ್ವೆ ಯಾತ್ರಿಕರಿಗೆ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ ಗುಪ್ತಾ ಅವರೊಂದಿಗೆ ಮಾತುಕತೆ ನಡೆಸಿದರು. ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಅವರನ್ನು ಭೇಟಿಯಾದ ಸಂಸದರು ರೈಲ್ವೆ ನಿಲ್ದಾಣ ಮೇಲ್ದರ್ಜೆ, ಮಂಗಳ ಎಕ್ಸ್‌ಪ್ರೆಸ್ ರೈಲು ನಿಲುಗಡೆ, ಟ್ಯಾಕ್ಸಿ ರಿಕ್ಷಾ ಸ್ಟ್ಯಾಂಡ್ ಅಭಿವೃದ್ಧಿ, ಎ.ಟಿಎಂ ಸೌಲಭ್ಯ, ರೈಲ್ವೆ ಗೇಟ್ ಎಲ್.ಸಿ-೭೩ಗೆ ಅಂಡರ್ ಬ್ರಿಡ್ಜ್ ಹಾಗೂ ರೈಲ್ವೆ ಟ್ರ್ಯಾಕ್ ಡಬ್ಲಿಂಗ್ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಎಂಡಿ ಸಂಜಯ ಗುಪ್ತಾ ಪ್ರತಿಕ್ರಿಯಿಸಿ ತೌಕೂರಿನಿಂದ ಬೈಂದೂರು ತನಕ ಸುಮಾರು ೧೪೧ಕಿ.ಮೀ ರೈಲ್ವೆ ಟ್ರ್ಯಾಕ್ ಪ್ಯಾಚ್ ಡಬ್ಲಿಂಗ್‌ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಕ್ಯಾಬಿನೆಟ್‌ನಲ್ಲಿದೆ. ಎಟಿಎಂ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ರೈಲ್ವೆ ನಿಲ್ದಾಣದ ಬಳಿಯ ಟ್ಯಾಕ್ಸಿ, ರಿಕ್ಷಾ ಸ್ಟ್ಯಾಂಡ್ ಅಭಿವೃದ್ಧಿಗೂ ಅಗತ್ಯ ಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಭರತನಾಟ್ಯ ಸ್ಪರ್ಧೆಯಲ್ಲಿ ಕುಂದಾಪುರದ ಪ್ರಾಪ್ತಿ ಹೆಗ್ಡೆ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ನೃತ್ಯ ಗುರುಗಳಾದ ವಿದುಷಿ ಪ್ರವಿತಾ ಅಶೋಕ್ ಇವರಲ್ಲಿ ತನ್ನ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಕುಂದಾಪುರದ ವಕೀಲರು ಮತ್ತು ನೋಟರಿಯವರಾದ ಬಿ. ಪ್ರಕಾಶ್ಚಂದ್ರ ಹೆಗ್ಡೆ ಮತ್ತು ವೀಣಾ ಕಾಂತಿ ಹೆಗ್ಡೆ ದಂಪತಿಗಳ ಪುತ್ರಿ. ಪ್ರಸ್ತುತ ಇವರು ಕುಂದಾಪುರದ ವಿ.ಕೆ.ಆರ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ತಾಲೂಕಿನ ಗಂಗಾನಾಡು ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಲಘು ಭೂಕಂಪದ ಅನುಭವವಾಗಿದ್ದು, ಕ್ಷಣಕಾಲ ಜನರು ಬೆಚ್ಚಿಬಿದ್ದ ಘಟನೆ ನಡೆದಿದೆ. ಬೈಂದೂರಿನ ಗಂಗಾನಾಡು, ಅತ್ಯಾಡಿ, ಸಾರಂಕಿ, ಕುಳ್ಳಂಕಿ, ಗೋಳಿಬೇರು, ಮದ್ದೋಡಿ, ಕ್ಯಾರ್ತೂರು ಆಸುಪಾಸಿನಲ್ಲಿ ಸುಮಾರು ಮಧ್ಯಾಹ್ನ 2:30ರ ವೇಳೆಗೆ 10 ಸೆಕೆಂಡುಗಳ ಕಾಲ ಸಣ್ಣಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಲಘು ಕಂಪನವಾದರೂ ಮನೆಗಳಲ್ಲಿ ಜೋಡಿಸಿದ್ದ ಪಾತ್ರೆಗಳು ನೆಲಕ್ಕೆ ಬಿದ್ದಿದ್ದವು. ಗೋಳಿಬೇರಿನ ಮನೆಯೊಂದು ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಪಾತ್ರೆಗಳು ಅಲುಗಾಡಿ ನೆಲಕ್ಕೆ ಬಿದ್ದ ತಕ್ಷಣ ಗಾಬರಿಯಿಂದ ಮನೆಯಲ್ಲಿದ್ದವರು ಓಡಿ ಹೊರಕ್ಕೆ ಬಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಪಂಚಾಯಿತ್ ನೂತನ ಅಧ್ಯಕ್ಷರಾಗಿ ಶ್ಯಾಮಲ ಎಸ್ ಕುಂದರ್, ಉಪಾಧ್ಯಕ್ಷರಾಗಿ ರಾಮಕಿಶನ್ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯತ್ನಲ್ಲಿ ಜ.11ರಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ಯಾಮಲ ಕುಂದರ್ ಹಾಗೂ ಮಾಲಿಕೆ ಕೆ ನಾಮಪತ್ರ ಸಲ್ಲಿಸಿದ್ದು, ಕೊನೆಯಲ್ಲಿ ನಾಮಪತ್ರ ಮಾಲಿನಿ ಕೆ ನಾಮಪತ್ರ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಶ್ಯಾಮಲ ಕುಂದರ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ರಾಮಕಿಶನ್ ಹೆಗ್ಡೆ ಏಕಮಾತ್ರ ನಾಮ ಪತ್ರ ಸಲ್ಲಿಸಿದ್ದರಿಂದ ಅವರು ಅವಿತರೋಧವಾಗಿ ಆಯ್ಕೆಯಾಗಿದರು. ಈ ಹಿಂದೆ ಅಧ್ಯಕ್ಷರಾಗಿದ್ದ ಜಯಶ್ರೀ ಮೊಗವೀರ ಹಾಗೂ ಉಪಾಧ್ಯಕ್ಷರಾಗಿದ್ದ ಪ್ರವೀಣ ಶೆಟ್ಟಿ ಅವರ ರಾಜೀನಾಮೆಯಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಪ್ರಾರಂಭದ ಒಪ್ಪಂದದಂತೆ ಮೊದಲ ಎರಡುವರೆ ವರ್ಷ ಕುಂದಾಪುರ ಕ್ಷೇತ್ರಕ್ಕೂ ನಂತರದ ಎರಡುವರೆ ವರ್ಷ ಬೈಂದೂರು ಕ್ಷೇತ್ರಕ್ಕೆ ಎನ್ನುವಂತೆ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ಅಧ್ಯಕ್ಷರಾಗಿ ಆಯ್ಕೆಯಾಗಿರುವಗ ಶ್ಯಾಮಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ : ನಿರಂತರ ಸಂಪರ್ಕ ಇಲ್ಲದೆ ಇದ್ದರೂ, ಕರ್ತವ್ಯ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಗುರುತಿಸಿಕೊಂಡಿದ್ದ ಡಾ.ಕೆ.ಮಧುಕರ ಶೆಟ್ಟಿ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದವರು. ಶಬ್ದಗಳಿಂದ ಅವರಿಗೆ ಶ್ರದ್ದಾಂಜಲಿ ಅರ್ಪಿಸಲು ಸಾಧ್ಯವಿಲ್ಲ. ದೇಶದ ಪೊಲೀಸ್‌ ವ್ಯವಸ್ಥೆಯ ಹೊಳೆಯುವ ನಕ್ಷತ್ರ ಅವರಾಗಿದ್ದರು ಎಂದು ರಾಜ್ಯದ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಅಜಯ್‌ಕುಮಾರ್‌ ಸಿಂಗ್‌ ಹೇಳಿದರು. ಅಂಕದಕಟ್ಟೆಯ ಸಹನಾ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಡಾ.ಕೆ.ಮಧುಕರ ಶೆಟ್ಟಿ ಪ್ರಾರ್ಥನಾ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅವರು ಆದರ್ಶವಾದಿಗಳ ಮಕ್ಕಳು ಯಾವತ್ತು ಅವರ ವಿರುದ್ದವಾಗಿರುತ್ತಾರೆ ಹಾಗೂ ಆದರ್ಶಗಳಿಗೆ ಮೊದಲ ಬಲಿಯಾಗುವುದು ಅವರ ಕುಟುಂಬ ಎನ್ನುವುದನ್ನು ಇತಿಹಾಸದಲ್ಲಿ ಕಂಡಿದ್ದೇವೆ. ಆದರೆ ಇಲ್ಲಿ ಹಾಗಾಗಲಿಲ್ಲ. ತಂದೆಯ ವ್ಯಕ್ತಿತ್ವವನ್ನು ಮೀರಿದ ಕಡು ಆದರ್ಶವಾದಿ ಅವರಾಗಿದ್ದರು. ಗಾಂಧೀಜಿ, ಅಂಬೇಡ್ಕರ್‌, ಬುದ್ಧ ಮುಂತಾದ ಆದರ್ಶ ಪುರುಷರ ಆದರ್ಶಗಳು ನಮ್ಮ ಮನೆಯ ಮಕ್ಕಳಿಗೆ ಬೇಡ ಅದು ಪಕ್ಕದ ಮನೆಯ ಮಕ್ಕಳಿಗೆ ಇರಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜ.9: ಇತ್ತಿಚಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ಪರಿಸರದಲ್ಲಿ ಮಂಗನ ಕಾಯಿಲೆ ಹಬ್ಬಿರುವ ಬೆನ್ನಲ್ಲೇ ಇದೀಗ ಕುಂದಾಪುರ ತಾಲೂಕಿಗೂ ಖಾಯಿಲೆ ವ್ಯಾಪಿಸುವ ಭೀತಿ ಎದುರಾಗಿದೆ. ತಾಲೂಕಿನ ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪರಿಸರದಲ್ಲಿ ಒಟ್ಟು ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಈ ಮಂಗಗಳ ಸ್ಯಾಂಪಲ್‌ಗಳನ್ನು ಶಿವಮೊಗ್ಗದಲ್ಲಿರುವ ವೈರಸ್ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಸಿದ್ಧಾಪುರ ಗ್ರಾಮದ ಶಂಕರ ಯಡಿಯಾಳ ಎಂಬವರ ಮನೆಯ ಸಮೀಪ ನಿನ್ನೆ ಒಂದು ಮಂಗನ ಶವ ಪತ್ತೆಯಾಗಿದ್ದರೆ, ಇಂದು ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮಂಗಗಳ ಶವ ಪತ್ತೆಯಾಗಿದೆ ಎಂದು ಅವರು ವಿವರಿಸಿದರು. ಶಿವಮೊಗ್ಗದಲ್ಲಿರುವ ವಿಡಿಎಲ್ (ವೈರಸ್ ಪರೀಕ್ಷಾ ಪ್ರಯೋಗಾಲಯ)ನಿಂದ ವರದಿ ಬಂದ ಬಳಿಕ ಅವುಗಳ ಸಾವಿನ ನಿಜವಾದ ಕಾರಣಗಳನ್ನು ತಿಳಿಯಬಹುದಾಗಿದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಸಾಂಸ್ಕ್ರತಿಕ ಸೇವಾ ಪ್ರತಿಷ್ಠಾನ, ಸುರಭಿ ರಿ. ಬೈಂದೂರು ಇದರ ೨೦೧೯-೨೨ನೇ ಸಾಲಿನ ಅಧ್ಯಕ್ಷರಾಗಿ ನೀನಾಸಂ ಪದವೀಧರ ಶಿಕ್ಷಕ ಸತ್ಯನಾ ಕೊಡೇರಿ ಹಾಗೂ ಕಾರ್ಯದರ್ಶಿಯಾಗಿ ಶಿಕ್ಷಕ ರಾಮಕೃಷ್ಣ ಉಪ್ಪುಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾಗಿ ಆನಂದ ಮದ್ದೋಡಿ, ಜತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರವೂಫ್, ರಾಘವೇಂದ್ರ ಕೆ. ಸಂಘಟನಾ ಕಾರ್ಯದರ್ಶಿಯಾಗಿ ವೈ ಲಕ್ಷ್ಮಣ ಕೊರಗ, ಖಜಾಂಚಿಯಾಗಿ ನಾಗರಾಜ ಪಿ. ಯಡ್ತರೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಾಘವೇಂದ್ರ ಕಾಲ್ತೋಡು, ವಾಸುದೇವ ಪಡುವರಿ, ಸುನಿಲ್ ಹೆಚ್. ಜಿ. ಬೈಂದೂರು, ಗಣೇಶ ಟೈಲರ್, ಭಾಸ್ಕರ ಬಾಡ, ಗಣೇಶ ವತ್ತಿನಕಟ್ಟೆ. ನಾಗರಾಜ ಬಾಡ, ಚಂದ್ರಶೇಖರ ಶೆಟ್ಟಿ, ನಿಶ್ಚಿತಾ ಪಡುವರಿ, ವ್ಯವಸ್ಥಾಪಕರಾಗಿ ಕೃಷ್ಣಮೂರ್ತಿ ಉಡುಪ ಕಬ್ಸೆ ನಿರ್ದೇಶಕರುಗಳಾಗಿ ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್. ಸಲಹೆಗಾರರು ಬಿ. ಜಗನ್ನಾಥ ಶೆಟ್ಟಿ ಯಡ್ತರೆ, ಜಿ. ತಿಮ್ಮಪ್ಪಯ್ಯ ಮಯ್ಯಾಡಿ, ಪ್ರಶಾಂತ ಮಯ್ಯ ದಾರಿಮಕ್ಕಿ, ಸತೀಶ್ ಹೆಮ್ಮಾಡಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಜ. 8 ಮತ್ತು 9ರಂದು ಭಾರತ ಬಂದ್‌ಗೆ ಕರೆ ನೀಡಲಾಗಿದ್ದು ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಶಾಲಾ ಕಾಲೇಜಿಗೆ ರಜೆ: ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ನೀಡಿದ್ದಾರೆ. ಒಂದೊಮ್ಮೆ ಬಂದ್ ಆದಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳ ಮಕ್ಕಳಿಗೆ ತೊಂದರೆಯಾಗಬಹುದೆನ್ನುವ ನಿಟ್ಟಿನಲ್ಲಿ ರಜೆ ಘೋಷಿಸಲಾಗಿದೆ. ಕರಾವಳಿಯಲ್ಲಿ ಎಂದಿನಂತೆ ಬಸ್ ಸಂಚಾರ: ಜಿಲ್ಲೆಯಲ್ಲಿ ಎಂದಿನಂತೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಇರಲಿದ್ದು, ಎಲ್ಲಾದರೂ ನಾಳೆ ಬೆಳಿಗ್ಗೆ ಅಹಿತಕರ ಘಟನೆ ನಡೆದು, ಬಸ್ಸಿಗೆ ಹಾನಿಯಾಗುವ ಸಂದರ್ಭ ಇದ್ದರೆ ಕೂಡಲೇ ನಾವು ಬಸ್ಸು ಸಂಚಾರ ಸ್ಥಗಿತಗೊಳಿಸುತ್ತೇವೆ. ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಬಸ್ ಗಳನ್ನು ಓಡಿಸಬೇಕೇ ಅಥವಾ ನಿಲ್ಲಿಸಬೇಕೇ ಎಂಬುವುದಾಗಿ ನಿರ್ಧರಿಸಲಿದ್ದೇವೆ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಮುಷ್ಕರಕ್ಕೆ ಈ ಹಿಂದೆಯೇ ದ.ಕ ಜಿಲ್ಲೆಯಲ್ಲಿ ರಿಕ್ಷಾ ಚಾಲಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿ ವಾಯ್ಸ್ ಆಫ್ ಬೈಂದೂರು ಆಶ್ರಯದಲ್ಲಿ ದ್ವಿತೀಯ ಸುತ್ತಿನ ಆಡಿಷನ್ ಬೈಂದೂರು ಅಂಬಿಕಾ ಇಂಟರ್ ನ್ಯಾಷನಲ್‌ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಎಸ್. ರಾಜು ಪೂಜಾರಿ ಉದ್ಘಾಟಿಸಿ, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ, ಶಿಸ್ತು ಬದ್ಧ ಜೀವನಗಳನ್ನು ರೂಡಿಸಿಕೊಳ್ಳಬೇಕು. ಸಂಗೀತಕ್ಕೆ ಅತಿಯಾದ ಶಕ್ತಿಯಿದ್ದು, ಉತ್ತಮ ಮಾನಸಿಕ ಆರೋಗ್ಯಕ್ಕೆ ಸಂಗೀತ ಹಾಡುವ ಅಥವಾ ಕೇಳುವ ಆಸಕ್ತಿಯಲ್ಲಿ ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದಯುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು. ಬೈಂದೂರು ಬಿಜೆಪಿ ಮಹಿಳಾ ಮೋರ್ಚಾದಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು. ಯಡ್ತರೆ ಗ್ರಾ.ಪಂ ಸದಸ್ಯ ನಾಗರಾಜ್ ಗಾಣಿಗ, ಶಿರೂರು ಉದ್ಯಮಿಗಳಾದ ರಘುರಾಮ್ ಮೇಸ್ತ, ಪ್ರಸಾದ ಪ್ರಭು ಶಿರೂರು, ವಿನೋದ್ ಮೇಸ್ತ ಶಿರೂರು, ಹೆಮ್ಮಾಡಿ ವಿವಿ ಮಂಡಳಿಯ ನಿರ್ದೇಶಕ ರಘುರಾಮ್ ಪೂಜಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯಾಧ್ಯಕ್ಷ ಕೃಷ್ಣ ಪೂಜಾರಿ, ದ್ವಿತೀಯ ಸುತ್ತಿನ ಆಡಿಷನ್‌ನ ತೀರ್ಮಾನಕಾಗಿ ಯದುರಾಜ್ ಮಲ್ಪೆ, ಉತ್ತಮ್ ಸಾರಂಗ ಕುಂದಾಪುರ,…

Read More