Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ರನ್ನು ಹೊಸ ಅಧಿಸೂಚನೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಕೆಲವೊಂದು ವಿನಾಯಿತಿ ನೀಡಲು ಸರಕಾರದೊಂದಿಗೆ ಚರ್ಚಿಸಲಾಗುವುದು ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಅಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಅನ್ನು ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ. ತಿಂಗಳುಗಟ್ಟಲೇ ಸುತ್ತಾಡಿದರೂ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲಾ ಅರ್ಜಿಗಳನ್ನು ಅನುಮೋದನೆ ನೀಡಲೂ ಸಹ ಕಷ್ಟಸಾಧ್ಯವಾಗುತ್ತಿದೆ. ಇದಕ್ಕೆ ಸರಕಾರ ಕೆಲವೊಂದು ವಿನಾಯಿತಿಗಳನ್ನು ಕರಾವಳಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ರಾಜ್ಯ ಸರಕಾರದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಗಳು ಘೋಷಿಸಿದಂತೆ ಸಮುದ್ರತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಿದ್ಧತೆಗಳಾಗುತ್ತಿವೆ. ಆದರೆ ಈಗಾಗಲೇ ಪ್ರವಾಸೋದ್ಯಮ ಪೂರಕ ಚಟುವಟಿಕೆ ನೀಡುತ್ತಿರುವವರು ತಮಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಯಾರಿಗೂ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಹೇಳಿದರು. ಅವರು ಮಂಗಳವಾರ ಕೋಡಿ ಸೀವಾಕ್‌ನಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು. ಹೊಸದಾಗಿ ಪ್ರವಾಸೋದ್ಯಮ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ಈಗಾಗಲೇ ನಿರ್ವಹಿಸುತ್ತಿರುವವರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಪ್ರವಾಸ ಪೂರಕ ಚಟುವಟಿಕೆಗಳು ನಡೆದಷ್ಟೂ ಸ್ಥಳೀಯರ ಆದಾಯ ಹೆಚ್ಚಾಗುತ್ತದೆ. ಚಟುವಟಿಕೆಗಳಿಗೆ ಊರು ತೆರೆದುಕೊಳ್ಳುತ್ತದೆ. ಬೇರೆ ಬೇರೆ ಊರುಗಳಿಂದ ಜನ ಆಗಮಿಸುತ್ತಾರೆ. ಡಿಜಿಟಲ್ ಸಾಧನ, ಮಾಧ್ಯಮದ ಮೂಲಕ ತಿಳಿದುಕೊಳ್ಳುತ್ತಾರೆ. ಆಗ ಸೌಕರ್ಯಗಳು ಚೆನ್ನಾಗಿದ್ದಷ್ಟು ಅದಕ್ಕೆ ಮಹತ್ವ ಬರುತ್ತದೆ. ಈಗಾಗಲೇ ಇಲ್ಲಿ ಬೋಟಿಂಗ್, ಕಯಾಕಿಂಗ್, ಡಾಲ್ಟಿನ್ ವೀಕ್ಷಣೆ ಇತ್ಯಾದಿ ನಡೆಯುತ್ತಿದೆ. ಅದರ ಜತೆಗೆ ವಾಟರ್ ಗೇಮ್ಸ್ ಮೊದಲಾದ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು. ಪ್ರವಾಸೋದ್ಯಮ ಇಲಾಖೆ ಸಹಾಯಕ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಯುಜಿಡಿ ಬಾಕಿ ಉಳಿದ ಕಾಮಗಾರಿಗೆ ಒಂದು ಸ್ಪಷ್ಟವಾದ ಯೋಜನೆ ರೂಪಿಸಿ, ಏಕಕಾಲಕ್ಕೆ ಅದನ್ನು ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ಶಾಸಕ ಕಿರಣ್‌ ಕುಮಾರ ಕೊಡ್ಗಿ ಹೇಳಿದರು. ಅವರು ಕುಂದಾಪುರ ಪುರಸಭೆಯಲ್ಲಿ ಮಂಗಳವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸರಿಯಾದ ಪ್ಲ್ಯಾನಿಂಗ್‌ ಇಲ್ಲದೆ ಯುಜಿಡಿ ಪೂರ್ಣತೆ ಕಂಡುಕೊಳ್ಳಲು ಆಗಿಲ್ಲ, ಈಗಾ ಗಲೇ ಯೋಜನೆಗಾಗಿ 33 ಕೊಟಿ ಹಣ. ವ್ಯಯವಾಗಿದೆ. 13 ಕೋಟಿ ಹಣ ಉಳಿಕೆಯಾಗಿದೆ. ಯೋಜನೆ ಪೂರ್ಣಗೊಳಿಸಲು ಇನ್ನೂ 33 ಕೋಟಿ ಬೇಕಾಗುತ್ತದೆ. ಉಳಿಕೆ ಹಣದಲ್ಲಿ ಅಷ್ಟಿಷ್ಟು ಕೆಲಸ ನಿರ್ವಹಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ಸದಸ್ಯ ಗಿರೀಶ್‌ ಜಿ.ಕೆ ಮಾತನಾಡಿ, ಯುಜಿಡಿ ಯೋಜನೆಯಿಂದ ಈಗಾಗಲೇ ಆಗಿರುವ ಪ್ರಮಾದಗಳು ಮುಂದೆ ಆಗಬಾರದು. ಆದಷ್ಟು ಬೇಗನೇ ಯೋಜನೆಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ಸಹಕರಿಸಬೇಕು ಎಂದರು. ಸದಸ್ಯ ಶ್ರೀಧರ ಶೇರೆಗಾರ್ ಮಾತನಾಡಿ, ಈ ಯೋಜನೆ ಪುರಸಭೆಗೆ ಬಿಳಿ ಆನೆ ಆಗಿಬಿಟ್ಟಿದೆ. ಯೋಜನೆ ಜಾರಿಗೊಂಡ ದಿನದಿಂದ ಇಂದಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಂಯೋಜನೆಯೊಂದಿಗೆ ನಡೆಯಲಿರುವ ನಾಲ್ಕನೇ ವರ್ಷದ “ಆಸಾಡಿ ಒಡ್ರ್”ಸಾಧಕ ಪುರಸ್ಕಾರಕ್ಕೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಮಣೂರು ಭಾರತಿ ವಿಷ್ಣುಮೂರ್ತಿ ಮಯ್ಯ ಆಯ್ಕೆಗೊಳಿಸಲಾಗಿದೆ. ಅಗಸ್ಟ್ 10ರ ಭಾನುವಾರ ಬೆಳಿಗ್ಗೆ 9 ರಿಂದ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಹಮ್ಮಿಕೊಳ್ಳಲಿರುವ “ಆಸಾಡಿ ಒಡ್ರ್”ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಿದೆ. ವಿಶೇಷ ಆಹ್ವಾನಿತರಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಕುಂದಗನ್ನಡ ರವಿ ಬಸ್ರೂರು ಹಾಗೂ ಕುಂದಗನ್ನಡದ ಲೇಖಕಿ ಪೂರ್ಣಿಮಾ ಕಮಲಶಿಲೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗ್ರಾಮೀಣ ತಿನಿಸುಗಳು, ಪರಿಕರ ಪ್ರದರ್ಶನ, ಸ್ಪರ್ಧೆ, ಅನಾಥಾಶ್ರಮಕ್ಕೆ ನೆರವು, ಸ್ನೇಹಕೂಟ ಮಣೂರು ಇವರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಗೆಳೆಯರ ಬಳಗ ಹಂದಟ್ಟು ಹಾಗೂ ಹಂದಟ್ಟು ಮಹಿಳಾ ಬಳಗ ಕೋಟ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಪಂಚವರ್ಣ ಮಹಿಳಾ ಮಂಡಲದ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ಪತ್ರಕರ್ತರಿಗೆ ಕನ್ನಡ ಸಾಹಿತ್ಯ” ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ ಶಿಬಿರವನ್ನು ಆಗಸ್ಟ್ 3ನೇ ವಾರ ಅಥವಾ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಿದ್ದು, 20 ರಿಂದ 40 ವರ್ಷ ದೊಳಗಿನ, ಈಗಾಗಲೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವವರು, ಪತ್ರಿಕೋದ್ಯಮ ಪದವಿ ಪಡೆದವರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದಾಗಿದೆ. ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ https://sahithyaacademy.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಆರ್. ಎನ್.‌ಶೆಟ್ಟಿ‌ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‌ಸಿಐ ಕುಂದಾಪುರ ಲೀಜನ್ ನ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಸಾರ್ವಜನಿಕ ಭಾಷಣ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  ಎಸ್‌ಎನ್‌ಆರ್‌ ಎಸ್‌ಎನ್‌ಆರ್‌ ಎಮ್. ಆರ್. ಜಯೇಶ ಅವರು ದೀಪ ಬೆಳಗಿಸುವುದರ ಮೂಲಕಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾರ್ವಜನಿಕ ಭಾಷಣ ಕಲೆಯ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿಸಿದರು. ಎಸ್‌ಸಿಐ ನ ರಾಷ್ಟ್ರೀಯ ಸಂಯೋಜಕರಾದ ಎಸ್‌ಎನ್‌ಆರ್‌ ಗಿರೀಶ್ ಶಾನಭಾಗ್ ಅವರು ಸ್ಪರ್ಧಾ ಸರಣಿಗೆ ಶುಭ ಹಾರೈಸಿದರು. ಎಸ್‌ಸಿಐ ನ Area-G ಇದರ ರಾಷ್ಟ್ರೀಯ ಉಪಾಧ್ಯಕ್ಷ ಎಸ್‌ಎನ್‌ಆರ್‌ ಎಸ್‌ಎನ್‌ಆರ್‌ ಸಿದ್ಧಗಂಗಯ್ಯ, ಎಸ್‌ಸಿಐ ಕೋಟಾ ಲೀಜನ್ ನ ಅಧ್ಯಕ್ಷ ಎಸ್‌ಎನ್‌ಆರ್‌ ಕೇಶವ ಆಚಾರ್, ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಓರಿಯಂಟೇಶನ್ ಮತ್ತು ಯುತ್ ಎಫೇರ್ಸ್ ನ ರಾಷ್ಟ್ರೀಯ ನಿರ್ದೇಶಕರಾದ ಎಸ್‌ಎನ್‌ಆರ್‌. ಪಿಪಿಎಫ್‌. ಹುಸೇನ್ ಹೈಕಾಡಿ ಅವರು ಶುಭ ಹಾರೈಸಿದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥಿಸಿದರು. ಕಾಲೇಜು‌ ಮಟ್ಟದಲ್ಲಿ ನಡೆದ…

Read More

ಕುಂದಾಪ್ರ ಡಾಟ್‌ ಕಾಂ ಸುದಿ.ಮೂಡುಬಿದಿರೆ:  ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.09 ಫಲಿತಾಂಶ ಬಂದಿದ್ದರೆ, ಆಳ್ವಾಸ್‌ನ ಒಟ್ಟು 43 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.79 ಫಲಿತಾಂಶ ದಾಖಲಿಸಿದ್ದಾರೆ. ಆಳ್ವಾಸ್‌ನ ವಿದ್ಯಾರ್ಥಿಗಳಾದ ಗೋಡ್ವಿಲ್ (309), ಜೆ. ಬಸವರಾಜ್ (289), ಅವನಿ ಉಮೇಶ್ ರಾವ್ (283), ನಂದಿಶ್ ಕೆ. ಎ. (274), ಹರ್ಷವರ್ಧನ್ (273), ಸನ್ನಿಧಿ (271), ಅಪರ್ಣ ಸುಧಿ (265),  ಚಿರಂತನ (263), ಅಂಕಿತಾ ರಾವ್(258), ಪ್ರಜ್ನಾ ಎನ್ (253), ನವದೀಪ್ ರೆಡ್ಡಿ (249), ವಿಸ್ಮಯ್ ಭಟ್(244) ಅನಿರುಧ್ದ್(241), ನಂದೀಶ್ ಎಸ್. (238), ಪ್ರಣಯ್ (237), ಜೈಶ್ನವ್ (236), ರೋಹಿತ್ ಪೂಜಾರಿ (234), ಶ್ರವಣ್ (228), ವೈಷ್ಣವಿ ಪ್ರಸಾದ್ (228), ಅಸ್ನಾ (225), ನಕ್ಷತ್ರಾ ಸಿ. (224), ರಿಯೋನಾ (224), ಸಾಕ್ಷಿ ಆರ್ (224), ಕ್ರಷ್ಣ ವರ್ಮ (221), ಸಮೀಕ್ಷಾ ಕೋಟ್ಯಾನ್ (218), ವೃಂದಾ (218), ಮಿಝ್ಬಾ ಶೇಖ್ (217), ವಚನ್ ರವಿಕುಮಾರ್ (217), ಅಂಬಿಕಾ ಕೆ ಎಸ್. (214),…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜ್ ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪುರ 89.6 ಎಫ್ಎಂ ನಲ್ಲಿ ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರೊಂದಿಗೆ ನಡೆಸಿದ ಫೋನ್ ಇನ್ ಕಾರ್ಯಕ್ರಮ “ನಿಮ್ಮ ಪ್ರಶ್ನೆಗಳಿಗೆ ನಮ್ಮ ಧ್ವನಿ”  ಈ ಕಾರ್ಯಕ್ರಮದಲ್ಲಿ ರಸ್ತೆ ದುರಸ್ತಿ,ಕಾಲುಸಂಕ, ಸಮರ್ಪಕ ಸಾರಿಗೆ ಸಂಪರ್ಕ, ಶಿಕ್ಷಣ ಇತ್ಯಾದಿ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದ್ದಾರೆ. ಈ ರೇಡಿಯೋ ಕಾರ್ಯಕ್ರಮದ ಮುದ್ರಿತ ಪ್ರಸಾರ ಜುಲೈ 10ರ ಗುರುವಾರ ಸಂಜೆ 5:00 ಗಂಟೆಗೆ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವನ್ನು ರೇಡಿಯೋ ಕುಂದಾಪುರ ಆಪ್ (Radio Kundapura) ಮತ್ತು ರೇಡಿಯೋ ಗಾರ್ಡನ್ (Radio Garden) ಮೂಲಕ ಕೇಳಬಹುದು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಬೈಂದೂರು: ಇಲ್ಲಿನ ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ ವತಿಯಿಂದ ಉಪ್ಪುಂದ ಮಡಿಕಲ್ ಸಮುದ್ರ ತೀರದಲ್ಲಿ ಪುರೋಹಿತ ರಾಘವೇಂದ್ರ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆ ನೆರವೇರಿಸಲಾಯಿತು. ಮೀನುಗಾರಿಕಾ ಋತುವು ಸಂಪದ್ಭರಿತವಾಗಿರುವುದರೊಂದಿಗೆ ಮೀನುಗಾರಿಕೆ ಸಂದರ್ಭ ಯಾವುದೇ ಪ್ರಕೃತಿ ವಿಕೋಪ, ಮೀನುಗಾರಿಕೆ ಸಮಯದಲ್ಲಿ ಅವಘಡಗಳು ಸಂಭವಿಸದಂತೆ ಅನುಗ್ರಹ ಕೋರಿ ಕುಲ ದೇವರಾದ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿ, ಮರುದಿನ ಗ್ರಾಮದ ದೇವರುಗಳಿಗೆ ಪೂಜೆ ಸಲ್ಲಿಸಿ ತಂದ ಪ್ರಸಾದ ಹಾಗೂ ಹಾಲು ಹಣ್ಣು ಫಲ ಪುಷ್ಪಗಳನ್ನು ಈ ದಿನ ಸಮುದ್ರ ರಾಜನಿಗೆ ಅರ್ಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಅಧ್ಯಕ್ಷ ಎಚ್. ಸುರೇಶ್ ಖಾರ್ವಿ, ರಾಣಿಬಲೆ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ಖಾರ್ವಿ, ಕೋಶಾಧಿಕಾರಿ ಬಿ. ನಾಗೇಶ ಖಾರ್ವಿ, ಜತೆ ಕಾರ್ಯದರ್ಶಿ ಸೋಮಶೇಖರ ಖಾರ್ವಿ, ಕಾರ್ಯಕಾರಿ ಸದಸ್ಯರಾದ ಎ. ಶ್ರೀನಿವಾಸ ಖಾರ್ವಿ,…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿಎಮ್‌ಎ ಫೌಂಡೇಶನ್ ಪರೀಕ್ಷೆಯಲ್ಲಿ ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸಿಂಚನಾ ಹಾಗೂ ಅರ್ಚನಾ ಅವರು ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ. ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಹಾಗೂ ವೀ-ರೀಚ್ ಸಂಸ್ಥೆಯ ಪಠ್ಯ-ಪ್ರವಚನ, ಮಧ್ಯಂತರ ಮಾದರಿ ಪರೀಕ್ಷೆ, ಹಾಗೂ ನುರಿತ ತರಬೇತುದಾರರಿಂದ ತರಬೇತಿ, ಸಲಹೆ ಮತ್ತು ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಈ  ಸಾಧನೆಗೈದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More