Author: ನ್ಯೂಸ್ ಬ್ಯೂರೋ

ಹಿಂದಿನ ಕಾಲದಲ್ಲಿ ಮನೆಯ ಹಿತ್ತಲಿನಲ್ಲಿಯೇ ತರಕಾರಿ ಹಣ್ಣು ಹಂಪಲುಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಕೂಡ ಹಿರಿಯವರು ಬೆಳೆಸುತ್ತಿದ್ದರು. ಇದರಿಂದ ಮನೆಯ ಔಷಧೋಪಚಾರದ ಸಮಸ್ಯೆಯೂ ಬಗೆಹರಿಯುತ್ತಿತ್ತು ಜೊತೆಗೆ ಮನೆಗೂ ಕೀಟಗಳಿಂದ ಸಂರಕ್ಷಣೆ ದೊರೆಯುತ್ತಿತ್ತು. ಆದರೆ ಇಂದಿನ ಅಪಾಂಟ್‌ಮೆಂಟ್ ಯುಗದಲ್ಲಿ ಹಿತ್ತಲು ಎಂಬುದಕ್ಕೆ ಜಾಗವೇ ಇಲ್ಲದಂತಾಗಿದೆ. ಅದಾಗ್ಯೂ ಪ್ಲಾಟ್ಗಳಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ತುಳಸಿ: ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಸ್ಥಾನವಿದೆ. ಪವಿತ್ರ ಗಿಡವೆಂಬ ಮನ್ನಣೆ ಇದೆ. ತನ್ನ ಔಷಧೀಯ ಗುಣಗಳಿಂದ ಇದು ಸಸ್ಯ ಜಗತ್ತಿನ ರಾಣಿ ಎಂದೆನಿಸಿದೆ. ಇದನ್ನು ಹರ್ಬಲ್ ಚಹಾ ರೂಪದಲ್ಲಿ ಅಂತೆಯೇ ಹಸಿಯಾಗಿ ಕೂಡ ಸೇವಿಸಬಹುದು. ತುಳಸಿಯಲ್ಲಿ ಹಲವಾರು ವಿಧಗಳಿದ್ದು ರಾಮ ತುಳಸಿ, ವನ ತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ ಎಂಬವುಗಳಿವೆ. ದೇಹದ ಹೊರಗಿನ ಸಮಸ್ಯೆಗಳಿಗೆ ಕರ್ಪೂರ ತುಳಸಿಯನ್ನು ಬಳಸಬಹುದಾಗಿದೆ. ಕಿವಿ ನೋವಿಗೆ ಇಯರ್ ಡ್ರಾಪ್ಸ್ನಂತೆ ಇದು ಕೆಲಸ ಮಾಡುತ್ತದೆ. ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ತುಳಸಿ ಪಡೆದುಕೊಂಡಿದ್ದು ಜ್ವರ, ಸಾಮಾನ್ಯ ಶೀತಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಉಪ್ಪುಂದ ಗ್ರಾಮದ ಕಾಸನಾಡಿ ಎಂಬಲ್ಲಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿರುವ ‘ಶ್ರೀ ವರಲಕ್ಷ್ಮೀ” ನೂತನ ಗೃಹದ ಹಸ್ತಾಂತರ ಸಮಾರಂಭ ಶನಿವಾರ ಜರುಗಿತು. ಉದ್ಯಮಿ ಹಾಗೂ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರ ಜನ್ಮದಿನದಂದು ಮನೆ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಗೋವಿಂದ ಬಾಬು ಪೂಜಾರಿ ಅವರ ಪೋಷಕರಾದ ಮಂಜಮ್ಮ- ಬಾಬು ಪೂಜಾರಿ ದಂಪತಿಗಳು ನೂತನ ಗೃಹ ಉದ್ಘಾಟಿಸಿದರು. ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಹಾಗೂ ಮಾಲತಿ ಗೋವಿಂದ ಪೂಜಾರಿ ಅವರು ನೂತನ ಗೃಹದ ಯಜಮಾನರಾದ ವಿಜಯಾ ರಮೇಶ್ ಪೂಜಾರಿ ಅವರಿಗೆ ಬೀಗದ ಕೈ ಹಸ್ತಾಂತರಿಸಿದರು. ಈ ಸಂದರ್ಭ ಮ್ಯಾನೇಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಟ್ರಸ್ಟೀ ಮೂಲಕ ನಿರ್ಮಿಸಲಾಗಿರುವ ಎರಡನೇ ಮನೆ ಇದಾಗಿದ್ದು, ಇನ್ನು ಎರಡು ಮನೆಗಳು ನಿರ್ಮಾಣ ಹಂತದಲ್ಲಿದೆ. ಆರೋಗ್ಯ ಸೇವೆ, ಅಗತ್ಯವುಳ್ಳವರಿಗೆ ನೆರವು, ಪುಡ್ ಕಿಟ್ ವಿತರಣೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಭತ್ತದ ಭಿತ್ತನೆಗೆ ಪ್ರತೀ ವರ್ಷ ಎಂಓ4 ಭಿತ್ತನೆ ಬೀಜದ ಕೊರತೆಯಾಗುತ್ತಿದ್ದು, ಮುಂದಿನ ವರ್ಷದಿಂದ ಭಿತ್ತನೆ ಬೀಜದ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ. ಸಿ ಪಾಟೀಲ್ ಹೇಳಿದರು. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಡುಪಿಯಲ್ಲಿನ ಹಡಿಲು ಕೃಷಿ ಭೂಮಿಯಲ್ಲಿ ಭಿತ್ತನೆ ಮಾಡುವ ಕಾರ್ಯ ನಡೆಯುತ್ತಿದು, ಇದು ಇಡೀ ರಾಜ್ಯಕ್ಕೆ ಮಾದರಿ ಕಾರ್ಯಕ್ರಮವಾಗಿದೆ, ಜಿಲ್ಲೆಯ ಪ್ರತಿಯೊಬ್ಬ ರೈತರೂ ಸಹ ತಮ್ಮ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಕೃಷಿ ಇಲಾಖೆಯ ಮೂಲಕ ಮನವೊಲಿಸಿ, ಪ್ರೋತ್ಸಾಹಿಸಲಾಗುವುದು, ಜಿಲ್ಲೆಯಲ್ಲಿ ಕೊರೋನಾ ನಂತರ ಕೃಷಿ ಚಟುವಟಿಕೆ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಭಿತ್ತನೆ ಬೀಜ ದೊರೆಯದೇ ಇರುವುದರಿಂದ ಹೆಚ್ಚಿನ ಪ್ರದೇಶದಲ್ಲಿ ಭಿತ್ತನೆ ಕಾರ್ಯ ನಡೆಯುತ್ತಿಲ್ಲ ಆದ್ದರಿಂದ ಜಿಲ್ಲೆಗೆ ಅಗತ್ಯವಿರುವ ಎಂಓ4 ಭಿತ್ತನೆ ಬೀಜವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರಬರಾಜು ಮಾಡಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮೆಕ್ಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಅರಣ್ಯ ಸಮಿತಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ವನಜಾಕ್ಷಿ ಶೆಟ್ಟಿ ಗಿಡ ನೆಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುದೂರು ಬ್ಲಾಕ್ ಮೀಸಲು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿದ ಇಂಗು ಗುಂಡಿಗಳ ಮೇಲೆ ಮಾವು, ಹಲಸು, ಚಾರ, ಹೊಂಗೆ ಮತ್ತು ಇನ್ನಿತರ ವಿವಿಧ ಕಾಡು ಜಾತಿಯ ಬೀಜ ಬಿತ್ತನೆ ಕಾರ್ಯಕ್ರಮ ಮಾಡಲಾಯಿತು. ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಸುನಿಲ್ ವನಮಹೋತ್ಸವದ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮಣ್ ಶೆಟ್ಟಿ, ಸದಸ್ಯೆ ಭಾರತಿ ಶೆಟ್ಟಿ, ಅರಣ್ಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ನಾಯ್ಕ್, ಶಾಲಾ ಸ್ಥಾಪಕ ಅಧ್ಯಕ್ಷ ಎಂ. ಜೆ. ಬೇಬಿ, ಸ್ಥಳ ದಾನಿಗಳಾದ ನಾರಾಯಣ ಪೂಜಾರಿ ಮೆಕ್ಕೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರಾಧಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್, ಶಾಲಾ ಮುಖ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪ್ರಸ್ತುತ ಕೋವಿಡ್-19 ಲಾಕ್ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕ.ರಾ.ರ.ಸ.ನಿಗಮದ ವತಿಯಿಂದ ಮಂಗಳೂರು-ಪೂನಾ ಮಾರ್ಗದಲ್ಲಿ ಅಂಬಾರಿ ಡ್ರೀಮ್ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 28 ರಿಂದ ಪುನಃ ಸಂಚಾರವನ್ನು ಪ್ರಾರಂಭಿಸಲಾಗುವುದು. ಸಾರಿಗೆ ಕಾರ್ಯಾಚರಣೆಯ ವಿವರ: ಅಂಬಾರಿ ಡ್ರೀಮ್ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ನ 4 ಗಂಟೆಗೆ ಮಂಗಳೂರಿನಿಂದ ಹೊರಟು ಉಡುಪಿ, ಮಣಿಪಾಲ, ಕುಂದಾಪುರ, ಕುಮಟ, ಬೆಳಗಾವಿ, ಕರಾಡ, ಸತಾರ ಮಾರ್ಗವಾಗಿ ಬೆಳಗ್ಗೆ 6 ಗಂಟೆಗೆ ಪೂನಾ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ 6.30 ಕ್ಕೆ ಪೂನಾದಿಂದ ಹೊರಟು ಮರುದಿನ ಬೆಳಗ್ಗೆ 7 ಗಂಟೆಗೆ ಮಂಗಳೂರು ತಲುಪಲಿದೆ. ಉಡುಪಿಯಿಂದ ಹೈದ್ರಾಬಾದ್ಗೆ ಈಗಾಗಲೇ ರಾಜಹಂಸ ಸಾರಿಗೆಗಳನ್ನು ಪ್ರಾರಂಭಿಸಲಾಗಿದ್ದು, ಉಡುಪಿಯಿಂದ ಬೆಳಗ್ಗೆ 11.30 ಕ್ಕೆ ಹೊರಟು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹೊಸಪೇಟೆ, ರಾಯಚೂರು, ಮೆಹಬೂಬನಗರ ಮಾರ್ಗವಾಗಿ ಬೆಳಗ್ಗೆ 6 ಗಂಟೆಗೆ ಹೈದ್ರಾಬಾದ್ ತಲುಪಲಿದ್ದು, ಮರು ಪ್ರಯಾಣದಲ್ಲಿ ಸಂಜೆ 5.45 ಕ್ಕೆ ಹೈದ್ರಾಬಾದ್ನಿಂದ ಹೊರಟು ಮರುದಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಿರುವಂತಹ ‘ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ’ ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಾರ್ವಜನಿಕ ಶಿಕ್ಷಣದ ಉಪನಿರ್ದೇಶಕರು, ಕಾರ್ಮಿಕ ಇನ್ಸ್ಪೆಕ್ಟರ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು, ಬಾಲ ಕಾರ್ಮಿಕತೆಗೆ ಒಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು, ಕಾರ್ಯಾಂಗ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿ ತಳ ಮಟ್ಟದಲ್ಲಿ ಅಂದರೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಯ ಅಡಿಯಲ್ಲಿ ಬಾಲ ಕಾರ್ಮಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ಸರಕಾರ ಚಿಂತಿಸಬೇಕಾಗಿದೆ ಎಂದು ಆಗ್ರಹಿಸಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್, ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ, ಯೂನಿಟ್ ನಾಯಕರುಗಳಾದ ನೌಫಾಲ್,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ತುಳುನಾಡಿನ ದೈವಾರಾಧನೆ ಕುರಿತು ಸೋನು ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ‘ಧರ್ಮದೈವ’ ತುಳು ಕಿರುಚಿತ್ರವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು. ಕಿರುಚಿತ್ರವನ್ನು ಲೋಕಾರ್ಪಣೆಗೊಳಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾತನಾಡಿ, ದೈವಾರಾದನೆ ತುಳುನಾಡಿನ ಸಂಸ್ಕೃತಿ ಎಂಬ ಸತ್ಯವನ್ನು ಯಾರಿಂದಲೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಅಲ್ಲದೇ ಈ ವಿಚಾರಗಳು ಬರೀ ಮೂಢನಂಬಿಕೆಯಲ್ಲ, ಇಡೀ ತುಳು ಸಮಾಜವೇ ದೈವಾರಾಧನೆಯ ನಂಬಿಕೆಯ ಮೇಲೆ ನಿಂತಿದೆ ಎಂದರು. ಧರ್ಮದೈವ ಕಿರುಚಿತ್ರ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಅಕಾಡೆಮಿ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಭಾಸ್ಕರ್ ರೈ ಕುಕ್ಕುವಳ್ಳಿ ಅಭಿಪ್ರಾಯಪಟ್ಟರು. ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನ ಮಾಡಿದ್ದು, ಸುಧಾಕರ್ ಪಡೀಲ್ ನಿರ್ಮಾಣ ಮಾಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸ್ತುತ ಕೋವಿಡ್ ಲಾಕ್ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕ.ರಾ.ರ.ಸ.ನಿಗಮದ ವತಿಯಿಂದ ಮಂಗಳೂರು-ಹೈದ್ರಾಬಾದ್, ಮಂಗಳೂರು-ಮAತ್ರಾಲಯ ಮಾರ್ಗದಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 25 ರಿಂದ ಪುನಃ ಸಾರಿಗೆಗಳ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಸಾರಿಗೆ ಕಾರ್ಯಾಚರಣೆಯ ವಿವರ: ಅಂಬಾರಿ ಡ್ರೀಮ್ ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಿಂದ ಹೊರಟು ಉಡುಪಿ, ಮಣಿಪಾಲ, ಕುಂದಾಪುರ, ಕುಮಟ, ಹುಬ್ಬಳ್ಳಿ, ರಾಯಚೂರು, ಮೆಹಬೂಬನಗರ ಮಾರ್ಗವಾಗಿ ಬೆಳಗ್ಗೆ 9 ಗಂಟೆಗೆ ಹೈದ್ರಾಬಾದ್ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ 5 ಗಂಟೆಗೆ ಹೈದ್ರಾಬಾದ್ನಿಂದ ಹೊರಟು ಮೆಹಬೂಬನಗರ, ರಾಯಚೂರು, ಹುಬ್ಬಳ್ಳಿ, ಕುಮಟ, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ಬೆಳಗ್ಗೆ 10 ಗಂಟೆಗೆ ಮಂಗಳೂರು ತಲುಪಲಿದೆ. ನಾನ್ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ಮ 3.30 ಕ್ಕೆ ಮಂಗಳೂರಿನಿಂದ ಹೊರಟು ಉಡುಪಿ, ಕುಂದಾಪುರ, ಸಿದ್ಧಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮಾರ್ಗವಾಗಿ ಬೆಳಗ್ಗೆ 6.30 ಕ್ಕೆ ಮಂತ್ರಾಲಯ ತಲುಪಲಿದ್ದು, ಮರು ಪ್ರಯಾಣದಲ್ಲಿ ಸಂಜೆ 5 ಗಂಟೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯು ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರಿ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅಕ್ಟೋಬರ್ 15 ರ ವರೆಗೆ 12 ಟನ್ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ನಿಷೇಧಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ. ಬದಲಿ ಮಾರ್ಗ: ಉಡುಪಿ – ಸಿದ್ದಾಪುರ – ಹೊಸಂಗಡಿ – ಬಾಳೆಬರೇ ಘಾಟ್ ಹುಲಿಕಲ್- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹಾಗೂ ಮಂಗಳೂರು-ಕಾರ್ಕಳ-ಹೆಬ್ರಿ-ಸಿದ್ಧಾಪುರ-ಹೊಸAಗಡಿ-ಬಾಳೆಬರೇ ಘಾಟ್ -ಹುಲಿಕಲ್-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ► ಬೈಂದೂರು-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ ದುರಸ್ತಿ: ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ – https://kundapraa.com/?p=49392 . ► ಅಗ್ರಿಗೇಟರ್ಸ್ ನಿಯಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ಯಾಕ್ಸಿಗಳ ಪ್ರಯಾಣ ದರ ಪರಿಷ್ಕರಣೆ – https://kundapraa.com/?p=49466 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೇ 20 ರಿಂದ ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ಅಗ್ರಿಗೇಟರ್ಸ್ ನಿಯಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳಿಗೆ ಪ್ರಯಾಣ ದರ ಪರಿಷ್ಕರಣೆಯನ್ನು ಸಾರ್ವಜನಿಕರ ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ಸ್ಥಳೀಯ ಜನಸಂಖ್ಯೆಗನುಗುಣವಾಗಿ ಮತು ಟ್ಯಾಕ್ಸಿ ಮಾಲಕ/ ಚಾಲಕರ ಜೀವನ ನಿರ್ವಹಣಾ ವೆಚ್ಚ, ಇಂಧನ ಬೆಲೆಗಳ ಹೆಚ್ಚಳ ಹಾಗೂ ವಾಹನಗಳ ಬೆಲೆ ಮತ್ತು ನಿರ್ವಹಣಾ ವೆಚ್ಚವು ಹೆಚ್ಚಾಗಿರುವುದನ್ನು ಗಮನದಲ್ಲಿರಿಸಿಕೊಂಡು ಈ ಕೆಳಗಿನಂತೆ ದರ ನಿಗದಿಪಡಿಸಿ, ಆದೇಶ ಹೊರಡಿಸಿ, ನಿರ್ಣಯ ಕೈಗೊಳ್ಳಲಾಗಿರುತ್ತದೆ. 5 ಲಕ್ಷ ದವರೆಗಿನ ಮೌಲ್ಯದ ಡಿ ವರ್ಗದ ಟ್ಯಾಕ್ಸಿಗಳಿಗೆ ನಿಗಧಿತ ದರ ಕನಿಷ್ಟ 4 ಕಿ.ಮೀ. ವರೆಗೆ 75 ರೂ, ಹೆಚ್ಚುವರಿ ಪ್ರತಿ ಕಿ.ಮೀ ಗೆ 25 ರೂ ಆಗಿರುತ್ತದೆ. 5 ರಿಂದ 10 ಲಕ್ಷದ ವರೆಗಿನ ಮೌಲ್ಯದ ಸಿ ವರ್ಗದ ಟ್ಯಾಕ್ಸಿಗಳಿಗೆ ನಿಗಧಿತ ದರ ಕನಿಷ್ಟ 4 ಕಿ.ಮೀ. ವರೆಗೆ 100 ರೂ. ಆಗಿದ್ದು, ಹೆಚ್ಚುವರಿ…

Read More