Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಠ್ ಕಾಂ ಸುದ್ದಿ ಕುಂದಾಪುರ: ಹಕ್ಲಾಡಿ ಗ್ರಾಮ ಹಕ್ಲಾಡಿಗುಡ್ಡೆ ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂದಿರ ಅಧ್ಯಕ್ಷರಾಗಿ ಉಮೇಶ್ ಹಕ್ಲಾಡಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷ-ಲಕ್ಷ್ಮೀಕಾಂತ, ಕಾರ‍್ಯದರ್ಶಿ-ಸುರೇಶ್ ಹಕ್ಲಾಡಿ, ಪ್ರಧಾನ ಅರ್ಚಕ-ರಾಜು, ಸದಸ್ಯರು-ಗಣೇಶ್ ಬಾರಂದಾಡಿ, ಶರತ್, ನಾಗರಾಜ ಡಿ, ವಿಶ್ವನಾಥ, ಸತೀಶ್, ರವಿ ಡಿ, ರತ್ನಾಕರ, ವಸಂತ, ನಾರಾಯಣ ಹೋರ್ಣಿ, ಚೇತನ್ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದಲ್ಲಿ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಶಿಕಲಾ ಬಿಜೂರು ಅವರು ಮಾತನಾಡಿ ಯೋಗ ಎಂದರೆ ಬರೀ ಆಸನಗಳಲ್ಲ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಸಮಾಧಿ, ಇವುಗಳನ್ನೊಳಗೊಂಡಿದ್ದು. ಮಾನಸಿಕ ನೆಮ್ಮದಿ ಮತ್ತು ಮನುಷ್ಯನ ಏಕಾಗ್ರತೆಗೆ ಯೋಗ ಅಗತ್ಯ. ವೆಚ್ಚವಿಲ್ಲದ ವೈದ್ಯ ಯೋಗವಾಗಿದೆ. ಒತ್ತಡ ನಿರ್ವಹಣೆಯಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಮನೆ ಮದ್ದು ಎಂದು ಹೇಳಿದರು. ಇನ್ನೋರ್ವ ಅತಿಥಿ ತಿಮ್ಮೇಶ್ ಬಿ ಎನ್, ಠಾಣಾಧಿಕಾರಿ ಬೈಂದೂರು ಇವರು ಯೋಗದ ಮಹತ್ವವನ್ನು ಉದಾಹರಣೆಗಳೊಂದಿಗೆ ತಿಳಿಸಿದರು. ಮುಖ್ಯ ಶಿಕ್ಷಕ ರವಿದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು, ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು| ಶ್ರೀನಿಧಿ ಸ್ವಾಗತಿಸಿದರು, ಕು| ಮೇಘನಾ ಎಲ್. ಕಾರ್ಯಕ್ರಮ ನಿರೂಪಿಸಿದರು. ಮೇಘನಾ ಜಿ. ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರರ್ಕಾರ‍್ಸ್ ಕಾಲೇಜಿನಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ಯುತ್ ರೆಡಕ್ರಾಸ್, ನೆಹರು ಯುವ ಕೇಂದ್ರ ಉಡುಪಿ, ಶ್ರೀ ಪತಂಜಲಿ ಯೋಗ ಸಮಿತಿ, ಇಂಡಿಯನ್ ರೆಡಕ್ರಾಸ್ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ-2018 ಕಾರ‍್ಯಕ್ರಮ ನಡೆಯಿತು. ಕಾರ‍್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಕುಂದಾಪುರ ತಾಲೂಕು ಉಪವಿಭಾಗಾಧಿಕಾರಿ ಭೂಬಾಲನ್ ಮಾತನಾಡಿ ಭಾರತೀಯ ಯೋಗಕ್ಕೆ ಪ್ರಪಂಚದಾದ್ಯಂತ ತನ್ನದೇ ವೈಶಿಷ್ಟ್ಯತೆ ಮತ್ತು ಮಹತ್ವವಿದೆ. ಎರಡುಸಾವಿರ ವರ್ಷಗಳಿಂದ ಭಾರತದಲ್ಲಿ ಯೋಗ ವಿದ್ಯೆ ಇದೆ. ಬೇರೆಬೇರೆ ದೇಶಗಳಲ್ಲಿ ನಮ್ಮ ದೇಶದ ಈ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟು ಅದನ್ನು ಕಲಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯೋಗದ ಬಗ್ಗೆ ವಿಶೇಷ ಜಾಗೃತಿ ಬಂದಿದೆ. ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಇದು ಎಲ್ಲರಿಗೂ ಸಿಗುವಂತಾಗಬೇಕು. ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳಿಗೆ ತಲುಪಬೇಕು. ಯೋಗಕ್ಕೆ ವಯಸ್ಸಿನ ಅಂತರವಿಲ್ಲ. ಎಲ್ಲಾ ವಯಸ್ಸಿನವರು ಯೋಗ ಮಾಡುವುದರೊಂದಿಗೆ ವಯಕ್ತಿಕವಾಗಿ ತಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಚೆನ್ನಾಗಿರಿಸಿಕೊಳ್ಳಲು ಸಹಕಾರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗುರುವಂದನಾವಚನವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಧರ್ಮಶ್ರೀ ರಿಲೀಫ್ ಫೌಂಡೇಶನ್ ಮಟ್ನಕಟ್ಟೆ ಕೆರ್ಗಾಲ್ ಇವರಿಂದ ಕಿರಿಮಂಜೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಗಿಡ ಮತ್ತು ಬೀಜದುಂಡೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ರಮಾನಂದ ಪ್ರಭು ಅವರು ಮಾತನಾಡುತ್ತಾ ಪ್ರಕೃತಿಯ ಸೌಂದರ್ಯ ಕಾಪಾಡುವಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು. ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸುವುದು ಮಾತ್ರವಲ್ಲ ಪ್ರತಿಯೊಬ್ಬರು ತಮ್ಮ ಮನೆಯ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಕರೆಕೊಟ್ಟರು. ನಂತರ ವಿನಯ ಚಂದ್ರ ಸಾಸ್ತಾನ ಇವರು ವಿದ್ಯಾರ್ಥಿಗಳಿಗೆ ಬೀಜದುಂಡೆಯನ್ನು ವಿತರಿಸಿ ಪ್ರಕೃತಿಯ ಮಡಿಲಲ್ಲಿ ಗಿಡವನ್ನು ಬೆಳೆಸುವುದರಿಂದ ಭೂಮಿ ತಂಪಾಗುವುದು ಮಾತ್ರವಲ್ಲ ಅಂತರ್ಜಲ ಕುಸಿಯುವುದನ್ನು ತಪ್ಪಿಸಬಹುದು. ಅದರೊಂದಿಗೆ ಪ್ರಕೃತಿಗೆ ಕೊಂಡಿಯಾಗಿರುವ ಪ್ರಾಣಿ ಪಕ್ಷಿಗಳು ಕೂಡಾ ನಮ್ಮೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡು ಮಾನವೀಯ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದೆಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ಕಾರ್ಯದರ್ಶಿ ಗಣೇಶ್ ಆರ್.ಎಮ್., ಟ್ರಸ್ಟಿಗಳಾದ ಮಹೇಶ್ ಪೂಜಾರಿ, ರಾಜೇಶ್ ಪೂಜಾರಿ, ಮಹೇಂದ್ರ ಪೂಜಾರಿ, ಶಾಲಾ ವಿದ್ಯಾರ್ಥಿಗಳು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಗಂಗೊಳ್ಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ದುರ್ಗರಾಜ್ ಪೂಜಾರಿಯವರು ಖಾಸಗಿ ಅನುದಾನಿತ ಶಾಲೆಗಳು ಸರಕಾರದ ವಿವಿಧ ಸೌಲಭ್ಯಗಳನ್ನು ಉತ್ತಮವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಆದರೂ ಅನುದಾನಿತ ಶಾಲೆಗಳಲ್ಲಿ ಕೆಲವೊಂದು ಮೂಲಭೂತ ಸೌಲಭ್ಯದ ಕೊರತೆ ಇದ್ದರೂ ವಿದ್ಯಾರ್ಥಿಗಳ ಮೇಲೆ ಇದರ ಪರಿಣಾಮ ಬೀರದಂತೆ ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವಿನಿಂದ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಶಾಲೆಯ ಮುಖ್ಯಶಿಕ್ಷಕಿ ಸುಮನಾ ಪಡಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ರೋಟರಿ ಕ್ಲಬ್‌ನ ಚುನಾಯಿತ ಅಧ್ಯಕ್ಷ ಕೆ.ರಾಮನಾಥ ನಾಯಕ್, ಬಿ.ಲಕ್ಷ್ಮೀಕಾಂತ ಮಡಿವಾಳ ಶುಭ ಹಾರೈಸಿದರು. ಶಾಲೆಯ ಸಹಶಿಕ್ಷಕರಾದ ಜಿ.ವಿಶ್ವನಾಥ ಭಟ್, ನಾರಾಯಣ ಉಪಾಧ್ಯಾಯ, ಲಕ್ಷ್ಮೀ, ಮಾಲಾಶ್ರೀ, ರೇಖಾ ಮತ್ತಿತರರು ಉಪಸ್ಥಿತರಿದ್ದರು. ಸಹಶಿಕ್ಷಕ ಎನ್.ಸುಭಾಶ್ಚಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ:  ಸರ್ಕಾರದ ಕೃಷಿ ಸಾಲ ಮನ್ನಾ ಬಗ್ಗೆ ಕುಂದಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರುಗಳ ಸಭೆಯು 19-06-2018 ರಂದು ಟಿ.ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಜರುಗಿತು. ಸರ್ಕಾರದ ಸಂಪೂರ್ಣ ಸಾಲಮನ್ನಾ ಯೋಜನೆಯನ್ನು ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸ್ವಾಗತಿಸುವುದರೊಂದಿಗೆ ರೈತರಲ್ಲಿ ವರ್ಗಿಕರಣ ಮಾಡದೇ ಸಾಲ ಮನ್ನಾ ಮಾಡಬೇಕು, ಕೃಷಿ ಪತ್ತಿನ ಸಂಘದಲ್ಲಿ ಪಡೆದಿರುವ ಕೃಷಿ ಸಂಬಂಧಿಸಿದ ದೀರ್ಘಾವಧಿ ಸಾಲ, ಮಧ್ಯಮಾವಧಿ ಸಾಲ ಮನ್ನಾ ಮಾಡಬೇಕೆಂತಲೂ. ಈ ವರೆಗಿನ ಮಾಹಿತಿ ಪ್ರಕಾರ ಸರ್ಕಾರವು 31-12-2017 ರ ವರೆಗಿನ ಸಾಲಪಡೆದವರಿಗೆ ಮಾತ್ರ ಮನ್ನಾ ಮಾಡುವುದಾಗಿ ಸಮಿಕ್ಷೆ ನಡೆಸುತ್ತಿದ್ದು, ಅದನ್ನು ಆರ್ಥಿಕ ವರ್ಷ ಅಂದರೆ 31 ಮಾರ್ಚಿ 2018ವರೆಗಿನ ಪಡೆದಿರುವ ಹಾಗೂ ಮರುಪಾವತಿಸಿರುವ ಎಲ್ಲಾ ಕೃಷಿ ಸಾಲದ ರೈತರಿಗೆ ದೊರಕಿಸುವಂತೆ ವ್ಯವಸ್ಥೆ ಮಾಡಬೇಕೆಂತಲೂ, ನೊಡೇಲ್ ಅಧಿಕಾರಿಗಳನ್ನು ನೇಮಿಸಿ ರೈತರಿಗೆ ಕಿರುಕುಳ ಹಾಗೂ ವಿಳಂಭ ನೀಡುವ ಸಾಧ್ಯತೆ ಇರುವುದರಿಂದ, ಈ ಹಿಂದೆ ಬೆಳೆ ಸಾಲ ಮನ್ನಾ ಮಾಡಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂಬ ಗ್ರಾಮಸ್ಥರ ಆಗ್ರಹವು ಮರೀಚಿಕೆಯಾಗಿದ್ದು, ಹಂಬಲವು ಕೂಡಿ ಬರಲು ಕಾಲ ಸನಿಹವಾಗಿಲ್ಲವೇ ಎಂಬ ತುಡಿತದೊಡನೆ ಮತ್ತೆ ಮೌನಕ್ಕೆ ಶರಣಾದ ಕೊಲ್ಲೂರು ಪರಿಸರದ ನಿವಾಸಿಗಳಿಗೆ ಹಿಂದಿನ ಆರೋಗ್ಯ ಕೇಂದ್ರವೇ ಗತಿಯಾಗಿದ್ದು ಇಲ್ಲಿ ಒಂದಿಷ್ಟು ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಪ್ರಸ್ತುತ ಹೊರ ರೋಗಿ ತಪಾಸಣಾ ವಿಭಾಗ ಹಾಗೂ ತುರ್ತು ಚಿಕಿತ್ಸೆ ವಿಭಾಗ ಹೊಂದಿರುವ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವು ಜಡ್ಕಲ್, ಮುದೂರು, ಗೋಳಿಹೊಳೆ, ಕೊಲ್ಲೂರು ಹಾಗೂ ಯಳಜಿತ್ ಗ್ರಾಮಗಳ ರೋಗಿಗಳನ್ನು ನಿಭಾಯಿಸುವ ಜವಾಬ್ದಾರಿ ಹೊಂದಿದೆ. ದಿನಕ್ಕೆ ಕನಿಷ್ಠ 60 ರಿಂದ 70 ರೋಗಿಗಳನ್ನು ನೋಡುತ್ತಿರುವ ಇಲ್ಲಿನ ವೈದ್ಯಾಧಿಕಾರಿಗಳು ಕಾರ್ಯನಿಮಿತ್ತ ಬೇರೆ ಕಡೆ ತೆರಳಿದಲ್ಲಿ ಇಲ್ಲಿನ ರೋಗಿಗಳ ಗತಿ ಹೇಳತೀರದು. ಈ ಎಲ್ಲಾ ವಿದ್ಯಮಾನಗಳ ನಡುವೆ ಸದಾ ರೋಗಿಗಳು ತುಂಬಿರುವ ಸರಕಾರಿ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಸೌಕರ್ಯ ಕೊರತೆಗಳು ಎದ್ದು ಕಾಣುತ್ತಿವೆ. ಗೋಳಿಹೊಳೆ, ಎಳಜಿತ್ ಸಬ್ ಸೆಂಟರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ನಾವುಂದ ಮಸ್ಕಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪಕ ಅಧ್ಯಕ್ಷ ಡಾ| ಎನ್.ಕೆ ಬಿಲ್ಲವ ಅವರು ಉಚಿತ ನೋಟು ಪುಸ್ತಕಗಳನ್ನು ವಿತರಿಸಿದರು. ಶುಭದಾ ಶಾಲೆಯ ನಿರ್ದೇಶಕರಾದ ಕೆ ಪುಂಡಲೀಕ ನಾಯಕ್ ಮತ್ತು ಶಾಲೆಯ ಅಧ್ಯಕ್ಷ ರಘು ಪೂಜಾರಿ, ಉಪಾಧ್ಯಕ್ಷ ಚಂದ್ರ ಪೂಜಾರಿ, ಮುಖ್ಯ ಶಿಕ್ಷಕರಾದ ಗಣಪ ಬಿಲ್ಲವ, ಸಹ ಶಿಕ್ಷಕಿಯರಾದ ಸುಲೇಖಾ, ಶಿಲ್ಪ ಮತ್ತು ಶಾಲಾ ಉಸ್ತುವಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು. ಕಾರ್ಯಕ್ರಮ ಚಂದಗಾಣಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರಾಮಕ್ಷತ್ರೀಯ ಯುವಕ ಮಂಡಳಿ ಕುಂದಾಪುರ ಆಶ್ರಯದಲ್ಲಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಾಗೂ 2017-18ನೇ ಸಾಲಿನ ಮಹಾಸಭೆ ಜರುಗಿತು. ರಾಮಕ್ಷತ್ರೀಯ ಸಂಘದ ಅಧ್ಯಕ್ಷರಾದ ರವೀಂದ್ರ ಕಾವೇರಿಯವರು ಅಧ್ಯಕ್ಷತೆ ವಹಿಸಿದ್ದರು. 2017-18 ನೇ ಸಾಲಿನ ಅಧ್ಯಕ್ಷರಾದ ಅಜೆಯ್ ಹವಲ್ದಾರ್, ಕಾರ್ಯದರ್ಶಿ ಮಂಜುನಾಥ್ ಉಪ್ಪಿನಕುದ್ರು, ನಿಯೋಜಿತ ಅಧ್ಯಕ್ಷರಾದ ಸಿ.ಎಚ್.ಗಣೇಶ್, ಗೌರವಾಧ್ಯಕ್ಷ ಭಾಸ್ಕರ ಬಾಣ, ಮಹಿಳಾ ಮಂಡಳಿ ಅಧ್ಯಕ್ಷೆ ಕಲ್ನಾಣಿ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 2018-19ನೇ ಸಾಲಿನ 53 ನೇ ವರ್ಷದ ಅಧ್ಯಕ್ಷರಾಗಿ ಸಿ.ಎಚ್.ಗಣೇಶ್‌ರವರು ಅಧಿಕಾರ ವಹಿಸಿಕೊಂಡರು. ಹಾಗೂ 2019-20 ನೇ ಸಾಲಿನ ಅಧ್ಯಕ್ಷರಾಗಿ ರವಿ ಕೆ. ಕೆಂಚಮ್ಮನ ಮನೆಯವರನ್ನು ಆಯ್ಕೆ ಮಾಡಲಾಯಿತು. ಬಳಿಕ ರಾವಣ ವಧೆ ಯಕ್ಷಗಾನ ತಾಳಮದ್ದಲೆ ಜರುಗಿತು. ಕಾರ್ಯದರ್ಶಿ ಮಂಜುನಾಥ ಉಪ್ಪಿನಕುದ್ರು ವರದಿ ಮಂಡಿಸಿದರು. ಅಜೆಯ್ ಹವಲ್ದಾರ್‌ರವರು ಸ್ವಾಗತಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 40ನೇ ಕಾರ್ಯಕ್ರಮವಾಗಿ ಉದಯೋನ್ಮುಖ ಗಾಯಕ ಕೆ, ರಮೇಶ್ ಪೈ, ಕುಂದಾಪುರ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ತಲ್ಲೂರು ವಿಠ್ಠಲ ಭಜನಾ ಮಂಡಳಿ ಹಾಗೂ ದಿನೇಶ್ ದೇವಾಡಿಗ ತಂಡ ಉಪ್ಪಿನಕುದ್ರು ಇವರ ಭಜನೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಸಭಾ ಕಾರ್ಯಕ್ರಮದಲ್ಲ್ಲಿ ಗಂಗೊಳ್ಳಿಯ ಡಾ. ಕಾಶೀನಾಥ್ ಪೈಯವರು ಅಧ್ಯಕ್ಷರಾಗಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಎಲ್.ಐ.ಸಿ, ಯ ವಿಜಯಕುಮಾರ್ ಮೈಸೂರು, ಕುಂದಾಪುರದ ಜನಾರ್ಧನ್ ಮಲ್ಯ, ಕೆ. ರಮೇಶ್ ಪೈ ಕುಂದಾಪುರ ಹಟ್ಟಿಯಂಗಡಿಯ ಶಿಕ್ಷಕರಾದ ಉದಯ ಭಂಡಾರ್‌ಕಾರ್ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್‌ರವರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಗೊಂಬೆಯಾಟ ರಂಗಭೂಮಿಯ ಹಿತೈಶಿ ಹಾಗೂ ಪ್ರೋತ್ಸಾಹಕರಾದ ಡಾ. ಎಚ್.ವಿ. ನರಸಿಂಹ ಮೂರ್ತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ. ರಮೇಶ್ ಪೈಯವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್‌ರವರು ಕಾರ್ಯಕ್ರಮ ನಿರೂಪಿಸಿದರು.

Read More