ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ನಾವುಂದ ಮಸ್ಕಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಗಳ ಸ್ಥಾಪಕ ಅಧ್ಯಕ್ಷ ಡಾ| ಎನ್.ಕೆ ಬಿಲ್ಲವ ಅವರು ಉಚಿತ ನೋಟು ಪುಸ್ತಕಗಳನ್ನು ವಿತರಿಸಿದರು.
ಶುಭದಾ ಶಾಲೆಯ ನಿರ್ದೇಶಕರಾದ ಕೆ ಪುಂಡಲೀಕ ನಾಯಕ್ ಮತ್ತು ಶಾಲೆಯ ಅಧ್ಯಕ್ಷ ರಘು ಪೂಜಾರಿ, ಉಪಾಧ್ಯಕ್ಷ ಚಂದ್ರ ಪೂಜಾರಿ, ಮುಖ್ಯ ಶಿಕ್ಷಕರಾದ ಗಣಪ ಬಿಲ್ಲವ, ಸಹ ಶಿಕ್ಷಕಿಯರಾದ ಸುಲೇಖಾ, ಶಿಲ್ಪ ಮತ್ತು ಶಾಲಾ ಉಸ್ತುವಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು. ಕಾರ್ಯಕ್ರಮ ಚಂದಗಾಣಿಸಿದರು.