Author: ನ್ಯೂಸ್ ಬ್ಯೂರೋ

ಹೊಳೆಯುವ ಹಾಗೂ ದೃಢವಾದ ಬಿಗಿಯಾದ ಚರ್ಮಕ್ಕಾಗಿ ಮುಖದ ಯೋಗ, ವ್ಯಾಯಾಮಗಳು ಅತ್ಯಂತ ಉಪಕಾರಿ. ಇದು ಅನಾದಿಕಾಲದಿಂದಲೂ ಜಾರಿಯಲ್ಲಿದೆ. ಈ ಆಸನಗಳು ನೈಸರ್ಗಿಕವಾದ ಆರೋಗ್ಯವನ್ನು ನೀಡುವುದಲ್ಲದೇ, ಮುಖದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುವುದು ಬಹಳ ಪ್ರಯೋಜನಕಾರಿ. ಬೆವರು, ಉಸಿರಾಟ-ತಾಲೀಮು ಮೂಲಕ ನಿಮ್ಮ ದೇಹದಿಂದ ವಿಷವನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಮುಖದ ಯೋಗವು ಟೋನ್‌ಗಳು, ವಿಶ್ರಾಂತಿ ಮತ್ತು ಮುಖದ ಚರ್ಮಕ್ಕೆ ನೈಸರ್ಗಿಕ ವರ್ಧಕವನ್ನು ನೀಡುತ್ತದೆ ಮತ್ತು ಮುಖದ ಸ್ನಾಯುಗಳನ್ನು ಮರುಹೊಂದಿಸುತ್ತದೆ. ಮುಖದ ಯೋಗವು ಮುಖ ಮತ್ತು ಕತ್ತಿನ ಸ್ನಾಯುಗಳನ್ನು ಟೋನ್, ದೃಢವಾಗಿ ವಿಸ್ತರಿಸುತ್ತದೆ ಮತ್ತು ಯುವ ನೋಟವನ್ನು ನೀಡುವ ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಮಗೆ ದೃಢವಾದ ಮುಖ ಮತ್ತು ಹೊಳೆಯುವ ಚರ್ಮವನ್ನು ಒದಗಿಸಲು ಸಹಾಯ ಮಾಡುವ ಕೆಲವು ಯೋಗ ಆಸನಗಳು ಇಲ್ಲಿವೆ. ವಿಪ್ರಿತಾ ಕರಣಿ ಮುಂದೆ ಬಾಗಿ ಮುಖವನ್ನು ಫ್ರೀ ಮಾಡಿ. ಅಥವಾ ಉತ್ತನಾಸನ, ವಿಪ್ರಿತಾ ಕರಣಿ ಮಾಡಿ. ಈ ಭಂಗಿಗಳು ರಕ್ತವು ನಿಮ್ಮ ತಲೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮನೆಗಳಿಗೆ ತೆರಳಿ ಗೋ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನುಗಂಗೊಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗಂಗೊಳ್ಳಿ ನಿವಾಸಿ ಅಬ್ದುಲ್ ರಹೀಂ (30) ಬಂಧಿತ ಆರೋಪಿ. ಗಂಗೊಳ್ಳಿ ಠಾಣಾ ಪಿಎಸ್ಐ ಭೀಮಾಶಂಕರ್ ಅವರು ಹೆಡ್ ಕಾನ್ಸ್ಟೇಬಲ್ ಗಿರೀಶ್ ಅವರೊಂದಿಗೆ ಗಂಗೊಳ್ಳಿ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಗೊಳ್ಳಿ ಮೀನು ಮಾರ್ಕೆಟ್ ಸಮೀಪ ಅಬ್ದುಲ್ ರಹೀಂ ಎಂಬಾತ ದನದ ಮಾಂಸವನ್ನು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದು, ಅದರಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಿ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಅಕ್ರಮವಾಗಿ 4 ಕೆ.ಜಿ ದನದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಆರೋಪಿ ಹಾಗೂ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ 43 ಗ್ರಾಮ ಪಂಚಾಯತಿಗಳಿಗೆ ನಡೆದ ಚುನಾವಣೆಯಲ್ಲಿ ಶೇ.76.09ರಷ್ಟು ಮತದಾನವಾಗಿದೆ. ತಾಲೂಕಿನ 266 ಮತಗಟ್ಟೆಗಳಲ್ಲಿ ಬಹುತೇಕ ಮತದಾನ ಶಾಂತಿಯುತವಾಗಿ ನಡೆದಿದೆ. ಅಂಪಾರುವಿನಲ್ಲಿ ಮತಕೇಂದ್ರದ ಹೊರಕ್ಕೆ ಮಾತಿನ ಚಕಮಕಿ ನಡೆದಿತ್ತು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಹಾಲಾಡಿಯಲ್ಲಿ, ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಬೆಳ್ಳಾಲದಲ್ಲಿ, ಮಾಜಿ ಶಾಸಕರುಗಳಾದ ಅಪ್ಪಣ್ಣ ಹೆಗ್ಡೆ ಬಸ್ರೂರು ಹಾಗೂ ಕೆ. ಗೋಪಾಲ ಪೂಜಾರಿ ಕಟ್’ಬೆಲ್ತೂರಿನಲ್ಲಿ ಮತದಾನ ಮಾಡಿದರು. ಹಿರಿಯ ನಾಗರಿಕರು, ವಿಕಲಚೇತನರು ಹೆಚ್ಚು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯ ತನಕ ಶೇ.12.41 ಮತದಾನವಾಗಿದ್ದರೇ, 11 ಗಂಟೆಯ ತನಕ ಶೇ30.17, ಮಧ್ಯಾಹ್ನ 1 ಗಂಟೆಯ ತನಕ ಶೇ.49.46 ಹಾಗೂ 3 ಗಂಟೆಯ ಒಟ್ಟು ಶೇ.61.23 ಮತದಾನವಾಗಿದೆ. ಅಂತಿಮವಾಗಿ ಶೇ.76.09 ಮತದಾನವಾಗಿದೆ. ಮತ ಕೇಂದ್ರಗಳಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಲಾಗಿದ್ದು, ಮತದಾನಕ್ಕೂ ಮುನ್ನ ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿತ್ತು. ಎಸ್ಪಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತಿಚಿಗೆ ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿ ಖ್ಯಾತಿ ಗಳಿಸಿದ್ದ ನವ ದಂಪತಿಗಳಿಗೆ ಪ್ರಧಾನಿಯಿಂದಲೂ ಮೆಚ್ಚುಗೆ ದೊರೆತಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮದುವೆಯ ಬಳಿಕ ದಂಪತಿಗಳು ತಿರುಗಾಡಲು ತೆರಳುತ್ತಾರೆ. ಆದರೆ ಈ ದಂಪತಿಗಳು ಭಿನ್ನ. ಅನುದೀಪ್-ಮಿನುಷ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸುವ ಸಂಕಲ್ಪ ಕೈಗೊಂಡರು. ಅನುದೀಪ್ ತಮ್ಮ ಸಂಕಲ್ಪದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಪರಿಣಾಮವಾಗಿ ಯುವಕರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಈ ದಂಪತಿಗಳು ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದ್ದಾರೆ. ಅನುದೀಪ್ ಹೆಗ್ಡೆ ಹಾಗೂ ಮಿನುಷಾ ಅವರು ಮದುವೆಯ ಬಳಿಯ ಹನಿಮೂನ್‌ಗೆ ತೆರಳದೇ ಬೀಚ್ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದರು. ದಂಪತಿಗಳ ಕಾರ್ಯವನ್ನು ಕಂಡು ಸ್ಥಳೀಯರೂ ಅವರಿಗೆ ಸಾಥ್ ನೀಡಿದ್ದರು. ಇದನ್ನೂ ಓದಿ ► ನವದಂಪತಿಗಳ ವೆಡ್ಡಿಂಗ್ ಚಾಲೆಂಜ್‌ಗೆ ಭಾಗಶಃ ಕಸಮುಕ್ತವಾದ ಸೋಮೇಶ್ವರ ಬೀಚ್! –  https://kundapraa.com/?p=43090 . ► ಗ್ರಾಮ ಪಂಚಾಯತ್ ಚುನಾವಣೆ: ಕುಂದಾಪುರ ತಾಲೂಕಿನಲ್ಲಿ ಶೇ.76.09 ಮತದಾನ – https://kundapraa.com/?p=43646…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಶಿರೂರು ನೀರ್ಗದ್ದೆ ಬಳಿ ನಡೆದ ಅಪಘಾತದಲ್ಲಿ ವ್ಯಕ್ತಿಯೋರ್ವ, ಲಾರಿಯಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಾಗಲಕೋಟೆಗೆ ತೆರಳುತ್ತಿದ್ದ ವ್ಯಕ್ತಿ, ಘಟನೆಯಲ್ಲಿ ಮೃತಟ್ಟಿದ್ದಾರೆ. ಶಿರೂರು ನಿರ್ಗದ್ದೆ ಸಮೀಪ ಊಟಕ್ಕೆ ಬಸ್ ನಿಲ್ಲಿಸಿದಾಗ ಬಹಿರ್ದೇಸೆಗಾಗಿ ಹೆದ್ದಾರಿ ದಾಟುತ್ತಿದ್ದ ವೇಳೆ ಇಳಿಜಾರಿನಲ್ಲಿ ಕೋಕ್ ಲಾರಿ ಡಿಕ್ಕಿಯಾಗಿ ದೇಹ ಛಿದ್ರಗೊಂಡಿತ್ತು. ಮೃತ ವ್ಯಕ್ತಿಯನ್ನು ಬಾಗಲಕೋಟ ಜಿಲ್ಲೆ ಹುಲಗುಂದ ತಾಲೂಕಿನ ಮೈಲಾರಪ್ಪ (60) ಎಂದು ಗುರುತಿಸಲಾಗಿದೆ. ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ತೆರವುಗೊಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ 43 ಗ್ರಾ.ಪಂ.ಗಳಿಗೆ ಡಿ.27 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಶನಿವಾರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. 1,262 ಅಭ್ಯರ್ಥಿಗಳು ಕಣದಲ್ಲಿ: ಕುಂದಾಪುರ ತಾಲೂಕಿನ 43 ಗ್ರಾ.ಪಂ.ಗಳ ಒಟ್ಟು 554 ಸ್ಥಾನಗಳಿದ್ದು, ಈ ಪೈಕಿ 24 ಕಡೆಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಉಳಿದ 530 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 1,262 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1.86 ಲಕ್ಷ ಮತದಾರರು: 1,86,685 ಮತದಾರರು ಮತ ಚಲಾಯಿಸಲಿದ್ದಾರೆ. ಇವರಲ್ಲಿ 90,339 ಪುರುಷರು, 96,343 ಮಹಿಳಾ ಮತದಾರರು ಹಾಗೂ ಮೂವರು ಇತರ ಮತದಾರರಿದ್ದಾರೆ. 43 ಚುನಾವಣಾಧಿಕಾರಿಗಳು, 43 ಸಹಾಯಕ ಚುನಾವಣಾ„ಕಾರಿಗಳು, 266 ಮತಗಟ್ಟೆಗಳಿಗೆ ತಲಾ 4ರಂತೆ ಒಟ್ಟು 1,064 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 1,150 ಅ„ಕಾರಿಗಳು ಮತಗಟ್ಟೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 266 ಮತಗಟ್ಟೆ: ಒಟ್ಟು 271 ಮತಗಟ್ಟೆಗಳಿದ್ದು, ಆದರೆ ಹಾಲಾಡಿಯಲ್ಲಿ 2, ಮಚ್ಚಟ್ಟು 2 ಹಾಗೂ ಕೆದೂರಲ್ಲಿ 1 ಮತಗಟ್ಟೆಗಳಲ್ಲಿ ಅವಿರೋಧ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವುಂದ ಅರೆಹೊಳೆಯಲ್ಲಿ ಇಲ್ಲಿನ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಊರ ನಾಗರಿಕರು ಶುಕ್ರವಾರ ಆಯೋಜಿಸಿದ್ದ ಆರ್. ಎನ್. ಶೆಟ್ಟಿ ಶ್ರದ್ಧಾಂಜಲಿ ಸಭೆ ಜರುಗಿತು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ ಚಂದ್ರ ಶೆಟ್ಟಿ, ಮಾತನಾಡಿ, ಉದ್ಯಮಿ, ಸಮಾಜ ಸೇವಕ ಹಾಗೂ ಕೊಡುಗೈ ದಾನಿ ಆರ್. ಎನ್. ಶೆಟ್ಟಿ ಅವರು ಬೆಳೆದು ಬಂದ ಹಾದಿ ಅನನ್ಯವಾದುದು. ಅವರು ಯುವ ಪೀಳಿಗೆಗೆ ಅನುಕರಣೀಯ ಮಾದರಿ ಆಗಿರುವುದರಿಂದ ಅವರ ಬದುಕನ್ನು ದಾಖಲಿಸಿ, ಯುವ ಸಮುದಾಯ ಅರಿತುಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ, ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಆರ್ ಎನ್ ಶೆಟ್ಟಿ ಉದ್ಯಮದಲ್ಲಿ ಯಶಸ್ಸು ಸಾಧಿಸುವುದರ ಜತೆಗೆ ದುಡಿಮೆಯ ಗಣನೀಯ ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದರು. ದೇವಾಲಯ, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದರು. ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಉದಾರ ನೆರವು ನೀಡಿದರು. ರಾಜ್ಯದಾದ್ಯಂತ ಅವರು ನಿರ್ಮಿಸಿರುವ ಮಹತ್ವದ ಸಾರ್ವಜನಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಣಿ ಬಲೆ ಮೀನುಗಾರರ ಒಕ್ಕೂಟ ಉಪ್ಪುಂದ ಇದರ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ರಾಣಿಬಲೆ ಮೀ. ಮಾ. ಪ್ರಾ. ಸ.ಸಂಘ ಉಪ್ಪುಂದ ಇದರ ಆಡಳಿತ ಕಛೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ವೆಂಕಟರಮಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಖಾರ್ವಿ 2019-20 ನೇ ಸಾಲಿನ ಆಯ- ವ್ಯಯ ವನ್ನು ಮಂಡಿಸಿದರು, ಜೊತೆ ಕಾರ್ಯದರ್ಶಿ ಸೋಮಶೇಖರ್ ಖಾರ್ವಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಭಾರತೀಯ ಭೂ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಗಣಪತಿ ಖಾರ್ವಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕೋಶಾಧಿಕಾರಿ ಆದ ಬಿ.ನಾಗೇಶ ಖಾರ್ವಿ, ಮತ್ತು ಸದಸ್ಯರಾದ ಎ.ಶ್ರೀನಿವಾಸ ಖಾರ್ವಿ, ಎಸ್.ಕೃಷ್ಣ ಖಾರ್ವಿ, ರಾಜೇಂದ್ರ ಖಾರ್ವಿ, ಶಂಕರ ಖಾರ್ವಿ, ನವೀನ ಖಾರ್ವಿ, ಶರತ್ ಖಾರ್ವಿ, ಉಪಸ್ಥಿತರಿದ್ದರು. ಹಾಗೂ ಸುಬ್ರಹ್ಮಣ್ಯ.ಎಂ. ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘವು ಯಡ್ತರೆ ಪ್ರಧಾನ ಕಚೇರಿ ಮತ್ತು 8 ಶಾಖೆಗಳ ಮೂಲಕ 7 ಗ್ರಾಮಗಳ ಜನರಿಗೆ ಸೇವೆ ಸಲ್ಲಿಸುತ್ತಿದೆ. ಹಿಂದಿನ ವರ್ಷ ₹ 427 ಕೋಟಿ ವ್ಯವಹಾರ ಮಾಡಿ, ₹34.06 ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ 9 ಲಾಭಾಂಶ ನೀಡಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಟಿ. ನಾರಾಯಣ ಹೆಗ್ಡೆ ಹೇಳಿದರು. ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಹಕಾರಿಯು ₹1.69 ಕೋಟಿ ಪಾಲು ಬಂಡವಾಳ ಹೊಂದಿದೆ. 2019-20ನೇ ಸಾಲಿನಲ್ಲಿ ₹48.95 ಕೋಟಿ ಠೇವಣಿ ಸಂಗ್ರಹಿಸಿ, ಸದಸ್ಯರಿಗೆ ₹33.49 ಕೋಟಿ ಸಾಲ ನೀಡಿದೆ. ಮುಂದಿನ ವರ್ಷ ₹50ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ.ಸಂಘದ ಶಾಖೆಗಳಿಗೆ ಹಂತಹಂತವಾಗಿ ನಿವೇಶನ ಖರೀದಿಸಿ, ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಗುವುದು ಎಂದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರ ಮೊಗೇರ , ಸಿಬ್ಬಂದಿ ಚಂದ್ರಶೇಖರ ಮೇಸ್ತ ವಂದಿಸಿದರು ನಿರ್ದೇಶಕರಾದ ಸಸಿಹಿತ್ಲು ವೆಂಕಟ ಪೂಜಾರಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ಮಹಾಂಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಮಾಸಿಕ ಸವ೯ ಸದಸ್ಯರ ಸಭೆ ನಡೆಯಿತು. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗೋವಿಂದ. ಎಂ ಮಾತನಾಡಿ, ತಾಲೂಕು ಹಿರಿಯ ನಾಗರಿಕರ ವೇದಿಕೆಯ ಕಚೇರಿ ನಿವ೯ಹಣೆ ಹಾಗೂ ಹಿರಿಯ ನಾಗರಿಕರ ಪರ ಚಟುವಟಿಕೆ ವಿಸ್ತರಣೆ ಮಾಡುವುದಕ್ಕೆ ಸೂಕ್ತ ಸರಕಾರಿ ನಿವೇಶನ ಸ್ಥಳ ಮಂಜೂರು ಮಾಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು. ನಿವೃತ್ತ ಅದ್ಯಾಪಕ ಹಿರಿಯ ನಾಗರಿಕ ಜಿ. ತಿಮ್ಮಪ್ಪಯ್ಯ ಬೈಂದೂರು ಮನೋರಂಜನಾ ಕಾಯ೯ಕ್ರಮ ನೀಡಿದರು.ನೂತನ ಸದಸ್ಯ ರಿಸವ್೯ ಬ್ಯಾಂಕ್ ನಿವೃತ್ತ ಎಜಿಎಂ ಪ್ರೆಮಾನಂದ ತಗ್ಗಸೆ೯ ಇವರನ್ನುಗೌರವಿಸಲಾಯಿತು. ವೇದಿಕೆ ಕಾಯ೯ದಶಿ೯ ಸಂಜೀವ ಆಚಾಯ೯ ಕಳವಾಡಿ ಚಟುವಟಿಕೆ ವರದಿಯನ್ನು ಮಂಡಿಸಿದರು.ಇತ್ತೀಚೆಗೆ ನಿಧನರಾದ ಸದಸ್ಯ ಹಿರಿಯ ನಾಗರಿಕ ಚಾಂಡಿ ಕಲ್ಮಕ್ಕಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವೇದಿಕೆ ಉಪಾಧ್ಯಕ್ಷ ಶ್ರೀನಿವಾಸ ಪಡುವರಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

Read More