ಕುಂದಾಪುರ ಪುರಸಭೆ ಯುಜಿಡಿ ಯೋಜನೆ: ಬಾಕಿಯಿರುವ ಜಾಗ, ಝೋನ್-7 ಅನುಮತಿ ದೊರೆತರೆ ಯೋಜನೆ ಪೂರ್ಣಗೊಳಿಸುವ ಭರವಸೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಯೋಜನೆ ಪೂರ್ಣಗೊಳಿಸಲು ಯಾವುದೇ ಹಣದ ಕೊರತೆಯಿಲ್ಲ. ಆದರೆ ಪುರಸಭೆಯಿಂದ ಝೋನ್-7 ಅನುಮತಿ ಹಾಗೂ ವೆಟ್ವೆಲ್ಗೆ ಜಾಗ, ಎಸ್ಟಿಪಿಗೆ ತೆರಳುವ ಜಾಗವನ್ನು ಒದಗಿಸಿಕೊಟ್ಟರೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ನಿರ್ದೇಶಕಿ ಸುಲೋಚನಾ ಭಟ್ ತಿಳಿಸಿದ್ದಾರೆ.

Call us

Click Here

ಅವರು ಸೋಮವಾರ ಒಳಚರಂಡಿ ಯೋಜನೆ ಕಾಮಗಾರಿ ಪ್ರಗತಿ ಬಗ್ಗೆ ಕುಂದಾಪುರ ಪುರಸಭಾ ಸಭಾಂಗಣದಲ್ಲಿ ಕರೆಯಲಾಗಿದ್ದ ಪುರಸಭೆಯ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಮಗಾರಿ ನಡೆಯುವ ಸಂದರ್ಭ ಜನರಿಂದ ವಿರೋಧ ಭಾರದಂತೆ ಜಾಗ, ರಸ್ತೆಯ ಪೈಪ್ ಲೈನ್, ಸಿ.ಆರ್.ಝಡ್ ಅನುಮತಿ ಮೊದಲಾದವುಗಳನ್ನು ಪೂರ್ಣಗೊಳಿಸಿಕೊಟ್ಟರೆ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯಿಂದ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಪುರಸಭಾ ಸದಸ್ಯರಾದ ಮೋಹನದಾಸ್ ಶೆಣೈ ಮಾತನಾಡಿ ಪುರಸಭೆಯ ಯುಜಿಡಿ ಕಾಮಗಾರಿಯಿಂದಾಗಿ ಜನರು ಜನಪ್ರತಿನಿಧಿಯನ್ನು ನೀಡಿ ಬೈಯುವಂತೆ ಆಗಿದೆ. ಪುರಸಭಾ ವ್ಯಾಪ್ತಿಯ ಯುಜಿಡಿ ಕಾಮಗಾರಿ ಕೆಲವೆಡೆ ಉತ್ತಮವಾಗಿದ್ದು ಇನ್ನು ಕೆಲವೆಡೆ ಕಳಪೆ ಮಟ್ಟದ್ದಾಗಿ ಎಂಬ ಆರೋಪವಿದೆ. ಬೃಹತ್ ಮೊತ್ತದ ಯೋಜನೆ ವಿಳಂಬವಾಗಿ ಜನರಿಗೆ ಶಾಪವಾಗುವ ಪರಿಸ್ಥಿತಿ ಎದುರಾಗಬಾರದು. ಶೀಘ್ರ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

Click here

Click here

Click here

Click Here

Call us

Call us

ಸದಸ್ಯರಾದ ಚಂದ್ರಶೇಖರ ಖಾರ್ವಿ ಮಾತನಾಡಿ ಯುಜಿಡಿ ಕಾಮಗಾರಿ ಹಲವು ವರ್ಷಗಳಿಂದ ಮಂದಗತಿಯಲ್ಲಿಯೇ ಸಾಗುತ್ತಿದೆ. ಕ್ರೀಯಾಯೋಜನೆ ಮಾಡುವ ಮೊದಲೇ ಸಿ.ಆರ್.ಝಡ್, ವೆಟ್ ವೆಲ್ ಮೊದಲಾದವುಗಳ ಅನುಮತಿಯನ್ನು ಪಡೆದುಕೊಂಡು ಯೋಜನೆ ಆರಂಭಿಸದೇ ಅರ್ಧ ಕಾಮಗಾರಿ ಮುಗಿದ ಬಳಿಕ ಯೋಜನೆ ಮುಂದುವರಿಸುತ್ತಿರುವುದರಿಂದ ಎಲ್ಲವೂ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ಅಧಿಕಾರಿಗಳು ಶೀಘ್ರವೇ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಸದಸ್ಯರಾದ ಗಿರೀಶ್ ಜಿ.ಕೆ ಮಾತನಾಡಿ ಯುಜಿಡಿ ಕಾಮಗಾರಿಗಾಗಿ ನಗರದ ಎಲ್ಲಾ ರಸ್ತೆಯ ಮಧ್ಯದಲ್ಲಿ ಪೈಪ್ ಲೈನ್ ಅಳವಡಿಸಬೇಕಿದ್ದು, ಈವರೆಗೆ ಅದು ಪೂರ್ಣಗೊಂಡಿಲ್ಲ. ಕೆಲವಡೆ ಪೈನ್ ಲೈನ್ ಆಗಿಲ್ಲ. ಕೆಲವೆಡೆ ರಸ್ತೆಯನ್ನು ಅರ್ಧಂಬರ್ದ ಅಗೆಯಲಾಗಿದೆ. ಮಾಧ್ಯಮಗಳಲ್ಲಿ ಜನಪ್ರತಿನಿಧಿಗಳನ್ನು ಬೊಟ್ಟುಮಾಡಿ ತೋರಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗದಂತೆ ಪೈಪ್ ಲೈನ್ ಕಾಮಗಾರಿಯನ್ನು ಮೊದಲು ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.

ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾಹಿತಿ ನೀಡಿ ಯುಜಿಡಿ ಕಾಮಗಾರಿಗೆ ಒಟ್ಟು 5 ವೆಟ್ವೆಲ್ಗಳ ಅಗತ್ಯವಿದ್ದು 3 ವೆಟ್ವೆಲ್ ಭೂಸ್ವಾಧಿನವಾಗಿದೆ. 1 ವೆಟ್ವೆಲ್ ಬಗ್ಗೆ ತಕರಾರು ಇದೆ. ಎಸ್ಟಿಪಿಗೆ ತೆರಳುವ ರಸ್ತೆಯ 33 ಸೆಂಟ್ಸ್ ಜಾಗ ಸ್ವಾಧಿನ ಪ್ರಕ್ರಿಯೆ ಬಾಕಿ ಇದೆ. ಸಿ.ಆರ್.ಝಡ್ ಅನುಮತಿ ಪಡೆಯಬೇಕಿದೆ ಎಂದರು.

ಸದಸ್ಯರಾದ ದೇವಕಿ ಸಣ್ಣಯ್ಯ, ಸಂತೋಷ್ ಮಾತನಾಡಿದರು. ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಖಾರ್ವಿ ಇದ್ದರು.

Leave a Reply