ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಮತದಾರರನ್ನು ಭೇಟಿಯಾಗಿ ಮತಯಾಚನೆ ನಡೆಸಿದರು. ಶಿರೂರು ಪೇಟೆ ತೊಪ್ಲು, ಬುಕಾರಿ ಕಾಲೋನಿ, ಕಳಿಹಿತ್ಲು, ಮೋಯಿದ್ದೀನ್‌ಪುರ, ಮೇಲ್ಪಂಕ್ತಿ ಮೊದಲಾದೆಡೆ ಅವರು ಮತದಾರರನ್ನು ಭೇಟಿಯಾದರು. ಈ ಸಂದರ್ಭ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನಕುಮಾರ್ ಉಪ್ಪುಂದ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ತಬ್ರೇಜ್, ಶಿರೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ರವಿ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಹೋದರರ ನಡುವೆ ನಡೆದ ಜಗಳ ಓರ್ವ ಸಹೋದರರನ್ನು ಬಲಿ ಪಡೆದ ಘಟನೆ ತಾಲೂಕಿನ ಗೋಳಿಹೊಳೆ ಗ್ರಾಮದ ಕಂಬಳಗದ್ದೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದ್ದು ರಾತ್ರಿ ಬೆಳಗಾಗುವುದರೊಳಗೆ ಶವವನ್ನು ದುರ್ಗಮ ಅರಣ್ಯದಲ್ಲಿ ಸುಟ್ಟಿರುವುದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಮುತ್ತಯ್ಯ ನಾಯ್ಕ (೩೫) ಅನುಮಾನಾಸ್ಪದವಾಗಿ ಸಾವಿಗೀಡಾದಾತ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗೋಳಿಹೊಳೆ ಗ್ರಾಮದ ಕಂಬಳಗದ್ದೆ ನಿವಾಸಿ ಸಾಕು ಎಂಬುವವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಆಕೆಯ ಮೂರನೇ ಮಗನಾದ ಮುತ್ತಯ್ಯ ನಾಯ್ಕ ಅವಿವಾಹಿತನಾಗಿದ್ದು, ಮುಂಬೈ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ತನ್ನ ತಂದೆ ಸಾವಿಗೀಡಾದ ಸಂದರ್ಭದಲ್ಲಿ ಅಂದರೆ ಆರು ತಿಂಗಳ ಹಿಂದೆ ಊರಿಗೆ ಬಂದವನು ಮತ್ತೆ ಮುಂಬೈಗೆ ವಾಪಾಸ್ಸಾಗಲಿಲ್ಲ, ಊರಿನಲ್ಲಿ ಯಾವುದೇ ಕೆಲಸ ಮಾಡಿಕೊಂಡಿರದ ಆತ, ವಿವಾಹ ಮಾಡುವಂತೆ ಮನೆಯವರನ್ನು ಪೀಡಿಸುತ್ತಿದ್ದನ್ನು ಎನ್ನಲಾಗಿದೆ, ಆತ ವಿಪರೀತ ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಮನೆಯಲ್ಲಿ ನಿತ್ಯವೂ ಜಗಳ ಮಾಮೂಲಿಯಾಗಿತ್ತು. ಅಲ್ಲದೇ ಆತನ ಅನೈತಿಕ ಚಟುವಟಿಕೆಯು ಈ ಘಟನೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಿಸುಮಾರು ಕಳೆದ 40 ವರ್ಷದ ಹಿಂದೆ ಹಳಿಹುಲ್ಲು ಗುಡಿಯಲ್ಲಿ ಕಲ್ಲಿನ ಶಿವಲಿಂಗವಿದ್ದ ಶ್ರೀ ಸಿದ್ದೇಶ್ವರ ಭಜನಾ ಮಂದಿರ ವೈಭದ ಭವ್ಯಮಂದಿರದಲ್ಲಿ ಪುನರ್ ಪ್ರತಿಷ್ಠಾಪನೆಗೊಳ್ಳಲಿದ್ದು, ಎ.28 ರಿಂದ 30ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನೋರಂಜನಾ ಕಾರ‍್ಯಕ್ರಮ ನಡೆಯಲಿದೆ. ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಆಶೀರ್ವಾದದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಪುನರ್ ಪ್ರತಿಷ್ಠೆ, ನವೀಕೃತ ಮಂದಿರ ಉದ್ಘಾಟನೆಗೊಳ್ಳಲಿದ್ದು, ಸಾಗರ ತಾಳಗುಪ್ಪ ಕೂಡ್ಲಿ ಮಠ ಶ್ರೀ ಸಿದ್ಧವೀರ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಸಮ್ಮುಖದಲ್ಲಿ ಬ್ರಹ್ಮಕಲಶೋತ್ಸವ, ಪೂರ್ಣಾಹುತಿ ನಡೆಯಲಿದ್ದು, ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿಗಳು ಆಶೀರ್ವಚನ ನೀಡಿಲಿದ್ದಾರೆ. ಸಿದ್ಧಲಿಂಗೇಶ್ವರ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ, ಕಲಾತತ್ವ ಹೋಮ, 49 ಕಲಶ ಸ್ಥಾಪನೆ, ರಕ್ಷ ವಿಧಿಯೊಂದಿಗೆ ಮಂಗಳ ಕಾರ‍್ಯಕ್ರಮ ನಡೆಯಲಿದೆ. ಹಿಂದೆ ಮಳಿ ಹುಲ್ಲಿನ ಗುಡಿಸಲ ನಂತರ ಹೆಂಚಿನ ಕಟ್ಟಡಕ್ಕೆ ಸ್ಥಳಾಂತ ಗೊಂಡಿದ್ದು, ಪ್ರಸಕ್ತ 15 ಲಕ್ಷಕ್ಕೂ ಮಿಕ್ಕ ವೆಚ್ಚದಲ್ಲಿ ಭೌವ್ಯಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಶ್ರೀ ಸಿದ್ದೇಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪೌರಾಣಿಕ ಹಿನ್ನೆಲೆಯಿರುವ ದೇವಸ್ಥಾನಗಳ ಸಮುಚ್ಛಯ ಕುಂಭಾಶಿಯಲ್ಲಿ ನೂತನ ಶಿಲಾಮಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಸಮರ್ಪಣೆ, ರಾಜಗೋಪುರ ಲೋಕಾರ್ಪಣೆ, ಬಿಂಬ ಪ್ರತಿಷ್ಠೆ, ಕಡುಶರ್ಕರ ಲೇಪನ, ಸಹಸ್ರ ಕಲಶ ಬ್ರಹ್ಮಕುಂಭಾಭಿಷೇಕ, ಮಹಾ ಅನ್ನಸಂತರ್ಪಣೆ, ಧಾರ್ಮಿಕ, ಸಾಂಸ್ಕೃತಿಕ ಕಾರ‍್ಯಕ್ರಮ ಎ.27 ರಿಂದ ಮಾ.5ರ ತನಕ ನಡೆಯಲಿದೆ. ಪ್ರತೀದಿನ ಸಂಜೆ 6 ರಿಂದ ಧಾರ್ಮಿಕ ಸಭಾ ಕಾರ‍್ಯಕ್ರಮ ನಡೆಯಲಿದ್ದು, ಎ.29ರಂದು ಉಡುಪಿ ಪೇಜಾವರ ಮಠ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಶ್ರೀ ಕ್ಷೇತ್ರ ಮರಕಡ ಶ್ರೀ ನರೇಂದ್ರನಾಥ ಯೋಗೀಶ್ವರ ಸ್ವಾಮೀಜಿ, ಎ.3, ಉಡುಪಿ ಸೋದೆ ಮಠ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಮಾ.1, ಉಡುಪಿ ಕಾಣಿಯೂರು ಮಠ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಮಾ.2,ಉಡುಪಿ ಅದಮಾರು ಮಠ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಮಾ.3, ಉಡುಪಿ ಪುತ್ತಿಗೆ ಮಠ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಆನೆಗುಂದಿ ಮಹಾಸಂಸ್ಥಾನ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ, ಮಾ.4,ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಪ್ರತೀದಿನ ಧಾರ್ಮಿಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಶ್ರೀ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ತಂತ್ರಿ ಕೆ. ರಾಮಚಂದ್ರ ಅಡಿಗ ಅವರಿಗೆ ನ್ಯಾಶನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಎಂಡ್ ಎಜ್ಯುಕೇಶನ್ ಸಂಸ್ಥೆಯು ಅಡಿಗರ ಸಾಮಾಜಿಕ ಬದ್ಧತೆ ಮತ್ತು ಕಳಕಳಿಯನ್ನು ಗುರುತಿಸಿ ಯುವಜನ ಸಬಲೀಕರಣ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಈಚೆಗೆ ನಡೆದ ಪದವಿಪ್ರದಾನ ಸಮಾರಂಭದಲ್ಲಿ ವಿಜ್ಞಾನಿ ಡಾ. ಅಲೆಕ್ಸಾಂಡರ್ ಪದವಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಡಾ. ವಿಜಯ ಸರಸ್ವತಿ, ಜೆ. ಸುಂದರ ಸಿಂಗ್, ನಿವೃತ್ತ ನ್ಯಾಯಮೂರ್ತಿಗಳು, ವಿಜ್ಞಾನಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಬೌದ್ಧಿಕ ಶಕ್ತಿ ಮತ್ತು ಭಾವನಾತ್ಮಕ ಮನೋಧರ್ಮ ಒಬ್ಬ ವ್ಯಕ್ತಿಯ ಸರ್ವಾಂಗೀಣ ವಿಕಾಸಕ್ಕೆ ಪ್ರಮುಖ ಅಂಶಗಳಾಗಿದೆ. ಚದುರಂಗ ಆಟವಾಡುವುದರಿಂದ ಬೌದ್ಧಿಕ ವಿಕಾಸ, ಸಂಯಮ, ತಾಳ್ಮೆ ಮತ್ತು ತಾರ್ಕಿಕ ಯೋಚನೆಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಬೆಳೆಯುವ ವಿದ್ಯಾರ್ಥಿಗಳಲ್ಲಿ ಚದುರಂಗ ಕ್ರೀಡೆ ಆಡುವುದರ ಕುರಿತು ಪ್ರೋತ್ಸಾಹ ನೀಡಬೇಕು ಎಂದು ಅಂತರಾಷ್ಟ್ರೀಯ ಚೆಸ್ ತರಬೇತುದಾರರಾದ ಡೆರಿಕ್ ಪಿಂಟೋ ರವರರು ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿಯಲ್ಲಿ ನಡೆದ ರಾಜ್ಯಮಟ್ಟದ ಪ್ರಥಮ ಹೊನಲು ಬೆಳಕಿನ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಂಡ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ .ಬಸ್ರೂರು ಅಪ್ಪಣ್ಣ ಹೆಗ್ಡೆರವರು ವಹಿಸಿದ್ದರು. ಕರ್ನಾಟಕದ ಪ್ರಪ್ರಥಮ ಹಾಗೂ ಅಂತರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ ತೇಜ್‌ಕುಮಾರ್ ಎಮ್.ಎಸ್ ಸಾಂಪ್ರದಾಯಿಕ ರಾಟೆ ಎಳೆಯುವುದರ ಮೂಲಕ ಆಕರ್ಷಕ ಬಹುಮಾನಗಳನ್ನು ಮತ್ತು ಪ್ರಶಸ್ತಿ ಪತ್ರಗಳನ್ನು ಉದ್ಘಾಟನೆ ಮಾಡಿದರಲ್ಲದೇ ತಮ್ಮ ಚದುರಂಗ ಆಟದ ಅನುಭವಗಳನ್ನು ವಿವರಿಸಿದರು. ಈ ಬಹುಮಾನ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿನ್ಮಯಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಉಮೇಶ್…
ಕುಂದಾಪ್ರ ಡಾಟ್ ಕಾಂ ಸುದ್ದಿ ದುಬೈ: ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ ಇದರ ವಾರ್ಷಿಕ ಸ್ನೇಹ ಸಮ್ಮೀಲನ ಕಾರ್ಯಕ್ರಮ ದುಬೈನ ಕ್ರೌನ್ ಪ್ಲಾಜಾದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಮ್ಮ ಕುಂದಾಪ್ರ ಪ್ರಧಾನ ಪೋಷಕ ವರದರಾಜ್ ಶೆಟ್ಟಿ ಜಾಗತಿಕ ಮಟ್ಟದಲ್ಲಿ ಕುಂದಾಪುರ ತಾಲೂಕಿನವರ ಕೊಡುಗೆ ಅಪಾರವಾಗಿದೆ.ಸಂಘಟಿತರಾದಾಗ ಸಮಾಜಕ್ಕೆ ನಮ್ಮಿಂದಾದ ಕೊಡುಗೆ ನೀಡಲು ಸಾಧ್ಯ .ದುಬೈನಲ್ಲಿ ನೆಲೆಸಿರುವ ಕುಂದಾಪುರ ಕನ್ನಡಿಗರು ಒಗ್ಗೂಡುವ ಸಮ್ಮೀಲನ ಕಾರ್ಯಕ್ರಮ ನಮ್ಮೊಳಗಿನ ಭಾಂದವ್ಯ ವೃದ್ದಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅಪ್ಪಣ್ಣ ಹೆಗ್ಡೆ ವಿದೇಶದಲ್ಲಿ ಸಂಘಟಿತರಾಗಿ ಊರಿನ ಅಭಿವೃದ್ದಿಯ ಬಗೆಗೆ ಕಾಳಜಿ ವಹಿಸುವುದು ಶ್ಲಾಘನೀಯವಾದ ಕಾರ್ಯವಾಗಿದೆ.ಕಲೆ, ಸಂಸ್ಕ್ರತಿ, ಸಾಹಿತ್ಯ ಉದ್ಯಮ ಕ್ಷೇತ್ರದಲ್ಲಿ ಕುಂದಾಪುರ ಒಗ್ಗೂಡುವುದರಿಂದ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದರು. ವೇದಿಕೆಯಲ್ಲಿ ಅಜಿತ್ ಕುಮಾರ್ ಶೆಟ್ಟಿ ಶಾನಾಡಿ, ಹಾಸ್ಯ ಚಕ್ರವರ್ತಿ ಮನು ಹಂದಾಡಿ,ಸುಧಾಕರ ಅರಾಟೆ, ಗೌರವಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ನಮ್ಮ ಕುಂದಾಪ್ರ ಅದ್ಯಕ್ಷ ಸಾಧನ್ ದಾಸ್, ಉದ್ಯಮಿ ಶೀನ ದೇವಾಡಿಗ, ಪ್ರಕಾಶ ನಾಯ್ಕ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಕೋಟೇಶ್ವರ ಕೋಟಿಲಿಂಗೇಶ್ವರದ ಕೆರೆಗೆ ಸ್ನಾನಕ್ಕೆಂದು ಇಳಿದ ಇಬ್ಬರು ಯುವಕರು ನೀರುಪಾಲಾಗಿರುವ ಖೇದಕರ ಘಟನೆ ವರದಿಯಾಗಿದೆ. ಕೋಟೇಶ್ವರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ, ಸೇನಾಪುರದ ನಿವಾಸಿ ಕೀರ್ತನ್ (19) ಬಿಕಾಂ ವಿದ್ಯಾರ್ಥಿ ಕಾಳವಾರದ ನಿವಾಸಿ ಸಚಿನ್ (19) ಮೃತ ದುರ್ದೈವಿಗಳು ಪರೀಕ್ಷೆಯ ಹಾಲ್ ಟಿಕೇಟ್ ತೆಗೆದುಕೊಳ್ಳಲು ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿಗಳ ಪೈಕಿ ಐವರು ವಿದ್ಯಾರ್ಥಿಗಳು ಕಾಲೇಜಿನಿಂದ ಕೋಟೇಶ್ವರದ ಕೋಟಿಲೀಗೇಶ್ವರ ಕೆರೆಯ ಬಳಿ ತೆರಳಿದ್ದರು. ಅವರಲ್ಲಿ ಕೀರ್ತನ್ ಹಾಗೂ ಸಚಿನ್ ಸ್ನಾನಕ್ಕೆಂದು ನೀರಿಗಿಳಿದಿದ್ದರು. ಬಹಳ ಹೊತ್ತು ನೀರಿನಿಂದ ಮೇಲೆ ಬಾರದ್ದನ್ನು ಗಮನಿಸಿದ ಇನ್ನೋರ್ವ ವಿದ್ಯಾರ್ಥಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾನೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೊಂದು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಕುಂದಾಪುರ ಪೊಲೀಸ್ ಠಾಣಾಧಿಕಾರಿ ಹರೀಶ್ ಹಾಗೂ ಇತರೆ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ವರ್ಧಿಸಲಿರುವ ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಅವರು ಇಂದು ಬೈಂದೂರಿನ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಶ್ರೀನಿವಾಸ್ ಅವರು ನಾಮಪತ್ರ ಸ್ವೀಕರಿಸಿದರು. ನಾಮಪತ್ರ ಸಲ್ಲಿಸಿ ಮಾತನಾಡಿದ ಕೆ. ಗೋಪಾಲ ಪೂಜಾರಿ ಅವರು ಬೈಂದೂರು ವಿಧಾನಸಭಾ ಕ್ಷೇತ್ರದಾದ್ಯಂತ ನಡೆಸಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಎಲ್ಲಾ ವರ್ಗದ ಜನರಿಗೂ ರಾಜ್ಯ ಸರಕಾರ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮಗಳನ್ನು ಮೆಚ್ಚಿ ಜನರು ಮತ್ತೆ ತನ್ನನ್ನು ಬೆಂಬಲಿಸಲಿದ್ದಾರೆಂಬ ವಿಶ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಎಸ್.ಮದನ್‌ಕುಮಾರ್ ಉಪ್ಪುಂದ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆಯ ಸಮುದ್ರದಲ್ಲಿ ಭಾನುವಾರ ಮಧ್ಯಾಹ್ನದ ಬಳಿಕ ತೀವ್ರ ಗಾತ್ರದ ಉಬ್ಬರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿರುವುದರಿಂದ ಮೀನುಗಾರರ ಮನೆಗಳಿಗೆ ಅಪಾಯ ಉಂಟಾಗಿದೆ. ನಿರ್ಮಾಣ ಹಂತದಲ್ಲಿರುವ ಮೀನುಗಾರಿಕಾ ಹೊರಬಂದರಿನ ಎರಡು ತಡೆಗೋಡೆಗಳ ನಡುವಿನ ಪ್ರದೇಶದಲ್ಲಿರುವ ಕರಾವಳಿ ಮಾರ್ಗದ ಒಂದು ಕಡೆ ಕೊರೆತ ಉಂಟಾಗಿದ್ದು, ರಸ್ತೆ ಕಡಿದು ಹೋಗುವ ಹಂತದಲ್ಲಿದೆ. ಅಲೆಗಳು ಚೆಲ್ಲುವ ನೀರು ರಸ್ತೆಯನ್ನು ದಾಟಿ ವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಆ ಪ್ರದೇಶದಲ್ಲಿರುವ ಬುದ್ಧಿವಂತ ಮಂಜುನಾಥ ಖಾರ್ವಿ, ಸುಬ್ರಹ್ಮಣ್ಯ ಖಾರ್ವಿ, ಅಣ್ಣಪ್ಪ ಖಾರ್ವಿ, ಶೇಷಿ ಖಾರ್ವಿ ಮತ್ತು ಬೊಬ್ಬರ್ಯನಕೊಡಿ ರಾಮಚಂದ್ರ ಖಾರ್ವಿ ಮನೆಯ ಅಂಗಳಕ್ಕೆ ನೀರು ಹರಿಯುತ್ತಿದೆ. ಇದರಿಂದ ಮನೆಯಲ್ಲಿ ರಾತ್ರಿ ಕಳೆಯುವುದು ಅಪಾಯಕಾರಿ ಆದುದರಿಂದ ನೆರೆಹೊರೆಯವರ ಸಹಾಯದಿಂದ ಮನೆಯವರನ್ನು ಮತ್ತು ಸಾಮಗ್ರಿಗಳನ್ನು ಅನ್ಯರ ಮನೆಗೆ ಸ್ಥಳಾಂತರಿಸಲಾಗುತ್ತಿದೆ. ರಸ್ತೆ ಪೂರ್ತಿಯಾಗಿ ಕಡಿದುಹೋದಲ್ಲಿ ಹಲವು ಮನೆಗಳಿಗೆ ಅಪಾಯ ತಟ್ಟಲಿದೆ. ಸುದ್ದಿ ತಿಳಿದು ಬಿ. ಎಂ. ಸುಕುಮಾರ ಶೆಟ್ಟಿ, ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್.…
